ವರ್ಷವಿಡಿ ನಗು, ಕುಣಿತ, ಹಾಸ್ಯ ಸರಮಾಲೆಗಳ ಕಂಡೆ
ಜೊತೆ ಜೊತೆಗೆ ಇಡುವ ಹೆಜ್ಜೆಗಳು ಎಡವಿದ್ದವು
ಮತ್ತಷ್ಟು ಆತ್ಮೀಯತೆಯಲಿ ಮುಖವಾಡಗಳ ಪರಿಚಯ
ಮಗದಷ್ಟು ಕತ್ತಿ ಮಸೆಯುತ್ತಿರುವುದ ಕಂಡು ಸಹಿಸಿದೆ
ಬರಲಿರುವ ವರುಷಕೆ ನನ್ನದು ಹೊಸ ಅಲೆಯ ಬೇಡಿಕೆ
ಬಿರುಸಿನ ಅಲೆಯಾದರೂ ಸಹಿಸುವ ಶಕ್ತಿಯ ಕೋರಿಕೆ
ಮರುಧರೆಯಲೂ ಮಲ್ಲಿಗೆಯ ಬೆಳೆಯುವ ಅಭಿಲಾಷೆ
ತಂಗಾಳಿ ಬೀಸಲಿ ಈ ಮರ್ಕಟ ಮನಕೆ
ಸ್ನೇಹ-ನಂಟು ದ್ವೇಷ-ಪ್ರೀತಿಯಲಿ ಗೆಲುವಾಗಲಿ ಒಲವಿಗೆ
ಬೆನ್ನ ಹಿಂದೆ ಮಸೆಯುವ ಕತ್ತಿಗಳು ಮೊಂಡಾಗುವಂತೆ
ಆಸೆ ಆಮಿಷಗಳಲಿ ಯೋಗ್ಯವಾದುದು ಕೈಗೂಡಲಿ
ನಾ ಸಾಧಿಸುವ ಹಾದಿ ಹಸನಾಗುವಂತೆ
ಹೊಸ ವರ್ಷದ ಶುಭಾಶಯಗಳು... ಬದುಕು ಹಸನಾಗಲಿ...ಪ್ರೀತಿ ಬೆಳೆಯಲಿ :)
4 comments:
ಮೇಡಂ,
ಒಂದು ವರ್ಷ ಇಂತಹ ಘಟನೆಗಳನ್ನು ತಿಳಿಸುತ್ತಲೇ ಇರುತ್ತವೆ. ನೀವು ಹೇಳಿದಂತೆ ಶಕ್ತಿಯನ್ನು ಕೋರಬೇಕು ಅಷ್ಟೆ.
ಬೆನ್ನ ಹಿಂದೆ ಮಸೆಯುವ ಕತ್ತಿಗಳು ಮೊಂಡಾಗುವಂತೆ ... ಈ ಸಾಲು ಬಹಳ ಕಾಡಿತು
ಚೆನ್ನಾಗಿದೆ ಕವನ.. ಹೊಸ ವರ್ಷದ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ.
ಉತ್ತಮ ಕವನ ಸುಗುಣ ಅವರೇ, ನಿಮಗೂ ಹೊಸವರ್ಷದ ಶುಭಾಶಯಗಳು, ನನ್ನ ಬ್ಲಾಗ್ ಗೆ ಸ್ವಾಗತ.
ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.
ಸಿಂಹಾವಲೋಕನದ ಈ ಕವನ ನಿಮ್ಮದೂ ಅಂತೆಯೇ ನನ್ನದೂ ಸಹ. ತುಂಬಾ ಇಷ್ಟವಾಯಿತು.
2013ರಲ್ಲಿ ನನ್ನ ಚೊಚ್ಚಲ ಕವನ ಸಂಕಲನ 'ಪಾತ್ರ ಅನ್ವೇಷಣಾ'ಕ್ಕೆ ತಾವು ರೂಪಿಸಿಕೊಟ್ಟ ಮುಖಪುಟ ಆಮೋಘ. ಯಾವತ್ತೂ ನಾನು ಋಣಿ.
true lines!
Post a Comment