ದೇವರು ಹಲವು, ಪೂಜಾವಿಧಾನಗಳು ಕೆಲವು
ಯಾವುದೆಷ್ಟೆ ಆದರೇನು ಭಕ್ತಿಯೊಂದೆ ಅಲ್ಲವೇನು..!!!
ಭಕ್ತಿ ಮೂಡಿಸುವ ಆ ಮೂರ್ತಿಗೆ ವಿವಿಧಾತೀತ ಮಂದಿರಗಳು
ವಿವಿಧ ದೇವರಿಗೆ ವಿಧ ವಿಧ ಹೆಸರ ನೀಡಿ ಪೂಜಿಸುವೆವು
ಇಂತ ದೇವರಿಗೆ ಇವರೇ ಒಕ್ಕಲು ಎಂಬಂತೆ ಪಂಗಡಗಳು ಇರುವವು
ಹೆಸರು ಬೇರೆ, ಪಂಗಡ ಬೇರೆಯಾದರೇನು ಮನಸು ಒಂದೇ ಅಲ್ಲವೇ...?
ದೇಹ ಒಂದೇ ಅದರ ಭಾಗ ಎಷ್ಟೋ ಇರುವ ಹಾಗೆ
ಹಲವು ಜಾತಿ, ಹಲವು ಮತ ಇರುವುದು ಒಂದೇ ದೇಶಕೆ
ದೇವನಿಗೂ ಜನರಿಗೂ ಹಲವು, ಕೆಲವುಗಳ ಅಂತರ
ಯಾವ ಅಂತರ ಇದ್ದರೇನು ದೇವನಿರುವನು ನಿರಂತರ....
ಒಂದೇ ಜೀವಕೆ ಹಲವು ವೇಷ, ಒಂದು ಮನಸಿಗೆ ಹಲವು ಕನಸು
ಎಲ್ಲ ನಮ್ಮ ನಮ್ಮ ಆಸೆ ಆಮಿಷಕೆ ಬಯಕೆ ತೋಟ ಬೆಳೆದು ನಿಂತಿದೆ
ಸ್ವಂತ ಜೀವಕೆ ಬೆಳದ ಆಸೆ ದೇವನಿಗೂ ಮೀಸಲಿಟ್ಟ ನಾವುಗಳು
ಹೆಚ್ಚು ಹೆಚ್ಚು ಹೆಸರಿನಲ್ಲಿ ತೃಪ್ತಿಯನ್ನು ಕಂಡು ಪೂಜೆ ಸಲ್ಲಿಸಿದೆವೇನೋ ಅಲ್ಲವೇ...?
ದೇವರು ಹಲವು, ಪೂಜಾವಿಧಾನಗಳು ಕೆಲವು
ಯಾವುದೆಷ್ಟೆ ಆದರೇನು ಭಕ್ತಿಯೊಂದೆ ಅಲ್ಲವೇನು..!!!
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು...
10 comments:
ಸತ್ಯವನ್ನಾಡಿದಿರಿ....
ಸುಗುಣ ಮೇಡಂ,
ನಿಮಗೂ ಶಿವರಾತ್ರಿ ಹಬ್ಬದ ಶುಭಾಶಯಗಳು....ದೇವರೊಬ್ಬ ನಾಮ ಹಲವು, ಭಕ್ತಿ ಒಂದೇ, ನಿಜ...ಕವನ ಚೆನ್ನಾಗಿದೆ.
ಸುಗುಣಾ,
ಸುಂದರವಾದ ಕವನ.
ಶಿವರಾತ್ರಿಯ ಶುಭಾಶಯಗಳು.
ಹಲವು ದೇವರಿದ್ದರೇನು..
ಭಾವ ಮಾತ್ರ ಒ೦ದೇ..
ಶಿವರಾತ್ರಿಯ ಶುಭಾಶಯಗಳು
ಅನ೦ತ್
ಸುಗುಣಾ ಮೇಡ೦,
`ಅವರವರ ಭಾವಕ್ಕೆ, ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ'
ಎನ್ನುವ ಕವನ ನೆನಪಾಯ್ತು! ಚೆನ್ನಾಗಿ ಬರೆದಿದ್ದೀರಿ.ನಿಮಗೆ ಶಿವರಾತ್ರಿಯ ಶುಭಾಶಯಗಳು.
ನಿಮಗೆ ಮತ್ತು ನಿಮ್ಮ ಮನೆಯವರಿಗೆಲ್ಲ ಮಹಾ ಶಿವರಾತ್ರಿಯ ಶುಭಾಶಯಗಳು.
ಶಿವರಾತ್ರಿಯ ಹಾರ್ದಿಕ ಶುಭಾಶಯಗಳು,,,,
nimagoo kooda shivarathriya shubhashayagaLu.. hegittu aacharaNe alli :)
kavana chennagittu :)
ಸರಿಯಾಗಿ ಹೇಳಿದ್ದೀರಿ.. ಚೆನ್ನಾಗಿದೆ. ನಿಮಗೂ ಶಿವರಾತ್ರಿಯ ಶುಭಾಶಯಗಳು!
nice one akkayya :)
Post a Comment