ಚಿತ್ರ ಕೃಪೆ - ಮಲ್ಲಿಕಾರ್ಜುನ್
ದೇಹ, ಮನಸು ಬಯಸುತ್ತದೋ ಬಿಡುತ್ತದೋ
ಭಾರವನ್ನು ಹೊರಲೇ ಬೇಕು ಬವಣೆಗಳ ತೀರಿಸಲೇ ಬೇಕು
ನಮ್ಮದು ಐಷಾರಾಮಿ ಜೀವವಲ್ಲ
ಪ್ರಕೃತಿಯನೇ ನಂಬಿರುವ ಬಾಳ್ವೆ ನಮ್ಮದು
ಗಂಡ ಹೊಲ ಗದ್ದೆ ದನಕರುಗಳ ಹಿಂದೆ
ಕೂಸು ಬೆನ್ನಿಗೆ ಬಿಗಿದ ಚೀಲದ ಮುಂದೆ
ನಾನು ಬಾವಿ ಬಾಯಿಗೆ ಹಗ್ಗ ಬಿಟ್ಟೆ
ಇನ್ನು ಬಾಯಾರಿಕೆಯ ನೆವ ತೀರಿಸುವ ಸಮೀಕ್ಷೆ
ದಣಿವು ತೀರಿಸುವ ಈ ಬಿಂದಿಗೆ
ಹೊರೆಯೋ ಹಗುರವೋ
ಒಯ್ಯುವ ಬಂಡಿ ನಾನೇ
ಹಳ್ಳಿ ದೇಹ ಕಟ್ಟುಮಸ್ತು
ಎಂತ ಭಾರವನೂ ಸಹಿಸಲು ಅಸ್ತು ..
ಪಾದುಕೆಯ ಆವಾಹನ ಇಲ್ಲ
ಬಿಸಿಲ ಸಮ್ಮೋಹನವಿಲ್ಲ
ಕಾಲುದಾರಿಯೇ ಹೆಜ್ಜೆಗೆ ಆಹ್ವಾನ
ನಡು ಬಿರುಸು ಹೊರೆಗೆ
ಸಿಂಬೆ ನೆತ್ತಿಯ ನೋವಿಗೆ
ಇದು ದಿನನಿತ್ಯದ ಕಾಯಕ
9 comments:
ನಮ್ಮ ಹಳ್ಳಿಗಾಡಿನ ದುರಂತ ಇನ್ನೂ ಸವ್ಯವಾಗದ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲತೆ. ಎಲ್ಲ ರಾಜಕೀಯ ಶಕುನಿತನದ ಅಭಿಶಾಪವೇ.
ದಿನ ನಿಂತ್ಯದ ಕಾಯಕ, ನೋವೆಷ್ಟಾದರೂ ನಡಿಯಲೇ ಬೇಕು. ಚಿತ್ರಣ ಕಣ್ಣ ಮುಂದೆ ತಂದ ಹಾಗಿದೆ ...
ನೀರಿನ ಹಾಹಾಕಾರ ಇನ್ನೂ ನಿಂತಿಲ್ಲ ಹಲವಾರು ಹಳ್ಳಿಗಳಲ್ಲಿ, ನೀರೆಯರು ನೀರಿಗಾಗಿ ಪಡುವ ಭವಣೆ ಅಷ್ಟಿಷ್ಟಲ್ಲ; ಎಲ್ಲವ ವಿಸ್ತೃತವಾಗಿ, ಎಳೆಎಳೆಯಾಗಿ ಬಿಡಿಸಿಟ್ಟ ಪರಿ ನಿಮಗೆ ನೀವೇ ಸರಿಸಾಟಿ.
ನೀರಿನ ಹಾಹಾಕಾರ ಇನ್ನೂ ನಿಂತಿಲ್ಲ ಹಲವಾರು ಹಳ್ಳಿಗಳಲ್ಲಿ, ನೀರೆಯರು ನೀರಿಗಾಗಿ ಪಡುವ ಭವಣೆ ಅಷ್ಟಿಷ್ಟಲ್ಲ; ಎಲ್ಲವ ವಿಸ್ತೃತವಾಗಿ, ಎಳೆಎಳೆಯಾಗಿ ಬಿಡಿಸಿಟ್ಟ ಪರಿ ನಿಮಗೆ ನೀವೇ ಸರಿಸಾಟಿ.
"ಹೊರೆಯೋ ಹಗುರವೋ
ಒಯ್ಯುವ ಬಂಡಿ ನಾನೇ"
ಅದ್ಭುತ ಸಾಲುಗಳು!
"ಕೂಸು ಬೆನ್ನಿಗೆ ಬಿಗಿದ ಚೀಲದ ಮುಂದೆ "
ಇಷ್ಟವಾಯ್ತು...
ಮತ್ತೆ ಕವನವನ್ನು ಅಂತ್ಯಗೊಳಿಸಿದ ರೀತಿ ಇಷ್ಟವಾಯ್ತು :)....
ಹಾಂ ಪಾದುಕೆಯ ಆವಾಹನ ಅಂದ್ರೆ ಎನು ??
ಮತ್ತೆ ಅದು "ಧಣಿವು"ಗೆ ಬೇರೆ ಎನಾದ್ರು ಅರ್ಥ ಇದ್ಯಾ ಅಥ್ವಾ ದಣಿವು ನಾ ??ದಯವಿಟ್ಟು ತಿಳಿಸಿ...
ಧನ್ಯವಾದಗಳು...
ನಮಸ್ತೆ :)
ಚೆಂದದ ಕವಿತೆ ಸುಗುಣ ಮೇಡಂ.. :)ಚಿತ್ರದೊಳಗಣ ದೃಶ್ಯದ ಅಭಿವ್ಯಕ್ತಿಯನ್ನ ಸಮರ್ಥವಾಗಿ ಬಿಡಿಸಿಟ್ಟಿದ್ದೀರ.
ನನ್ನ ಚಿತ್ರಗಳನ್ನು ದಾರಾಳವಾಗಿ ಬಳಿಸಿಕೊಳ್ಳಿ ಕ್ಷೆಮೆ ಯಾಕ?...ನನ್ನ ಒಂದು ಚಿತ್ರದಲ್ಲಿ ಕವಿತೆ ಹುಟ್ಟಿದ್ದು ಚಿತ್ರ ತೆಗೆದಕ್ಕೆ ಸ್ವಾರ್ಥಕವಾಯಿತು...
Nice Akka,, your words suits the picture...
Post a Comment