ಯುದ್ಧದ ಸದ್ದಿಗೆ ಇಂದೇ ರಣರಂಗದಂತಾ ಮನಸು ನಿಶಬ್ಧಿಸಿದೆ...
ಎರಡು ದೇಶಗಳ ವೈಮನಸ್ಯ ಗಗನದೆತ್ತರಕ್ಕೆ ಬೆಳೆದರೂ
ಆಟವೆಂಬ ಯುದ್ಧಕೆ ದೇಶ ವಿದೇಶಗಳಲಿ ಎಲ್ಲರ ಮನದಲಿ
ಒಂದೆಡೆ ಗೆಲುವ ಕಾತುರ, ಮತ್ತೊಂದೆಡೆ ಏನಾಗುವುದೆಂಬ
ಭಯದ ಛಾಯೆ ಎಲ್ಲರ ಮನೆ ಮನದಲ್ಲಿ ನರ್ತನ ಮಾಡುತ್ತಲಿದೆ.
ನನ್ನವರೇ ಗೆಲ್ಲಲಿ ಎಂಬ ಭಾವನೆ ಎರಡೂ ದೇಶದವರಲ್ಲಿದೆ
ಅವರ ಗೆಲುವಿನಿಂದ ಯಾರಿಗೇನೂ ಸಿಗದಿದ್ದರೂ
ಜಿದ್ದಾಜಿದ್ದಿನ ಕದನದ ಕಹಳೆಯಂತೂ ಮೊಳಗಿದೆ
ರಾಜಕೀಯದ ಲಾಭವೋ ದೇಶಪ್ರೇಮದ ಪರಿಯೋ ತಿಳಿದಿಲ್ಲ.....
ಎರಡು ದೇಶದ ಪ್ರಧಾನಿ, ಬಣ್ಣದ ಲೋಕದ ದಿಗ್ಗಜರು
ರಾಜಕೀಯ ದುರೀಣರು, ಪ್ರಸಿದ್ಧವೆನಿಸುವ ಜನರ ಆಗಮ
ಪಾಕಿಸ್ತಾನ-ಭಾರತದ ಜೊತೆಯಾಟಕೆ ಹೊಸ ಕಳೆ ಸೃಷ್ಟಿಸಿದೆ
ಆದರೂ ಎಲ್ಲೋ ಮನದಲಿ ದ್ವಂದ್ವ ಪ್ರಶ್ನೆ-ಉತ್ತರಳ ಹುಡುಕುತಿದೆ
ಅಪ್ಪ ಅಮ್ಮನ ಜಗಳದಲಿ ಕೂಸು ಬಡವಾಯಿತು ಎಂಬಂತೆ
ಇಂಡೋ-ಪಾಕ್ ಕದನದಲ್ಲಿ ಸಾಮಾನ್ಯರು ಬಲಿಯಾಗದಿರಲಿ
ಮೋಹಲಿಯ ಕ್ರೀಡಾ ರಣರಂಗ ಕೇವಲ ಆಟಗಳ ಸಮರವಾಗಿ
ಗೆಲುವು ಭರತ ಭೂಮಿಗೆ ಮೀಸಲಿರಲಿ ಎಂದು ಆಶಿಸುವ ಬನ್ನಿ...
11 comments:
ಗೆಲುವು ಭಾರತಕ್ಕೆ ಇರಲಿ ಎಂಬುದು ನಮ್ಮ ಆಶಯ
ನಿಮ್ಮ ಆಶಯಕ್ಕೆ ನಮ್ಮ ದನಿಗೂಡಿಸುತ್ತೇವೆ. ಯಾರಿಗೇ ಗೆಲುವಾದರೂ ಒಲವು ಅರಳುತ್ತಿರಲಿ.
ಶುಭಾಶಯಗಳು
ಅನ೦ತ್
ಭಾರತಕ್ಕೆ ಗೆಲುವು ಇರಲಿ
ಶುಭಾಶಯಗಳು
bhaaratakke geluvu sigali...
nimma aashaya chennaagi bimbisiddiri...
bhaarat namm bhaarat
geluvin gurute bhaarat
shubha haaraisuve pandyake
hesaaragli i world cuppige
pakistaanvu bye helali
afridiya solu dhoniy jayavaagali
raam bheem hanumaanrellaru
avatarisali indu cricketigaralli
bhaarat namm bhaarat
geluvin gurute bhaarat
ಸುಗುಣಕ್ಕ,
ಭಾರತ ಗೆಲ್ಲಲಿ...ಅದಕ್ಕಿಂತ ಕ್ಲೀನ್ ಕ್ರಿಕೆಟ್ ಗೆಲ್ಲಲಿ... ಇದರಿಂದಾಗಿ ಯಾರು ಬಲಿಯಾಗದೇ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವುದೇ ನನ್ನ ಅನಿಸಿಕೆ ಕೂಡ..
ಭಾರತ ಗೆಲ್ಲಲಿ.
ಈ ಗೆಲುವು ಯಾವುದೇ ಸಾಧನೆಯಲ್ಲ. ಇದು ಕೇವಲ ಮನೋರಂಜಕ ಆಟ, ಕ್ರಿಕೆಟಿಗೆ ಮಾನ್ಯತೆ ಬಹಳ ಜಾಸ್ತಿಯಾಯಿತು ಎಂಬುದು ನನ್ನ ವಾದ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...
ಭಟ್ ಸರ್ ನಿಜ ನಿಮ್ಮ ಮಾತಿಗೆ ನನ್ನ ಸಹಮತವಿದೆ... ರಾಜಕೀಯದವರೆಲ್ಲ ಬಂದು ನಿಂತಿದ್ದಾರೆ ಈ ಆಟ ವೀಕ್ಷಣೆಗೆ... ಅವರ ಪಾಡಿಗೆ ಅವರು ಆಟವಾಡಲಿ ಎಂಬ ಭಾವನೆ ಬಿಡುವುದಿಲ್ಲ ಎಂದೆನಿಸುತ್ತೆ...
ಮನಸು,
ಕ್ರಿಕೆಟ್ಟಿಗೆ ಗೆಲುವಾಗಲಿ!
ಉತ್ತಮವಾಗಿದೆ.. ನಾನು ಈ ವಿಷಯದ ಬಗ್ಗೆ ಒಂದು ಕವನ ಬರೆಯಬೇಕೆಂದು ಒಮ್ಮೆ ಕುಳಿತುಕೊಂಡೆ ಎಷ್ಟು ಯೋಚಿಸಿದರೂ ಏನೂ ಹೊಳೆಯಲಿಲ್ಲ.. ಕಡೆಗೆ ಸುಮ್ಮನಾದೆ.. ನಿಮ್ಮ ಕವನ ಕಂಡು ಪಕ್ಕಾ ಕ್ರಿಕೆಟ್ನ ಅಭಿಮಾನಿಯಾದ ನನಗೆ ಸಂತೋಷವಾಯಿತು!
Post a Comment