Tuesday, May 19, 2009

ಓ ಮನಸೇ!!!

ಹೀಗೇಕೆ ಅಳುವೇ ಮನಸೇ ತಿಳಿದಿದೆಯೆ ನಿನಗೆ
ತುಸು ಕಷ್ಟ ಸಹಿಸದೆ ನಲುಕಿ ಕೋರಗುವೆಯಲ್ಲೆ
ಜಗದ ನಿಯಮಕೆ ಯಾರು ವಿರುದ್ದ ನಿಲರು
ನೀ ಎಲ್ಲ ಸಾಂತ್ವಾನಿಸಿ ಎದೆಗುಂದದೆ ನಿಲ್ಲು!!ಓ ಮನಸೇ!!

ಬೀಸುವ ಗಾಳಿಯ ತಡೆದವರುಂಟೇನು
ಬಿಸಿಲ ಬೇಗೆಯ ನಿಲ್ಲಿಸಲಾಗುವುದೇನು?
ಓಡುವ ಕಾಲಕೆ..ಬರುವ ಕಷ್ಟಕೆ ತಡೆಯೇನು
ಎಲ್ಲವನು ನೀ ಅರಿತು ಧೈರ್ಯದಿ ನಡೆ ಮುಂದೆ!! ಓ ಮನಸೇ!!

ಎಂದೊ ಬರುವ ಕಷ್ಟಕೆ ಇಂದೇಕೆ ಅಳುವೇ
ಇಂದಿನ ಸುಸವಿಯ ಸವಿದು ಕಾಲ ಕಳೆ
ಕಷ್ಟದಿನಕೆ ದಾರಿ ತೋರಲು ಪರಿಸ್ಥಿತಿಯಿದೆ
ಕಾಲವೇ ಎಲ್ಲದಕು ಉತ್ತರ ನಿಶ್ಚಿಂತೆಯಿಂದಿರು!!ಓ ಮನಸೇ!!

ಮನದ ತುಡಿತಕೆ ಸಂತೋಷವ ಮುಚ್ಚಿಡದಿರು
ಅಳುವ ಮನಕೆ ಬಿಸುಅಪ್ಪುಗೆಯ ನೀಡುತಿರು
ನಿನಗೆ ನೀನೆ ಸಾಟಿ ಅಳು ಮೊಗದಿ ನೀನಿರದಿರು
ಎಲ್ಲವನು ನಿಗ್ರಹಿಸುವ ಗಣಿ ನೀನಾಗಿರು !!ಓ ಮನಸೇ!!

ಮಿನುಗುವ ಆ ಕಣ್ಣಿಗೇಕೆ ನೋವುಣಿಸುವೆ
ಸುಂದರ ಮೂಗಕೆ ಕಣ್ಣೀರಧಾರೆ ಕಪ್ಪುಕಲೆ
ಒಮ್ಮೆಲೆ ತೊಯ್ ಎಂದು ಸುರಿಸಿಬಿಡು ಮಳೆ
ತಿರುಗಿ ಬಾರದಿರಲಿ ಆ ಕಣ್ಣೀರ ಮಳೆ !! ಓ ಮನಸೇ!!

ಪ್ರೇಮಕೆ ಸಿಲುಕಿ ಒಳ ಮನವ ಪ್ರೇಮಿಸು
ಮೋಹದಿ ಮನವ ಚೇಡಿಸಿ ಕಾಮಿಸು
ಮನಕೆ ಪ್ರೇಮಿಯಾಗಿ ಸಂತಸದಿ ನಲಿಸು
ಮೂಗದಿ ನಲಿವ ನಗುವನ್ನು ತರಿಸು !! ಓ ಮನಸೇ!!

22 comments:

shivu said...

ಮನಸು ಮೇಡಮ್,

ಸಾಂತ್ವನ ಹೇಳುವ ಕವನ ತುಂಬಾ ಚೆನ್ನಾಗಿದೆ...ಕವನದ ಭಾವಾರ್ಥ ಇಷ್ಟವಾಯಿತು....

ಜಲನಯನ said...

ಮನಸು
ಮನಸಿಗೆ
ಮಮ್ಮಲ
ಮರುಗದಿರು ಎಂದು
ಮನವಿ
ಮಾಡುವುದು
ಮುದನೀಡಿದೆ
,,,,,
ಮನಸು
ಮೇಡಂ

ಶಿವಪ್ರಕಾಶ್ said...

Nice one.
This poetry is the best medicine for broken hearts.

sunaath said...

ಸರಿಯಾದ ಭಾವವನ್ನು ಸುಂದರವಾಗಿ ವ್ಯಕ್ತಪಡಿಸಿದ್ದೀರಿ.

Guru's world said...

ಮೃದು ಮನಸಿನ ...ಮುದ ನೀಡುವ ಮನಸ್ಸಿನ ಬಗ್ಗೆ ಮನ ಮಿಡಿಯುವಂತೆ ಬರೆದ ಮನಸಿನ ಕವನ ಚೆನ್ನಾಗಿ ಇದೆ.........:-)

ಗುರು

ಸಿಮೆಂಟು ಮರಳಿನ ಮಧ್ಯೆ said...

ಮನಸು....

ಸೊಗಸಾದ ಕವನ...
ಮನಸ್ಸಿನ ದುಗುಡ, ದುಮ್ಮಾನಗಳನ್ನು
ಚಂದವಾಗಿ ಬಿಂಬಿಸಿದ್ದೀರಿ....

ಇಷ್ಟವಾಯಿತು ನಿಮ್ಮ ಪದಪುಂಜಗಳು, ಬಾವಾರ್ಥಗಳು...

ಅಭಿನಂದನೆಗಳು... ಚಂದದ ಕವಿತೆಗಾಗಿ..

PARAANJAPE K.N. said...

ಕವನ ಚೆನ್ನಾಗಿದೆ.

ಮನಸು said...

ಶಿವು ಸರ್,
ನಮ್ಮ ಮನಸು ನಾವೇ ಅರಿತಿರೋಲ್ಲ ಹೇಗೇಗೋ ನೆಡಕೋತೀವಿ.... ನಮ್ಮನ್ನ ನಾವು ಸಾಂತ್ವಾನ ಮಾಡಿಕೊಂಡರೆ ಒಳ್ಳೆಯದು ಅಲ್ಲವೆ..?
ಧನ್ಯವಾದಗಳು.

ಅಜಾದ್ ಸರ್,
ಮರುಗಿದರೆ ಆ ಮನಸು ಹಾಳಾಗುತ್ತೇ ಅಲ್ಲವೆ.. ಅಂತಹದಕ್ಕೆ ಏಕೆ ಮರುಗಬೇಕು ಇರುವಷ್ಟು ಕಾಲ ಸಂತೋಷದಿಂದ ಇದ್ದರೆ ಆಯಿತು.
ನಿಮ್ಮ ಅನಿಸಿಕೆಗೆ ಧನ್ಯವಾದಗಳು

ಶಿವಪ್ರಕಾಶ್,
ನೀವು ಹೇಳಿದ್ದು ನಿಜ ಮುರಿದ ಮನಸಿಗೆ, ಭಾರವಾದ ಹೃದಯಕ್ಕೆ ಒಂದು ಸಾಂತ್ವಾನದ ಮಾತು ಅಷ್ಟೆ ಅಂತೆಯೇ ನಾವು ಜೀವ ಇರುವಿಕೆ ಅರಿತರೆ ಯಾವುದು ಕಷ್ಟ ಆಗೋದೇ ಇಲ್ಲ ಮನಸಿಗೆ ಘಾಸಿ ಆಗುವುದೇ ಇಲ್ಲ.
ವಂದನೆಗಳು

ಮನಸು said...

ಸುನಾಥ್ ಸರ್,
ಮನಸಿಗೆ ಈ ಭಾವನೆಯೆಲ್ಲಾ ಅರ್ಥವಾದರೆ ಚೆನ್ನ ಅಲ್ಲವೇ... ಅರ್ಥ ಮಾಡಿಕೊಂಡು ಬಾಳಿದರೆ ಜೀವನ ಸ್ವರ್ಗ ಸುಖ.. ಮನದ ಮಾತು ಕವನವಾಗಿದೆ ಅಷ್ಟೆ!! ಧನ್ಯವಾದಗಳು ಸರ್ ನಿಮ್ಮ ಅನಿಸಿಕೆ ನನಗೆ ಮತ್ತಷ್ಟು ಬರುಯುವಲ್ಲಿ ಸೆಳೆದಿದೆ.
ವಂದನೆಗಳು

ಗುರು..
ನಿಮ್ಮ ಪ್ರಪಂಚದಲ್ಲಿ ಮನಸಿಗೆ ಬೇಸರವಿಲ್ಲವೇ.... ಹ ಹ ಹಹ.. ಧನ್ಯವಾದಗಳು ನಿಮ್ಮ ಅನಿಸಿಕೆಗೆ..
ವಂದನೆಗಳು

ಚಂದಿನ said...

ಮಾನ್ಯರೆ,

ಇದೊಂದು ಸುಂದರ ಗಝಲ್ ಹಾಗು ಭಾವಗೀತೆಯಂತೆ ಮೂಡಿ ಬಂದಿದೆ
ಸರಳ ಅಭಿವ್ಯಕ್ತಿಯಲ್ಲೂ ಗಟ್ಟಿತನ ಗೋಚರಿಸುತ್ತದೆ.

ಪ್ರಯತ್ನ ಹೀಗೆ ಮುಂದುವರೆಯಲಿ,
ಓದುವ ಅವಕಾಶ ನಮಗಿರಲಿ.

ನಲ್ಮೆಯ
ಚಂದಿನ

ಮನಸು said...

ಪ್ರಕಾಶ್ ಸರ್,
ನಿಮ್ಮ ಅನಿಸಿಕೆಗಳು ಮನಕ್ಕೆ ಹಿತವೆನಿಸಿದೆ.. ನೀವು ನೀಡುವ ಪ್ರೋತ್ಸಾಹ ನಮಗೆ ಶ್ರೇಯಸ್ಸನ್ನು ನೀಡುತ್ತೆ... ಮತ್ತಷ್ಟು ಬರೆಯಲು ಹುರಿದುಂಬಿಸುತ್ತೇ...
ಸದಾ ಚಿರವಾಗಿರಲಿ ನಿಮ್ಮ ಪ್ರೋತ್ಸಾಹ
ಧನ್ಯವಾದಗಳು.

ಪರಂಜಪೆ ಸರ್,
ನಿಮ್ಮ ಮೆಚ್ಚುಗೆ ನಮಗೆ ಖುಷಿ ನೀಡಿದೆ.. ಧನ್ಯವಾದಗಳು

ಮನಸು said...

ಚಂದಿನ ಸರ್,
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು ಮನಸ್ಸು ಗಟ್ಟಿಗಿದ್ದರೆ ದಿಟ್ಟತನದಿಂದ ಎದುರಿಸಬಹುದಲ್ಲವೇ.. ಹೀಗೆ ಬರುತ್ತಲಿರಿ ಸರಿತಪ್ಪಿನ ಅರಿವು ಮೂಡಿಸುತ್ತಿರಿ...
ವಂದನೆಗಳು

shama said...

tumba heart tuching...nonda manassige tampannerachuva maatugalu... tamma E kavana rachaneya payana heege munduvareyali endu haraisuttene

Anonymous said...

hi Dear!!!

ninna kavana nanna manasige talupide... kavana helidahage irteeyi ayta hahaaha.

heege barita iru naavu oduta irteevi

with love
kaavya
UK

ಮನಸು said...

shama
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ.. ಮನಸಿಗೆ ಮುದನೀಡಿದರೆ ಅದೇ ಖುಷಿ... ಖಂಡಿತ ನನ್ನ ಕವನ ಪಯಣ ಮುಂದುವರಿಯುತ್ತೆ.

ಕಾವ್ಯ
ಮನಸಿಗೆ ತಲುಪಿದ್ದರೆ ಸರಿ.... ಸಂತೋಷದಿಂದ ಸಾಗುವುದನ್ನು ಮನಸಿಗೆ ಕಲಿಸಿಬಿಡು ಹ ಹಾ ಹಾ ಹಾ..
ವಂದನೆಗಳು
ಹೀಗೆ ಬರುತ್ತಲಿರು ಅನಿಸಿಕೆ ತಿಳಿಸುತ್ತಲಿರು.

ಸಾಗರದಾಚೆಯ ಇಂಚರ said...

ಮನಸು,
ಒಳ್ಳೆಯ ಕವಯಿತ್ರಿ ಆಗುವತ್ತ ಹೆಜ್ಜೆ ಇದುತ್ತಿದ್ದಿರಿ, ತುಂಬಾ ಒಳ್ಳೆಯ ಕವನ, ಮನಸಿಗೆ ಮುದ ನೀಡಿತು,

ಧರಿತ್ರಿ said...

ಕವನ ತುಂಬಾ ಇಷ್ಟವಾಯಿತು..ನೊಂದ ಮನಸ್ಸಿಗೆ ಸಾಂತ್ವಾನ. ನೆನಪಾಯಿತು ಆಂಗ್ಲ ಕವಿಯೊಬ್ಬ ಹೇಳಿದ ಮಾತು: "ದುಃಖವನ್ನು ಕಾವ್ಯಕ್ಕೆ ಬಿಡು.."
-ಧರಿತ್ರಿ

ಮನಸು said...

ಗುರು,
ಕವಯಿತ್ರಿ ಅವೆಲ್ಲ ದೊಡ್ಡ ದೊಡ್ಡ ಹೆಸರು ಏನೋ ಮನಸಿಗೆ ತೋಚಿದ್ದು ಗೀಚುತ್ತಲಿದ್ದೇನೆ... ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಸದಾ ಇರಲಿ.

ಧರಿತ್ರಿ,
ಮನಸಿಗೆ ದುಃಖ ಸಂತಸ ಏನೇ ಇದ್ದರೊ ಕವನಕ್ಕೆ ಬಿಟ್ಟರೆ ಒಳ್ಳೆಯದು ಅಲ್ಲವೇ? ನಿಮಗೆ ನನ್ನ ಕವನ ಇಷ್ಟವಾಗಿದ್ದರೆ ಅದೇ ಸಂತಸ...
ಧನ್ಯವಾದಗಳು

Prabhuraj Moogi said...

ಇತ್ತೀಚಿನ ನಿಮ್ಮ ಕವನ ಕೃಷಿ ಬಹಳ ಚೆನ್ನಾಗಿ ನಡೆದಿದೆ, ಹೀಗೇ ಬರೆಯುತ್ತಿರಿ.

ಮನಸು said...

ಧನ್ಯವಾದಗಳು ಪ್ರಭು
ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ

tanu.bhuyar said...

tumba heart tuching...nonda manassige tampannerachuva maatugalu... tamma E kavana rachaneya payana heege munduvareyali endu haraisuttene

matte nimma kavna odidare mansige tobane samadna anusutte

ಮನಸು said...

tanu.bhuyar,
ಧನ್ಯವಾದಗಳು ನಿಮ್ಮ ಆಗಮನ ಖುಷಿ ನೀಡಿದೆ ನೀವು ಹೀಗೆ ಬರುತ್ತಲಿರಿ ನಿಮ್ಮ ಅನಿಸಿಕೆಗಳನ್ನು ತಿಳಿಸುತ್ತಲಿರಿ.
ನೊಂದ ಮನಸ್ಸನ್ನು ನಾವೆ ಸಾಂತ್ವಾನಿಸಿಕೊಳ್ಳ ಬೇಕು ಅಲ್ಲವೆ.
ವಂದನೆಗಳು