Tuesday, December 1, 2009

-ಹೊಸ ಪ್ರಯತ್ನ-


ನೇಸರನು ಇದ್ದಾನೆ...ಪಳಪಳ ಹೊಳೆಯುತ್ತಲೂ ಇದ್ದಾನೆ
ಆದರೆ ಅವನ ಬೆಳಕು ಬೀಳುತ್ತಿಲ್ಲ ಕಾರಣ ನಾನೇ,
ನಾನು...
ಕಗ್ಗತ್ತಲ ಗುಹೆಯಲಿರುವೆ...
-----
ಕಣ್ಣೆದುರು ಊಟವಿದೆ ಹಸಿವಿನ ಹಾಹಾಕಾರವೂ ಇದೆ
ಆದರೆ ತಿನ್ನುಲು ಆಗುತಿಲ್ಲ ಕಾರಣವೇನು
ಗೊತ್ತೆ?
ನನಗೂ ಊಟದ ತಟ್ಟೆಗೂ ಮಧ್ಯೆ
ನುಣುಪಾದ ಗಾಜಿನ ಗೋಡೆ ಅಡ್ಡವಿದೆ..!!!
-----
ಬಾನಂಗಳ ವಿಮಾನದಲ್ಲಿ
ಹಾರಾಡುವಾಸೆ
ಆದರೆ ಕೈಗೆಟುಕದ ಆ ಆಗಸನೇರಲು
ಬಡತನ ಅಡ್ಡವಿದೆ..!!!
------
ಓದುವಾಸೆ ಬಲು ಇದೆ
ಓದಲು ಪುಸ್ತಕವೂ ಇದೆ
ಓದಿಸುವವರು ಇದ್ದಾರೆ
ಆದರೆ....
ಓದಲೋದರೆ ನಿದ್ದೆಗೆ ಜಾರಿ
ಸಮಯ ಕೆಡಿಸುವ ಮನವಿದೆ!!!
-----
ಲೇಖನಿಯಿದೆ
ಬರೆಯುವ ಪ್ರೋತ್ಸಾಹ ಸಿಕ್ಕಿದೆ
ಬರೆದದ್ದು ಓದಲು ಸಾಲುಗಟ್ಟಲೆ
ಜನರಿದ್ದಾರೆ..ಆದರೆ
ಬರೆಯಲು ಮೆದುಳಿಗೇನೂ
ವಿಷಯ ತೋಚದಂತಾಗಿದೆ..
-----
(ನಿರಾಶ್ರಿತ)
ಬತ್ತಿಯುಳ್ಳ ದೀವಿಗೆ ಇದೆ
ಜೊತೆಗೆ ತೈಲವೂ ಇದೆ
ಹೊತ್ತಿಸಲು ಬೆಂಕಿಕಡ್ಡಿಯೂ ಇದೆ
ಆದರೆ
ಮಳೆಯೊಟ್ಟಿಗೆ ಗಾಳಿಯು ಬೀಸುತಿದೆ
ಕಾರಣ
ನನ್ನದು ಸೂರಿಲ್ಲದ ಮನೆ
-----
(ಒಟ್ಟು ಕುಟುಂಬ)
ಮನೆಯೂ ಇದೆ
ಮಕ್ಕಳೂ ಇದ್ದಾರೆ
ಆದರೆ
ಸಂಸಾರವೆಂಬ
ಗೂಡು ಕಟ್ಟುವವರಿಲ್ಲ...
----
ಪ್ರೀತಿಯಿದೆ
ಆಸೆಯಿದೆ
ಆದರೆ
ಪ್ರೀತಿಸಲು
ಯಾರೂ ಇಲ್ಲ..
----
ನಾನು ಹೆಣ್ಣು
ಹೂ ಮುಡಿವಾಸಿಯಿದೆ
ಹೂವಿನ ರಾಶಿ ಎದುರಿದೆ
ಆದರೆ
ರಾಶಿ ಹೂ ಮುಡಿಯಲು
ಜಡೆಯೇ ಇಲ್ಲ..

43 comments:

ಸಾಗರದಾಚೆಯ ಇಂಚರ said...

ಮನಸು
ತುಂಬಾ ಸುಂದರ ಕವನ
ಎಲ್ಲ ರೀತಿಯ ಚಿತ್ರಣವಿದೆ

ಶಿವಪ್ರಕಾಶ್ said...

ಮನಸು ಅವರೇ,
ಎಲ್ಲ ಚಿಕ್ಕ ಚಿಕ್ಕ ಕವನಗಳು ಸೂಪರ್...
Last one is simply superb :)

Dileep Hegde said...

ಎಲ್ಲ ಇದೆ.. ಏನೂ ಇಲ್ಲ.. ಕೆಲವು ಇಲ್ಲಗಳು ಸ್ವಯಂಕೃತ.. ಇನ್ನುಳಿದವು out of control.. :)
ಕವನ ಚೆನ್ನಾಗಿದೆ.. :)

ಮನಸು said...

ಸಾಗರದಾಚೆ ಇಂಚರ,
ಏನೋ ಹೊಸ ಹೊಸದಾಗಿ ಹೊಳೆದಿದ್ದನ್ನ ಬರೆದಿದ್ದೇನೆ ನಿಮ್ಮ ಮೆಚ್ಚುಗೆಗೆ ಪಾತ್ರವಾಗಿದ್ದರೆ ನಿಜಕ್ಕೂ ಖುಷಿ.

ಮನಸು said...

ಪರಂಜಪೆ ಸರ್,
ಧನ್ಯವಾದಗಳು ನಿಮ್ಮ ಮೆಚ್ಚುಗೆ ನನಗೆ ಸ್ಪೂರ್ತಿ

ಮನಸು said...

ಶಿವಪ್ರಕಾಶ್,
ನಿಮ್ಮ ಮೆಚ್ಚನಾರ್ಹ ಅನಿಸಿಕೆ ನಮ್ಮ ಧನ್ಯವಾದಗಳು, ಕೊನೆಯ ಸಾಲು ನಿಜ ಅಲ್ಲವೇ ಜಡೆನೇ ಇಲ್ಲ ರಾಶಿ ಹೂವಿಗೆಲ್ಲಿ ಸ್ಥಾನ ಹೇಳಿ ಹಹಹ

ಮನಸು said...

ದಿಲೀಪ್,
ಧನ್ಯವಾದಗಳು ನಿಮ್ಮ ಆಗಮನ ಖುಷಿ ನೀಡಿದೆ... ನೀವು ಹೇಳುವುದು ಸರಿ... ವಂದನೆಗಳು

ಸೀತಾರಾಮ. ಕೆ. / SITARAM.K said...

ಹನಿ ಗುಟುಕುಗಳು -ಅಮೃತದ ಬಿ೦ದುಗಳಾಗಿ- ಬದುಕಿನಲ್ಲಿ ನಡೆವ ಸ್ವಯ೦ ಕೃತಗಳಿಗೆ ಹಾಗೂ ಕಾಲನ ಮಾಯೆಗೆ-ಕನ್ನಡಿಯ೦ತೆ ಮಿಣುಕುತಿವೆ.

ದಿನಕರ ಮೊಗೇರ said...

ನಾನು ಹೆಣ್ಣು
ಹೂ ಮುಡಿವಾಸಿಯಿದೆ
ಹೂವಿನ ರಾಶಿ ಎದುರಿದೆ
ಆದರೆ
ರಾಶಿ ಹೂ ಮುಡಿಯಲು
ಜಡೆಯೇ ಇಲ್ಲ..

ಮನಸು ಮೇಡಂ,
ಮೇಲಿನ ಸಾಲು ನಿಜ ನಿಜ......... ನಿಮ್ಮ ಫೋಟೋ ನೋಡಿದ್ದೇನೆ, ಜಡೆ ಇರಲಿಲ್ಲ... ಇದನ್ನ ಓದಿ ನಗು ಬಂತು......
ಎಲ್ಲಾ ಚುತುಕುಗಳೂ ಚೆನ್ನಾಗಿವೆ... 'ಇಲ್ಲ, ' ಇರುವುಗಳ ನಡುವಿನ ಹೊಯ್ದಾಟ ಚೆನ್ನಾಗಿವೆ......

Snow White said...

ತುಂಬ ಚೆನ್ನಾಗಿದೆ ...ಬದುಕಿನ ಎಲ್ಲ ವ್ಯಂಗ್ಯಗಳನ್ನು ಚೆನ್ನಾಗಿ ಚಿತ್ರಿಸಿದ್ದಿರ್ರಿ ... :)

Roopa said...

>> ನೇಸರನು ಇದ್ದಾನೆ...ಪಳಪಳ ಹೊಳೆಯುತ್ತಲೂ ಇದ್ದಾನೆ
ಆದರೆ ಅವನ ಬೆಳಕು ಬೀಳುತಿಲ್ಲ ಕಾರಣ ನಾನೆ,
ನಾನು...
ಕಗ್ಗತ್ತಲ ಗುಹೆಯಲಿರುವೆ...
ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಪರಿಹಾರ ಎದುರಿಗೇಇದ್ದರೂ ನಾವೆ ತಿಳಿಯಬಯಸುವುದಿಲ್ಲ ಎಂಬುದನ್ನ ಸೂಚ್ಯವಾಗಿ ಹೇಳಿದೆ
ನನಗೆ ತುಂಬಾ ಹಿಡಿಸಿತು ಹಾಗೆಯೇ ಇನ್ನುಳಿದವು ಕೂಡ
ಹೊಸ ಪ್ರಯತ್ನ ಚೆನ್ನಾಗಿದೆ ಹೀಗೆ ಮುಂದುವರೆಸಿ

jithendra hindumane said...

ಮೇಡಂ, ತುಂಬಾ ಚೆನ್ನಾಗಿ ಬರೆದಿದ್ದೀರಿ...
ಆದರೆ ಕೆಲವು ಸಣ್ಣ ತಪ್ಪುಗಳಿವೆ ಸರಿಪಡಿಸಿಕೊಳ್ಳಿ.

sunaath said...

ಮನಸು,
ನಿಮ್ಮ ಕವನ ಚೆನ್ನಾಗಿದೆ,
ನನಗೆ ಓದುವಾಸೆಯೂ ಇದೆ,
ಆದರೆ,
ಕರಂಟ್ ಹೋಗದಿರಲಿ ಎನ್ನುವ
ಪ್ರಾರ್ಥನೆಯೂ ಇದೆ!

ಮನಸು said...

ಧನ್ಯವಾದಗಳು ಸರ್, ನಿಮ್ಮ ಆಗಮನ ಖುಷಿಕೊಟ್ಟಿದೆ ನನ್ನ ಹೊಸ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇದೆ ಎಂದ ಮೇಲೆ ಮುಂದುವರಿಸಬಹುದೆಂದುಕೊಂಡಿದ್ದೇನೆ...

ಮನಸು said...

ದಿನಕರ್ ಸರ್,
ಹಹಹಹ ಏನು ಮಾಡೋದು ಒಂದೇ ಒಂದು ಮೊಳ ಹೂ ಮುಡಿಯಬಹುದು ಅಷ್ಟೇ ರಾಶಿ ಹೂ ಮುಡಿಯಲಾಗದು ಹಹಹ.... ನಮ್ಮನ್ನು ನಾವು ತಮಾಷೆಗೀಡುಮಾಡಿಕೊಂಡರೆ ಚೆನ್ನವಲ್ಲವೇ..? ಹಹಹಹ ಧನ್ಯವಾದಗಳು.

ಮನಸು said...

Snow White
ಧನ್ಯವಾದಗಳು ನಿಮ್ಮ ಅನಿಸಿಕೆಗೆ, ನಿಮ್ಮ ಬ್ಲಾಗಿನಲ್ಲಿ ಕಾಮೆಂಟ್ ಹಾಕಲಾಗುತ್ತಿಲ್ಲ ಮತ್ತೊಮ್ಮೆ ಪ್ರಯತ್ನಿಸುವೆ.

ರೂಪ,
ಧನ್ಯವಾದಗಳು ರೂಪ ಖಂಡಿತ ನಿಮ್ಮ ಹಾರೈಕೆ ಸದಾ ನನ್ನೊಂದಿಗಿರಲಿ ಹೊಸ ಪ್ರಯತ್ನವನ್ನು ಮುಂದುವರಿಸುತ್ತೇನೆ... ಬದುಕಿನಲ್ಲಿ ಎಷ್ಟೋ ಸಲಹೆಗಳು ನಮ್ಮೆದುರಿದ್ದರೂ ನಾವು ಕತ್ತಲನ್ನೆ ಹುಡುಕುತ್ತ ಹೋಗುತ್ತೇವೆ.

ಮನಸು said...

ಜಿತೇಂದ್ರರವರೆ,
ಧನ್ಯವಾದಗಳು, ಖಂಡಿತ ತಪ್ಪು ಸರಿಪಡಿಸುವೆ..
ತಪ್ಪಾಗಿದೆ ಎಂದು ಗೊತ್ತಿದೆ,
ತಪ್ಪು ಏನೆಂದೂ, ಎಲ್ಲೆಂದೂ ಗೊತ್ತಿದೆ
ಆದರೆ
ಸರಿಪಡಿಸುವ ಮನಸಿಲ್ಲದೇ
ಸುಮ್ಮನಿದ್ದಾರೆಂದು ಬಯಸ ಬೇಡಿ ಹಹಹ ....

ಮನಸು said...

ಸುನಾಥ್ ಸರ್,
ಸಕ್ಕತ್ ಪಾಯಿಂಟ್ ಕೊಟ್ಟಿದ್ದೀರಿ ಹಹ ಧನ್ಯವಾದಗಳು, ನಿಜ ಓದುವಾಸೆ ಇರುವವರಿಗೆ ನಿರಾಸೆ ಮೂಡಿಸದಿರಲೆಂದು ಆ ಕರೆಂಟನ್ನೇ ಪ್ರಾರ್ಥಿಸುವೆ ಹಹ...

ಮುಸ್ಸ೦ಜೆ said...

ತು೦ಬಾ ಚೆನ್ನಾಗಿದೆ. ನಮ್ಮ ಆಕಾ೦ಕ್ಷೆಗಳಿಗೆ ಏನು ಅಡ್ಡ ಬರುತ್ತವೆ ಅಥವಾ ಹಾಗೆ ಭಾವಿಸುತ್ತೇವೆ ಎ೦ಬುದನ್ನ ಚೆನ್ನಾಗಿ ವ್ಯಕ್ತಪಡಿಸಿದ್ದೀರ.

Ranjita said...

ಹೊಸ ಪ್ರಯತ್ನ ತುಂಬಾ ಚೆನ್ನಾಗಿದೆ ಮೇಡಂ .. ಒಂದಕ್ಕಿಂತ ಒಂದು ಸುಪರ್ ..
ಓದಿಸುವವರಿದ್ದರು
ಪುಸ್ತಕವೂ ಇತ್ತು
ಜೊತೆಗೆ
ಓದಲು ಕೂತರೆ ನಿದ್ದೆ ಹತ್ತುವ
ಕಣ್ ಗಳೂ ಇದ್ದವು :P

ಮನಸು said...

ಮುಸ್ಸಂಜೆ ಇಂಪು,
ಮೊದಲಿಗೆ ನಿಮಗೆ ಸ್ವಾಗತ, ನಿಮ್ಮ ಆಗಮನ ಖುಷಿ ನೀಡಿದೆ..ಹೀಗೆ ಬರುತ್ತಲಿರಿ... ಧನ್ಯವಾದಗಳು ನನ್ನ ಹೊಸ ಪ್ರಯತ್ನ ನಿಮಗೆ ಇಷ್ಟವಾಗಿದ್ದಕ್ಕೆ ನೀವು ಹೇಳುವುದು ನಿಜ... ನಮಗೆ ಮಾಡುವ ಮನಸಿದ್ದರೂ ಕೆಲವೊಮ್ಮೆ ಸೋಮಾರಿತನ ಅಥವಾ ಇನ್ನಾವುದೋ ಅಡ್ಡ ಬರುತ್ತದೆ...

ಮನಸು said...

ರಂಜಿತ,
ಧನ್ಯವಾದಗಳು...ನಿಮ್ಮ ಅನಿಸಿಕೆಗಳಿಗೆ... ಹೌದಲ್ಲವೆ? ಓದಲು ಕೂತರೆ ನಿದ್ದೆ ಹತ್ತುವ ಕಣ್ಣು ಇದ್ದೇ ಇರುತ್ತೆ ಹಹಹ ಏನು ಮಾಡೋದು ಹಹಹಹ

shivu.k said...

ಮನಸು ಮೇಡಮ್,

ನಿಮ್ಮ ಕವನಗಳನ್ನು ಓದುವಾಸೆ.
ಭಾವನೆಗಳನ್ನು ಅನುಭವಿಸುವಾಸೆ..
ಆದ್ರೆ ಏನು ಮಾಡಲಿ...
ಜ್ವರವೆನ್ನುವುದು
ನನ್ನೆಲ್ಲಾ ಆಸೆಗಳನ್ನು
ಮಗುಚಿ ಹಾಕುತ್ತಿದೆಯಲ್ಲ !

ಚೆನ್ನಾಗಿ ಬರೆದಿದ್ದೀರಿ...

Raghu said...

ಮನಸು,
ಚಿಕ್ಕ ಚಿಕ್ಕ ಸಾಲುಗಳು ದೊಡ್ಡ ದೊಡ್ಡ ಅರ್ಥವನ್ನು ಹೇಳ್ತಾ ಇವೆ... ತುಂಬಾ ಚೆನ್ನಾಗಿದೆ ... ಹೊಸ ಪ್ರಯತ್ನ ಒಳ್ಳೆ ರೀತಿಯಲ್ಲೇ ಹೊರ ಬಂದಿದೆ...
ನಿಮ್ಮವ,
ರಾಘು.

ಮನಸು said...

ಜ್ವರವೆಂದು ಮಲಗಿದರೆ
ಅದು ಮಲಗಿಸಿಬಿಡುವುದು
ಆಗಾಗ ಒಮ್ಮೆ
ಬ್ಲಾಗ್ ಓದುತಿದ್ದರೆ
ಜ್ವರ ಓಡಿಹೋಗುವುದು
ಕಾರಣ
ಬ್ಲಾಗ್ ಒಂದು ರೀತಿ
ಔಷಧವಿದ್ದಂತೆ ಅಲ್ಲವೆ...? ಹಹಹ

ಧನ್ಯವಾದಗಳು ಸರ್, ಜ್ವರವಿದ್ದರೂ ನಮ್ಮ ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ...

ಮನಸು said...

ರಾಘು,
ಧನ್ಯವಾದಗಳು, ಚಿಕ್ಕ ಸಾಲುಗಳು ನಿಮಗೆ ಇಷ್ಟವಾಗಿದ್ದರೆ ನಮಗೆ ಖುಷಿ, ಪ್ರಯತ್ನ ಒಳ್ಳೆಯದೇ ಹಾಗಿದ್ದರೆ ಮುಂದೆ ಇನ್ನಷ್ಟು ಸಾಲುಗಳಿಗಾಗಿ ಪ್ರಯತ್ನಿಸುವೆ..
ವಂದನೆಗಳು

Unknown said...

ನಿಮ್ಮ ಪುಟ್ಟ ಪುಟ್ಟ ಸಾಲುಗಳು ತುಂಬಾ ಖುಷಿ ಕೊಟ್ಟಿತು... ತುಂಬಾ ಚೆನ್ನಾಗಿ ಬರೆದಿದ್ದೀರಿ...

ನಿಮ್ಮ ಬ್ಲಾಗ್ ಇದೆ,
ಬ್ಲಾಗ್ನಲ್ಲಿ ಉತ್ತಮ ಬರಹಗಳೂ ಇವೆ,
ಬೇಗನೆ ಓದುವ ಮನಸ್ಸಿದೆ...
ಆದರೆ ,
ದಿನಕ್ಕೆ ೨೪ ಘಂಟೆ ಮಾತ್ರ ಇದೆ!!! :-)

ಮನಸು said...

ರವಿಕಾಂತ್,

ಓದುವಾಸೆ
ಕೆಲಸ ಮಾಡುವಾಸೆ
ಎಲ್ಲವೂ ಇದ್ದರೆ
೨೪ ಗಂಟೆಯಲ್ಲಿ
ಮಾಡಲಾಗದವರು
೪೮ ಗಂಟೆಕೊಟ್ಟರೂ
ಮಾಡಲಾಗದು
ಕಾರಣ
ಮನಸಿನ ಸೋಮಾರಿತನ ............ಹಹಹಹ...ಈ ಸಾಲುಗಳು ಖುಷಿಕೊಟ್ಟಿತೆ ಅಥವಾ ಕೋಪ ತರಿಸಿತೆ..
ಧನ್ಯವಾದಗಳು ...

Guruprasad said...

ಹೊಸ ಪ್ರಯತ್ನ ಚೆನ್ನಾಗಿ ಇದೆ....ಏನು ಇಲ್ಲ ಆದರೆ ಎಲ್ಲವೂ ಇದೆ :-)

ಜಲನಯನ said...

ಮನಸು ಮೇಡಂ...ಭಾವನೆಗಳು ತರಲೆ ಮಾಡುತ್ತವೆ ಎನ್ನುವುದು ನಿಜ ವಾದರೂ ಕೆಲವೊಮ್ಮೆ ಅವುಗಳು ದರ್ಶಿಸುವ ವಿಷಯ ಗಹನತೆ ಅದಮ್ಯವಾದುದು...ನಿಮ್ಮ ಈ ಕವನ ಬಹಳ ಇಷ್ಟವಾಯಿತು
(ನಿರಾಶ್ರಿತ)
ಬತ್ತಿಯುಳ್ಳ ದೀವಿಗೆ ಇದೆ
ಜೊತೆಗೆ ತೈಲವೂ ಇದೆ
ಹೊತ್ತಿಸಲು ಬೆಂಕಿಕಡ್ಡಿಯೂ ಇದೆ
ಆದರೆ
ಮಳೆಯೊಟ್ಟಿಗೆ ಗಾಳಿಯು ಬೀಸುತಿದೆ
ಕಾರಣ
ನನ್ನದು ಸೂರಿಲ್ಲದ ಮನೆ

Unknown said...

ನಿಮ್ಮ ಚುಟುಕಗಳು ಮನಸಿಗೆ ಬಹಳ ಹಿಡಿಸಿದವು...ಧನ್ಯವಾದ.

ಮನಸು said...

ಜಲನಯನ ಸರ್,
ಧನ್ಯವಾದಗಳು, ಭಾವನಗಳಲ್ಲಿ ಹಲವು ಮುಖಗಳಿವೆ...ಅದು ವ್ಯಕ್ತಿಯ ಮನಸಿನಮೇರೆಗೆ ಚಲಿಸುತ್ತೆ ಅಲ್ಲವೆ..? ನಿಮ್ಮ ಮೆಚ್ಚುಗೆಯ ನನಗೆ ಕೊಡುಗೆಯಾಗಿದೆ ಮತ್ತಷ್ಟು ಬರೆಯಲು ಸ್ಪೂರ್ತಿಯಾಗಿದೆ.....
ವಂದನೆಗಳು

ಮನಸು said...

ಈಶಕುಮಾರ್,
ಧನ್ಯವಾದಗಳು ನಿಮ್ಮ ಅನಿಸಿಕೆಗೆ ಸದಾ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ಮನಮುಕ್ತಾ said...

ಎಷ್ಟೊ೦ದು ಇದೆ ಆದರೆ, ಒ೦ದು ಇಲ್ಲ ಎನ್ನುವುದು ’ಇದೆ’ಎ೦ಬುದರ ಇರುವಿಕೆಯನ್ನೇ ಇಲ್ಲವಾಗಿಸುತ್ತದೆ ಅಲ್ವಾ? ಇನ್ನಷ್ಟು ಕವನಗಳು ಬರುತ್ತಿರಲಿ. ಧನ್ಯವಾದಗಳು.

ಬಾಲು said...

chennagide.

ಮನಸು said...

manamukta
ಧನ್ಯವಾದಗಳು, ಹೌದು,ಇದೆ ಎ೦ಬುದರ ಇರುವಿಕೆಯನ್ನೇ ಇಲ್ಲವಾಗಿಸುತ್ತದೆ. ಖಂಡಿತ ಇನ್ನಷ್ಟು ಬರೆಯಲು ಪ್ರಯತ್ನಿಸುವೆ.

ಮನಸು said...

ಬಾಲುರವರೆ.
ಧನ್ಯವಾದಗಳು, ಹೀಗೆ ಬರುತ್ತಲಿರಿ ನಿಮ್ಮ ಅನಿಸಿಕೆ ತಿಳಿಸುತ್ತಲಿರಿ

Prabhuraj Moogi said...

ಇರುವುದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ ಅಂದಿದ್ದು ಇದಕ್ಕೇನಾ.. ಇರುವುದು ಇಲ್ಲದಿರುವುದುಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ, ದಿನದ ಇಪ್ಪತ್ನಾಕು ಘಂಟೆ ಬಗ್ಗೆ ಒಂದು ಕಮೆಂಟಿನಲ್ಲಿ ಬರೆದಿದ್ದೀರಲ್ಲ ಅದೇನೊ ನನ್ನ ಸ್ಥಿತಿಗೆ ಅಣಕವೇನೊ ಅನ್ನಿಸುವಂತಿತ್ತು... ಹೀಗೆ ಬರೀತಾ ಇರಿ...
ಈ ಸೋಮಾರಿಗೆ ಇಂದು ಓದಲು ಸಮಯವಾಯ್ತು.

ಮನಸು said...

ಧನ್ಯವಾದಗಳು ಪ್ರಭು,
ಸೋಮಾರಿತನ ಇಂದಾದರೂ ಬ್ಲಾಗಿನತ್ತ ಬರುವಂತೆ ಮಾಡಿತಲ್ಲಾ ಬಿಡಿ ಹಹಹ... ಬಹರೈನ್ನಲ್ಲಿದ್ದಾ ಅಲ್ಲಿ ಒಬ್ಬರು ಕಂಪನಿ ಮಾಲೀಕರು ಕನ್ನಡದವರೇ ಆದ ಅವರು ಅವರ ಕೆಲಸಗಾರರಿಗೆ ಯಾವಾಗಲೂ ೮ಗಂಟೆನಲ್ಲಿ ಕೆಲಸ ಮಾಡೋಕೆ ಆಗೋಲ್ಲವೆಂದರೆ ೨೪ಗಂಟೆ ಕೊಟ್ಟರೂ ಆಗೋಲ್ಲ ಎಂದು ಕಿವಿಮಾತು ಹೇಳುತ್ತಿದ್ದರು. ೮ ಗಂಟೆಯ ನಂತರ ಕೆಲಸ ಮಾಡಲು ಬಿಡುತ್ತಲಿರಲಿಲ್ಲ ನಾಳೆ ಬಂದು ಮಾಡಲು ಹೇಳುತ್ತಲಿದ್ದರು.

ಸುಧೇಶ್ ಶೆಟ್ಟಿ said...

ಮನಸು ಅವರೇ....

ತು೦ಬಾ ದಿನಗಳಿ೦ದ ಓದಬೇಕು ಅ೦ತ ಅ೦ದುಕೊ೦ಡು ಮು೦ದೂಡುತ್ತಲೇ ಬ೦ದಿದ್ದೆ... ಅ೦ತೂ ಇವತ್ತು ಬ೦ದು ಓದಿ ತು೦ಬಾ ಖುಷಿ ಆಯಿತು... ಮನಸಿಗೆ ಖುಷಿ ಕೊಡುವ ಬ್ಲಾಗ್ ನಿಮ್ಮದು...

ಇನ್ನು ಈ ಕವನದ ಬಗ್ಗೆ ಹೇಳಬೇಕೆ೦ದರೆ...

ಚೆನ್ನಾಗಿದೆ... ಚೆನ್ನಾಗಿದೆ... ಚೆನ್ನಾಗಿದೆ.... :)

ಮನಸು said...

ಸುಧೇಶ್,
ಧನ್ಯವಾದಗಳು ಎಷ್ಟೇ ಹಳೆಯ ಲೇಖನಗಳಾದರೂ ನೀವು ಮತ್ತೊಮ್ಮೆ ನನ್ನ ಬ್ಲಾಗಿಗೆ ಭೇಟಿ ನೀಡಿ ನಿಮ್ಮ ಅನಿಸಿಕೆಗಳನ್ನು ನೀಡುತ್ತೀರಿ ನನ್ಗೆ ಇದು ತುಂಬಾ ಖುಷಿಕೊಡುತ್ತದೆ. ಮನಸ್ಸು ಚೆನ್ನಾಗಿದ್ದರೆ ಅಲ್ಲವೆ ನಮ್ಮ ಜೀವನ ಸುತ್ತ ಮುತ್ತಲ ಪ್ರಪಂಚ ಚೆನ್ನಾಗಿರೋದು ಹಹ ಅದಕ್ಕೆ ನನ್ನ ಕಿರು ಪ್ರಯತ್ನ ಅಷ್ಟೆ.

ಮನಸಿನ ಮಾತುಗಳು said...

ಮನಸು ಅವರೇ,
ಚುಟುಕು ಕವನಗಳು ಬಹಳ ಅರ್ಥಗರ್ಭಿತವಾಗಿವೆ..
ನಾನು ಇದನ್ನು ನೋಡಿ ಸಕತ್ ಎಂಜಾಯ್ ಮಾಡಿದೆ...
ನನ್ನ collegue ಗೂ ತೋರಿಸಿದೆ..even she enjoyed..
nice..:)

ಮನಸು said...

ದಿವ್ಯ,
ಬಹಳ ಧನ್ಯವಾದಗಳು ನನ್ನ ಹಳೆಯ ಲೇಖನಗಳನ್ನೆಲ್ಲಾ ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಲ್ಲ ನನಗೆ ಬಹಳ ಖುಷಿಯಾಗಿದೆ.
ನಿಮ್ಮ ಸ್ನೇಹಿಗೂ ನಮ್ಮ ಧನ್ಯವಾದಗಳನ್ನು ತಿಳಿಸಿ.
ವಂದನೆಗಳು