Tuesday, December 23, 2008

ನಮ್ಮನೆಯ ಕರಿ ಹಸು.....

ಇಂದು ನನ್ನ ಕಛೇರಿಯಲ್ಲಿ ಮಧ್ಯಾಹಃ ಊಟದ ಸಮಯಕ್ಕೆ ಸರಿಯಾಗಿ ನನ್ನ ಜೊತೆ ಕೆಲಸಮಾಡುವವರೊಬ್ಬರು ಬಂದರು ಹೀಗೆ ಮಾತನಾಡುತ್ತ ನೀವು ಊಟಕ್ಕೆ ಏನು ತರುತ್ತೀರಿ ಎಂದರು ನಾನು ಎಷ್ಟೇ ಆಗಲಿ ಸಸ್ಯಹಾರಿ ನಾನು ಚಪ್ಪಾತಿ,ಚಿತ್ರಾನ್ನ ಈ ರೀತಿಯ ಊಟ ತರುತ್ತೇನೆಂದೆ ಅದಕ್ಕೆ ಅವನು ನಗುತ್ತಾ ಅದು ಏನಂತಹ ಊಟವೆಂದು ತಿನ್ನುತ್ತೀರಿ, ಮೀನು,ಹಂದಿ,ಹಸು ಇಂತಹವು ತಿನ್ನುವುದನ್ನು ಬಿಟ್ಟು ಎಂದ ಕ್ಷಣ ನನ್ನಲ್ಲಿ ಎನೋ ಬೇಸರ ಜೋತೆಗೆ ಕೋಪವು ಬಂತು... ನಾನು ಹೇಳಿದೆ ನಾವು ಅವೆಲ್ಲ ತಿನ್ನೊಲ್ಲವೆಂದು ಏಕೆಂಬ ಪ್ರಶ್ನೆ ಮತ್ತೆ ಕೇಳಿದ ಹಿಂದುಗಳು ಏಕೆ ಹಸುವನ್ನು ತಿನ್ನೊಲ್ಲವೆಂದು ನಗುತ್ತಲಿದ್ದ ಅದಕ್ಕೆ ನಾ ಹೇಳಿದೆ ನಮ್ಮ ಧರ್ಮ ನಮಗೆ ಹೆಚ್ಚು ಅದು ಪಾಲಿಸುವವರು ನಾವು ನಿಮ್ಮ ಧರ್ಮ ನಿಮಗೆ ನಾನು ನಿಮ್ಮಲ್ಲಿನ ಕಟ್ಟುಬದ್ದತೆಗೆ ಪ್ರಶ್ನಿಸುವುದಿಲ್ಲ, ನಾವು ಹಸುವನ್ನು ಪೂಜಿಸುತ್ತೇವೆ ಅದರಲ್ಲಿ ನಾವು ದೇವರ ರೂಪ ಕಾಣುತ್ತೇವೆಂದು ಹೇಳಿದ ತಕ್ಷಣ ಹೌದು ನೀವು ಹೇಳುವುದು ಸರಿ ಒಂದೊಂದು ಜಾತಿ ಮತದಲ್ಲಿ ಅವರದೇ ಆದ ರೀತಿಯಲ್ಲಿ ಧರ್ಮವನ್ನು ಪಾಲಿಸಿಕೊಂಡು ಬರುತ್ತಾರೆ. ಕ್ಷಮಿಸಿ ನಿಮಗೆ ಬೇಸರವಾಗಿದ್ದರೆ ಎಂದರು ನಾನು ಪರವಗಿಲ್ಲ ನೀವು ತಿಳಿದುಕೊಂಡದ್ದಕ್ಕೆ ಧನ್ಯವಾದವೆಂದೇಳಿ ಕಳಿಸಿದೆ....
ಅವರುಗಳು ಎಷ್ಟೇ ಆಗಲಿ ಅರಬೀಗಳು ಅವರಿಗೆ ನಮ್ಮಲ್ಲಿನ ಪದ್ದತಿಯಾಗಲಿ ಆಚರಣೆಯಾಗಲಿ ತಿಳಿಯುವುದಿಲ್ಲ, ಅವರಿಗೇನು ಗೊತ್ತು ಹಸು ದೇವರ ಸಮಾನ ಎಂದು ಅಲ್ಲವೆ..? ಇದೆ ರೀತಿ ಹಲವು ಪ್ರಶ್ನೆ ನನ್ನ ಮನದಲ್ಲಿ ಗುನುಗುಡುತಿತ್ತು ಅವರಲ್ಲಿ ಏನೋ ನಾವು ಹಸು ಪೂಜೆ ಪುನಸ್ಕಾರವೆಂದೆಲ್ಲಾ ಹೇಳಿದೆ ಆದರೆ ನನ್ನ ಮನದಲ್ಲಿ ಒಂದು ಕಾಡಿತು ನಾವು ಹಸುವಿಗೆ ನೋಯಿಸುತ್ತಿಲ್ಲವೇ... ಅದರಿಂದ ದುಡಿಸಿಕೊಂಡು ಅದಕ್ಕೆ ನೋವು ಮಾಡುತ್ತಿಲ್ಲವೇ? ಹಸುವನ್ನು ನಮ್ಮಂತ ಪೂಜಿಸೋ ಜನರು ಕೊಲ್ಲುವುದಿಲ್ಲವೇ? ಇನ್ನು ತಿಳಿದಂತ ನಮ್ಮ ಜನರೆ ಹಲವಾರು ತಪ್ಪು ಮಾಡುತ್ತಾರೆ ಅಲ್ಲವೆ? ಹೀಗೆ ಹಲವು ಪ್ರಶ್ನೆ ನನ್ನಲ್ಲೆ ಹುಟ್ಟಿತು...ಈ ಪ್ರಶ್ನೆ ಹುಟ್ಟಲು ಅದಕ್ಕೊಂದು ಉದಾಹರಣೆ ಇಲ್ಲಿದೆ.........ನನ್ನ ಮನೆಯಲ್ಲೇ ನೆಡೆದದ್ದು ....
ನನ್ನ ತಂದೆ ತಾಯಿ ಮದುವೆಯಾದಗ ನನ್ನ ತಾಯಿಗೆ ನನ್ನ ತಾತ ಒಂದು ಹಸುವನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ ಅದು ನನ್ನ ತಾಯಿಯ ಅಚ್ಚು ಮೆಚ್ಚಿನ ಹಸುವು ಕೂಡ, ಮದುವೆಯಾದ ನಂತರ ಹಸುವನ್ನು ಅಮ್ಮ ಅಪ್ಪ ಇರೋ ಸ್ಥಳಕ್ಕೆ ನಮ್ಮ ಮಾವ ಕೊಟ್ಟು ಕಳಿಸಿದ್ದಾರೆ , ನನ್ನ ತಂದೆ ವೃತ್ತಿಯಲ್ಲಿ ಶಿಕ್ಷಕರು ಅವರು ಕೆಲಸದ ನಿಮಿತ್ತ ಹಳ್ಳಿಗಳಲ್ಲಿ ನೆಲೆಸಬೇಕಿತ್ತು ಅವರು ಅಲ್ಲಿ ನೆಲೆಸಿದ್ದು ಒಂದು ರೀತಿ ಒಳ್ಳೆಯದೆ ಆಯಿತು ಹಸುವಿನ ಪಾಲನೆಗೆ ಹೇಳಿ ಮಾಡಿಸಿದ ಜಾಗ.
ಹೀಗೆ ಅವರು ಸ್ವಲ್ಪ ದಿನಗಳು ಪೋಷಿಸಿ ಆನಂತರ ತಾತನ ಮನೆಗೆ ಕಳಿಸಿದ್ದಾರೆ ಏಕೆಂದರೆ ಅಪ್ಪಾಜಿ ಬೇರೆ ಊರಿಗೆ ವಲಸೆ ಹೋಗುವ ಕಾರಣ, ಹೀಗೆ ಹಲವು ವರ್ಷ ಕಳೆದವು ಆ ಹಸು ಒಂದು ಹೆಣ್ಣು ಕರುವಿಗೆ ಜನ್ಮವಿತ್ತು ಅಸುನೀಗಿತ್ತು, ಇನ್ನು ಆ ಪುಟ್ಟ ಕರುವಿನ ಪಾಲನೆ ಪೋಷಣೆ ಚೆನ್ನಾಗೆ ನೆಡೆದಿತ್ತು ಅದು ಬೆಳೆದ ನಂತರ ನಮ್ಮ ಮಾವಂದಿರು ಮತ್ತೆ ನಮ್ಮ ಅಮ್ಮನಿಗೆ ಕಳಿಸಿದರು ನಿನ್ನ ಮಕ್ಕಳು ಚಿಕ್ಕವು ಅವುಗಳಿಗೆ ಒಳ್ಳೆಯ ಹಾಲು ಅಲ್ಲಿ ಸಿಗದು ಎಂದು ಅಷ್ಟು ಒತ್ತಿಗೆ ನಾವು ಬೆಂಗಳೂರುಗೆ ಬಂದಿದ್ದೆವು, ಎಲ್ಲರಿಗು ತಿಳಿದ ಹಾಗೆ ಬೆಂಗಳೂರಿನಲ್ಲಿ ದೊರೆಯುವ ಹಾಲು ಹೆಚ್ಚು ಪಾಲು ನೀರೆ ಇರುತ್ತೆ....... ಅಮ್ಮನು ಕೂಡ ಕಪ್ಪುಬಣ್ಣದ ಲಕ್ಷ್ಮಿಯನ್ನು ಕರೆತಂದರು ನಮಗೊ ಅದು ಮನೆಗೆ ಬಂದ ದಿನ ಕುಶಿಯೋ ಕುಶಿ... ನಮ್ಮ ಮನೆಯ ಹಿಂದೆ ಸ್ವಲ್ಪ ಜಾಗವಿತ್ತು ಅಲ್ಲಿ ಸಣ್ಣದಾಗಿ ಕೊಟ್ಟಿಗೆ ಅದು ಬರುವಷ್ಟರಲ್ಲಿ ನಿರ್ಮಿಸಲಾಗಿತ್ತು ಆ ಲಕ್ಶ್ಮಿಯನ್ನು ನಾವೆಲ್ಲ ಪೂಜಿಸಿ ಬರಮಡಿಕೊಂಡೆವು ........ ದಿನ ಬೆಳಗಾದರೆ ನಾನು ಕೊಟ್ಟಿಗೆಗೆ ಹೋಗಿ ಅದರ ದರುಶನದ ನಂತರವೆ ಬೇರೆ ಕೆಲಸ ಇನ್ನು ಅಮ್ಮ ನಿತ್ಯ ಬೆಳ್ಳಿಗ್ಗೆ ಅದರ ಸೇವೆ ಮುಗಿಸಿ ಹಾಲು ಕರೆದು ತರುತ್ತಿದ್ದರು ಕೆಲವು ಭಾರಿ ಅಕ್ಕ , ಅಣ್ಣ, ನಾನು ಕೊಟ್ಟಿಗೆ ಸ್ವಚ್ಚಗೊಳಿಸೊ ಕೆಲಸ ಮಾಡುತ್ತಿದ್ದೆವು... ಆ ಹಸುವನ್ನು ಮೇಯಿಸಿಕೊಂಡುಬರಲು ಅಮ್ಮ ಆಚೀಚೆ ಹೋಗಿ ಬರುತ್ತಿದ್ದರು ಮತ್ತು ಕೆಲವುಸಾರಿ ಮನೆಯ ಹತ್ತಿರವೇ ಬಿಟ್ಟು ಬಿಡುತ್ತಿದ್ದರು ಅದು ಮೇಯುತ್ತಾ ಎತ್ತಲೋ ಹೊಗಿಬಿಡುತ್ತಿತ್ತು ಅಮ್ಮ ಹುಡುಕಿ ಹುಡಿಕಿ ಸುಸ್ತಾಗಿ ಬೇಸರದಿ ಬರುತ್ತಿದ್ದರು...... ಮನೆಗೆ ಬಂದು ಇದು ಎಲ್ಲೊಯಿತೋ ತಿಳಿಯದು ಹೇಗೋ ಯಾಮಾರಿಸಿ ಹೋಗುತ್ತಲ್ಲಾ ಇದಕ್ಕೇನು ಮಾಡೋದು ಎಂದು ಹೇಳುತ್ತಿದ್ದರು... ನಾನು ಅಮ್ಮ ಅದು ಮನೆಗೆ ಬರದಿದ್ದರೆ ಎನಮ್ಮ ಮಾಡೋದು ಎಂದು ಕೇಳುತ್ತಲೇ ಇದ್ದೆ ನನಗೆ ತುಂಬ ಬೇಸರ ಅಳು ಕೂಡ ಬರುತ್ತಿತು.... ಅಮ್ಮ ಅಳಬೇಡ ಲಕ್ಷ್ಮಿ ಬಂದೆ ಬರುತ್ತಾಳೆ ಅವಳು ಹಾಗೆಲ್ಲ ಬಿಟ್ಟು ಹೋಗೋಳಲ್ಲ ಎಂದು ನನಗೆ ಸಮಾದಾನ ಮಾಡುತ್ತಲಿದ್ದರು.... ಅದು ನಿಜವಾಗಿಯೂ ನಮ್ಮ ಬಿಟ್ಟು ಹೋಗಲಿಲ್ಲ ೨ ದಿನಗಳ ನಂತರ ನಮ್ಮ ಮನೆಯ ಮುಂದೆ ಬಂದು ನಿಂತಿತ್ತು .... ಅಮ್ಮ ಎಲ್ಲೆ ಹೊಗಿದ್ದೆ ಹೀಗೆ ಹೋದರೆ ನಾವೇನು ಅಂದುಕೋ ಬೇಕು ಹೇಳು ನಿನಗೆ ಇಷ್ಟ ಇಲ್ಲವೆಂದರೆ ಹೇಳು ಎಂದು ಏನೆನೋ ಬಡಬಡಿಸುತ್ತಿದ್ದರು ನನಗೋ ಸಧ್ಯ ಬಂತ್ತಲ್ಲ ಎಂದು ಕುಶಿ.....
ಹೀಗಿದ್ದ ನಮ್ಮ ಮನೆಯ ಲಕ್ಷ್ಮಿ ಒಂದು ದಿನ ಗಂಡು ಕರುವಿಗೆ ಜನ್ಮನೀಡಿತು.... ತನ್ನ ಮಗುವಿನೊಂದಿಗೆ ಲಕ್ಷ್ಮಿ ಕೂಡ ಸಂತೋಷದಿಂದ ಇದ್ದಳು ನಮಗೆ ಆ ಸಮಯದಲ್ಲಿ ಹೆಚ್ಚು ಹಾಲು ಸಿಗುತ್ತಿತು ಅದರಿಂದ ಗಿಣ್ಣು ಕೂಡ ತಯಾರಗುತ್ತಿತ್ತು... ಈ ಹಾಲಿಂದ ಹಲವಾರು ಅಕ್ಕಪಕ್ಕದ ಜನ ಕೂಡ ಗಿಣ್ಣು ತಿನ್ನುವಂತಾಯಿತು, ಮತ್ತೆ ಇನ್ನು ಕೆಲವು ಜನ ನಮಗೆ ಈ ಹಸುವಿನ ಹಾಲು ಕೊಡಿ ನಮ್ಮ ಮನೆಯಲ್ಲಿ ಸಣ್ಣ ಮಗುವಿದೆ ಕರಿ ಹಸುವಿನ ಹಾಲು ಮಕ್ಕಳಿಗೆ ಒಳ್ಳೆಯದು ಎಂದೆಲ್ಲಾ ಬರುತ್ತಿದ್ದರು.... ಆದರೆ ನಾವು ಹಾಲು ಯಾರಿಗು ಮಾರುತ್ತಲಿರಲಿಲ್ಲ ನಮ್ಮ ಮನೆ ಮಟ್ಟಿಗೆಂದೆ ಹಾಲು ಬಳಸಿತ್ತಿದ್ದೆವು ಆದರು ಕೆಲವರು ಎನು ಹೇಳಿದರು ಬಿಡದೆ ನನಗೆ ಬೇಕೆ ಬೇಕೆಂದು ಪಟ್ಟು ಹಿಡಿದು ಕೂರುತ್ತಿದ್ದರು ಆಗ ಅಮ್ಮ ಮಕ್ಕಳಿಗಲ್ಲವೆ ಎಂದು ಕೊಟ್ಟು ಕಳುಹಿಸುತ್ತಿದ್ದರು... ನನ್ನ ಆ ಕಪ್ಪುಲಕ್ಷ್ಮಿ ನಮ್ಮ ಮನೆಯ ಅಲ್ಲದೆ ಅಕ್ಕಪಕ್ಕದ ಮನೆಯವರಿಗೆಲ್ಲ ಲಕ್ಷ್ಮಿಯಾಗಿದ್ದಳು ಪ್ರತಿ ಶುಕ್ರವಾರ ಸೋಮವಾರ ಬಂತ್ತೆಂದರೆ ಸಾಕು ಸಾಲು ಸಾಲಗಿ ಪೂಜಿಸಲು ನಿಲ್ಲುತ್ತಿದ್ದರು.....
ಹೀಗೆ ಸುಮಾರು ದಿನಗಳು ನಮ್ಮೊಂದಿಗಿದ್ದ ಲಕ್ಷ್ಮಿ ನಮ್ಮನು ಬಿಟ್ಟು ದೂರ ಹೋಗಬೇಕಾಯಿತು....... ಏಕೆಂದರೆ ನಮ್ಮ ಮನೆಯ ಹಿಂದಿನ ಜಾಗದಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾದ ಕಾರಣ ನಮ್ಮ ಊರಿನಲ್ಲಿದ್ದ ಅಪ್ಪನ ತಮ್ಮಂದಿರಿಗೆ ಕಳಿಸೋಣವೆಂದು ತೀರ್ಮಾನಿಸಿದರು ಚಿಕ್ಕಪ್ಪಂದಿರು ಅಕ್ಕಪಕ್ಕ ಮನೆಯಲ್ಲಿದ್ದ ಕಾರಣ ಕರು ಒಬ್ಬರಿಗೆ ಹಸು ಒಬ್ಬರಿಗೆ ಯಾರಿಗೆ ಯಾವುದು ಬೇಕೋ ಅದು ತೆಗೆದುಕೋಳ್ಳಿ ಎಂದು ಹೇಳಿ ಕಳುಹಿಸಿದ್ದೆವು....ಅದು ಹೋಗುವ ದಿನ ನಮ್ಮ ಅಮ್ಮನಿಗೆ ದುಃಖ ತಡೆಯಲಾಗಲಿಲ್ಲ ಅಳುತ್ತಲೆ ಕಳಿಸಿದರು ನಂತರ ಮೈದುನಂದರಿಗೆ ಹೇಳಿದರು ಅದು ನನ್ನ ಅಪ್ಪನ ಮನೆಯ ಉಡುಗೊರೆ ಅಲ್ಲದೆ ಅದು ನನಗೆ ಪ್ರೀತಿಪಾತ್ರ ದಯವಿಟ್ಟು ಚೆನ್ನಾಗಿ ನೋಡಿಕೋಳ್ಳಿ ಅದರ ಆರೈಕೆಗೆ ಬೇಕಾದ ಹಣ ಕೋಡುತ್ತೇನೆಂದು... ನಾವು ಇನ್ನು ಚಿಕ್ಕವರಾದರು ನಮಗೂ ಆ ಹಸುವಿನೊಂದಿಗೆ ಏನೋ ನಂಟು ಬೆಳೆದಿತ್ತು..... ನನಗೆ ಈ ಕ್ಷಣದಲ್ಲೂ ಅದರ ಚಿತ್ರಣ ಕಣ್ ಮುಂದೆ ಬರುತ್ತದೆ... ಜೊತೆಗೆ ಅಳು ಕೂಡ..........
ಆಂದು ನಮ್ಮಿಂದ ತೆರಳಿದ ಲಕ್ಷ್ಮಿಯನ್ನು ನೋಡಲು ಆಗಾಗ ಊರಿಗೆ ಹೋಗುತ್ತಿದ್ದೆವು ಹೋದಾಗ ಅದರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದೆವು,ಅದು ಕೂಡ ಹಾಗೆ ನಮ್ಮನು ಬಲು ಬೇಗ ಗುರುತಿಸುತ್ತಿತು ನೋಡಿದ ಕೂಡಲೆ ಅಂಬಾ ಎಂದು ಕೂಗುತಿತ್ತು.. ಅಲ್ಲಿ ತಂಗಿರೊವರೆಗು ಅದರ ಹಾಲು ಮೊಸರು ಬೆಣ್ಣೆ ಎಂದೆಲ್ಲ ಕೇಳಿ ತಿನ್ನುತಿದ್ದೆವು ಮತ್ತು ಮತ್ತೆ ಮರಳಿ ಬರುವಾಗ ಡಬ್ಬಿಗಳಲ್ಲಿ ತುಂಬಿಸಿಕೊಂಡು ಬರುತ್ತಿದ್ದೆವು.... ಇವೆಲ್ಲ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿ ಹೋಯಿತು ಆ ನಮ್ಮ ಲಕ್ಷ್ಮಿ ಸ್ವಲ್ಪದಿನಗಳ ಮಟ್ಟಿಗೆ ಆರೋಗ್ಯ ತಪ್ಪಿದೆ ಅಲ್ಲದೆ ಅದು ಹಾಲು ಕೋಡುವುದು ನಿಲ್ಲಿಸಿದೆ ಇದೆಲ್ಲ ನಮಗೆ ತಿಳಿದಿತ್ತು ಆದರೆ ನಮ್ಮ ಅಮ್ಮ ಹೇಳುತ್ತಿದ್ದರು ಚಿಕ್ಕಪ್ಪನಿಗೆ ಅದು ಹಾಲು ಕೋಡದಿದ್ದರು ಸರಿ ಹಾಗೆ ಇಟ್ಟುಕೋಳ್ಳಿ ಬೇರೆನು ಮಾಡಬೇಡಿ ಎಂದು.... ಇದೆ ಮಾತು ಬಹಳ ದಿನ ನೆಡೆದಿತ್ತು ಸ್ವಲ್ಪ ಸಮಯ ನಾವು ಊರಿಗೆ ಹೋಗದಿರುವಾಗ ನನ್ನ ಚಿಕ್ಕಪ್ಪ ಹಸುವನ್ನು ಯಾರೋ ಕಟುಕನಿಗೆ ಮಾರಿಬಿಟ್ಟಿದ್ದರು.... ನಾವು ಹೋಗಿ ಕೇಳಿದ್ದಕ್ಕೆ ಅದಕ್ಕೆ ಆರೋಗ್ಯ ಸರಿ ಇರಲಿಲ್ಲ ಅದು ಇದು ಎಂದು ಸಮಜಾಯಿಸಿ ಕೊಟ್ಟರು ಸ್ವಲ್ಪ ದಿನಗಳ ನಂತರ ತಿಳಿಯಿತು ಅದು ಯಾರೋ ಹೇಳಿದ್ದು ದನ ಕಡಿಯೊ ಸಾಬರಿಗೆ ಕೂಟ್ಟಾರೆಂದು...... ಇದು ನಮ್ಮಗೆ ನಂಬಲಾರದ ಅತಿ ಆಘಾತಕಾರಿ ವಿಷಯ ... ಜೊತೆಗೆ ಅಂದು ನಮ್ಮ ಮನೆಯಲ್ಲಿ ನಿಜವಾಗಿಯು ಯಾರು ಊಟಮಾಡಲಿಲ್ಲ ಈ ಘಟನೆ ಎಂದೊ ಮರೆಯಲಾಗದು.......
ಇನ್ನು ಲಕ್ಷ್ಮಿಯ ಕರು ಅದು ಗಟ್ಟಿಮುಟ್ಟಾಗಿ ಇರೋವರೆಗು ಇನ್ನೊಬ್ಬ ಚಿಕ್ಕಪ್ಪ ಅದನ್ನು ಹೊಲ ಊಳಲು, ಬಿತ್ತಲು ಬಳಸಿಕೂಂಡರು ಅದರ ಶಕ್ತಿ ಕುಂದಿದ ತಕ್ಷಣ ಅದನ್ನು ಮಾರಿದರು......ಇದು ಏಕೆ ಹೀಗೆ ಮಾಡಿದರೆಂದು ಕೇಳಿದರೆ ಅಯ್ಯೋ ಅದು ಏನು ಉಪಯೋಗಕ್ಕೆ ಬರೋದಿಲ್ಲ ಇನ್ನು ಅದು ಇದ್ದು ಏನು ಸಾರ್ಥಕ ಅದು ಇದ್ದಷ್ಟು ಖರ್ಚು....ಹೀಗೆ ಉಡಾಫೆ ಮಾತುಗಳು.....ಇನ್ನು ನನ್ನ ಅಪ್ಪ ಹೆಚ್ಚು ಮಾತನಾಡೊಲ್ಲ ತಮ್ಮಂದಿರು ಅಲ್ಲದೆ ಅವರು ಮಾತು ಕಡಿಮೆ ಇನ್ನು ಅಮ್ಮ ಮಾತನಾಡಿದರೆ ಓಹ್ ಅತ್ತಿಗೆಯೋ ಮಾತು ಜಾಸ್ತಿ ಎಂಬ ತೀರ್ಮಾನ ಜೊತೆಗೆ ಇವರು ಕೋಡೋ ದುಡ್ಡಿಗೆ ಅದನ್ನು ಸಾಕಲು ಆಗುತ್ತ ಎಂಬ ಮಾತು.......
ನಾವು ಇದೆಲ್ಲ ನೋಡಿ ಬಲು ಬೇಸರ ಪಟ್ಟು ಬಿಟ್ಟೆವು ನನಗೆ ಆನಂತರ ಅನಿಸಿತು ಓಹ್ ನಾವು ಹಸು ಕಳಿಸದಿದ್ದರೆ ಹೀಗೆ ಆಗುತ್ತಲಿರಲಿಲ್ಲ ನಮ್ಮದೆ ತಪ್ಪು ಎಂದು, ಮತೊಮ್ಮೆ ಅನ್ನಿಸಿತು ಅಂದು ಚಿಕ್ಕಪ್ಪಂದಿರು ನಾವು ನೋಡಿಕೋಳ್ಳಲಾಗುವುದಿಲ್ಲ ನಿಮ್ಮ ಹಸು ನೀವು ತೆಗೆದುಕೊಂಡು ಹೋಗಿ ಇಷ್ಟು ದಿನ ನೋಡಿಕೊಂಡೆವು ಇನ್ನು ಸಾಧ್ಯವಿಲ್ಲ ಎಂದು ಹೇಳಿದ್ದರೆ ಹಸು ತಾನಾಗಿ ಸಾಯೋವರೆಗು ನಮ್ಮೂಂದಿಗೆ ಇರುತ್ತಿತ್ತೇನೋ ಎಂದೆನಿಸಿತ್ತು.........ಇಲ್ಲಿ ಯಾರ ತಪ್ಪು ಗೊತ್ತಿಲ್ಲ......ಒಟ್ಟಲ್ಲಿ ನಮ್ಮ ಜನರಲ್ಲೊ ಮಾನವೀಯತೆ ನಶಿಸುತ್ತಿದೆ.........
ಇಂದು ಈಜಿಪ್ಟ್ ನವರಾದ ಸಹೋದ್ಯೊಗಿಯ ಜೊತೆ ಸ್ವಲ್ಪ ಮಾತು ನೆಡೆದಿದ್ದಕ್ಕೆ ನನ್ನ ಮನದಲ್ಲಿದ್ದ ಹಳೆಯ ಪುಟಗಳು ತಿರುವಿ ನೋಡೂಹಾಗೆ ಆಯ್ತು.......

5 comments:

Ittigecement said...

ಮನಸು....
ನನ್ನ ಕಣ್ಣಲ್ಲಿ ನೀರು ಬಂದಿತು...
ಭಾವ ಪೂರ್ಣವಾಗಿ ಬರೆದಿದ್ದೀರಿ...
" ಆಕಳು" ನಮ್ಮ ತಾಯಿಗೆ ಸಮಾನ..
ನೀವಾದರೂ ಆಗ ಅಸಹಾಯಕರಾಗಿದ್ದೀರಿ..
ಅದರೂ ನಿಮ್ಮಮ್ಮ ಅವರಿಗೆ ಜೀವಮಾನ ಪೂರ್ತಿ ಆ ನೋವು ಕಾಡುತ್ತಲೆ ಇರುತ್ತದೆ....
ಅದೂ ತವರು ಮನೆಯ ನೆನಪಿನ ಗುರುತು ಹೀಗಾಯಿತಲ್ಲ ಎಂಬ ಕೊರಗು...

ಚೆನ್ನಾಗಿ ಬರೆದಿದ್ದೀರಿ..
ಧನ್ಯವಾದಗಳು...

ಮನಸು said...

ಧನ್ಯವಾದಗಳು ಸರ್,
ಏನು ಮಾಡುವುದು ನೆಡೆಯಬಾರದಿತ್ತು ನಡೆದುಹೋಯಿತು, ಆ ಆಕಳು ಯಾವ ಪುಣ್ಯಾತ್ಮನ ಆಹಾರವಾಗಿತ್ತೋ ಅವನು ಪುಣ್ಯವಂತ ಎಂದು ಅಂದುಕೋಬೇಕು ಅಷ್ಟೆ.

ಕೆಲವು ನಮ್ಮ ಜೀವನದಲ್ಲಿ ಮರೆಯಲಾರದ ನೋವಿನ ಘಟನೆಗಳು ಅಗಾಗ ಮೆಲುಕು ಆಕುತ್ತವೆ ಅದನ್ನು ಸಹಿಸಿಕೊಳ್ಳಲೇ ಬೇಕು...
ನಮ್ಮ ಅಮ್ಮ ಈಗಲೂ ಹೇಳುತಿರುತ್ತಾರೆ ನನ್ನ ಹಸುವನ್ನು ಅನ್ಯಾಯವಾಗಿ ಕಳೆದುಬಿಟ್ಟೆ ಎಂದು...


ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

Prabhuraj Moogi said...

"ನನ್ನ ಊರು ಕರುನಾಡು ಈಗ ಇರೋದು ಮರಳುಗಾಡು" ಅಂತಾ ನೀವು ಬರೆದಿರೋದು ಸೂಪರ್... ಹಸು ಹತ್ಯೆಯ ಬಗ್ಗೆ ನನಗೂ ಒಳ್ಳೆ ಅಭಿಪ್ರಾಯ ಇಲ್ಲ, ಅದರೂ ಅದು ಇನ್ನೊಂದು ಧರ್ಮದಲ್ಲಿ ಸರಿಯೆಂದಿರುವುದು ವೈಚಿತ್ರ್ಯ. ಮರಳುಗಾಡಿನಲ್ಲಿ ಮೃದು ಮನಸಿನ ಭಾವನೆಗಳ ಬಿತ್ತರಿಸುತ್ತಿರುವ ತಮಗೆ ನನ್ನ ಶುಭಹಾರೈಕೆ.

ಮನಸು said...

ಧನ್ಯವಾದಗಳು ಪ್ರಭು, ನಿಮಗೆ ಸ್ವಾಗತ ನನ್ನ ಅಂಕಣಕ್ಕೆ ...
ಧರ್ಮ ಬೇರೆಯಾದರೇನು ಮಾನವೀಯತೆ ಒಂದೇ ಅಲ್ಲವೇ......... ಅದು ಎಲ್ಲರಲ್ಲಿ ಇರಬೇಕು ಅಲ್ಲವೇ?

Anonymous said...

Hey Nice one!! Keep Writing....