Monday, March 7, 2011

ದೂರದ ಬೆಟ್ಟ-1

ನನ್ನದು ದೊಡ್ಡ ಸಂಸಾರ ಬಾಂಗ್ಲಾ ದೇಶದ ಪುಟ್ಟ ಹಳ್ಳಿಲಿ ನನ್ನ ಅಪ್ಪ ಅಮ್ಮ ೪ ತಂಗಿಯರು ೩ ತಮ್ಮಂದಿರು ಇದ್ದಾರೆ..... ಜೀವನ ಸಾಗಿಸೋದೆ ಕಷ್ಟ ಹಾಗಿಬಿಟ್ಟಿದೆ ಯಾರೋ ಹೇಳಿದ್ರು ಅರಬಿ ದೇಶಕ್ಕೆ ಹೋದರೆ ಒಳ್ಳೆ ದುಡ್ಡು ಮಾಡಬಹುದು ಎಂದು, ಅದಕ್ಕೆ ಈ ಏಜೆಂಟರುಗಳಿಗೆ ಲಕ್ಷ ಕಕ್ಕಿ, ಆಕಾಶದಲ್ಲಿ ಹಾರಾಡಿಕೊಂಡು ಬಂದೆ...... ಈ ಬೃಹತ್ ನಗರ ಎಲ್ಲೆಲ್ಲೂ ಬಣ್ಣ ಬಣ್ಣ ಕಟ್ಟಡ, ಐಷಾರಾಮಿ ಜೀವನ ಜನ ನೋಡಿ ನನ್ನ ಜೀವನವೂ ಇವರಂಗೆ ಚೆನ್ನಾಗಿ ಹಾಗುತ್ತೆ, ನನ್ನ ತಂಗೀರ ಮದುವೆ ಮಾಡಬಹುದು ಎಂದು ಮರುಭೂಮಿ ಪ್ರವೇಶಿಸಿದೆ. ನನ್ನವರು ಯಾರು ಇಲ್ಲ ಏಜೆಂಟ್ ಕೊಟ್ಟಿದ್ದ ವಿಳಾಸಕ್ಕೆ ಹೇಗೋ ಬಂದು ಕೂತೆ..... ಆ ವಿಳಾಸ ಕೂಡ ಏಜೆಂಟ್ ತರಹವೇ ಇವರ ಮೂಲಕ ಯಾವುದಾದ್ರು ಒಂದು ಕಂಪನಿ ಕೆಲಸಕ್ಕೆ ಸೇರಿಸ್ತಾರೆ ಎಂದುಕೊಂಡು ಅಲ್ಲೇ ಇದ್ದ ಅಧಿಕಾರಿ ಹತ್ತಿರ ಮಾತಾಡಿದೆ, ಅವರು ನಾಳೆ ಬರಲು ಹೇಳಿದ್ರು......ನಾಳೆ...ನಾಳೆ... ಓ ಈ ನಾಳೆಯ ಪ್ರಶ್ನೆ ನನ್ನ ಕಾಡಿತು..? ನಾಳೆವರೆಗು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿತ್ತು. ಉಳಿಯಲು ಮನೆ, ಮಠ ಏನಿಲ್ಲ.......... ಅಲ್ಲೇ ಪಕ್ಕದಲ್ಲಿದ್ದವನ ಕೇಳಿದೆ ರಾತ್ರಿ ಉಳಿಯಲು ಏನು ಮಾಡಬೇಕಿಲ್ಲಿ.... ಎಂದಾಗ ಪುಣ್ಯಾತ್ಮ ಹಸುನಗೆಯಿಂದ ನನ್ನ ಮಾತನಾಡಿಸಿ ಅವನೊಟ್ಟಿಗೆ ಕರೆದುಕೊಂಡೋಗಿ ಅವನ ಮನೆಯಲ್ಲಿಯೇ ಇರಿಸಿಕೊಂಡ, ನಂತರ ಬೆಳಗ್ಗೆ ತನ್ನೊಟ್ಟಿಗೆ ಕರೆದುಕೊಂಡು ಅದೇ ಕಛೇರಿಗೆ ತಲುಪಿಸಿದ.... ಬಾಯಾರಿಕೆಗೆ ಒಂದು ಗುಟುಗು ನೀರು ದಣಿವಾರಿಸುವುದು ಎಂದೆನಿಸಿತು...!!!!

ಅಧಿಕಾರಿ ಎಲ್ಲವನ್ನು ವ್ಯವಸ್ಥೆ ಮಾಡಿದ್ದೇನೆ....... ಒಂದು ಕಂಪನಿಯವರು ಬರ್ತಾರೆ ಅವರ ಜೊತೆ ಹೋಗು ನಿನ್ಗೆ ಕೆಲಸ ಕೊಡ್ತಾರೆ ಎಂದೇಳಿ ಅಲ್ಲೇ ಕೂರಲು ಹೇಳಿದ್ರು......ಸುಮಾರು ೧೦ ಗಂಟೆ ಇರಬೇಕು ದಢೂತಿ ಮನುಷ್ಯ ಬಂದ ಅಧಿಕಾರಿಯತ್ತಿರ ಅರಬಿನಲ್ಲಿ ಬಡ ಬಡನೇ ಮಾತಾಡಿ......ನನ್ನ ಕೈ ಸನ್ನೆ ಮಾಡಿ ಕರೆದುಕೊಂಡು ಹೋದ ನಾನು ಅವನನ್ನೇ ಹಿಂಬಾಲಿಸಿ ನಾಯಿ ಕೈಯ್ಯಲ್ಲಿರೋ ಬಿಸ್ಕತ್ತಿಗೆ ಓಡಿದಂತೆ....ನಡೆದೆ......... ಅವನ ಕಾರಿನಲ್ಲಿ ಕುಳಿತಿರುವಂತೆ.. ವಾಹ್..!!! ಒಳ್ಳೆಯ ಕಾರು ಎಷ್ಟು ಚೆನ್ನಾಗಿದೆ. ಎಂತಾ ಅದೃಷ್ಟವಂತ ಎಂದುಕೊಳ್ಳುತ್ತಲಿದ್ದೆ ಅಷ್ಟರಲ್ಲಿ ಆ ಕಛೇರಿ ಬಂತು. ಒಳಗೆ ಕರೆದೊಯ್ದವನೇ ಅಲ್ಲಿ ಯಾರೋ ಕುಳಿತಿದ್ದವರತ್ತ ಬೆರಳು ಮಾಡಿತೋರಿಸಿ ನಡೆಯೆಂದ..........ಅಲ್ಲಿ ಅವರತ್ತ ಹೋಗಿ ನಮಸ್ಕಾರವೆಂದು ಹೇಳಿದೆ....ಅವನು ಸಹ ಬಾಂಗ್ಲಾ ದೇಶದವನಾದ್ದರಿಂದ ನನಗೆ ಭಾಷೆ ತೊಂದರೆಯೆನಿಸಲಿಲ್ಲ...... ನೀನು ಉಳಿದುಕೊಳ್ಳಲು, ಮತ್ತೆ ಊಟ ಕೆಲಸಕ್ಕೆ ಕರೆದೊಯ್ಯುವ ವಾಹನ ಎಲ್ಲ ವ್ಯವಸ್ಥೆ ಇದೆ. ಬೆಳ್ಳಿಗ್ಗೆ ೫ ಗಂಟೆಗೆ ಮನೆಯತ್ತಿರ ವ್ಯಾನ್ ಬರುತ್ತೆ ತಯಾರಾಗಿರಬೇಕು. ಈಗ ಹೊರಡು ನಿನಗೆ ನಿನ್ನ ರೂಂ ತೋರಿಸುವೆನೆಂದು ಅಲ್ಲೇ ಇದ್ದ ಬ್ಯಾಚುಲರ್ ಮನೆಗಳತ್ತ ಕರೆತಂದು ಬಿಟ್ಟರು.......

ಇತ್ತ ಮನೆಯಲ್ಲಿ ಯಾರೂಬ್ಬರು ಇರಲಿಲ್ಲ, ಕೆಲವು ಬಟ್ಟೆಬರೆಗಳು ಮಾತ್ರ ಇದ್ದವೂ. ಆಗ ಅನ್ನಿಸಿತು ಬೇರೊಬ್ಬರೂ ಇರಬಹುದೆಂದು.... ಸಂಜೆಯಾಗುತ್ತಲಿದ್ದಂತೆ ೪ ಜನ ಅದೇ ರೂಮಿನಲ್ಲುಳಿದರು ಆಗಲೇ ಅರ್ಥವಾಗಿದ್ದು ಈ ಪುಟ್ಟ ಕೋಣೆಯಲ್ಲಿ ೫ ಜನರಿಗೆ ವಾಸವೆಂದು.... ನನ್ನ ಜೊತೆಯಿದ್ದವರು ಪರಿಚಯವಾಯ್ತು ಅವರೆಲ್ಲರೂ ನನ್ನೂರಿನ ಕಡೆಯವರೆಂದು ತಿಳಿದು ಕುಷಿಯಾಯಿತು...... ಬೆಳ್ಳಿಗ್ಗೆ ೪ ಗಂಟೆಗೆ ಎದ್ದು ತಯಾರಾದೆ ಏನೋ ದೊಡ್ಡ ಕೆಲಸವೆಂದು ಅಮ್ಮ ಕೊಡಿಸಿದ್ದ ಗರಿ ಗರಿಯಾದ ಬಿಳಿ ಶರ್ಟ್ ತೊಟ್ಟು ಎಲ್ಲರ ಜೊತೆ ನಡೆದೆ........... ಯಾವುದೋ ನಿರ್ಜನ ಪ್ರದೇಶದ ತರವಿತ್ತು. ರಸ್ತೆ ಬದಿಯಲ್ಲಿ ಯಾರೊಬ್ಬರೂ ಇರಲಿಲ್ಲ, ಸುತ್ತ ನೋಡುತ್ತಿದ್ದಂತೆ ನನ್ನ ಕಣ್ಣಾಯಿಸ ದೂರಕ್ಕೂ ಢಾಂಬರಿನ ರಸ್ತೆ ಮಾತ್ರ ಕಾಣುತ್ತಿತ್ತು. ನನ್ನ್ ವ್ಯಾನಿಂದ ಇಳಿಸಿದವರೇ ಇವನಿಗೆ ಕೆಲಸ ಏನೆಂದು ತಿಳಿಸಿಕೊಡು ಎಂದೇಳಿ ನಡೆದೇ ಬಿಟ್ಟನು ವ್ಯಾನಿನ ಚಾಲಕ......

ಪಕ್ಕದಲ್ಲಿದ್ದವ್ನು ಹಳದಿ ಬಣ್ಣದ ಮೇಲಿಂದ್ದ ಕೆಳಗೆ ಒಂದೇ ಬಣ್ಣದ ಶರ್ಟ್ ಪ್ಯಾಂಟ್ ಒಂದೇ ಒಲಿಗೆಯಲ್ಲಿರುವಂತ ಬಟ್ಟೆ ಕೊಟ್ಟು ನೀನು ಇದನ್ನ ನಿನ್ನ ಬಟ್ಟೆ ಮೇಲೆ ತೊಟ್ಟಿಕೋ ಎಂದ ಎಲ್ಲರೂ ಅದೇ ಸಮವಸ್ತ್ರದಲ್ಲಿದ್ದರೂ........ನಾನು ತೊಟ್ಟುಕೊಂಡು ಏನು ಕೆಲಸವೆಂದು ಕೇಳಿದೆ ಕೈಗೆ ಕಸ ಗುಡಿಸುವ ಪೊರಕೆ ತರಹದ್ದು....ಜೊತೆಗೊಂದು ಮೊರವನ್ನು ಕೊಟ್ಟು ನೋಡು......... ಈ ರಸ್ತೆಯನ್ನೆಲ್ಲಾ ಗುಡಿಸಿ, ಆನಂತರ ಅದೋ ಅಲ್ಲಿ ಕಾಣುತ್ತಲ್ಲ ದೊಡ್ಡ ಕಸದ ಬುಟ್ಟಿಗೆ ಹಾಕಬೇಕೆಂದ...........ಏನೋ ಆಫೀಸಿನ ಕೆಲಸ, ಘನತೆ, ಗೌರವ ಇರುತ್ತೆ, ನಾನು ಒಂದು ಡಿಗ್ರಿ ಮಾಡಿದ್ದೇನೆ ಅದಕ್ಕೆ ತಕ್ಕಂತೆ ಕೊಡುತ್ತಾರೆಂದು ಭಾವಿಸಿ ಬಂದರೆ ನನಗೆ ಇದು ಆಘಾತವೇ ಸರಿ......... ಮನಸ್ಸು ಒಮ್ಮೆಲೇ ಕದಡಿ ಹೋಯ್ತು........ ಗೊತ್ತಾಯ್ತ ನಿನ್ನ ಕೆಲಸವೇನೆಂದು...?? ಜೋರು ಧ್ವನಿ ಆ ಕಡೆಯಿಂದ ಕೇಳಿದಾಗಲೇ ನಾನು ವಾಸ್ತವಕ್ಕೆ ಬಂದದ್ದು.......... ಆಗಲೆನ್ನುವಂತೆ ಕತ್ತಾಡಿಸಿ ಸುಮ್ಮನೆ ಮುಂದೆ ನೆಡೆದೆ............ ರಸ್ತೆ ಬದಿ ಗುಡಿಸುತ್ತಾ........... ನನ್ನಪ್ಪನ ಜಮೀನು ಕಡಿಮೆಯಿದ್ದರೂ, ಭೂಮಿ ತಾಯಿ ಸೇವೆ ಮಾಡಿ ನಾನು ಒಡೆಯನಂತಿದ್ದೆ........ ನಗುವ ಅಮ್ಮ, ಸಲಹುವ ತಂಗಿಯರು, ಸ್ನೇಹದ ಸ್ನೇಹಿತರು, ಹಾರೈಸೋ ಅಪ್ಪ ಎಲ್ಲರೂ ಒಮ್ಮೆಲೇ ನನ್ನ ಕಣ್ಣ ಮುಂದೆ ಬಂದರು.......... ನನ್ನ ಕಣ್ಣು ಒದ್ದೆಯಾಗಿ ಹನಿ ಹನಿಯಾಗಿ ನಾ ಗುಡಿಸುತ್ತಿದ್ದ ಕಸದಲ್ಲಿ ಬೆರೆತು ಹೋಯ್ತು....

ಅಮ್ಮ ನಿನ್ನ ಕೈ ತುತ್ತಿಲ್ಲ, ನಾ ರಾಜನಂತಿದ್ದ ಹಾವಭಾವವಿಲ್ಲ........... ನನ್ನ ಮನೆ ಉದ್ದರಿಸಲು ಇಲ್ಲಿ ಬಂದೆ ಇಲ್ಲಿಯೂ ನಾನಂದುಕೊಂಡಂತಿಲ್ಲ........... ಮನಸ್ಸಲ್ಲೇ ಊರಿನ ಚಿತ್ರಣವನ್ನು ಚಿತ್ರಿಸುತ್ತಾ............ಆ ರಸ್ತೆಯ ಉದ್ದಗಲ ಗುಡಿಸಿ ಕಣ್ಣೀರಿನಲ್ಲೇ ಸಾರಿಸಿಬಿಟ್ಟೆ.......... ಇದೆಲ್ಲದರ ನೆನಪಲ್ಲಿ ಮರುಭೂಮಿಯ ಉರಿಬಿಸಿಲು ನನ್ನ ಸುಟ್ಟು ಕರಕಲು ಮಾಡಿತ್ತು. ಯಾವ ಕಡೆ ಗಮನವೇ ಇರಲಿಲ್ಲ......... ಅಷ್ಟು ನೊಂದುಬಿಟ್ಟಿತ್ತು ನನ್ನ ಮನಸ್ಸು......... ಹಾಗಿದ್ದು ಆಯ್ತು ಇನ್ನೇನು ಮಾಡುವುದು ಇರುವ ಕೆಲಸವೇ ಚೆನ್ನ ಎಂದು ಜೀವಿಸೋಣ ನನಗೆ ಬೇರೆ ಈ ಊರು ಹೊಸದು ಏನು ಮಾಡಲಾಗದು, ಅದೂ ಅಲ್ಲದೆ ನನ್ನ ಪಾಸ್ ಪೋರ್ಟ್ ಬೇರೆ ಕೆಲಸ ಕೊಟ್ಟಿರುವವ ಹತ್ತಿರವಿದೆ.....ನಾ ಊರಿಗೆ ಓಡಿಹೋಗುವ ಹಾಗೂ ಇಲ್ಲ.!?? ಹೃದಯವೇಕೋ ಭಾರವಾಗಿತ್ತು, ಉಸಿರಾಡಲು ಜೀವ ಏಕೋ ಮನಸುಮಾಡ್ತಾನೇ ಇಲ್ಲ ಅನ್ನಿಸ್ತಾ ಇತ್ತು. ರಾತ್ರಿ ಕೆಲಸವೆಲ್ಲ ಮುಗಿಸಿ ಹೋದಾಗ ರಾತ್ರಿ ಹತ್ತೊವರೆಯಾಗಿತ್ತು.......ಊಟವೇನು ಬೇಡವೆನಿಸಿ ಮಲಗಿಬಿಟ್ಟೆ ........... ಬೆಳಿಗ್ಗೆ ಮಾಮೂಲಿ ಕೆಲಸ ಜೊತೆಗಾರರಿಂದ ಹಿತವಚನ ಇಲ್ಲಿನ ಜೀವನವೇ ಹೀಗೆ ............... ಸ್ವಲ್ಪದಿನ ಎಲ್ಲ ಸರಿಹೋಗುವುದು.....ಎಂದು ಸಮಾಧಾನ ಮಾಡಿದರು.........ನಾನು ನನ್ನನ್ನೇ ಸಮಾಧಾನಿಸಿದೆ ನಿನ್ನ ಹಣೆಬರಹದಂತಾಗುವುದೆಂದು ನನ್ನ ದುಃಖಕ್ಕೆ ನಾನೇ ಸಂತೈಸಿಕೊಂಡೆ.

ಹೀಗೆ ಕೆಲಸ ಸಾಗಿಸಿದೆ..... ಅಮ್ಮನ್ನಿಗೆ ಆಗೊಮ್ಮೆ ಈಗೊಮ್ಮೆ ಕರೆಮಾಡಿ ಸಂತಸದಿ ಹೇಳಿದೆ ಅಮ್ಮ, ನನ್ನ ಕೆಲಸ ದೊಡ್ಡದು ನನಗೆ ಒಂದು ದೊಡ್ಡ ಕಛೇರಿ ಕೊಟ್ಟಿದ್ದಾರೆ. ನನ್ನ ರಸ್ತೆಗೆ ನಾನೇ ರಾಜನಮ್ಮ???!!! ಯಾವ ಕೊರತೆಯಿಲ್ಲ ನೀ ಸಂತಸದಿರು ಮುಂಬರುವ ತಿಂಗಳು ಬರುವ ಸಂಬಳದಿ ನಿನಗೆ ಹಣ ಕಳಿಸುವೆ ....... ತಮ್ಮ, ತಂಗಿಯರಿಗೆ ಶಾಲೆಗೆ ಕಳಿಸು ಎಂದೇಳಿ ಫೋನ್ ಕೆಳಗಿಟ್ಟು.... ಗಳಗಳನೇ ಗಂಡ್ಸು, ಹೆಣ್ಣು ಅಳುವಂತೆ ಅತ್ತು ಬಿಟ್ಟೆ.......... ಹೀಗೆ ದಿನಗಳು ಉರುಳಿ ತಿಂಗಳು ಬಂದಿತು ಮೊದಲ ಸಂಬಳ ಮನಸ್ಸಲ್ಲಿ ಎಷ್ಟು ಸಂಬಳ ಕೊಡುವರೆಂದು ಯೋಚಿಸುತ್ತಿದ್ದೆ...........ನಾವು ಬರುವಾಗ ಊರಲ್ಲಿ ಏಜೆಂಟ್ ಹೇಳಿದ್ದ ಸಂಬಳ ತಿಂಗಳಿಗೆ ೨೦ ಸಾವಿರ ಕೊಡುತ್ತಾರೆಂದು ಅಬ್ಬಾ...!!!!!!!!! ಈ ದುಡ್ಡಲ್ಲಿ ಅರ್ಧ ಕಳಿಸಿದರೆ ನಮ್ಮ ಮನೆಮಂದಿ ತಿಂದು ತೇಗಬಹುದೆಂದುಕೊಂಡೆ ಆದರೆ ಇವರು ಬರಿ ೮ ಸಾವಿರ ಕೊಟ್ಟಾಗಲೇ ಅರಿತಿದ್ದು........ ಮೋಸ ಹೋದೆನೆಂದು ಬಡವ ಬೇರೆ, ಊರಿಗೆ ಹೊಸಬ ಏನು ಮಾತನಾಡುವುದು ಕಂಡೋರ ದೇಶದಲ್ಲಿ ನಮ್ಮದೇನು ದರ್ಬಾರು ನಡೆಯೋಲ್ಲ.......ಎಂದು ಅಲ್ಲೂ ನನ್ನ ಹೃದಯ ಸಾವರಿಸಿಕೊಳ್ಳ ಬೇಕಾಯಿತು.........

ಬಂದ ದುಡ್ಡಲ್ಲಿ ಕೇವಲ ೫೦೦ ರುಪಾಯಿಯಷ್ಟು ನನ್ನತ್ತಿರ ಇಟ್ಟುಕೊಂಡು ಉಳಿದದ್ದೆಲ್ಲಾ ಊರಿಗೆ ಕಳಿಸಿಬಿಟ್ಟೆ.........ಮನೆಮಂದಿ ಸಂತಸವಾಗಿರಲಿ.......ಎಲ್ಲರೂ ಚೆನ್ನಾಗಿರಲೆಂದು ಇದು ವರ್ಷಗಟ್ಟಲೆ ನೆಡೆಯಿತು.........ನಾನು ಬಂದ ಎರಡು ವರ್ಷಕ್ಕೆ ತಂಗಿ ಇಬ್ಬರ ಮದುವೆಯಾಯಿತು. ಇನ್ನೊಬ್ಬಳ ತಂಗಿಯ ಮದುವೆ ತಯಾರಿಯಲ್ಲಿದೆ ಯಾರೊಬ್ಬರೂ ನೀನು ಬರಬೇಕು ಮದುವೆಗೆ ಎನ್ನಲಿಲ್ಲ.....ಅಮ್ಮನಿಗೆ ಕರೆ ಮಾಡಿದರೆ ನೀನು ವಿಮಾನದಲ್ಲಿ ಬರುವ ಖರ್ಚಿಗೆ ನಿನ್ನ ಇನ್ನೊಬ್ಬಳ ತಂಗಿ ಮದುವೆ ಮುಗಿಸಬಹುದು ನೀನು ಅಲ್ಲಿದ್ದೇ ಹಣ ಕಳಿಸೆಂದಾಗ ನನ್ನ ಎದೆಭಾರ ಇಳಿಸಲು ಸಾಧ್ಯವೇ ಹಾಗಲಿಲ್ಲ.......ಅಮ್ಮನರ್ಥ ಬೇರೆ ಇದ್ದರೂ, ಮೂರುವರ್ಷ ಊರಿಗೆ ಹೋಗಿಲ್ಲ ನನ್ನವರ ಮುಖ ನೋಡಿಲ್ಲ....ನನ್ನೂರ ಗಾಳಿ ಕುಡಿದಿಲ್ಲ, ಎಂಬ ಆಸೆ ಅಲ್ಲದೆ ನನ್ನ ಒಡಹುಟ್ಟಿದ ತಂಗಿ ಮದುವೆ ನೋಡುವಾಸೆ ಎಲ್ಲವೂ ನಶಿಸಿ ಹೋಯ್ತು.............
ಅಮ್ಮನಾಸೆಯಂತೆ ನಾನು ನೆಡೆದುಕೊಂಡೆ.......... ಈಗಾಗಲೇ ೫ ವರ್ಷಕ್ಕೆ ಬಂತು ನಾನು ಊರು ಬಿಟ್ಟು.......ಈಗ ಊರಿನ ಜನ, ಮನೆವಾತಾವರಣ ಎಲ್ಲಾ ನೆನಪು ಮಾತ್ರ .... ನನಗೀಗಾಗಲೇ ೩೫ ವರ್ಷ ಮಿಕ್ಕ ಒಬ್ಬ ತಂಗಿಯ ಮದುವೆಯೂ ಮುಗಿಯಿತು ಈಗಲಾದರೂ ಊರಿಗೆ ಹೋಗಿ ನನ್ನ ಮದುವೆಯಾಗೋಣ ಎಂದಿನಿಸ್ತಾ ಇದೆ....... ಮದುವೆ ಈಗಲ್ಲದೆ ಇನ್ನು ಎಷ್ಟು ದಿನ ಕಾಯಲಿ............ನಾ ಇಲ್ಲಿ ಕಷ್ಟ ಪಟ್ಟಿರುವೆ ಇನ್ನಾದರೂ ಮದುವೆ ಮಾಡಿಕೊಳ್ಳೋಣ ಹೇಗೋ ಕಸ ಗುಡಿಸೋ ಕೆಲಸದಿಂದ ಜನರ ಕೈ ಕಾಲು ಹಿಡಿದು ಇಂದು ಆಫೀಸ್ ಬಾಯ್ ಕೆಲಸಕ್ಕೆ ಬಂದು ಬಿಟ್ಟೆ. ಇದೇ ನನ್ನ ದೊಡ್ಡ ಸಾಧನೆ....... ಈ ಕೆಲಸ ಮುಗಿಸಿ ರಾತ್ರಿ ಹೊತ್ತು ಕೆಲಸವೂ ಮಾಡಿದೆ. ಎರಡು ಕಡೆ ದುಡಿದಿದ್ದಕ್ಕೆ ನನ್ನ ಮನೆ ಒಂದು ದಾರಿಗೆ ಬಂದಿದೆ ಎಂದು ಊರಲ್ಲಿ ಜನರು ಭಾವಿಸುತ್ತಾರೆ.....ಬಡತನದ ಕರಿ ನೆರಳು ಕಾಡುತ್ತಿದ್ದ ದಿನಗಳು ಕಳೆದಿವೆ ...........ನನ್ನ ಮನಸ್ಸು ಈಗ ಹಗುರಾಗಿದೆ............ಅಮ್ಮ ಅಪ್ಪನಿಗೆ ಕರೆಮಾಡಿ ಮಾತನಾಡಿ ಊರಿಗೆ ಬರುತ್ತೀನಿ ಅಂತೇಳಿ ಬಿಡ್ತೀನಿ ಖುಷಿ ಆಗ್ತಾರೆ...........

ಅಪ್ಪ ನಾನು ಊರಿಗೆ ಬರೋಣ ಅಂತ ಇದ್ದೀನಿ ........... ಆದಷ್ಟು ಬೇಗ ಬರ್ತೀನಿ ಎಂದರೆ ಅಪ್ಪನ್ಯಾಕೋ ಬೇಸರ ಪಟ್ಟುಕೋತಾ ಇದ್ದಂಗೆ ಅನ್ನಿಸಿತು...ಏನಾಯ್ತು....ಎಂದರೆ ಮಗನೇ ನಾನೇ ಫೋನ್ ಮಾಡೋಣ ಎಂದಿದ್ದೇ ಏನು ಗೊತ್ತ ಸ್ವಲ್ಪ ದುಡ್ಡು ಬೇಕಾಗಿತ್ತು.... ನಿನ್ನ ತಮ್ಮ ಇದ್ದಾನಲ್ಲ, ಅವನು ಯಾರನ್ನೋ ಪ್ರೀತಿಸಿದ್ದಾನಂತೆ ಮದುವೆ ಮಾಡಿಬಿಡೋಣ ಎಂದು ಹಂಗೆ ಇನ್ನೊಬ್ಬ ಚಿಕ್ಕ ತಮ್ಮನಿಗೂ ಹುಡುಕಿದ್ದೇವೆ. ಇಬ್ಬರ ಮದುವೆ ಮುಗಿಸಿಬಿಡುವೆವು........ ಸ್ವಲ್ಪ ದುಡ್ಡು ಕಳಿಸು ನಿನ್ಗೆ ಬರೋಕ್ಕಾದರೆ ಬಾ ಇಲ್ಲವೆಂದರೆ ತೊಂದರೆ ಇಲ್ಲ......ನಾವಿದ್ದು ಎಲ್ಲಾ ನಿಭಾಯಿಸುತ್ತೇವೆ. ಎಂದಾಗ ನನ್ನ ಹೃದಯಕ್ಕೆ ಹೇಗಾಗಿರಬೇಡ ............. ಕೈಕಾಲು ಕುಗ್ಗಿ ಬಿದ್ದಂತೆನಿಸಿತು....... ನಾನು ನನ್ನವರಿಗಾಗಿ ಮಾಡಿದ್ದು ಏನು ಫಲಿಸಲಿಲ್ಲ.........೫ ವರ್ಷ ಕಳೆದರೂ ಯಾರೊಬ್ಬರೂ ನನ್ನ ನೋಡುವ ಹಂಬಲ ತಿಳಿಸಲಿಲ್ಲ......ಬರುವೆನಮ್ಮ ನಿನ್ನ ಮಡಿಲಿಗೆಂದರೂ ಯಾರೊಬ್ಬರೂ ಬಾ ಕಂದ ನಿನಗಾಗಿ ಕಾದಿರುವೆ ನಾನಿಲ್ಲಿ ಎನ್ನಲಿಲ್ಲ.......... ವಿಧಿಯೇ ನನ್ನಲ್ಲಿ ಸಂಬಂಧಗಳನ್ನ ಜೋಡಿಸಲು ಸೋತಿರುವೆಯಾ.........ನನ್ನವರು ನನಗಾಗಿ ಯಾರು ಇಲ್ಲವೇ......... ನಾ ಇಷ್ಟು ದಿನ ನನ್ನತನವನ್ನೆಲ್ಲಾ ಬಿಟ್ಟು ದುಡಿದದ್ದು ಯಾರಿಗಾಗಿ........ಏಕೆ ಹೀಗೆ ಎಲ್ಲ ದುಡ್ಡಿನಿಂದೆ ನನಗಾಗಿ ನನ್ನ ಒಳಿತಿಗಾಗಿ ಯಾರೊಬ್ಬರೂ ಆಶಿಸುತ್ತಿಲ್ಲ.....ನಾನಿಲ್ಲಿ ಹೊತ್ತೊತ್ತಿಗೆ ಊಟ ಮಾಡದೆ, ಬಿಸಿಲ ಬೇಗೆಯಲಿ ಬೆಂದು, ಅದನ್ನು ಕೊಂಡುಕೊಂಡರೆ ಖರ್ಚು, ಇದನ್ನು ತಿಂದರೆ ಖರ್ಚು, ಎಂದು ಉಳಿಸಿದ್ದು ಆ ನನ್ನ ಮನೆಗಾಗಿ ಅಲ್ಲವೆ..? ಏಕೆ ಇಂದು ಆ ಮನೆಯೇ ನನ್ನನ್ನೇ ಬಯಸದಾಗಿದೆ.......ನನ್ನ ಮನ ಬೇಸತ್ತು ಕಣ್ಣು ಧೋ ಎಂದು ಮಳೆಯನ್ನೇ ಸುರಿಸಿಬಿಟ್ಟಿತು............

ಯಾವುದೋ ಆಸೆಗೆ ಬಂದು ಏನೂ ಬೇಡ ಎನ್ನುವಂತಾಯಿತು ......... ಇನ್ನು ಅವರಾಗೆ ಕರೆಯಲಿ ನನ್ನ ನೋಡುವಾಸೆ ಇದ್ದರೆ ಎಂದೆನಿಸಿತು..........ಆದರೆ ಹುಟ್ಟೂರು ನೋಡಬೇಕು ಅವರಿಗೆ ಬೇಡವಾದರೇನು ನಾನು ಹೋಗಬೇಕೆಂದು ಹೋದರೆ.........ಅಲ್ಲಿ ಎರಡು ಅಂತಸ್ಥಿನ ಮನೆ ಕಟ್ಟಿ ತಮ್ಮಂದಿರಿಬ್ಬರೂ ಒಂದೊಂದು ಮನೆಯಲಿದ್ದರೂ, ಅಪ್ಪ ಅಮ್ಮ ಹಳೆ ಮನೆಯನ್ನೇ ಹೊಸ ಮೆರುಗು ಕೊಟ್ಟು ಮೊಮ್ಮೊಕ್ಕಳೊಂದಿಗೆ ಸಂತಸದಿಂದಿದ್ದರು, ತಂಗಿಯರೆಲ್ಲ ತಮ್ಮ ತಮ್ಮ ಸಂಸಾರದಲ್ಲಿ ಮುಳುಗಿದ್ದರು......... ನಾನು ಬಂದೆನೆಂದು ಎಲ್ಲರೂ ನನ್ನ ಮುತ್ತಿಕೊಂಡರು.........ನನಗೂ ಸಂತೋಷವಾಯ್ತು.......ಎಲ್ಲರಿಗೂ ಉಡುಗೊರೆಯೆಲ್ಲವನ್ನಿತ್ತು, ಊರೂರು ಸುತ್ತಿ, ಅಪ್ಪ ಅಮ್ಮನೊಂದಿಗೆ ಕಾಲ ಕಳೆದು, ಇನ್ನೇನು ಒಂದು ವಾರವಿದೆ ಮರಳಿ ಮರುಭೂಮಿ ಕಡೆ ಹೊರಡಬೇಕಿದೆ............. ಮನೆಯಲ್ಲಿ ಮದುವೆ ಪ್ರಸ್ತಾಪವೇ ಇಲ್ಲ..... ಪಕ್ಕದ ಮನೆಯವರು ಅಪ್ಪ ಅಮ್ಮನಲ್ಲಿ ಕೇಳಿದರು ಇವನ ಮದುವೆ ಮುಗಿಸಿದ್ದರೆ ಚೆನ್ನಾಗಿರುತ್ತಿದ್ದೆಂದು ಆಗ ಅಪ್ಪ ಬಾಯಿ ಬಿಟ್ಟರು..........ಅವನಿಗಾಗಲೇ ೩೬ ದಾಟಿದೆ ಇನ್ನು ಹೆಣ್ಣು ಯಾರು ಕೊಡುವುದಿಲ್ಲ, ಅರ್ಧ ಜೀವ ಸಾಗಿದೆ ಇನ್ನುಳಿದ ಜೀವನ ಹೇಗೋ ನೆಡೆಯುತ್ತೆ ಬಿಟ್ಟು ಬಿಡಿ .............. ಏನೋ ತಿಳುವಳಿಕೆಯಿಲ್ಲ...... ಮಾತನಾಡಿಬಿಟ್ಟರೆಂದು ಮನಸು ಭಾರವಾದರೂ ಊರ ಬಿಟ್ಟು ಮರುಭೂಮಿ ಸೇರಿದೆ....... ಅಂದಿನಿಂದ ಅಪ್ಪ ಅಮ್ಮನಿಗೆ ಪ್ರತೀ ತಿಂಗಳು ದುಡ್ಡು ಕಳಿಸುತ್ತಿದ್ದೆ. ಅವರ ಆರೋಗ್ಯದ ಖರ್ಚು ವೆಚ್ಚ ಭರಿಸುತ್ತಿದ್ದೆ........... ನನ್ನ ಹೆತ್ತು ಹೊತ್ತ ಋಣ ತೀರಿಸಲು ಕೊನೆವರೆಗೂ ಹೀಗೆ ಇದ್ದುಬಿಡೋಣವೆಂದುಕೊಂಡೆ. ಕೊನೆಗೆ ಒಂದು ದಿನ ಕರೆ ಮಾಡಿ ನಿಮ್ಮ ಕೈಲಾಗದಿದ್ದಾಗ ನನ್ನ ಕರೆಯಿರಿ ನಿಮ್ಮ ಸೇವೆ ಮಾಡುವೆ ಎಂದಾಗ ಅಮ್ಮ ಅಪ್ಪ ಇಬ್ಬರದೂ ಒಂದೇ ಮಾತು...... ಇಲ್ಲಿ ನಮ್ಮ ನೋಡಲು ಬಹಳಷ್ಟು ಜನರಿದ್ದಾರೆ. ನೀನು ದುಡಿದು ನಿನ್ನ ತಂಗಿ ತಮ್ಮಂದಿರಿಗೇನಾದರೂ ಸಹಾಯವಾಗುತ್ತೋ ಏನೋ ನೋಡಿಕೊಳ್ಳುತ್ತಿರು. ನಾವು ಸತ್ತರೂ ಅವರನ್ನು ಕೈಬಿಡಬೇಡ ಎಂದು ಆಣೆ, ಪ್ರಮಾಣಗಳೇ ಸಾಗಿದವು...........ಆದರೆ ತಮ್ಮ ತಂಗಿಯರಾರೂ ನಾನೊಬ್ಬನಿರುವೆ ಎಂಬ ಪರಿಜ್ಞಾನವೂ ಇರಲಿಲ್ಲ. ಇಷ್ಟು ವರ್ಷವಾದರೂ ಒಂದು ಯೋಗಕ್ಷೇಮದ ಪತ್ರವನ್ನೂ ಕಳಿಸಿರಲಿಲ್ಲ, ಅಣ್ಣ ತಂಗಿ ತಮ್ಮಂದಿರ ನಡುವೆ ಮಾತುಕತೆಯೇ ಇಲ್ಲದಂತಾಗಿ ಹೋಗಿ ಬಹಳ ವರುಷಗಳೇ ಕಳೆದಿದ್ದವು.........

ನನ್ನ ದಾರಿ ನನ್ನದು, ಅವರ ಜೀವನ ಅವರದು ಬದುಕಿಗೆ ಹಣವೊಂದೇ ಸಾಕೆಂಬುವವರಿಗೆ ದುಡ್ಡು ಮಾತ್ರ ಕೊಟ್ಟು ಪ್ರೀತಿ ಹುಟ್ಟಿಸುವಾಸೆ ನನ್ನ ಜೀವನದಲ್ಲಿ ನಶಿಸಿ ಹೋಯ್ತು.........ಅಂದು ಮನೆಗಾಗಿ ಹೊರಬಂದೆ ಇಂದು ನಾ ಆ ಮನೆ ಪ್ರೀತಿಯನ್ನೇ ಕಳೆದುಕೊಂಡೆ. ಇನ್ನು ನಾನು ವಯಸ್ಸಾಗಿ ನನ್ನ ಕೈಲಾಗದಿದ್ದಾಗ ನನಗೆ ಸಲಹೋ ಜೀವ ಹುಡುಕಬೇಕಾಗಿದೆ. ಇನ್ನು..!! ಹುಡುಕುತ್ತಲೇ ಇದ್ದೇನೆ......... ನನಗಾಗಿ ಮರುಗೋ ಪ್ರೀತಿ, ನನ್ನತನವನ್ನು ಪ್ರೀತಿಸೋ ಪ್ರೀತಿಯನ್ನು ಹುಡುಕುತ್ತಲಿರುವೆ ಸಿಗುವುದೆಂಬ ಭರವಸೆಯಲ್ಲಿ.....???!!!

ಅಂದು ದೂರದ ಬೆಟ್ಟ ನುಣ್ಣಗಿರುವುದು ಕಂಡು ನನ್ನವರ ಜೀವನ ಸೊಗಸುಗೊಳಿಸಲು ಬಂದೆ. ದೂರದ ಬೆಟ್ಟ ಹತ್ತಿರವಾಗುತ್ತಿದ್ದಂತೆ ನುಣುಪು ಹಾರಿತು...... ಮರಳಿ ನನ್ನ ಗೂಡಿಗೆ ಬಂದರೂ ಅಲ್ಲಿನ ಪ್ರೀತಿಯನ್ನೂ ಕಳೆದುಕೊಂಡೆ.............ಮುಂದೆ ಯಾವ ಬೆಟ್ಟ ಸಿಗುವುದೋ....... ಅದು ನುಣುಪೋ ನಾಜೂಕೋ ಗೊತ್ತಿಲ್ಲ............ಕಾಯುವ ಕಹಿ ಅನುಭವಿಸಿ ಅನುಭವವಿದೆ.....ಕಾಯುವೆ ನನಗಾಗಿ ಸಿಗುವ ಅಜಾತ ಪ್ರೀತಿಗಾಗಿ..............!!!!!!!!?

ಮುಂದುವರಿಯುವುದು.........

ಚಿತ್ರ: ಶಿವಪ್ರಕಾಶ್

18 comments:

ದಿನಕರ ಮೊಗೇರ said...

chennaagide maDam,

mundina bhaagakke kaayuttene.....

ತೇಜಸ್ವಿನಿ ಹೆಗಡೆ said...

ಚೆನ್ನಾಗಿ ಬಂದಿದೆ.. ಮುಂದುವರಿಯಲಿ... ಕಥೆಯಲ್ಲಿ ಹಿಡಿತವಿದೆ... ವಸ್ತುವೂ ವಿನೂತನವಾಗಿದೆ.

ಪುಟ್ಟ ಸಲಹೆ...ಅಲ್ಲಲ್ಲಿ ಕೆಲವು ಟೈಪಿಂಗ್ ಮಿಸ್ಟೇಕ್ಸ್‌ಗಳಾಗಿವೆ. ಒಮ್ಮೆ ಓದಿದರೆ ತಿಳಿಯುವುದು. (ನನಗೂ ಇದೇ ರೀತಿ ಹಲವು ಬಾರಿ ಆಗಿದ್ದೆ.. ಇದು ಸಾಮಾನ್ಯ... :))

ಮನಸು said...

ಧನ್ಯವಾದಗಳು ದಿನಕರ್ ಸರ್, ಮುಂದಿನಭಾಗ ಆದಷ್ಟು ಬೇಗ ಬರುತ್ತೆ.

ತೇಜು,
ಧನ್ಯವಾದಗಳು, ಈ ಕಥೆ ವಿನೂತವೇನಿಲ್ಲ ತೇಜು ನಿಜಕ್ಕೂ ಇಂತಹ ಕಥೆಗಳು ಅರಬೀ ನಾಡಲ್ಲಿ ಬಹಳಷ್ಟಿವೆ.... ಒಬ್ಬೊಬ್ಬರದ್ದು ಒಂದೊಂದು ಕಥೆ ಇದೆ...

ನಿಮ್ಮ ಸಲಹೆ ಖಂಡಿತ ಇರಬೇಕು... ತಪ್ಪುಗಳನ್ನು ತಿದ್ದುವೆ.

ಸುಧೇಶ್ ಶೆಟ್ಟಿ said...

ಮನಸು ಅವರೇ....

ಅರಬ್ ದೇಶದಲ್ಲಿ ಕೆಲಸ ಮಾಡುವ ವ್ಯಕ್ತಿಯ ತಾಕಲಾಟವನ್ನು ಚೆನ್ನಾಗಿ ಚಿತ್ರಿಸಿದ್ದೀರಿ.... ಇ೦ತಹವುಗಳು ನಿಜವಾಗಿಯೂ ಅರಬ್ ದೇಶದಲ್ಲಿ ನಡೆಯುವುದು ಎ೦ದು ಕೇಳಿದ್ದೇನೆ... ಮು೦ದಿನ ಭಾಗದ ನಿರೀಕ್ಷೆಯಲ್ಲಿ...

sunaath said...

ಮನಸು,
ನೀವು ಅರಬ ದೇಶದಲ್ಲಿಯೇ ಇದ್ದು ವಾಸ್ತವವನ್ನು ನೋಡಿದವರು. ಹೀಗಾಗಿ ನಿಮ್ಮ ಕತೆಯಲ್ಲಿ authenticity ಇರುತ್ತದೆ. ಆದರೆ, ಈ ವಾಸ್ತವವನ್ನು ಅರಿತಾಗ ಹೃದಯ ಭಾರವಾಗುತ್ತದೆ. ಇಂತಹ ಬಡಪಾಯಿಗಳಿಗೆ ಏನಾದರೂ ಪರಿಹಾರ ದೊರೆತೀತೆ?

Ashok.V.Shetty, Kodlady said...

ಸುಗುಣ ಅವ್ರೆ,

ಕಥಾ ಹಂದರ ನೂತನವಾಗಿದೆ, ಕೂತುಹಲ ಮೂಡಿಸಿದೆ, ಮುಂದಿನ ಭಾಗಕ್ಕಾಗಿ ಕಾಯುತ್ತ.

ಮನಸು said...

ಸುಧೇಶ್...
ನೀವು ಕೇಳಿದ್ದು ನಿಜವೆ ಹಲವು ಬಡ ಕುಟುಂಬಗಳು ಎಷ್ಟೋ ಕಷ್ಟಗಳಲ್ಲಿವೆ.... ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

ಮನಸು said...

ಸುನಾಥ್ ಕಾಕ...
ನಿಜ ನಾನು ಇಂತಹ ಹಲವು ಘಟನೆಗಳನ್ನ ನೋಡಿದ್ದೀನಿ ಕೆಲವು ಪರಿಹಾರವಿರುತ್ತೆ ಕೆಲವು ಕಷ್ಟಗಳಿಗೆ ನಾವೇನು ಮಾಡದಂತಾಗಿಬಿಡುತ್ತೆ. ಹೃದಯ ನಿಜಕ್ಕೂ ಭಾರವೇ ನೀವು ಇಲ್ಲಿನ ಹಲವು ಕಥೆ ಕೇಳಿದರೆ ಕಣ್ಣ ಹನಿಯಂತೂ ಮೂಡುತ್ತೆ... ಪರಿಹಾರ ಎಲ್ಲಿಂದ ಬಂದು ತಾವೇ ಬಯಸಿ ಬಂದ ಹಳ್ಳಕ್ಕೆ ತಾವೇ ಬಿದ್ದುಬಿಟ್ಟರೆ ಎಲ್ಲಿಂದ ಪರಿಹಾರ ಕಾಲವೇ ಎಲ್ಲಕ್ಕೂ ಉತ್ತರ ಕೊಡಬೇಕು...

ಮನಸು said...

ಅಶೋಕ್,
ಧನ್ಯವಾದಗಳು.... ಕಥೆಯನ್ನು ಮೆಚ್ಚಿದ್ದಕ್ಕೆ... ಮುಂದಿನ ಭಾಗ ಆದಷ್ಟು ಬೇಗ ಬರಲಿದೆ...

V.R.BHAT said...

ನಮ್ಮ ಹೃದಯ ಹಲವುಸಲ ಭಾರವಾದರೂ ನಾವೇನೂ ಮಾಡಲಾಗದ ಅತಂತ್ರ ಸ್ಥಿತಿಯಲ್ಲಿರುತ್ತೇವೆ. ಇಂದಿಗೆ ನಮಗಿರುವ ಅಧಿಕಾರ, ಆಸ್ಪದಗಳಲ್ಲಿ, ಆರ್ಥಿಕ ಅನುಕೂಲಗಳಲ್ಲಿ ಎಷ್ಟು ಮಾಡಲು ಸಾಧ್ಯ ? ಆದರೂ ಪರಿಹರಿಸಬಲ್ಲ ಮಾರ್ಗಗಳನ್ನು ಕಂಡು ಹೇಳಿದರೆ ಅದು ಕೊಡುವ ದಾನಕ್ಕಿಂತಾ ದೊಡ್ಡದು ಎನಿಸುತ್ತದೆ,ಮುಂದೆ ಬರೆಯಿರಿ, ಧನ್ಯವಾದ

HegdeG said...

ತುಂಬಾ ಭಾರವಾದ ಕಥೆ....ಚೆನ್ನಾಗಿದೆ, ಮುಂದಿನ ಭಾಗ ಆದಷ್ಟು ಬೇಗ ಪ್ರಕಟಿಸಿ :)

shivu.k said...

ಸುಗುಣಕ್ಕ,
ನಾನು ನಿರೀಕ್ಷಿಸಿದ್ದು ಇದನ್ನೇ..ಎಲ್ಲರು ನಮ್ಮ ದೇಶದ ಕತೆಗಳನ್ನೇ ಬರೆಯುತ್ತಾರೆ. ವಿದೇಶದಲ್ಲಿ ನೆಲೆಸಿರುವವರು ಅಲ್ಲಿನ ಬದುಕಿನ ಬವಣೆಗಳ ಬಗ್ಗೆ ಬರೆಯುವುದಿಲ್ಲ. ನೀವು ಕತೆಯ ಮೂಲಕ ಪ್ರಯತ್ನಿಸಿದ್ದೀರಿ..ಕುತೂಹಲ ಕೆರಳಿಸುತ್ತೆ...ಮುಂದುವರಿಸಿ..

ಸಾಗರದಾಚೆಯ ಇಂಚರ said...

Super madam,

mundina bhaaga bega barali

ಮನಸು said...

ಧನ್ಯವಾದಗಳು ಭಟ್ ಸರ್,
ನೀವು ಹೇಳಿದಂತೆ ಕೆಲವು ವಿಷಯಗಳಿಗೆ ಪರಿಹಾರ ಸಿಗುವುದಿಲ್ಲ ಕಾಲವೇ ಅದಕ್ಕೆ ಉತ್ತರ ನೀಡಿ ಪರಿಹಾರ ನೀಡಬೇಕು... ಈ ಕಥೆ ಪರಿಹಾರ ನೀಡದಿದ್ದರೂ ಸಾಂತ್ವಾನವನ್ನಾದರು ನೀಡಲೆಂದು ಈ ಕಥೆ ಬರೆದೆ.
ವಂದನೆಗಳು

ಮನಸು said...

ಧನ್ಯವಾದಗಳು ಹೆಗಡೆಯವರಿಗೆ,
ಜೀವನದ ಭಾರ ಇಳಿಸಲು ಬಲು ಕಷ್ಟ... ಆದಷ್ಟು ಬೇಗ ಮುಂದಿನ ಭಾಗ ಬರುತ್ತೆ...

ಮನಸು said...

ಶಿವು,
ನಿಜ ನೀವು ಹೇಳ್ತನೇ ಇದ್ದ್ರಿ... ಇಲ್ಲಿನ ಜೀವನ ಶೈಲಿ ಬಗ್ಗೆ ಬರೆಯಿರಿ ಎಂದು ಆದರೆ ನಾನು ಗಮನ ಕೊಟ್ಟಿರಲಿಲ್ಲ. ಈ ಕಥೆ ನಿಮಗೆ ಇಷ್ಟವಾಗಿದ್ದರೆ ನಿಜಕ್ಕೂ ಧನ್ಯೆ... ಮುಂದುವರಿಸುವೆ... ಖಂಡಿತಾ ಓದಿ

ಮನಸು said...

ಗುರು,
ಧನ್ಯವಾದಗಳು ಆದಷ್ಟು ಬೇಗ ಮುಂದಿನ ಕಥೆ ಬರುತ್ತೆ.

ಜಲನಯನ said...

ಸುಗುಣಾವ್ರೆ, ಕೇವಲ ೩೦-೫೦ ದಿನಾರ್ ತಿಂಗಳ ಸಂಬಳ..ಮತ್ತೆ ಕೋಆಪ ಸ್ಟೋರ್ ಮುಂತಾದ ಕಡೆ ರಾತ್ರಿ ೧೨-೧.೦ ಗಂಟೆವರೆಗೆ ಸ್ಟೋರಿಂದ ಕುವೈತಿ ಮತ್ತಿತರ ಗ್ರಾಹಕರ ಸಾಮಾನು ಸರಂಜಾಮು ಕಾರಿನವರೆಗೆ ಸಾಗಿಸುವುದರಿಂದ ಇನ್ನೊಂದು ೧೦-೨೦ ದೀನಾರ್ ಗಳಿಕೆ...ನಿಜಕ್ಕೂ ಶೋಚನೀಯ..ನಿಮ್ಮ ಮುಂದಿನ ಕಂತಿಗೆ..?? ಗಪ್ ಚಿಪ್...ನೋಡ್ತೀನಿ...
ಕಥೆ ಚನ್ನಾಗಿದೆ.