Sunday, March 15, 2009

ಐಷಾರಾಮಿ ದೇಶದಲಿ ಐಷಾರಾಮಿ ಕಾರುಗಳು...

ಕುವೈಟಿನಲ್ಲಿ ಕಾರುಗಳದೆ ಕಾರುಬಾರು, ಪ್ರಪಂಚದ ಅತಿ ಹೆಚ್ಚು ಬೆಲೆಯ, ಅತಿ ಸುಂದರ, ವಿರಳವಾಗಿ ಕಾಣ ಸಿಗುವ ಎಲ್ಲ ತರಹದ ಕಾರುಗಳು ನಾವಿಲ್ಲಿ ಕಾಣಬಹುದು... ಇಲ್ಲಿಯವರಿಗೇನು ಹುಚ್ಚೊ, ಆಸೆಯೋ, ಹಣವಿದೆಯೆಂದು ಐಷರಾಮಿತನವನ್ನು ತೋರಿಸಲೋ ಯವುದಕ್ಕೊ ತಿಳಿಯದು ಒಟ್ಟಲ್ಲಿ ಒಂದೊಂದು ಮನೆಯಲ್ಲಿ ಸುಮರು ೮, ೧೦ ಕಾರುಗಳಂತು ಇದ್ದೇ ಇರುತ್ತೆ... ಹೊಸ ಹೂಸ ಕಾರುಗಳು ಬರುತ್ತಲೇ ಇರುತ್ತೆ ಅವರುಗಳು ಬದಲಾಯಿಸುತ್ತಲೇ ಇರುತ್ತಾರೆ...ಲಕ್ಷ್ಮಿ ನಾಟ್ಯವಾಡುತ್ತಿರುವ ಈ ನಾಡಲ್ಲಿ ಯಾವುದಕ್ಕೆ ಬರವೇಳಿ... ಬಯಸಿದ್ದನು ಅನುಭವಿಸುವರು.. ನಮಗೆ ಒಂದು ಕುಶಿಯೆಂದರೆ ನಮ್ಮ ಕಣ್ಣಾರೆ ಇವೆಲ್ಲವನ್ನು ನೋಡುತ್ತಿದ್ದೇವೆ...








ನಮ್ಮ ಕೈಗೆ ಎಟುಕದ್ದು ಕ್ಯಾಮರಾ ಸೆರೆಗೆ ಸಿಕ್ಕಿದೆ... ಇವೆಲ್ಲ ಕೊಳ್ಳೊ ಮನಸಿಲ್ಲ, ಮನಸಿದ್ದರು ಹಣವಿಲ್ಲ, ಹಣವಿದ್ದರೊ ಕಾರಿಗಾಗಿ ದುಡ್ಡಾಕಲು ಮನ ಒಪ್ಪುತ್ತಿಲ್ಲ ಹ ಹ ಹ ಹ ...ಎಲ್ಲವೊ ಸುಳ್ಳು...ದುಡ್ಡು ಇಲ್ಲ, ಮನವೊ ಇಲ್ಲ, ಮನಸ್ಸು ಇಲ್ಲ.... ಚೆನ್ನಾಗಿರುವುದನ್ನು ನೋಡಿ ಸವಿಯುವ ಮನಸ್ಸಂತು ಇದೆ..ಅಷ್ಟೆ.... ನಿಮಗು ಇಷ್ಟವಾದರೆ ಹಾಗೆ ಒಮ್ಮೆ ನೋಡಿಬಿಡಿ.

10 comments:

Ittigecement said...

ಮನಸು..

ನನ್ನ ಮಗ ಬಹಳ ಇಷ್ಟಪಟ್ಟ ಈ ಕಾರುಗಳನ್ನು...
ಅವನಿಗೆ ಕಾರು ಹುಚ್ಚು..
ಅವನಿಗಾಗಿಯೇ ನಾನು ಕಾರು ಕೊಂಡಿದ್ದೇನೆ..
(ಈಗ ಖುಷಿಯನ್ನೂ ಪಡುತ್ತೇನೆ)

ಸುಂದರವಾದ ಕಾರುಗಳ ಫೋಟೊಗಳನ್ನು..
ತೋರಿಸಿ..
ಆಸೆ ಹುಟ್ಟಿಸಿದ್ದಕ್ಕೆ..

ಧನ್ಯವಾದಗಳು...

Prabhuraj Moogi said...

ಹೊಸ ಹೊಸ ಕಾರುಗಳನ್ನು ತೊರಿಸಿ ಆಸೆ ಹುಟ್ಟಿಸಿಬಿಟ್ಟಿದ್ದೀರಿ, ಮೊದಲೇ ರಿಸೆಷನ್ ಇದೆ, ಈಗ ಖರೀದಿ ಅಸಾಧ್ಯದ ಮಾತು ಬಿಡಿ... ಅದರೆ ನೋಡಿ ಖುಶಿ ಪಡಲು ದುಡ್ಡು ತೆರಬೇಕಿಲ್ಲವಲ್ಲ ಅನ್ನೋದೇ ಸಮಾಧಾನ...

sunaath said...

ಇಂತಹ ಕಾರುಗಳನ್ನು ನೋಡಿರಲಿಲ್ಲ.
ನೋಡಿಯಾದರೂ ಖುಶಿಪಟ್ಟಂತಾಯಿತು.

ಮನಸು said...

ಪ್ರಕಾಶ್ ಸರ್,
ನಾವುಗಳು ಇಂತಹ ಕಾರ್ ಕೊಳ್ಳಲು ಆಗದು ಬಿಡಿ ನಮ್ಮ ಕೈಗೆ ಎಟುಕದ್ದು ಇವೆಲ್ಲ ಹ ಹ ಹ ... ನೋಡಲು ಕುಶಿ ಅಸ್ಟೆ.. ಮಕ್ಕಳ ಆಸೆ ಪೂರೈಸೋದೆ ನಮ್ಮ ಆಸೆ ಅಲ್ಲವೇ..?

ಮನಸು said...

ಪ್ರಭು,
ನಾ ಹೇಳಿದ್ದು ಬರಿ ನೋಡಿ ಅಂತ ಹ ಹ ಹ ... ತಗೊಳೋದೆಲ್ಲ ಇಲ್ಲಿಯವರಿಗೆ ಬಿಟ್ಟಿದೀವಿ ಹ ಹ ಹ... ಈಗಿನ ಪರಿಸ್ಥಿಯಲ್ಲಿ ಹೊಟ್ಟೆ ಬಟ್ಟೆಗೆ ನೋಡಿಕೊಂಡರೆ ಸಾಕಾಗಿದೆ ಅಲ್ಲವಾ? ಹ ಹ ಹ ....
ಸುನಾಥ ಸರ್,
ನನ್ನ ಬ್ಲಾಗಿಗೆ ಸ್ವಾಗತ .. ಇಂತಹ ಕಾರನ್ನು ನಾವು ಕೂಡ ಇಲ್ಲಿಗೆ ಬರುವ ಮೊದಲು ನೋಡೇ ಇರಲಿಲ್ಲ. ಇಂತಹವನೆಲ್ಲ ನೋಡಿ ಕುಶಿಪಟ್ಟರೆ ಒಳ್ಳೆಯದು ಹ ಹ ಇಲ್ಲವಾದರೆ ಬೇಸರ ಕಂಡಿತಾ...
ಧನ್ಯವಾದಗಳು ಹೀಗೆ ಬರುತ್ತಲಿರಿ........

Anonymous said...

IN PUNE THERE IS AN ASSOCIATION OF NON RESIDENT INDIAN PARENTS(NRIPA).I AM WONDERING WHETHER SIMILARLY PARENTS OF KANNADIGAS WORKING IN KUWAIT/GULF COULD COME TOGETHER IN INDIA?I AM LEAVING MY e mail id.- smiledesh@yahoo.com.I am a retired person presently settled in DOMBIVALI near Mumbai.
Thanx for showing us luxury cars.True ,leave aside owning these cars or even travellin.But my dear young friends Kuwait or for that sake any gulf country is what it is,is mainly due to enterprising Indians.The days won't be far off when we Indians can also boast of much more luxury.who knows? may be it could be my grand children or your own children.Did, we elders any time imagine what our children are doing now and how they have progressed?
"IDU ELLA OBBA MUDUKAN MAATU"

ಮನಸು said...

deshpande sir,
Thnx for your comments & Nice to know about your association, i agree what ever you said is right!!"mudukana matina bhavanegaLu arthavagide"

Regards

shivu.k said...

ಮನಸು ಮೇಡಮ್,

ಸುಂದರ ಕಾರುಗಳನ್ನು ನೋಡಿ ತುಂಬಾ ಖುಷಿಯಾಯಿತು...

ನನಗಂತೂ ಕಾರು ಕೊಳ್ಳುವ ಮನಸ್ಸಿಲ್ಲ...ಕಾರಣ ದುಡ್ಡಿಲ್ಲ...ಅಹ..ಅಹ..ಹ...ನಿಮ್ಮಂತೆ ನಾನು ಅನಂದದಿಂದ ನಗಬಹುದು...ಏನಂತೀರಿ...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ
ಕಾರ್ ಕಾರ್ ಕಾರ್ ಎಲ್ನೋಡಿ ಕಾರ್,
ನೋಡೋಣ ನಾನೆನದ್ರು ಒಂದು ಕಂಪನಿ ಓಪನ್ ಮಾಡಿದಮೇಲೆ ಸಕಸ್ಟು ಹಣ ಬಂದರೆ, ಎಲ್ಲ ಒಂದೊಂದು ತಗೊಳ್ತಿನಿ.
ಹಣ ಬರ್ಲಿಲ್ಲ ಅಂದ್ರೆ, ಇದೆ ಅಲ್ವಾ ನಮ್ಮ ambassador ಕಾರ್....
:)

Unknown said...

Nangantoo tata davara 'nano' saaku annista ide... :-)