ಮುಸುಕು ಕವಿದ ಬಾಳಿಗೆ
ನೀನಿಲ್ಲದೆ ಪ್ರಯಾಣ ಬೇಸರಿಕೆವಿಷಾದ ಮೂಡಿಸಿದೆ ಮನಸಿಗೆ
ನಿನ್ನನೊ ಕರೆದೊಯ್ಯುವ ಅನಿಸಿಕೆ
ಬರುವೆಯಾ ನಲ್ಲ ನನ್ನೊಂದಿಗೆ..!!?
ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು
ಮಳೆಗಾಲದ ಜಡಿ ಹಿಡಿದಂತಿದೆ ಕಣ್ಣಿಗೆ
ಬಳಲಿಕೆಯಲಿ ತೊಡಲಾಡುವಳೀ ಮಲ್ಲಿಗೆ
ಪ್ರಿಯಾ!! ಒಮ್ಮೆ ಹೇಳಿಬಿಡು ಮೆಲ್ಲಗೆ
ಬರುವೆ ಚಿನ್ನ ನಿನ್ನೊಂದಿಗೆ!!!
ಬರುವುದಾದರೆ ನಲ್ಲ ಊರಿಗೆ
ನಡೆ ಪಯಣಿಸೋಣ ಜೊತೆ ಜೊತೆಗೆ
ಹೊವಿನ ಹಾದಿ ಸೊರ್ಯ ಚುಂಬನದೆಡೆಗೆ
ನಮ್ಮ ದಾರಿ ನಮ್ಮೂರ ಕರುನಾಡಿಗೆ!!!