Sunday, December 21, 2008

ಪ್ರೀತಿ-ಪ್ರೇಮ

ನಾನೊಮ್ಮೆ ಶಪಿಸಿದೆ ಪ್ರೀತಿ-ಪ್ರೇಮ ತಪ್ಪೆಂದು?
ಮತ್ತೊಮ್ಮೆ ಆಶಿಸಿದೆ ಪ್ರೀತಿ-ಪ್ರೇಮ ಸರಿಯೆಂದು.
ಇದು ನನ್ನ ಮನಕೆ ಮೊಡಿಸಿದ ಸರಿತಪ್ಪಿನ ಗೊಂದಲ

ಗೊಂದಲದಿ ಅದು ಬರಿ ಗಂಡು ಹೆಣ್ಣಿಗೆಂದು ಸಮರ್ಥಿಸಿದೆ
ನಂತರ ಅರ್ಥೈಸಿದೆ,ಗಂಡು ಹೆಣ್ಣಿಗೆ ಮಾತ್ರ ಮೀಸಲಿಲ್ಲ

ಜೀವರಾಶಿಗೆಲ್ಲಾ ಮೀಸಲಿಹುದು ಪ್ರೀತಿ-ಪ್ರೇಮದ ಹಾದಿ
ಅದುವೇ ನಮ್ಮೆಲ್ಲರ ಜೀವನಕ್ಕೆ ಭದ್ರ ..ಬುನಾದಿ

ಪ್ರೀತಿ-ಪ್ರೇಮ ಹೊಮ್ಮಲು ಬೇಕಷ್ಟೆ ಹೃದಯ
ಹೊಮ್ಮಿದಾಕ್ಷಣ ಜೀವನವೇ.. ವಿಸ್ಮಯ

ಆ ವಿಸ್ಮಯದೊಂದಿಗೆ ಮತ್ತೊಂದಿದೆ ಕೇಳಿ
ಪ್ರೀತಿಯೊಂದಿಗೆ ಬೇಕು ಹಣ,ವಿಶ್ವಾಸದ ಹಳಿ

ಹಳಿ ತಪ್ಪಿ ನಡೆದರೆ ಜೀವನ ಅದೋಗತಿ
ಆ ಗತಿಗೆ ಬಿಡದೆ ನಮ್ಮಲಿರಬೇಕು ಶಾಂತಿ

ಇದು ಪ್ರೀತಿ-ಪ್ರೇಮದೊಂದಿಗಿನ ಜೀವನ ಪಾಠ
ಎಲ್ಲವು ದೇವರಾಡಿಸೋ ಕಣ್ಣು ಮುಚ್ಚಾಲೆ ಆಟ

ಇವೆಲ್ಲದರ ಪರಿ ನಮಗೆ ಅರಿವಾಗುವುದೊಂದೇ
ಪ್ರಪಂಚ ನಿಲುವಿಗೆ ಪ್ರೀತಿ-ಪ್ರೇಮ ಬೇಡ ಒಂದೇ

ಅದರ ಜೊತೆ ಇರಬೇಕು ಜನ,ಹಣ,ವಿಶ್ವಾಸ,ನಂಬಿಕೆ
ಈ ಮಾತು ಸರಿ ಎಂದು ಒಪ್ಪುತಿದೆ ನನ್ನ ಮನದ ಸಂಚಿಕೆ

ಇನ್ನೊಂದು ಹೇಳಲೇ,ಪ್ರೀತಿ-ಪ್ರೇಮ ನಮ್ಮೊಳಗಿನ ನಾದ ಚಿಲುಮೆ
ಎಲ್ಲರಲ್ಲೂ ತೋರ್ಪಡಿಸಿ ನಿಮ್ಮ ಪ್ರೀತಿ-ಪ್ರೇಮದ ಒಳಿತಿನ ನಲುಮೆ
ನಲುಮೆ ಹೆಚ್ಚಿಸುವುದು ನಿನ್ನಯ ಬಾಳಲ್ಲಿ ಗರಿಗೆದರಿದ ಹಿರಿಮೆ !!!

ಇದುವೇ ನನ್ನ ಪ್ರೀತಿ-ಪ್ರೇಮದ ಬಗೆಗಿನ ಹೊಕ್ಕಣಿ
ನಿಮ್ಮಲಿ ಬೇರಾವ ಅರ್ಥವಿದ್ದರು ಕಳಿಸಿ ಒಂದು ನೊಂದಣಿ .

2 comments:

Ittigecement said...

ಕನಸು....

ನಿಮ್ಮ ಕವನ..
ಸರಳ ಭಾಷೆಯಲ್ಲಿ ..
ಪ್ರೇಮದ ಎಲ್ಲ ಹಂದರ ತೆರೆದಿಟ್ಟಿದೆ...

ಇಷ್ಟವಾಯಿತು...
ಮನಸ್ಸಿಗೆ....

ಅಭಿನಂದನೆಗಳು...

ಮನಸು said...

ಧನ್ಯವಾದಗಳು ಸರ್,
ನಿಮ್ಮ ಅನಿಸಿಕೆಗೆ ನನ್ನ ಹೃತ್ಪೂರ್ವಕ ವಂದನೆಗಳು.