ಬಿಸಿಗಾಳಿ ಸುಡು ಬಿಸಿಲಿನ ಗಾಳಿ
ಬೇಸರಿಕೆಯ ಮನಸಿನಲಿ
ತೋಯ್ಯ್ದಿದೆ ಮೈ ಉರಿ ಬಿಸಿಲಿನಲಿ......
ಒಮ್ಮೆ ಓಡಾಡಿ ಬಂದರೆ ಸಾಕು
ದಿನವೆಲ್ಲ ಸುದಾರಿಸಿಕೊಳ್ಳ ಬೇಕು
ಈ ಮರುಭೂಮಿಯ ಬಿಸಿಲ ಧಗೆಗೆ.......
ಬಾನಾಡಿಯ ಆ ನೇಸರ
ಭುವಿಗೆ ಉಗುಳುತಿರುವನು
ಬಿಸಿ ಬಿಸಿಯ ಕೆಂಡದೋಕುಳಿ......
ಕಡಲ ಅಬ್ಬರವೇ ಇದ್ದರೂ
ಅವಳೂ ತಣ್ಣಗಾಗಿಸಲಿಲ್ಲ
ನೇಸರನ ಧಗ ಧಗಿಸೋ ಕೋಪವ.......
ಮರುಭೂಮಿಗೆ ಮರುಳಾಗಿ
ಕ್ರೂರ ನೋಟವನೇ ಬೀರಿ
ಬಿಸಿ ಗಾಳಿಯಾಗಿ ಬೀಸುತಿಹನು ನೋಡಿ........
ಬಿಸಿಗಾಳಿಯೇ ನಾ ಕಾಡಿ ಬೇಡುವೆ
ನಿನ್ನ ದೂಡಿ ಸಿಹಿಗಾಳಿ
ತಂಪೆರಗಿ ತಟ್ಟುವುದೆಂದು ಹೇಳು.....
ಬಿಸಿಗಾಳಿಗೆ ನಲುಕುತಿರುವೆವು
ಈ ಬಿಸಿಲ ಮೂರ್ನಾಲ್ಕು ತಿಂಗಳು
ಕಳೆವುದು ಹೇಗೋ ಏನೋ ಕಾಣೆನು........
------------
ಮರುಭೂಮಿಯಲ್ಲಿ ನೇಸರನೇಕೋ ಬಲು ಮುನಿಸಿಕೊಂಡುಬಿಟ್ಟಿದ್ದಾನೆ. ಅದಕ್ಕೆ ಈ ಬಿಸಿಲ ಧಗೆ ಎಲ್ಲೆ ಮೀರಿ ಸಾಗುತಿದೆ. ಇಲ್ಲಿನ ಬಿಸಿಲು ೫೨-೫೩ ಡಿಗ್ರಿಗೂ ಮೀರಿಬಿಟ್ಟಿದ್ದೆ. ಬಿಸಿಲಿಗೆ ಮೈ ಒಡ್ಡಿ ಕೆಲಸ ಮಾಡುವವರ ಕಂಡರೆ ಮನ ಕಲಕುತ್ತದೆ.... ಆದಷ್ಟು ಈ ಬಿಸಿಲ ಬೇಗೆ ಕಳೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
19 comments:
ಸೂರ್ಯ ಮರುಭೂಮಿಯಲ್ಲಿ ಮಾತ್ರ ಮುನಿಸಿಕೊಂಡಿಲ್ಲ..
ಈ ವರ್ಷ ನಮ್ಮ ಮಲೆನಾಡಲ್ಲೂ ಅಸಹನೀಯ ೪೦-೪೨ಡಿಗ್ರಿ ಉಷ್ನತೆ ಇತ್ತು. ಗ್ಲೋಬಲ್ ವಾಮಿಂಗ್ ಎಂದರೆ ಇರಬಹುದೇನೋ?
ಬಿಸಿಲಿನ ಬಗ್ಗೆ ಬರೆದ ಕವನ ತಂಪು ನೀಡಿತು ಮೇಡಂ , ತುಂಬಾ ಚೆನ್ನಾಗಿದೆ.... ಇಲ್ಲಂತೂ ಮಳೆ ಸುರಿಯುತ್ತಿದೆ...... ಅಲ್ಲೂ ಶುರು ಆಗಬಹುದು ಸದ್ಯದಲ್ಲೇಆಲ್ವಾ....
ಬೇಂದ್ರೆ ಹೇಳಿದ್ದಾರೆ:
"ಕವಿಗೇನು ಬೇಕ? ಹೂತ ಹುಣಸಿಮರ ಸಾಕ!"
ನಿಮ್ಮ ಕವನ ಓದಿದ ಬಳಿಕ ಅನಿಸಿದ್ದು:
"ಕವಿಗೇನು ಬೇಕ? ಮರುಭೂಮಿಯ ಬಿಸಿಲೇ ಸಾಕ!"
ಬಿಸಿಲ ತಾಪದ ಅನುಭವ ಈ ಸಲ ನಮಗೂ ಆಗಿದೆ. ಕಾಡ ಕಡಿದು ನಾಡಮಾಡುವ ಹುಂಬತನದಲ್ಲಿ ಮನುಜ ತನ್ನ ಬುಡಕ್ಕೇ ಕೊಡಲಿ ಹಾಕುತ್ತಿರುವನು! ಬಹು ಬೇಗ ತಂಗಾಳಿಯ ಅನುಭವ ನಿಮಗಾಗಲೆಂದು ಹಾರೈಸುವೆ.
ನಿಮ್ಮ ಕವನ ಓದಿ ಡುಂಡಿಯವರ ಈ ಹನಿಗವನ ನೆನಪಾಯಿತು; ಕರಾವಳಿಯಲ್ಲಿ ಈ ಬಾರಿ
ಎಂಥಾ ಸೆಖೆ ಅಂತೀರಿ !
ಸಾಲದ್ದಕ್ಕೆ ಪವರ್ ಕಟ್ಟು !
ಜನರೆಲ್ಲಾ ಬೆವರ್ ಬಿಟ್ಟು ,
ನೇತ್ರಾವತಿ,ಸ್ವರ್ಣಾ,ಸೀತಾ,
ನೀರೆಲ್ಲಾ ಬೆವರ ನಾತಾ!
ಹೊಳೆಯಾಗಿ ಹರಿದು ಬೆವರು!
ಉಪ್ಪಾಗಿದೆ ಸಮುದ್ರದ ನೀರು!
ನನ್ನ ಬ್ಲಾಗಿಗೂ ಒಮ್ಮೆ ಬನ್ನಿ.ನಮಸ್ಕಾರ.
ಸುಡುವ ಬಿಸಿಲು ನಿಮ್ಮಲ್ಲೊಂದು ಕವನವನ್ನು ಹುಟ್ಟಿಸಿತಲ್ಲ..ಅದು ಮುಖ್ಯ !. ಚೆನ್ನಾಗಿದೆ. ಬೇಗ ತಂಗಾಳಿ ಬೀಸಲಿ.
ಮನಸು ಅವರೇ,
ಮಳೆ ಬರಲಿ ಬಿಸಿಲೂ ಇರಲಿ ಅಂತ ಒಂದು ಕನ್ನಡ ಸಿನಿಮಾ ಶೀರ್ಷಿಕೆ ಇದೆ ಗೊತ್ತಾ?
ಹಾಗೆ ಮಳೆ , ಬಿಸಿಲು ಮತ್ತು ತಂಪಾದ ಗಾಳಿ ಹಿತಕರವಾಗುವ ಹಾಗೆ ಬರಲಿ ಎಂದು ಹಾರೈಸೋಣ!
akkayya, kavana chennagide..
adastu bega maleraaya nimma nelakke thampereyali :)
55 degree!
abba marubhoomiyE!
ಮನಸುರವರೆ,
ನಮ್ಮೂರ ಮಳೆ- ಛಳಿಯ ನಡುವೆಯಲ್ಲೂ ಬಿಸಿಯ ಅನುಭವವಾಯಿತು. ಚೆನ್ನಾಗಿದೆ :)
ಬಿಸಿಲ ತಾಪದ ಬಗ್ಗೆ ತಪತಪಿಸಿರುವ ತಮ್ಮ ಕವನ ಸೊಗಸಾಗಿ ಮೂಡಿದೆ. ಅದನ್ನೋದಿ ತಮ್ಮ ತಾಪದರಿವೂ ನಮಗೂ ಆಗಿದೆ. ಚೆ೦ದದವಾಗಿ ಹೇಳಿದ್ದಿರಿ. ತಾಪದ ದಿನಗಳು ಬೇಗ ಕಳೆಯಲಿ ಎ೦ದು ಹಾರೈಸುವೆ.
kavana tumba chennagide madam..temperature nodi baya aithu..
ಅಬ್ಬ ಎ೦ಥಾ ಧಗೆ! ಆ ತಾಪದಲ್ಲಿ ಭಾವನೆಗಳು ಆವಿಯಾಗದೆ ಸಾ೦ದ್ರಗೊ೦ಡು ಸು೦ದರ ಕವನವಾಗಿರುವುದೇ ಅದ್ಭುತ! ಆದಷ್ಟು ಬೇಗ ತ೦ಗಾಳಿ ತ೦ಪೆರೆಯಲಿ.
ಬರಿ ಮರುಭೂಮಿಯ ಕತೆ ಮಾತ್ರ ಇದಲ್ಲ , ಇಲ್ಲೂ ಕೂಡಾ ಇದೆ ಕತೆ......
ಈ ಭಾರಿ ಸೂರ್ಯ ಭೂಮಿಯ ಮೇಲೆ ಸ್ವಲ್ಪ ಹೆಚ್ಚಾಗಿಯೇ ಮುನಿಸಿಕೊಂಡಂತಿದೆ.
ಕವನ ಚನ್ನಾಗಿದೆ.
ಹಾಗೆ ಇಲ್ಲೂ ಕೂಡ ಈ ಎಲ್ಲಿಲ್ಲದ ಸೆಕೆ.
ಮೊನ್ನೆ ಮೊನ್ನೆ ಬಂದ ಮಳೆಯಿಂದ ಸ್ವಲ್ಪ ಭೂಮಿ ತಂಪಾಗಿದೆ.
ಕವನ ಚೆನ್ನಾಗಿದೆ.
ನಿಮ್ಮವ,
ರಾಘು.
ಮನಸು ಮೇಡಮ್,
ಅಲ್ಲಿ 55 ಡಿಗ್ರಿ ಅಂತ ಕೇಳಿ ದಿಗಿಲಾಯಿತು. ಅದರ ಬಗ್ಗೆ ನೀವು ಬರೆದ ಕವನ ಚೆನ್ನಾಗಿದೆ. ಸೂರ್ಯ ಅಲ್ಲಿ ಬೇಗ ತಂಪಾಗಲಿ.
ಮರುಭೂಮಿಯ ಬಿಸಿಲಿನ ಝಳದ ಅರಿವು ನನಗಾಗಿದೆ. ಆದ್ದರಿಂದ ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳಬಲ್ಲೆ. ಇನ್ನೂ ಎರಡು ತಿಂಗಳು ಹೀಗೇ ಅಲ್ಲವೆ? ಡಿಸೆಂಬರ್ ಬೇಗ ಬರಲಿ....ಸಿಂಗಾಪುರ್ನಲ್ಲಿ ಬಿಸಿಲು ಕಡಿಮೆಯಾಗಿ ಮಳೆ ಹೆಚ್ಚಾಗಿದೆ.....ಗಿರೀಶ್ ಜಮದಗ್ನಿ
ಬಿಸಿಲ ಧಗೆ ಏನು ಎಂಬುದನ್ನು ಅನುಭವಸಿ ಬರೆದ ಕವನ ನಿಜಕ್ಕೂ ಓದಿ ಬೆವರು ಸುರಿಸೀತು...ಇನ್ನು..ಇಲ್ಲಿ ಬಂದವರಿಗೆ..ಇದು...ಓಫ್ ಹೆಚ್ಚು ....ಉಫ್ ಗಿಂತಾ ಯಾಕಂದ್ರೆ...ತಕ್ಷಣ ನುಗ್ತೇವೆ ಎ.ಸಿ. ರೂಮಿನೊಳಕ್ಕೋ, ಬಸ್ಸಿನೊಳಕ್ಕೋ, ಕಾರಿನೊಳಕ್ಕೋ....ಚನ್ನಾಗಿದೆ ನಿಮ್ಮ ಭಾವ-ಸಿಂಚನ...ಮನಸು ಮೇಡಂ
ಬರ್ತಾ ಬರ್ತಾ ಬೆಂಗಳೂರು ಸಹ ಮರುಭೂಮಿ ಆಗ್ತಾ ಇದೇ ಬಾಸ್ ನಿಮ್ಮ ಕವನ ಚನ್ನಾಗಿದೆ.
Post a Comment