ನಾವಿರುವ ಜಗತ್ತು ಛತ್ರ, ನಾವುಗಳು ಛತ್ರಕ್ಕೆ ಬಂದು ಹೋಗುವ ದಿನ ನಿತ್ಯದ ಅತಿಥಿಗಳು ಅದಕ್ಕೊಂದು ಸಣ್ಣ ಉದಾಹರಣೆ, ನೀವುಗಳು ಸಹ ಜಗತ್ತು ಒಂದು ಛತ್ರವೆಂದು ಒಪ್ಪುವಿರೇನೂ ಒಮ್ಮೆ ಈ ಚುಟುಕು ಬರಹಕ್ಕೆ ಕಣ್ಣಾಡಿಸಿ....
ಒಂದು ದೂಡ್ಡ ರಾಜಧಾನಿಗೆ ಒಬ್ಬ ಸಾಧು ಆಗಮಿಸುತ್ತಾ ರಾಜಧಾನಿಯ ಅರಮನೆ ತಲುಪುತ್ತಾರೆ. ಒಳಗೆ ಪ್ರವೇಶಿಸಿ ವಿಶಾಲವಾದ ಹಜಾರದಲ್ಲಿ ಕುಳಿತುಕೂಂಡು ವಿಶ್ರಾಂತಿ ಪಡೆಯುತ್ತಿದ್ದವರು ಬಹಳ ಸಮಯವಾದರು ಹೂರಡದಿದ್ದಾಗ, ಕಾವಲುಗಾರ ಬಂದು ಏಳುವಂತೆ ತಿಳಿಸಿದರು. ಸಾಧು ಆ ದಿನ ಅಲ್ಲಿಯೇ ಉಳಿದು ಮರುದಿನ ತೆರಳುವುದಾಗಿ ಹೇಳುತ್ತಾರೆ ಆದರೆ ಕಾವಲುಗಾರ ಕೋಪಿಸಿಕೂಂಡು ದಾರಿಹೋಕರೆಲ್ಲ ಬಂದು ತಂಗಲು ಇದೇನು ಛತ್ರವಲ್ಲ ಎಂದು ಹೇಳಿದಾಗ ಸಾಧು ಇದು ಛತ್ರವೆಂದೇ ಸಾಧಿಸುತ್ತಾರೆ ವಾದಗಳು ಮುಂದುವರಿದು ಕೊನೆಗೆ ಕಾವಲುಗಾರನಿಗೆ ಅವನ ರಾಜನನ್ನು ಕರೆತರಲು ಹೇಳುತ್ತಾರೆ. ಬೇರೆ ಉಪಾಯ ಕಾಣದೆ ಕಾವಲುಗಾರ ರಾಜನಲ್ಲಿ ವಿನಂತಿಸಿ ಕರೆತರುತ್ತಾನೆ. ಯೋಗ್ಯನಾದ ರಾಜ ಸಾಧುವಿನ ಬಳಿ ಬಂದು ಶಾಂತರೀತಿಯಲ್ಲಿ ಅರಿಕೆಮಾಡಿಕೂಂಡು ಸಾಧುಗಳೇ ಇದು ಅರಮನಯೇ ಹೊರತು ಛತ್ರವಲ್ಲ ಸ್ವಾಮಿ ಎಂದೇಳಲು . ಇದರ ಪ್ರತಿಯಾಗಿ ಸಾಧು ಕೇಳಿದರು ರಾಜನಿಗೆ ನಿನಗಿಂತ ಮೊದಲು ಈ ಅರಮನೆಯಲ್ಲಿ ಯಾರಿದ್ದರು? ನನ್ನ ತಂದೆ, ಅವರಿಗಿಂತ ಮೊದಲು ಯಾರಿದ್ದರು? ನನ್ನ ತಂದೆಯ ತಂದೆ ನನ್ನ ತಾತ, ಸರಿ ನೀನಾದ ಮೇಲೆ ಇಲ್ಲಿಗೆ ಯಾರು ಬರುತ್ತಾರೆ? ನನ್ನ ಮಗ, ಅವನ ನಂತರ? ನನ್ನ ಮಗನ ಮಗ ಅಂದರೆ ಮೊಮ್ಮಗ, ನೀನು ಹೇಳಿದ ರೀತಿಯಲ್ಲಿ ಇಲ್ಲಿ ಯಾರೂ ಶಾಶ್ವತವಾಗಿ ಇರಲಾರೆಂದರ್ಥವಲ್ಲವೆ? ನೀನೂಕೂಡಾ ತಾನೆ? ಅಂದರೆ ಕೆಲವು ದಿನ ಮಾತ್ರ ಕೆಲವರು ಇದ್ದು ಹೋಗುವ ಸ್ಥಳ ಛತ್ರವಲ್ಲದೆ ಮತ್ತೇನು? ಎಂದು ಸಾಧು ಕೇಳಿದರು.........ರಾಜ ಮೌನದಿಂದಲೇ ಸಮ್ಮತಿಸಿಕೊಂಡರು.
ನಿಜ ಸಾಧುವಿನ ಮಾತಿನಂತೆ ನಾವೆಲ್ಲ ಅರ್ಥೈಸಿಕೊಳ್ಳಬಹುದಾದ ನಮ್ಮ ಜೀವನ,ಇತ್ತೀಚೆಗಷ್ಟೆ ಓದಿದ ಈ ಪುಟ್ಟ ಕಥೆ ನನ್ನ ಮನಮುಟ್ಟಿ ಮನದಾಳ ಒಲೈಸಿದೆ, ನಾವಿರುವ ಈ ಭೂಮಿ ಒಂದು ಛತ್ರ ನಾವೆಲ್ಲ ಬಂದು ಹೋಗುವ ಅತಿಥಿಗಳು ಆದರೆ ಯಾರು ಯಾರು ಎಷ್ಟೆಷ್ಟು ದಿನ ಇದ್ದು ಹೋಗುತ್ತಾರೆ ಎಂಬುದು ಆ ದೇವನೆ ಬಲ್ಲ....ನಾಲ್ಕಾರು ದಿನ ಇದ್ದು ಹೋಗುವುದಕ್ಕೆ ನಾವುಗಳು ಏನೆಲ್ಲಾ ಬಯಸುತ್ತೇವೆ ಆ ಬಯಕೆ ಪೂರೈಸಿಕೊಳ್ಳುವುದರ ಪ್ರಯತ್ನದಲ್ಲೆ ನಮ್ಮ ಕೊನೆಯುಸಿರು ಕಳೆಯುತ್ತೇವೆ. ಇನ್ನು ಕೆಲವು ಸರಿ ಎಂತೆಂತ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ, ಇರುವ ಎರಡು ದಿನಕ್ಕೆ ನೂರೆಂಟು ನಂಟು, ನಂಟಿಗಾಗಿ ಹಲವು ದಾರಿ ಹಿಡಿದು ಸಂಪಾದಿಸೋದು ಗಂಟು ಅದನ್ನು ಕಾಯುತ್ತಲಿರುವಾಗಲೇ ಈ ಜಗತ್ತೆಂಬ ಛತ್ರದಿಂದ ದೇವರು ಕೊಡುವನೊಮ್ಮೆ ಟಿಕೇಟು ಅಲ್ಲಿಗೆ ಮುಗಿಯಿತು ನಾನು ನನ್ನದು ಎಂಬುದರ ಛತ್ರದ ನಂಟು.
ಈ ಜಗತ್ತೇ ಒಂದು ಛತ್ರ ಇಲ್ಲಿಗೆ ಬಂದು ನಾಲ್ಕುದಿನ ಇದ್ದು ಹೋಗುವ ಎಲ್ಲರೂ ಪಥಿಕರು ಎಂದು ಅರ್ಥವಾಗುತ್ತದೆ. ಈ ಜಗತ್ತೆಂಬ ಛತ್ರದಲ್ಲಿ ಇರುವಷ್ಟು ದಿನ ಸಾರ್ಥಕವಾದ ಬದುಕನ್ನು ಬಾಳುವುದೇ ನಾವು ಮಾಡಬೇಕಾದ ಪೂಜೆ.......
2 comments:
ನಿಜ ಈ ಜಗತ್ತು ಒಂದು ಛತ್ರ...
" ಅಲ್ಲಿ ಇರುವದು ಎಮ್ಮ ಮನೆ...
ಇಲ್ಲಿ ಬಂದಿಹೆ ಸುಮ್ಮನೆ..."
ನಿಮ್ಮ ಲೇಖನ ಓದಿದ ಮೇಲೆ "ದಾಸರ" ಭಜನೆ ನೆನಪಾಯಿತು..
ಲೇಖನ ಚೆನ್ನಾಗಿದೆ...
ಧನ್ಯವಾದಗಳು...
ಹೀಗೆ ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆ ಮುಂದುವರಿಯಲಿ ...
ಧನ್ಯವಾದಗಳು ಸರ್ ..
Post a Comment