Thursday, November 5, 2009

ಮೊದಲು

ಮಾತನಾಡುವ ಮೊದಲು ಆಲಿಸಿಕೊ
ಕೇಳಿದ ಮಾತು ಮನದಾಳದಲಿರಲಿ
ಮನದಮಾತು ಮುತ್ತ ಪೋಣಿಸಿದಂತಿರಲಿ
ಪೋಣಿಸಿದ ಸರಮಾಲೆ ಮುತ್ತಿನಹಾರದಂತಿರಲಿ!!

ಬರೆಯುವ ಮೊದಲು ಯೋಚಿಸು
ಯೋಚಿಸಿದ ಸಾಲು ಮಿದುಳಲ್ಲಿರಿಸಿ
ಲೇಖನಿ ಜೊತೆಗೆ ಅಕ್ಷರಸಾಲು ಮೂಡಿಸು
ಬರೆದ ಸಾಲುಗಳು ಎಲ್ಲರ ಮನದಲುಳಿಸು!!

ಖರ್ಚು ಮಾಡುವ ಮೊದಲು ಸಂಪಾದಿಸು
ಸಂಪಾದಿಸುವುದ ಕಲಿಯಲು ಶ್ರಮವಹಿಸು
ಶ್ರಮದ ಸಂಪಾದನೆಯ ಇತಿಮಿತಿಯೂಂದಿಗೆ
ಶ್ರಮದ ಫಲ ಜೀವನಪೂರ್ತಿ ಅನುಭವಿಸು!!

ಟೀಕಿಸುವ ಮೊದಲು ತಾಳ್ಮೆಯಿರಲಿ
ತಾಳ್ಮೆ ನಮ್ಮ ಜೀವನಕೆ ಸಹಾನುಭೂತಿ
ಟೀಕಿಸುವುದು ನಮ್ಮ ತರ್ಕಕ್ಕೆ ನಿಲುಕದ್ದು
ನಿಲುಕದ ಜೀವಕ್ಕೆ ಟೀಕಿಸುವುದ ದೂಡಿಬಿಡು!!

ತೊರೆಯುವ ಮೊದಲು ಪ್ರಯತ್ನಿಸು
ಇರುವುದ ತೂರೆಯುವುದು ಸುಲಭವಲ್ಲ
ತೊರೆದರೆ ಮತ್ತೆ ಪಡೆವುದು ಆಶಾಗೋಪುರ
ಎಲ್ಲದರ ಅರಿವು ನಮ್ಮಲಿದ್ದೊಡೆ ಒಳಿತು!!

19 comments:

Ittigecement said...

ಮನಸು...

ತುಂಬಾ ಒಳ್ಳೆಯ ಮಾತುಗಳು...

ತ್ರಿಪದಿಗಳು,
ವಚನಗಳ ಸಾಲಿನಂತಿದೆ..
ಪ್ರಾಸ ಬದ್ಧವಾಗಿದೆ...

ಚಂದದ ಕವಿತೆಗೆ ಅಭಿನಂದನೆಗಳು...

ಗೌತಮ್ ಹೆಗಡೆ said...

kavite chennagide:) aadare neevu MOODALU anta ella kade barediddeeri.adu MODALU anta aaagbekitta?

ಮನಸು said...

ಪ್ರಕಾಶಣ್ಣ,
ಧನ್ಯವಾದಗಳು, ನಾವು ಅರಿತು ಬಾಳಿದರೆ ಎಷ್ಟೋ ಒಳ್ಳೆಯ ಬದಲಾವಣೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದಲ್ಲವೇ..?
ಗೌತಮ್,
ಧನ್ಯವಾದಗಳು, ನನಗೊ ಮೊದಲು ಈ ಪದದ ಅನುಮಾನವಿತ್ತು, ನೀವು ಹೇಳಿದ್ದು ಸರಿ ಇದೆ. ಈಗ ಆ ಪದವನ್ನು ಸರಿ ಮಾಡಿದ್ದೇನೆ. ನಿಮ್ಮ ಅನಿಸಿಕೆಗಳಿಗೆ ವಂದನೆಗಳು.

ಶಿವಪ್ರಕಾಶ್ said...

ಮನಸು ಅವರೇ,
ಕವಿತೆ ತುಂಬಾ ಚನ್ನಾಗಿದೆ.. :)
ಅಂದಹಾಗೆ ಎರಡನೇ ಪ್ಯಾರ ನಮಗಾಗೆ ಬರೆದಹಾಗಿದೆ... ;)

ದಿನಕರ ಮೊಗೇರ said...

ಮನಸು ಮೇಡಂ,
ಅನನುಭವಿಗಳಿಗೆ, ಅನುಭವೀ ಮಾತುಗಳು...... ಮುತ್ತುಗಳನತಿವೆ.... ಅಭಿನಂದನೆಗಳು ಮೇಡಂ....

sunaath said...

ಇವನ್ನು ಕನ್ನಡದ ಸುಭಾಷಿತಗಳು ಎಂದು ಕರೆಯಬಹುದು.

jithendra hindumane said...

ಮನಸು ಮೇಡಂ,
ನಿಮ್ಮ ಕವನ ಹೃದಯ ಸ್ಪರ್ಶಿ ಆಗಿದೆ....
ತಟ್ಟಬೇಕಾದವರ ಮನ ಖಂಡಿತಾ ತಲುಪುತ್ತದೆ...

ಸಾಗರದಾಚೆಯ ಇಂಚರ said...

ಮನಸು
ತುಂಬಾ ಸುಂದರ ಸಾಲುಗಳು
ಪ್ರತಿ ಸಾಲುಗಳಿಗೂ ಎಷ್ಟೊಂದು ಅರ್ಥವಿದೆ
ಸುಂದರ ಕವಿತೆ

ಜಲನಯನ said...

ಮನೆಗೆ ಬಂದಮೇಲೆ ನೀವು ಪೋಸ್ಟ್ ಮಾಡಿದ್ದೇನೆ ಅಂದ್ರಲ್ಲಾ..ಸರಿ ಅಂತ ‘ಮನಸು‘ ಕಡೆ ಬಂದ್ರೆ...ಆಗ್ಲೇ ಎಷ್ಟೊಂದು ಪ್ರತಿಕ್ರಿಯೆ..!! ಒಂದೊಂದು ಪಾದವೂ ಜೀವನದ ಆಯಾಮಗಳನ್ನು ತೆಗೆದು ಮುಂದಿಡುವಂತಿದೆ ನಿಮ್ಮ ಈ ಕವನ ...ಬಹಳ ಮೆಚ್ಚಿದ ಸಾಲುಗಳು...
ಟೀಕಿಸುವ ಮೊದಲು ತಾಳ್ಮೆಯಿರಲಿ (ಮೊದಲು ಟೀಕಿಸೋದೇ ನಮ್ಮ ಹಕ್ಕು ಎನ್ನುವವರಿಗೆ ಕಿವಿಮಾತು)
ತಾಳ್ಮೆ ನಮ್ಮ ಜೀವನಕೆ ಸಹಾನುಭೂತಿ (ತಾಳ್ಮೆ..ಒಂದು ಪುಕ್ಕಲುತನದ ಸಂಕೇತ ಎನ್ನುವ ಹುಸಿ ನಂಬಿಕೆ ಇರುವವರಿಗೆ ..)
ಟೀಕಿಸುವುದು ನಮ್ಮ ತರ್ಕಕ್ಕೆ ನಿಲುಕದ್ದು (ಹೀಗೆ ಎಮ್ದುಕೊಂಡರೆ..ಟೀಕೆ ಬದಲಿಗೆ ನನಗೆ ತಿಳಿಯದೇ ಹೀಗೆ ಹೇಳು/ಬರೆಯುತ್ತಿದ್ದೇನೆ ಎಂದಾಗುತ್ತದೆ)
ನಿಲುಕದ ಜೀವಕ್ಕೆ ಟೀಕಿಸುವುದ ದೂಡಿಬಿಡು!! (ನಮಗೆ ತಿಳಿಯದ ವಿಷಯದಲ್ಲಿ ಸುಮ್ಮ ಸುಮ್ಮನೆ ಟೀಕಿಸುವವರಿಗೆ ಪಾಠ)....
ನನ್ನ ಮೆಚ್ಚುಗೆ...ಪದ ಬಳಕೆಗೆ...

shivu.k said...

ಮನಸು ಮೇಡಮ್,

ಏನೇ ಮಾಡಲೆತ್ನಿಸುವ ಮುನ್ನ ಒಂದು ಕ್ಷಣ ಯೋಚಿಸು ಎನ್ನುವಂತೆ ನಿಮ್ಮ ಪದ್ಯಗಳು ಅರ್ಥಗರ್ಭಿತವಾಗಿವೆ.
ಸುಭಾಶಿತಗಳೆನ್ನಬಹುದು..

Raghu said...

ಮನಸು ಅವರೇ,
ನಮ್ಮ ಮನಸ್ಸಿನಲ್ಲಿ ಉಳಿಯುವ ಹಾಗೆ ಮಾಡಿದ್ದೀರ... ಕೆಲವು ಲೈನ್ಗಳ ಹಿಂದೆ ತುಂಬಾ ಅನುಭವ ಇದೆ ಅಂತ ಇದ್ದ ಹಾಗೆ ಇದೆ..
ನಿಮ್ಮವ,
ರಾಘು.

ಮನಸು said...

ಶಿವಪ್ರಕಾಶ್,
ಏಕೆ ನಿಮ್ಮನ್ನ ನೀವೇ ಹೋಲಿಸ್ಕೋತೀರಿ ಹಹಹ, ಧನ್ಯವಾದಗಳು

ದಿನಕರ್ ಸರ್,
ಅಂತಹ ಅನುಭವವೇನಿಲ್ಲ ಸರ್ ಕೆಲವೊಮ್ಮೆ ಯಾರಿಂದಲಾದರು ಬೇಸರವಾದರೆ ನಮ್ಮ ಗಮನಕ್ಕೆ ಬಂದಿರುವುದನ್ನು ಕವನ ಸಾಲುಗಳಾಗಿ ಮೂಡಿದೆ ಅಷ್ಟೇ.. ಧನ್ಯವಾದಗಳು

ಸುನಾಥ್ ಸರ್,
ನೀವು ಎಲ್ಲೋ ಮರೆತುಬಿಟ್ಟಿರಿ ಮನಸಿನ್ನು ಎಂದುಕೊಂಡಿದ್ದೆ.. ನಿಮ್ಮ ಸವಿಮಾತೇ ನಮಗೆ ಹಾರೈಕೆ. ಧನ್ಯವಾದಗಳು

ಮನಸು said...

ಜಿತೇಂದ್ರರವರೆ,
ಧನ್ಯವಾದಗಳು, ಕೆಲವೊಮ್ಮೆ ನಾವು ಗೊತ್ತಿದ್ದು ಕೆಲವರನ್ನ ನೋಯಿಸುತ್ತೆವೆ, ಕೆಲವರಿಗೆ ಬೇಸರಪಡಿಸುತ್ತೇವೆ.. ಅದೇ ಅನುಭವ ನಮಗಾದರೆ ಹೇಗಿರುತ್ತೆಂದು ಯೋಚಿಸಿ ಈ ಸಾಲುಗಳು ಹೊರಬಂದವು..

ಗುರು,
ನಿಮ್ಮ ಪ್ರೋತ್ಸಾಹ ಅನಿಸಿಕೆಗಳು ಸದಾ ನಮ್ಮೊಟ್ಟಿಗಿರಲಿ ನಮ್ಮಲ್ಲಿನ ಅಲ್ಪಸ್ವಲ್ಪ ಸಾಹಿತ್ಯಾಸಕ್ತಿಗೆ ಸಂತಸ ನೀಡುತ್ತದೆ. ಧನ್ಯವಾದಗಳು

ಮನಸು said...

ಅಝಾದಣ್ಣ (ಜಲನಯನ)
ನಿಮ್ಮಂತ ದೊಡ್ಡವರಿಗೆ ತಿಳಿಯದ್ದೇನು ಬಿಡಿ, ನಿಮ್ಮ ಅನಿಸಿಕೆಗಳು ಮನೋಲಾಸ್ಸನೀಡಿದೆ. ತಾಳ್ಮೆ ಎನೆಲ್ಲಾ ಒಳಿತು ಮಾಡುತ್ತೆಂದು ನೀವು ತಿಳಿಸಿದ್ದೀರಿ ಧನ್ಯವಾದಗಳು.

ಶಿವು ಸರ್,
ಧನ್ಯವಾದಗಳು ನಿಮ್ಮ ಹಾರೈಕೆಯಂತೆ ಶುಭಾಷಿತವೆಂದೇ ಭಾವಿಸೋಣ.

ರಾಘು ರವರೆ,
ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ನಾವು ಗಮನಿಸೋದಿಲ್ಲ ಆದರೆ ನನ್ನ ಸಾಲುಗಳಲ್ಲಿ ಕೆಲವು ನನ್ನ ಗಮನಕ್ಕೆ ಬಂದದ್ದರಿಂದ ಈ ಸಾಲುಗಳು ಹುಟ್ಟಿಕೊಂಡವು. ನಿಮ್ಮ ಅನಿಸಿಕೆಗೆ ಧನ್ಯವಾದಗಳು..

ಚುಕ್ಕಿಚಿತ್ತಾರ said...

ನಿಮ್ಮ ಕವಿತೆ ತು೦ಬಾ ಇಷ್ಟವಾಯಿತು. ಚಿಕ್ಕ ಚಿಕ್ಕ ಸಾಲುಗಳಲ್ಲಿ ದೊಡ್ಡ ದೊಡ್ಡ ನುಡಿ ಮುತ್ತ ಪೋಣಿಸಿದ್ದೀರ. ಧನ್ಯವಾದಗಳು.

Snow White said...

ತುಂಬ ಅರ್ಥಗರ್ಭಿತ ಸಾಲುಗಳು ..ಬಹಳ ಚೆನ್ನಾಗಿದೆ :)

ಮನಸು said...

ಚುಕ್ಕಿ ಚಿತ್ತಾರ,
ನಿಮ್ಮ ಮೆಚ್ಚುಗೆಗೆಯ ಸಿಹಿಮಾತು ಮುದನೀಡಿದೆ ಈ ಮೃದುಮನಸಿಗೆ...ಅಂತೆಯೇ ಸದಾ ಬಂದು ನಮ್ಮೊಂದಿಗೆ ಬಂದು ಹೋಗುತ್ತಿರಿ... ಮುತ್ತಿನಂತ ಜನರಿಗೆ ನುಡುಮುತ್ತುಗಳಷ್ಟೆ..
ಧನ್ಯವಾದಗಳು.


Snow White
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು, ಬರುತ್ತಲಿರಿ.

Laxman (ಲಕ್ಷ್ಮಣ ಬಿರಾದಾರ) said...

ಮನಸು ಅವರೆ,
ತುಂಬಾ ಚೆನ್ನಾಗಿವೆ ನಿಮ್ಮ ಸಾಲುಗಳು, ನಿಜವಾಗಿಯೂ
ಸರ್ವಜ್ಞನ ತ್ರಿಪದಿಗಳಂತಿವೆ. ನಿಮ್ಮ ಸಾಲುಗಳನ್ನು ಬರೆದು ಇಟ್ಟುಕೊಳ್ಳಬೇಕು.ದಿನಾಲು ಓದಲೇಬೇಕು ಹಾಗಿವೆ. ಯಾವದೇ ಕೇಲಸ ಮಾಡುವಾಗ ನಿಮ್ಮ ಸಾಲುಗಳನ್ನು ನೇನೆದು ಕಾರ್ಯ ಶುರು ಮಾಡಬೇಕು.
ಬರಿತಾ ಇರಿ.
ಲಕ್ಷ್ಮಣ

ಸುಧೇಶ್ ಶೆಟ್ಟಿ said...

ಮನಸು ಅವರೇ...

ಪ್ರತಿಯೊ೦ದೂ ನುಡಿಮುತ್ತುಗಳು ತು೦ಬಾ ಶ್ರ‍ೇಷ್ಟವಾಗಿವೆ....