Tuesday, May 5, 2009

ಮತ್ತಷ್ಟು ಮನಕೆ ತೋಚಿದ್ದು.....

ನಿನ್ನ ಆಸರೆ ಬೆಚ್ಚಗಿತ್ತು..
ಅಂದು ನಾ ಬೆಚ್ಚನೆ ಉಡುಪು
ಮರೆತುಬಿಟ್ಟಿದ್ದೆನಲ್ಲ ಅದಕೆ ಬೆಚ್ಚಗಿತ್ತು...
**************************
ಕುಂತಲ್ಲಿ ಕೂರಂಗಿಲ್ಲ
ನಿಂತಲ್ಲಿ ನಿಲ್ಲಂಗಿಲ್ಲ...
ಅದೇನೋ ದೊಡ್ಡ ರೋಗವಿರಬೇಕಲ್ಲ
**************************
ನೀ ನಿಲ್ಲದೇ ನನಗೇನಿದೆ...
ನನಗಿಂತ ಮುಂಚೆ....
ಗಾಳಿ, ನೀರು ಎಲ್ಲ ಇದೆ...
ಅವಿಲ್ಲದೆ ನೀನಿಲ್ಲ...
*******************
ಕಣ್ಣ ರೆಪ್ಪೆಯಲಿ ಬಚ್ಚಿಡುವೆ...
ಬಚ್ಚಿಟ್ಟರೆ..
ಕಣ್ಣು ಕಾಣದಾಗುವುದೆ..?
*******************
ಪ್ರೇಮಭಿಕ್ಷೆ ಕೊಡೂ
ಎಂದವನ ಕೇಳಿದೆ...
ಎಷ್ಟು ಜನಕೆಂದು ಕೊಡಲಿ
ಅವರಿಗೆಲ್ಲ ಕೊಟ್ಟುಳಿದರೆ
ನೋಡೋಣ......
***************
ಬಾ ಹೋಟಲಿಗೆ ಹೋಗೂಣ
ಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...
ಕ್ಷಮಿಸು, ನಾ ಎಂಜಲು ಕುಡಿಯೂಲ್ಲ
ಹಾಗಾದರೆ, ನಿನ್ನದೆಂತ ಪ್ರೇಮ!!!
ನನ್ನದು ಎಂಜಲಲ್ಲದ ಪ್ರೇಮ....
*************** *********

26 comments:

PARAANJAPE K.N. said...

ಚುಟುಕು ಚಟಾಕು ಕವಿತೆಗಳು ಚುರುಕಾಗಿವೆ.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ ...
ಚನ್ನಾಗಿದೆ ರೀ..
:)

ಸಾಗರದಾಚೆಯ ಇಂಚರ said...

ಮನಸು,
ಕವಿತೆ ಸೊಗಸಾಗಿದೆ, ಅದರಲ್ಲೂ ''ಬಾ ಹೋಟಲಿಗೆ ಹೋಗೂಣ
ಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...
ಕ್ಷಮಿಸು, ನಾ ಎಂಜಲು ಕುಡಿಯೂಲ್ಲ
ಹಾಗಾದರೆ, ನಿನ್ನದೆಂತ ಪ್ರೇಮ!!!
ನನ್ನದು ಎಂಜಲಲ್ಲದ ಪ್ರೇಮ....''
ತುಂಬಾ ಇಷ್ಟ ಆಯಿತು

sunaath said...

ಸೊಗಸಾದ ಕವನಗಳು.

ಜ್ಞಾನಮೂರ್ತಿ said...

Manasu Akka,

Kavana super...

ಜಲನಯನ said...

ಕುಂತಲ್ಲಿ ಕೂರಂಗಿಲ್ಲ
ನಿಂತಲ್ಲಿ ನಿಲ್ಲಂಗಿಲ್ಲ...
ಅದೇನೋ ದೊಡ್ಡ ರೋಗವಿರಬೇಕಲ್ಲ

ಮನಸು ಅವರೇ,
ತಳಮಳ
ಅನ್ನೋದು ಇದನ್ನೇ ಅಲ್ವೇ?
ಅದ್ಕೇ ಏನೋ ಪ್ರೇಮರೋಗ ಅಂತಾರೆ...!!!
ಚನ್ನಾಗಿದೆ ಚುಟುಕು-ಕವನ

ಮನಸು said...

ಪರಾಂಜಪೆ ಸರ್,
ನನ್ನ ಚುಟುಕುಗಳನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು
ಶಿವಪ್ರಕಾಶ್,
ನಗು ಬರುವಂತಾಯಿತೆ.... ನಗು ತರಿಸಿದರೆ ತುಂಬಾ ಸಂತೋಷ ಧನ್ಯವಾದಗಳು

ಮನಸು said...

ಗುರು ಮೂರ್ತಿ
ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಸುನಾಥ್ ಸರ್,
ನೀವು ತಪ್ಪದೇ ಅನಿಸಿಕೆ ವ್ಯಕ್ತಪಡಿಸುತ್ತಲಿರುವುದು ನನಗೆ ಬಹಳ ಖುಷಿ ಕೊಟ್ಟಿದೆ... ನಿಮಗೆ ನನ್ನ ಧನ್ಯವಾದಗಳು

ಮನಸು said...

ಜ್ಞಾನಮೂರ್ತಿ
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು...ಅಕ್ಕನ ಮನೆಗೆ ಆಗಾಗ ಬರುತ್ತಲಿರು ಮರೆಯದೆ..
ಅಜಾದ್ ಸರ್,
ಪ್ರೇಮರೋಗ ಹಿಡಿದರೆ ಮುಗಿಯಿತು ಎನೆಲ್ಲಾ ಸೃಷ್ಠಿಸ್ತಾರೆ ಅದಕ್ಕೆ ವಿರುದ್ಧವಾಗಿ ಬರೆಯೋ ಪ್ರಯತ್ನ ಹ ಹ ... ನಿಮಗೆ ಇಸ್ಟವಾದದ್ದಕ್ಕೆ ... ನನ್ನ ಧನ್ಯವಾದಗಳು..

Laxman said...

CHUTUKUGALU CHENNAGIVE
Khushi yatu.
mattastu barita Iri

Anonymous said...

chennagive chutikina saalugalu mattastu bareyiri

all the best

Guruprasad said...

ಮನಸು ಚುಟುಕು ಕವನಗಳು ತುಂಬ ಚೆನ್ನಾಗಿ ಇದೆ,, ಹಾಗು ಇಷ್ಟ ಆಯಿತು ಕೂಡ..
ಕೊನೆಯ ಕವನ ತುಂಬ ಅರ್ಥ ದಿಂದ ಕೂಡಿದೆ...
ಮುಂದುವರಿಸಿ...

ಮನಸು said...

ಲಕ್ಷ್ಮಣ್ ಸರ್,
ಚುಟುಕುಗಳು ಮೆಚ್ಚಿದ್ದಕ್ಕೆ ಧನ್ಯವಾದಗಳು.... ಮತ್ತಷ್ಟು ಬರೆಯಲು ಪ್ರಯತ್ನಿಸುವೆ ನಿಮ್ಮ ಬರುವಿಕೆ ಸದಾ ಇರಲಿ.
ಧನ್ಯವಾದಗಳು
ಅನಾಮಧೇಯರಿಗೆ ನನ್ನ ಧನ್ಯವಾದಗಳು..
ಗುರು....
ನಿಮ್ಮ ಅನಿಸಿಕೆಗಳು ನನಗೊ ಇಷ್ಟವಾಯಿತು ಹೀಗೆ ನಿಮ್ಮ ಪ್ರೋತ್ಸಾಹ ಸದಾ ಇದ್ದರೆ ಮತ್ತಷ್ಟು ಬರಯಲು ಹುಮ್ಮಸು ಬರುತ್ತದೆ.
ಧನ್ಯವಾದಗಳು..

Unknown said...

ಮನಸು ಮೇಡಂ,
ಚೆನ್ನಾಗಿವೆ ನಿಮ್ಮ ಕವಿತೆಗಳು...
ಬಾ ಹೋಟಲಿಗೆ ಹೋಗೂಣಒಂದೇ ಕಪ್ಪಿನಲಿ ಕಾಫಿ ಕುಡಿಯೋಣ...ಕ್ಷಮಿಸು, ನಾ ಎಂಜಲು ಕುಡಿಯೂಲ್ಲಹಾಗಾದರೆ, ನಿನ್ನದೆಂತ ಪ್ರೇಮ!!!ನನ್ನದು ಎಂಜಲಲ್ಲದ ಪ್ರೇಮ.... ತುಂಬಾ ಇಷ್ಟವಾಯಿತು...

shivu.k said...

ಮನಸು ಮೇಡಮ್,

ಚುಟುಕು ಕವನಗಳು ತುಂಬಾ ಚೆನ್ನಾಗಿವೆ...

"ಪ್ರೇಮಭಿಕ್ಷೆ ಕೊಡೂ
ಎಂದವನ ಕೇಳಿದೆ...
ಎಷ್ಟು ಜನಕೆಂದು ಕೊಡಲಿ
ಅವರಿಗೆಲ್ಲ ಕೊಟ್ಟುಳಿದರೆ
ನೋಡೋಣ......"

ಇದು ಬಲು ಮಜ ಕೊಡುತ್ತೇ...ಧನ್ಯವಾದಗಳು

ಮನಸು said...

ರವಿಕಾಂತ್,
ತುಂಬು ಹೃದಯದ ಸ್ವಾಗತ..ನನ್ನ ಈ ಚುಟುಕು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಲಿರಿ
ಶಿವು ಸರ್
ಮಜ ತರಿಸಿತೆ ........ಹ ಹ ಹ......ಚುಟುಕು ಮೆಚ್ಚಿದ್ದಕ್ಕೆ ಧನ್ಯವಾದಗಳು...

Anonymous said...

ಮನಸಿನ ಪ್ರತಿ ಕನಸೂ ಚೆಂದ ಇದೆ..

ಮನಸು said...

ನಿಮಗೆ ನನ್ನ ಧನ್ಯವಾದಗಳು...ಬಿಡುವಿದ್ದಾಗ ಮನಸಿನ ಮನೆಗೆ ಆಗಾಗ ಬಂದು ಹೋಗಿ

Anonymous said...

Your writings are good. Why don't you write about your experiences in Kuwait? The life, your experiences, people and so on? We are interested to read about Kuwait and we have lots of misconceptions also.

Chevar said...

ಮನಕೆ ತೋಚಿದ ಸಾಲುಗಳು ತುಂಬಾ ಚೆನ್ನಾಗಿವೆ. ಇನ್ನೂ ಹಲವು ಭಾವಗಳು ಬರಲಿ.

ಸುಧೇಶ್ ಶೆಟ್ಟಿ said...

ಮನಸು ಅವರೇ....

ನಿಮ್ಮ ಬ್ಲಾಗಿಗೆ ನನ್ನದು ಮೊದಲ ಭೇಟಿ... ಪುಟ್ಟ ಪುಟ್ಟ ಕವನಗಳು ಮನಸಿಗೆ ತು೦ಬಾ ಮುದನೀಡಿತು...

ಕವನಗಳಲ್ಲಿರುವ ಲವಲವಿಕೆ ಹಿಡಿಸಿತು....

ನಿಮ್ಮ ಬೇರೆ ಬರಹಗಳನ್ನು ಓದುತ್ತೇನೆ...

ನಿಮ್ಮ ಬ್ಲಾಗ್ ಲೇಔಟ್ ಚೆನ್ನಾಗಿದೆ.....

ಮನಸು said...

ಶಿವ್ ಪ್ರಸಾದ್,
ನಮಸ್ತೆ ನಿಮಗೆ ಸ್ವಾಗತ, ನೀವು ಬಂದಿದ್ದು ಬಹಳ ಖುಷಿಯಾಯಿತು, ಖಂಡಿತ ಬರೆಯುತ್ತೇನೆ ನನಗೊ ಬರೆಯಬೇಕೆಂಬ ಆಸೆ ಇದೆ, ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಧನ್ಯವಾದಗಳು..
ಚೆವರ್,
ನಿಮಗೆ ನನ್ನ ಸ್ವಾಗತ, ನಿಮ್ಮ ಅನಿಸಿಕೆಗಳಂತೆ ಮತ್ತಷ್ಟು ಬರಯಲು ಪ್ರಯತ್ನಿಸುತ್ತೇನೆ... ಸದಾ ಬರುತ್ತಲಿರಿ.
ಸುಧೇಶ್ ಶೆಟ್ಟಿ,
ನಿಮ್ಮ ಮೂದಲ ಭೇಟಿ ಕೊನೆಯದಾಗದೆ ಚಿರಕಾಲವಿರಲೆಂದು ಆಶಿಸುತ್ತೇನೆ. ಖಂಡಿತ ಉಳಿತ ಬರಹಗಳನ್ನು ಓದಿ ನಮಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪುಗಳಿದ್ದರೆ ತಿದ್ದಿ...
ವಂದನೆಗಳು

Girish Jamadagni said...

ನೂರು ಅರ್ಥ ಹೇಳುವ "ಎಂಜಲಲ್ಲದ ಪ್ರೇಮ" ಸಾಲು ಬಹಳ ಇಷ್ಟವಾಯ್ತು. ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ..ಗಿರೀಶ್ ಜಮದಗ್ನಿ

ಮನಸು said...

ಧನ್ಯವಾದಗಳು ಸರ್, ನಿಮ್ಮ ಅನಿಸಿಕೆಗಳು ಖುಷಿಕೊಟ್ಟಿದೆ.. ಹೀಗೆ ಬರುತ್ತಲಿರಿ..
ಹೇಗಿದೆ ಸೌದಿವಾಸ, ಬಿಸಿಲ ಬಾಳೆಹಣ್ಣು ನೆನಪಿಸಿದೆಯೇ...
ವಂದನೆಗಳು

Prabhuraj Moogi said...

ಕಣ್ಣ ರೆಪ್ಪೆಯಲಿ ಬಚ್ಚಿಡುವೆ...
ಬಚ್ಚಿಟ್ಟರೆ..
ಕಣ್ಣು ಕಾಣದಾಗುವುದೆ..? ಅಂತೂ ಬಹಳ ಚೆನ್ನಾಗಿದೆ... ಕಣ್ಣು ಕಾಣದಿದ್ದರೇನಂತೆ, ಕನಸಿನಲ್ಲಿ ಕಾಣಿಸೀತು!!! ಚುಟುಕುಗಳನ್ನು ಹೀಗೆ ಪೋಸ್ಟ ಮಾಡುತ್ತಿರಿ. ನಿಮ್ಮ ಬ್ಲಾಗಿಗೆ ಬರುವುದು ತಡವಾಯಿತು ನೋಡಿದರೆ ಆಗಲೇ ಹೊಸ ಹೊಸ ಪೋಸ್ಟಗಳಿವೆ...

ಚಂದಿನ said...

ಮೇಡಮ್,

ಕೊನೆಯ ಚುಟುಕು ಸಕತ್ತಾಗಿದೆ.

- ಚಂದಿನ