ಶುಕ್ರವಾರದ ಪೂಜೆಯವೇಳೆಗೆ ಎಲ್ಲಾ ಕೂಟದ ಸದಸ್ಯರು ತಮ್ಮ ತಮ್ಮ ಕುಟುಂಬ ಸಮೇತರಾಗಿ ಬರುತ್ತಿರುವುದು ಕಂಡರೆ ಎಲ್ಲೋ ಮದುವೆ ಸಮಾರಂಭ ನೆಡೆಯುತ್ತಿರಬೇಕು ಇಷ್ಟು ಚೆಂದವಾದ ಉಡುಗೆ ತೊಡುಗೆ ತೊಟ್ಟು ಸಾಲು ಸಾಲಾಗಿ ಬೆಳ್ಳಂಬೆಳ್ಳಗ್ಗೆ ಅದು ರಜೆಯ ದಿನ ತಮ್ಮ ನಿದ್ರೆ,ತಮ್ಮ್ ತಮ್ಮ ಕೆಲಸ ಎಲ್ಲವನ್ನು ಬದಿಗಿಟ್ಟು, ಹೆಂಗಳೆಯರು ರೇಷ್ಮೆ ಸೀರೆ, ಒಡವೆ, ಕೈಗೆ ಬಳೆಗಳ ಸಿಂಗಾರ, ಗಂಡಸರು ಪಂಚೆ, ಶಲ್ಯದಾರಿಗಳಾಗಿ ಬರುತ್ತಿದ್ದರೆ ಅದು ಮದುವೆ ಸಮಾರಂಭವೇ ಇರಬೇಕೆಂದು ಊಹಿಸುವಷ್ಟು ಬಲವಾಗಿತ್ತು ಈ ಸಮಾರಂಭದ ವಾತಾವರಣ ತವರೊರ ನೆನಪಿನ ದಿಬ್ಬಣವನ್ನೆ ತೇರಿನೊಂದಿಗೆ ಹೊತ್ತು ತಂದಿತ್ತು.
ಅಲ್ಲಿ ನೆರೆದಿದ್ದ ಸಾಲುಗಳು ಯಾವುದೆ ಮದುವೆ ಸಮಾರಂಭಕ್ಕೆ ಬರುತ್ತಿದ್ದವರಲ್ಲ ಅಲ್ಲಿ ನಮ್ಮ ಕನ್ನಡಿಗರೆಲ್ಲ ಸೇರಿ ದಾಸರ ಆರಾಧನೆಯನ್ನು ನೆರೆವೇರಿಸುತ್ತಿದ್ದರು. ನಮ್ಮ ಕನ್ನಡ ಕೂಟದ ಈ ವರ್ಷದ ಮೂದಲ ಸಮಾರಂಭ ಈ ವರ್ಷಕ್ಕೆ ೨೫ರ ಹರಯಕ್ಕೆ ಕಾಲಿಟ್ಟ ಕುವೈಟ್ ಕನ್ನಡ ಕೂಟವೆಂಬ ಕನ್ನಡ ಕನ್ಯೆಗೆ ಬಲು ಅಪರೂಪದ ಅವಿಸ್ಮರಣೀಯ ವರ್ಷ.. ಈ ವರ್ಷ ಎಂದಿಗೊ ಮರಯದ ವರ್ಷವೆಂದು ಮಾಡಲು ಅವಿರತ ಪ್ರಯತ್ನದಲ್ಲಿ ತೊಡಗಿರುವ ಈ ವರ್ಷದ ಸದಸ್ಯ ಸಮಿತಿಗೆ ಹಣದುಬ್ಬರದ ಒಡೆತ ತಾಗಿರುವುದು ಸಹಜ ಕೂಡ ಇದೆಲ್ಲವನ್ನು ಒರಿತು ಪಡಿಸಿ ಇಲ್ಲಿ ನೆಲೆಸಿರುವ ನಮ್ಮ ಭಾರತೀಯರು ಯಾವುದೆ ತೊಂದರೆ ಪಡದೆ ತಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗಲೆಂದು ಸತ್ಯನಾರಾಯಣ ಪೊಜೆಯೊಂದಿಗೆ ಸಮಾರಂಭವನ್ನು ಪ್ರಾರಂಭಿಸಿದರು .ಈ ಕಾರ್ಯಕ್ರಮಕ್ಕೆ ಸ್ವಾಗತ ವೇದಿಕೆ ಮಾತ್ರ ನಿಜಕ್ಕೊ ಖುಶಿ ಕೊಟ್ಟಿತು ಸಂಪ್ರದಾಯವಾಗಿ ಕುಂಕುಮ ಬಳೆ ಸಿಹಿ ಹಾಗು ಈ ಮರಳಲ್ಲಿ ಮಲ್ಲಿಗೆ ಹೂ ಎಲ್ಲೂ ಕಾಣ ಸಿಗದು ಅದರಲ್ಲೂ ತವರೂರಿಂದ ತರಿಸಿ ಎಲ್ಲರಿಗು ಮಲ್ಲಿಗೆಯ ಹೂ ಮಾಲೆ ನೀಡಿ ಎಲ್ಲರನ್ನು ಆಹ್ವಾನಿಸುತ್ತಿದ್ದ ಪರಿ ಬಲು ಪ್ರೀತಿಯ ಸಿರಿಯೇ ಸರಿ.
ಸುಮಾರು ೭.೩೦ ಕ್ಕೆ ಪ್ರಾರಂಭವಾದ ಪೂಜಾವಿಧಿಗಳು ಸರಾಗವಾಗಿ ನೆರೆವೇರಿತು. ಸತ್ಯನಾರಯಣ ಪೂಜೆಯನ್ನು ನಮ್ಮ ಊರುಗಳಲ್ಲಿ ಶಾಸ್ತ್ರೋಕ್ತವಾಗಿ ಹೇಗೆ ನೆರೆವೇರಿಸುತ್ತಾರೋ ಅದೇ ತರಹ ಎಲ್ಲಾ ವಿಧಿವಿಧಾನಗಳು ಕಂಡುಬಂದವು. ಈ ಪೂಜೆಯ ನಂತರ ದಾಸರ ಆರಾಧನ ಕಾರ್ಯಕ್ರಮ ಮೊದಲು ಪ್ರಾರಂಭ ಸಂಗೀತದೊಂದಿಗೆ ಆನಂತರ ವಾದ್ಯಗೋಷ್ಠಿ ಕೂಟದ ಮಕ್ಕಳು ಕಲಿತಿರುವ ವಾದ್ಯಗಳ ವೃಂದ ಬಲು ತಂಪನ್ನು ಬೀರಿತ್ತು...ಎಲ್ಲರು ತಲೆದೂಗುವಂತೆ ಮಾಡಿತ್ತು..
ಆನಂತರ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ಇಲ್ಲಂತು ಹೇಳ ತೀರದ ನಗೆ, ಕುತೊಹಲ, ಆಶ್ಚರ್ಯ, ಎಲ್ಲವನ್ನು ಒಟ್ಟಿಗೆ ಮೂಡಿಸಿತ್ತು ಆ ಮಕ್ಕಳು ದೇವರಲ್ಲಿ ಮನೆಮಾಡಿದಂತಿತ್ತು... ಅವರ ಆ ಬೆಳವಣಿಗೆ ಹಿಂದೆ ತಂದೆ ತಾಯಿಗಳ ಸಾರ್ಥಕತೆ ಎದ್ದು ಕಾಣುತ್ತಿತ್ತು.. ಹಾಲು ಕುಡಿಯುವ ಕಂದಮ್ಮನಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳ ವಿವಿಧ ದೇವರ ವೇಷ ಧರಿಸಿ ಬಂದ ಆ ಮಕ್ಕಳ ನೋಡಲು ಎರಡು ಕಣ್ಣು ಸಾಲಾದಗಿತ್ತು... ಆ ವೇಷ ಧರಿಸುವುದಲ್ಲಿರಲಿ ಆ ಭೂಷಣಕ್ಕೆ ತಕ್ಕ ಮಾತು ನಡೆ ಎಲ್ಲವು ಬೆರಗು ಮಾಡಿತ್ತು... ಈ ಸ್ಪರ್ಧೆಯ ನಂತರ ಕೃಷ್ಣನ ಬಾಲಲೀಲೆಯನ್ನು ನೃತ್ಯರೂಪದಲ್ಲಿ ಪ್ರದರ್ಶಿಸಿದರು ಆಡಿಸಿದಳೇಶೋಧೆ.......ಗಾನಸುಧೆಗೆ ಯಶೋಧಮಯಿ ಪಾತ್ರಧಾರಿ ಜೊತೆ ಪುಟ್ಟ ಕಂದಮ್ಮಗಳ ನೃತ್ಯ ಬಲು ಸೊಗಸೆನಿಸಿತು.
ಆನಂತರ ಚಿಣ್ಣರಿಗೆ ಮತ್ತೊಂದು ಸ್ಪರ್ಧೆ, ಒಂದೊಂದು ಪಂಥಗಳೆಂದು ವಿಂಗಡಿಸಿ ಆ ಮಕ್ಕಳು ದಾಸರ ಹಾಡುಗಳನ್ನು ಹೇಳುವಾಗೆ ಮಾಡಿದ್ದರು ಆ ಮಕ್ಕಳು ದಾಸರ ಪದ ಹೇಳುತ್ತಿದ್ದರೆ ನಮ್ಮಕ್ಕಳು ಇಷ್ಟು ಸುಲಲಿತವಾಗಿ ದಾಸರಪದಗಳನ್ನು ಬಾಯಿಪಾಠಮಾಡಿದ್ದ ರೀತಿ ನಿಬ್ಬೆರಗಾಗುವಂತೆ ಮಾಡಿತ್ತು. ಹಾಡಿಗೆ ತಕ್ಕ ವೇಶಭೂಷಣ, ತಾಳಮೇಳಗಳು ಕೂಡ ಜೊತೆಗೂಡಿತ್ತು... ಈ ಚಿಣ್ಣರ ಹಾಡಿಗೆ ಪ್ರೋತ್ಸಾಹಕ ನಿರ್ವಹಣೆ ಹೊಣೆ ಹೊತ್ತ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ಅರ್ಪಿಸಲೇಬೇಕು.
ಇವೆಲ್ಲದರ ಮದ್ಯೆ ದಾಸರು ಶರಣರು ಸಂತರು ಸಹ ಬಂದು ಹೋಗಿದ್ದರು ಅಂದರೆ ಎಷ್ಟೊ ಜನರಿಗೆ ದಾಸಶರಣಸಂತರೆಂದರೆ ೧ ಅಥವಾ ೨ ಹೆಸರುಗಳು ಮಾತ್ರ ತಿಳಿದಿತ್ತು ಆದರೆ ಇಲ್ಲಿ ಹೆಚ್ಚು ದಾಸರುಗಳು ಶರಣರುಗಳನ್ನು ಎಲ್ಲರಿಗು ತಿಳಿಸೊ ಒಂದು ನಿರೂಪಣೆ ಕೂಡ ನೆರೆವೇರಿಸಿದ್ದರು ಈ ನಿರೂಪಣೆ ಎಲ್ಲರಿಗು ಹೆಚ್ಚು ಮಾಹಿತಿಯನ್ನು ಒದಗಿಸಿದೆಯೆಂದು ಹೇಳಲು ಬಯಸುತ್ತೇನೆ.
ಇಷ್ಟೆಲ್ಲರ ನಂತರ ಮಹಿಳೆಯರ ಭಜನೆ, ಅಲ್ಲೂ ಸಹ ಸಂಗೀತ ಗಂಧವೇ ಅರಿಯದ ಕೆಲವು ಮಹಿಳೆಯರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಡಿನ ತರಬೇತಿ ಪಡೆದು ಆ ಕುವೈಟ್ ಕನ್ನಡ ಕೂಟವೆಂಬ ವೇದಿಕೆಗೆ ಮೆರುಗು ಮೂಡಿಸಿದರು.. ಇಷ್ಟೆಲ್ಲ ನೆಡೆದರು ಸ್ವಲ್ಪವೂ ಬೆಸರವಿಲ್ಲದೆ ಕುಳಿತ ಎಲ್ಲಾ ಕನ್ನಡ ಕೂಟ ಸದಸ್ಯರು ಎಲ್ಲಾ ಕಾರ್ಯಕ್ರಮಕ್ಕೆ ಪೋತ್ಸಾಹ ಪೂರ್ವಕ ಚಪ್ಪಾಳೆ ಪ್ರೇರಣಾಪೂರ್ವಕವಾಗಿತ್ತು.
ಹತ್ತು ಹಲವಾರು ಕಾರ್ಯಕ್ರಮಗಳು ಜರುಗಿದ ನಂತರ ಕುವೈಟ್ ನಲ್ಲಿ ಹಿಂದೊ ದೇವರುಗಳು ಬಂದುಬಿಟ್ಟಿದ್ದರು ನಮ್ಮನ್ನೆಲ್ಲಾ ಆಶೀರ್ವದಿಸಲು ಹಾಗೆಂದು ನಿಜವೆಂದುಕೊಳ್ಳಬೇಡಿ ಇಲ್ಲಿ ಆ ದೇವರು ಪ್ರತ್ಯಕ್ಷವಾಗಲು ನಾವೇನು ಅಂತಹ ನಿಷ್ಟಾವಂತ ಭಕ್ತರೇನಲ್ಲ, ನಿಜ ದೇವರನ್ನು ಕರೆಸಿಕೊಳ್ಳೊದು ಕಷ್ಟವೆಂದು ಇಲ್ಲಿ ಕೃಷ್ಣನ ದಶಾವತಾರ ರೂಪವನ್ನು ಹಲವು ಮಕ್ಕಳು ವೇಷಧಾರಿಯಾಗಿ ಬಂದಿದ್ದರು ಅವರೆಲ್ಲರು ಬರುತ್ತಿದ್ದ ಹಾಗೆ ಗಂಡಸರಿಂದ ಭಜನಾ ನೃತ್ಯ ಕೂಡ ಮೂಡಿಬಂತು. ಹಾಡಿಗೆ ತಕ್ಕ ತಾಳ ತಾಳಕ್ಕೆ ತಕ್ಕ ನೃತ್ಯ ಬಲು ಮೋಡಿ ಮಾಡಿತ್ತು.. ಇಷ್ಟೆಲ್ಲಾ ನೃತ್ಯ, ಗಾಯನ,ಭೂಷಣಗಳೊಂದಿಗೆ ನಮ್ಮ ಕೂಟದ ಭಜನ ಮಂಡಳಿಯ ಗಂಡಸರಿಂದ ಸುಮಾರು ೬ ದಾಸರ ಹಾಗು ದೇವರ ಹಾಡುಗಳು ಕೇಳಿಬಂದವು ಈ ಹೊತ್ತಿಗಾಗಲೇ ಊಟದ ಸಮಯಾ ಮೀರಿತ್ತು ಆದರು ಎಲ್ಲ ಕೂಟದ ಸದಸ್ಯರು, ಮಕ್ಕಳು ಸ್ವಲ್ಪವೂ ಬೇಸರ, ತಾತ್ಸರವಾಗಲಿ ತೊರದೆ ಎಲ್ಲವನ್ನು ಮನಪೂರ್ವಕವಾಗಿ ಮನತಣಿಸಿಕೊಂಡಿದ್ದು ಮಾತ್ರ ಬಲು ಸಂತೋಷಕರ, ಇನ್ನು ಮುಕ್ತಾಯ ಸಮಾರಂಭಕ್ಕೆ ಬರುವ ಹೊತ್ತು ಈ ಭಜನ ಕಾರ್ಯಕ್ರಮದೊಂದಿಗೆ ಪೂಜಾವಿಧಿಯು ಕೂಡ ನೆರೆವೇರುತ್ತಿತ್ತು ಕೊನೆಯಲ್ಲಿ ಮಂಗಳಾರತಿಯ ಗಾಯನದೊಂದಿಗೆ ದಾಸರ ಪೂಜೆ ಕೂಡ ನೆರವೇರಿತು ಎಲ್ಲ ಸದಸ್ಯರು ದೇವರ ಕೃಪೆಗೆ ಪಾತ್ರರಾಗಿ ದೇವರಿಗೆ ವಂದಿಸುತ್ತಾ ನಡೆದರು...ಇಷ್ಟು ಸಾಂಘವಾಗಿ ನೆಡೆದ ಸಮಾರಂಭಕ್ಕೆ ಮತ್ತೂಂದು ಭಾರಿ ಭೂಷಣವೆಂದರೆ ಭೂರಿ ಭೋಜನ... ಇದು ಬರಿ ಭೋಜನವಲ್ಲ ಮೃಸ್ಟಾನ್ನ ಭೋಜನ....ಎಲ್ಲರ ಹೊಟ್ಟೆ ಸಂತೃಪ್ತಿ ಪಡಿಸಿದ ಭೋಜನ ಹಬ್ಬದೂಟ ಮಾಡಿಸಿತು ಕನ್ನಡ ಕೂಟ...ಊಟವೆಲ್ಲ ಪೂರೈಸಿ ಎಲೆ ಅಡಿಕೆ (ಬೀಡಾ) ಸವಿದು ಹೊರಡೊ ಹೊತ್ತಿಗೆ ಮತ್ತದೆ ಸ್ವಾಗತ ವೇದಿಕೆ ಬದಲಿಗೆ ಬೀಳ್ಕೊಡಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು ಮತ್ತೊಮ್ಮೆ ಅವರ ಪ್ರೀತಿ ಪೂರ್ವಕ ನಗು, ವಂದನೆಗಳು ಎಲ್ಲರೊಟ್ಟಿಗೆ ತಾಂಬೂಲದೊಂದಿಗೆ ಬೀಳ್ಕೊಟ್ಟರು. ಇವೆಲ್ಲಕ್ಕೂ ರುವಾರಿಗಳಾದ ಈ ವರ್ಷದ ಕಾರ್ಯನಿರ್ವಾಹಕ ಸಮಿತಿಗೆ ನಾವೆಲ್ಲ ಆಭಾರಿಗಳು ಇವರ ಜೊತೆ ಕಾರ್ಯನಿರ್ವಹಿಸಿದ ಸಾರ್ವಜನಿಕ ಸಂಪರ್ಕ ಸಮಿತಿಯ ಕೆಲಸಗಳು ಕೂಡ ಚಾಚು ತಪ್ಪದೆ ಎಲ್ಲರಿಗು ಸಮಯ ಸಂದರ್ಭ,ಎಲ್ಲದರ ಮಾಹಿತಿಯನ್ನು ಮನೆಗೆ ಮುಟ್ಟಿಸಿ ಈ ಕಾರ್ಯಕ್ರಮ ಯಶಸ್ವಿಗೆ ಪಾತ್ರರು, ಎಲ್ಲಾ ಪೂಜಾವಿಧಿ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಲು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡ ಸಾಂಸ್ಕೃತಿಕ ಸಮಿತಿಯ ಶ್ರಮ ಕೂಟದ ಸಮಾರಂಭಕ್ಕೆ ಗರಿ ಮೂಡಿಸಿದ್ದಾರೆ, ಹಾಗು ಮರಳ ಮಲ್ಲಿಗೆಯ ಸ್ವರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಹಾಗು ಈ ಭಾರಿ ಸುಮಾರು ೨೦ ಪುಟಕ್ಕು ಮೀರಿ ದಾಸ ಸಂಚಿಕೆಯ ಬಿಡುಗಡೆಗೆ ಸಾಧ್ಯರಾಗಿ ಮರಳಲ್ಲೇ ಹುದುಗಿದ್ದ ಪ್ರತಿಭೆಗಳಿಗೆ ಬರವಣಿಗೆ ಮೂಲಕ ಹೆಸರು ಸ್ಪೂರ್ತಿ ತರಿಸಿಕೊಟ್ಟ ಮರಳ ಮಲ್ಲಿಗೆಯ ವೃಂದವೊ ಸಹ ಈ ಸಮಾರಂಭದ ಮಿನುಗು ತಾರೆ ಎಂದೇಳಿದರೆ ತಪ್ಪಾಗಲಾರದು ಹಾಗು ವೇದಿಕೆಯನ್ನು ಶೃಂಗಾರದಿ ಬಣ್ಣದ ಚಿತ್ತಾರಗಳು ಮೂಡಿಸಿದ ತಾಂತ್ರಿಕ ಸಮಿತಿಯ ಮೆರುಗು ಕೂಡ ಸೇರಿದೆ. ಇವೆಲ್ಲದರ ಹಿಂದೆ ಹಲವು ಕಾಣದ ಕೈಗಳು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಕೆಲಸ ಕಾರ್ಯಗಳನ್ನೆರವೇರಿಸಿದ ಎಲ್ಲ ಸದಸ್ಯ ಬಳಗವು ಸಹ ಈ ಸಮಾರಂಭಕ್ಕೆ ರುವಾರಿಗಳೆಂದರೆ ತಪ್ಪಾಗಲಾರದು. ಕಾರ್ಯಕಾರಿ ಸಮಿತಿ ಎಲ್ಲಾ ಉಪ ಸಮಿತಿಯ ಸದಸ್ಯರು ಹಾಗು ಕಾಣದ ಹಸ್ತಗಳಿಗು ನಮ್ಮ ಹೃದಯಪೂರ್ವಕ ಧನ್ಯವಾದಗಳು.
16 comments:
ಮನಸು...
ಬಹಳ ಚಂದದ ನಿರೂಪಣೆ...
ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ...
ನನಗೂ ಒಮ್ಮೆ ಹೋಗಿ ಬರೋಣ ಅನಿಸಿತು...
ನಿಮ್ಮೆಲ್ಲರ ..
ಭಾಷೆ, ಸಂಸ್ಕ್ರತಿಯ..
ಅಭಿಮಾನ ಕಂಡು..
ಹ್ರದಯ ತುಂಬಿ ಬಂದಿತು...
ನಿಮ್ಮೆಲ್ಲರಿಗೂ..
ಅಭಿನಂದನೆಗಳು..
Aaatmeeya manasu,
tumba sogasada niroopane, heege bareyuttiri,
baruttiruve
ಮಕ್ಕಳೇ ದೇವರ ಇನ್ನೊಂದು ರೂಪ.. ಅವರೇ ರೂಪಧಾರಿಗಳಾಗಿ ಬಂದರುವಾಗ ಕುವೈಟನಲ್ಲಿ ದೇವರು ಪ್ರತಕ್ಷವಾಗಿದ್ದಲ್ಲಿ ಸಂಶಯವೇ ಇಲ್ಲ ಚೆನ್ನಾಗಿ ಬರೆದಿದ್ದೀರಿ.. ಕನ್ನಡ ಕೂಟ ಬಹಳ ಕೆಲಸ ಮಾಡುತ್ತಿದೆ ಅಲ್ಲಿ ಅವರಿಗೆ ನಮ್ಮ ಶುಭಹಾರೈಕೆಗಳು
ಮೇಡಮ್,
ಕುವೈಟ್ ಕನ್ನಡ ಕೂಟಕ್ಕೆ ೨೫ ತುಂಬಿದ್ದಕ್ಕೆ ಅಭಿನಂದನೆಗಳು...
ಅಲ್ಲಿನ ಕಾರ್ಯಕ್ರಮದ ವಿವರಣೆಯನ್ನು ಓದುತ್ತಿದ್ದರೆ ನಮಗೆ ಅಲ್ಲೇ ಇದ್ದು ಎಲ್ಲಾ ಅನುಭವಿಸಿದಂತೆ ಭಾಸವಾಯಿತು. ಅಲ್ಲಿ ನಿಮ್ಮೆಲ್ಲರ ಕನ್ನಡಾಭಿಮಾನ, ದಾಸರ ಮೇಲಿನ ಭಕ್ತಿ, ಪೂಜೆ ಪುರಸ್ಕಾರ, ಇತ್ಯಾದಿಗಳನ್ನು ತಿಳಿದು ತುಂಬಾ ಖುಷಿಯಾಯಿತು....ದೊಡ್ಡ ಮರವಾದರೂ ಮೂಲ ಬೇರುಗಳನ್ನು ಮರೆಯಬಾರದು ಅನ್ನುವ ಮಾತಿನಂತೆ ನೀವು ನಿಮ್ಮ ಕನ್ನಡ ಕೂಟದವರು ನಡೆದುಕೊಳ್ಳುತ್ತಿದ್ದೀರಿ..ಅಭಿನಂದನೆಗಳು...
ಮನಸು, ಬಹಳ ಚೆನ್ನಾಗಿ ವರ್ಣನೆ ಮಾಡಿದಿರಾ, ಕುವೈತ್ ಕನ್ನಡಿಗರ ಅಭಿಮಾನ ಮೆಚ್ಚಲೇ ಬೇಕು, ಹೊರನಾಡಲಿ ಹಬ್ಬದ ವಾತಾವರಣ ಮೂಡಿಸಿದಿರ. Good writing
Hey!!
Tumba chenagide nimma Vivarane, naave alli banda haage aytu. istu chennagi programs madidare nimma kannada kootadavru nijakku hemme paduvantahudu.
heege munde ene karyakrama iddaru nammanu nimma barahada moolaka karedukondu hogi...
Best wishes...
ಪ್ರಕಾಶ್ ಸರ್,
ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಇಷ್ಟರ ಮಟ್ಟಿಗೆ ನಿರೂಪಣಾ ಶೈಲಿಗೆ ಬಂದಿದೆ. ನಿಮಗೂ ಸ್ವಾಗತ ನೀವು ನಮ್ಮಲ್ಲಿ ಭಾಗಿಗಳಾಗಿ.. ಇಲ್ಲಿನ ಸವಿಯನು ನೀವು ಸವಿಯಬಹುದು..
ವಂದನೆಗಳು...
@ಗುರು
ಧನ್ಯವಾದಗಳು, ಖಂಡಿತ ಹೀಗೆ ಬರೆಯುವೆ, ನೀವು ಹೀಗೆ ಬೇಟಿ ನೀಡಿ..
ವಂದನೆಗಳು...
@ಪ್ರಭು,
ಆ ಮಕ್ಕಳ ರೂಪು ನೋಡಿದರೆ ಬಹಳ ಕುಶಿ ಎಲ್ಲ ಸದಸ್ಯರು ತುಂಬು ಹೃದಯದಿಂದ ಆನಂದಿಸಿದರು, ಕನ್ನಡಿಗರೆಲ್ಲ ಶ್ರಮ ಈ ರೀತಿ ಕೆಲಸ ಮಾಡಿಸಿದೆ..
ಧನ್ಯವಾದಗಳೊಂದಿಗೆ ನಿಮಗೆ ವಂದನೆಗಳು.
@ಶಿವೂ ಸರ್,
ನೀವು ಅನುಭವಿಸಿ ಓದಿದ್ದಕ್ಕೆ ನನ್ನ ಧನ್ಯವಾದಗಳು.. ನಿಮ್ಮ ಕ್ಯಾಮರ ಕಣ್ಣು ಇಲ್ಲಿದ್ದಿದ್ದರೆ ಇನ್ನು ಹತ್ತು ಹಲವು ವಿಭಿನ್ನ ಶೈಲಿಯ ಚಿತ್ರಗಳು ನಿಮ್ಮ ಬ್ಲಾಗ್ನಲ್ಲಿ ಬರುತ್ತಿದ್ದವು..
ವಂದನೆಗಳು..
ಧನ್ಯವಾದಗಳು ಅನಾಮಧೆಯರುಗಳಿಗೆ,
ಹೀಗೆ ಮುಂದಿನ ಬರುವಿಕೆಯಲ್ಲಿ ನಿಮ್ಮ ಹೆಸರನ್ನು ತಿಳಿಸಿ.. ನನ್ನ ನಿರೂಪಣೆ ನಿಮಗೆ ಮನತುಂಬಿದ್ದರೆ ನಾನೇ ಧನ್ಯ..ನನ್ನ ಕನ್ನಡ ಕೂಟಕ್ಕೊ ಕೂಡ ಹೆಮ್ಮೆಯ ವಿಷಯ... ಬರಲಿರುವ ಎಲ್ಲ ರಜತ ಮಹೋತ್ಸವದ ಆಚರಣೆಗಳು ಮಿನುಗುವ ನಕ್ಷತ್ರದಂತ್ತೆ ಮೀನುಗುತ್ತ ಸಾಗಲೆಂದು ಬಯಸುತ್ತೇನೆ..
ವಂದನೆಗಳು..
ಕೆಲವರು ದೂರವಾಣಿ ಮೂಲಕ ಇನ್ನು ಕೆಲವರು ಈ-ಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ ಅವರೆಲ್ಲರಿಗೂ ನನ್ನ ಧನ್ಯವಾದಗಳು..
ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ
ವಂದನೆಗಳು
ಮನಸು...
ಮೃದು-ಮನಸು
ಇದು-ಕನಸು
ಕಾರಣಾಂತರ ಕಾಣದ
ಆದ್ರೂ ಕಣ್ಮುಂದೆ ತಂದ
ದಾಸಾರಾಧನೆ
ಬ್ಲಾಗಿನದೀ ಸಾಧನೆ
ಕನ್ನಡ ಮಿಂಚಿದೆ
ಎಲ್ಲೆಡೆ ಹಂಚಿದೆ
ತುಸು ಭಕ್ತಿ
ತುಸು ಭಾವ
ಮೃದು ಮನಸಿಗೆ..ಮನದುಂಬಿ ಹಾರೈಕೆ.
ಆ.ನೆಲವಾಗಲು
ನಮ್ಮಲ್ಲೂ ಇಷ್ಟು ಚೆಂದದ ಕಾರ್ಯಕ್ರಮ ಮಡೋದಿಲ್ಲಾ ಅನ್ಸುತ್ತೆ. ಅಚ್ಚುಕಟ್ಟಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನೀವು ಗ್ರೇಟ್.
Mrudu Manasu,
Your elegant style as well as the combination of appropriate words to narrate the event ‘Dasara Aradhane’ is simply amazing and extraordinary. I am highly impressed with your free flow of exciting writing in unfurling the event right across to us – bringing it almost ‘live’.
Even though, I was there, fortunately or unfortunately, I could not witness the event completely as I was engaged in the back-stage management. Your lucid write-up has compensated that remarkably well. Thank you and sincerely appreciate your efforts for covering the event. I shall be keen to read your blogs as frequently as possible. Keep up the good work. Thank you once again.
Ramesh Malali
@ಅಜಾದ ಸರ್,
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.ಇಲ್ಲಿಯೂ ನೀವು ನಿಮ್ಮ ಅಭಿಪ್ರಾಯವನ್ನು ಕವನ ರೂಪದಲ್ಲಿ ಮೂಡಿಸಿದ್ದೀರಿ ಚೆನ್ನಾಗಿದೆ, ನಿಮ್ಮ ಕವನಗಳು,ಬರಹಗಳು ಕೂಡ ನಮಗೆ ಸ್ಫೂರ್ತಿ.
ಹೀಗೆ ಬರುತ್ತಲಿರಿ,
ಧನ್ಯವಾದಗಳು.
@ಮಲ್ಲಿಕಾರ್ಜುನ್ ಸರ್,
ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ನಿಮ್ಮ ಮೆಚ್ಚುಗೆಗೆ ರೂವಾರಿಗಳು ನಮ್ಮ ಕನ್ನಡ ಕೂಟ.. ಕೂಟದ ಕಾರ್ಯಕ್ರಮಗಳಿಂದಲ್ಲೇ ನಮಗೆಲ್ಲ ಇಲ್ಲಿನ ಬೇಸರವೆಲ್ಲ ಕಳೆದು ಸಂತೋಷದಿ ಜೀವನ ಕಳೆಯುತ್ತಿದ್ದೇವೆ..
ಧನ್ಯವಾದಗಳು..
ಹೀಗೆ ಬರುತ್ತಲಿರಿ..
Dear Sanjana, Ramesh & family..
Thank u very much for your comments. It was a pleasure for us to witness this wonderful event. Kudos to EC & all the committees. Keep visiting & your feedbacks are highly appreciated.
Regards
Manasu...
AN EXTREMELY EFFECTIVE AND TELL A TALE ACCOUNT BRINGING THE PROGRAMME ALIVE. I AM INTRODUCED TO YOUR BLOG THROUGH MY DAUGHTER MS. SHIRISH WHO IS IN KUWAIT. I AM A COMPLETE KANNADIGA WHERE AS MY FAMILY- WIFE AND CHILDREN ARE BROUGHT UP IN MUMBAI HENCE AT A DISADVANTGE TO UNDERSTSND THE FINER EXPRESSIONS IN KANNADA.I AM REALLY THANKFUL TO THE SOUL WHO TOOK MY DAUGHTER AND HAR SON TO THE FUNCTION. BOTH OF THEM ENJOYED AND HAS BEEN TALKING ABOUT IT WHENEVER WE CHAT.
Oh sorry sir i didn't see all these comments really thx a lot for ur comments...
thnx to Ms.shirish.
regards
manasu..
Post a Comment