ನಾವೆಲ್ಲ ಜೀವನದಲ್ಲಿ ಕೊನೆವರೆಗೊ ಹೀಗೆ ಇರುತ್ತೇವೆ, ಸುಖ ಸಂತೋಷ, ಆಸ್ತಿ ಪಾಸ್ತಿ, ಆರೋಗ್ಯ ಎಲ್ಲವೊ ನಮ್ಮೊಂದಿಗೆ ಈಗ ಇಂದು ಹೇಗಿದೆಯೋ ಕೊನೆವರೆಗು ಇರುತ್ತೆಂದು ಭಾವಿಸುತ್ತೇವೆ ಆದರೆ ಅದು ಅಕ್ಷರ ಸಹ ಸುಳ್ಳು. ಇಂದು ಇದ್ದ ಜೀವ ನಾಳೆಗಿರದು ಇರುವ ಎರಡು ದಿನಕೆ ಎನೆಲ್ಲಾ ಮಾಡುತ್ತೇವೆ ಅಲ್ಲವೆ... ಏಕೀ ಪುರಾಣವೆಂದು ಭಾವಿಸುತ್ತೀರ ಈ ಭಾವನೆ ನನ್ನ ಮನದಾಳದಲ್ಲಿ ಹುಟ್ಟಿದವು ಬರವಣಿಗೆಗೆ ಮೀಸಲಿದ್ದವಹುದಲ್ಲ.
ಇತ್ತೀಚೆಗಷ್ಟೆ ಕುವೈಟ್ ಕನ್ನಡ ಕೂಟದಲ್ಲಿ ಒಂದು ದಿನದ ಕಾರ್ಯಕ್ರಮ ಏರ್ಪಡಿಸಿದ್ದರು ಅಂದು ಸುಮಾರು ೨ ಗಂಟೆಗಳ ಕಾಲ ಒಂದು ಚಿತ್ರವನ್ನು ನೋಡುವ ಭಾಗ್ಯ ನನ್ನದಾಯಿತು. ಮೂದಲ ಹಂತಕ್ಕೆ ಏನಿದು ಚಿತ್ರ ಎಳೆಯುತ್ತಿದ್ದಾರಲ್ಲ ಎಂಬ ಭಾವನೆ ಮೊಡಿದ್ದಂತು ನಿಜ. ಒಂದು ಸಣ್ಣ ಹಳ್ಳಿ ಅಲ್ಲಿ ಒಬ್ಬರು ಶಿಕ್ಷಕರು ಅವರಿಗೆ ಪ್ರೀತಿ ಪಾತ್ರರಳಾದ ಶಿಷ್ಯೆ, ಗುರುವಿಗೆ ತಕ್ಕ ಶಿಷ್ಯೆ ಎಂದೇಳಿದರೆ ತಪ್ಪಾಗಲಾರದು. ಗುರು ಶಿಷ್ಯೆಯ ಜೀವನ ಜೊತೆ ಜೊತೆ ಸಾಗುತ್ತದೆ. ಶಿಷ್ಯೆಯ ಪ್ರತಿ ಹೆಜ್ಜೆಗು ಮಾರ್ಗದರ್ಶಿ ಗುರು, ಈ ಶಿಷ್ಯೆ ಗುರುವಿಗೆ ಪ್ರೇರಣಾತೀತೆ ಇವಳು ನಾಟ್ಯ ಪ್ರವೀಣೆ, ವಿದ್ಯಾ ಸಂಪನ್ನೇ, ವಿದ್ಯೆ ಕಲಿತರೆ ಅದರಿಂದ ತೊಂದರೆ ಇಲ್ಲ ಅದು ನಮ್ಮ ಜೀವನದ ಏಳ್ಗೆಗೆ ಮೆಟ್ಟಿಲು ಎಂಬ ನಿಲುವು ಗುರು ಶಿಷ್ಯೆದು(ಗೌರಿ).......... ಇವರಿಬ್ಬರ ಜೀವನದಲ್ಲಿ ಒಂದು ಅನಾಥ ಮಗುವಿಗೆ ಆಸರೆ ನೀಡೋ ಸ್ಥಿತಿ, ಜೊತೆಗೆ ಸ್ಲಮ್ ಮಗುವಿಗೆ ವಿದ್ಯೆಯ ಅರಿವು ಮೊಡಿಸಿದವರು.
ಇಷ್ಟೆಲ್ಲ ಸುಖ ಜೀವನದಲ್ಲಿ ಒಂದು ಆಘಾತಕಾರಿ ಎಂದರೆ ಗುರುವಿನ ಮರಣ ಇವಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ...ಇಂತಹ ಸಮಯದಲ್ಲಿ ಪರ ಊರಿನಲ್ಲಿದ್ದ ಗುರುವಿನ ಸಂಸಾರದೊಂದಿಗೆ ಜೀವನ ಸಾಗಲು ತೆರಳುತ್ತಾಳೆ ಅಲ್ಲೂ ಸಹ ಯಾವ ಕೊರತೆಯಿಲ್ಲದೆ..........ಗೌರಿ ಜೊತೆಗೆ ಆ ಪುಟ್ಟ ಮಗುವಿಗೆ ಆನಂದಪೂರ್ವಕ ಸ್ವಾಗತ... ಒಮ್ಮೆ ಇದ್ದಕ್ಕಿದ್ದ ಹಾಗೆ ಆ ಪುಟ್ಟ ಪೋರಿ ಜ್ವರವೆಂದು ಮಲಗಿದಾಗ ಇದು ಸಾಮಾನ್ಯ ಜ್ವರವೆಂದು ಭಾವಿಸಿ ಮನೆಯಲ್ಲೇ ಇದ್ದ ಮಾತ್ರೆಯನ್ನು ನೀಡಿ ಸಾಂತ್ವಾನಿಸಿದ್ದಳು ಗೌರಿ, ಆದರೆ ಅದು ಯಾವುದೇ ಗುಣಕಾಣದಾದಾಗ ಆಸ್ಪತ್ರೆಗೆ ಕೊಂಡೊಯ್ಯುವ ಸ್ಥಿತಿ ಬಂದೊದಗಿತು ಅಲ್ಲಿ ಒಂದು ವಿಚಿತ್ರ ರೋಗದ ಸುಳಿವಿರುವುದು ತಿಳಿದು ಬೇರೆ ಆಸ್ಪತ್ರೆಗೆ ತೆರಳಬೇಕೆಂದು ಸೊಚಿಸಿದರು ಅಲ್ಲಿಂದ ಆ ಮಗುವನ್ನು ಗುರುವಿನ ಮಗ ಹಾಗು ಗೌರಿಯು ಬೆಂಗಳೂರಿಗೆ ಕರೆತಂದಾಗ ಅಲ್ಲಿ ಎಲ್ಲಾ ತಪಾಸಣೆಯ ನಂತರ ತಿಳಿದಿದ್ದು ಅಲ್ಲೊಂದು ಆಘಾತಕಾರಿ ಸಂಗತಿ!!!! ಎಂತವರೊ ದಿಗ್ಭ್ರಮೆಗೊಳ್ಳುವ ಮಾಹಿತಿ ವೈದ್ಯರು ಬಿಚ್ಚಿಟ್ಟಾಗ ಹೃದಯಾಘಾತವಾಗದಿರುವುದು ಹೆಚ್ಚು!!!!!!!!! ಗೌರಿಯ ಮಮತೆಯ ಕೊಸು ಕನರಿಹೋಗುವುದೆಂಬ ಭಯ ಬೆಂಬಿಡದೆ ಅವಳ ಮನದಲ್ಲೇ ಕೊತುಬಿಟ್ಟಿತ್ತು ಆದರೊ ಸ್ಥಾವರಿಸಿ ದಿಟ್ಟ ಹೆಜ್ಜೆ ಇಟ್ಟು ಹೊರ ಬಂದು ಆ ಮಗುವಿಗೆ ಆಸರೆಯಾಗಿ ಕೊನೆವರೆಗಿರುವ ನಿರ್ಧಾರಕ್ಕೆ ಬಂದಳು. ಇವಳಿಗೆ ಜೊತೆಯಾದವನು ಗುರುವಿನ ಮಗ.
ಎಲ್ಲವನ್ನು ಎದುರಿಸುವೆ ಎಂದು ಏಡ್ಸ್ ಎಂಬ ಮಹಾಮಾಯಿಯನ್ನು ಹೊತ್ತು ತಂದ್ದ ಮಗುವಿಗೆ ಇದು ಹೇಗೆ ಅಂಟಿತೆಂದು ತಿಳಿಯುವಲ್ಲಿ ಸಫಲಾದಳು ಆ ಮಗು ಇವಳ ಕೈಸೇರುವ ಮುನ್ನ ಆ ಮಗುವಿನ ಅಪ್ಪ ಅಮ್ಮ ಆತ್ಮಹತ್ಯೆಗೆ ಶರಣಾಗಿದ್ದರು........ನೃತ್ಯಶಾಲೆಗೆ ಬರುತ್ತಿದ್ದ ಈ ಮಗು ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅಪ್ಪ ಅಮ್ಮ ಇಲ್ಲದಾಗ ಆಪ್ತಳಾದವಳು ಗೌರಿ ಆ ಮಗುವಿಗೆ ತಾಯಿಯಾಗಿ ನೆಲೆಯಾದವಳು ಈಕೆ.
ಆ ಮಗುವಿಗೆ ಮಹಾಮಾರಿ ತಗುಲುವುದೇನೋ ತಗುಲಿತು ದೇವರ ಜೊತೆ ತಂದೆತಾಯಿಯು ದೂರ ಸರಿದರು ಇಂತಹ ಸ್ಥಿತಿಯಲ್ಲಿ ಆ ಮಗು ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನಿಂದನೆಗಳನ್ನು ಇಂಚಿಂಚು ಅನುಭವಿಸುವಂತಾಯಿತು ಇದನ್ನೆಲ್ಲಾ ಕಂಡ ಗೌರಿ ನೂರಾರು ಜನಸ್ತೊಮ ನೆರೆದಲ್ಲೇ ತನ್ನ ಅಳಲನ್ನು ತೋಡಿಕೊಂಡಳು... ಏನು ಅರಿಯದ ಮಗು ಆ ಮಗುವೇಕೆ ಈ ಶಿಕ್ಷೆ ಅದಕ್ಕೆ ಅದರ ಖಾಯಿಲೆಯ ಅರಿವಿದೆ ನೀವೆಲ್ಲ ಜೊತೆಗೊಡಿ ಆ ಮಗು ಇರುವಷ್ಟು ದಿನ ಸಂತಸದಿ ಬಾಳಲು ಬಿಡಿ ಎಂದು ಭಾರದ ಹೃದಯದಲ್ಲಿ ದುಃಖದ ಮಡುವಿನಲ್ಲಿ ಬೇಡಿದಳು ಅವಳ ಮಾತು ನೆರೆದಿದ್ದವರನೆಲ್ಲಾ ಮಮ್ಮಲ ಮರುಗುವಂತೆ ಮಾಡಿತು........
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.
ಆ ಜನರಿಗಷ್ಟೆ ಅಲ್ಲ ನಮ್ಮಲಿದ್ದ ಮೂಢನಂಬಿಕೆ, ನಾವು ನಮ್ಮಲ್ಲಾಗುವಷ್ಟು ಸಹಕಾರ ನೀಡಬೇಕೆಂಬುದು ನನಗೂ ಅರಿವಾಯಿತು. ಏಡ್ಸ್ ಎಂಬ ರೋಗದಿಂದ ಬಳಲುವ ಹಲವಾರು ಮಕ್ಕಳು ಸಮಾಜದಲ್ಲಿ ತಮ್ಮ ಬೇಕುಬೇಡಗಳನ್ನು ನೀಗಿಸಿಕೊಳ್ಳಲು ಸಂಪ್ರದಾಯ, ಮೂಢನಂಬಿಕೆ, ಅಸಹನೆ, ಮೂಡಿಸಿಕೊಂಡು ಆ ರೋಗವೊಂದು ಅಂಟುರೋಗವೆಂದು ಭಾವಿಸಿ ಏಡ್ಸ್ ರೋಗಿಗಳಿಗೆ ಜೀವನ ಮಾಡಲು ಅವಕಾಶ ನೀಡದೆ ಎಷ್ಟೋ ಮಂದಿ ದೊರ ತಳ್ಳುತ್ತಲಿದ್ದೇವೆ.
ರೂಪ ಐಯ್ಯರ್ ಅವರ ಚಿತ್ರ ನೋಡಿದ ಮೇಲೆ ಹಾಗು ಮುಖಮುಖಿ ಅವರ ಮನದಾಳದ ಮಾತು ಕೇಳಿದ ಮೇಲೆ ನಾವು ನಮ್ಮತನವನ್ನು ನಶಿಸದಂತೆ ನಾವು ನಮ್ಮಲಾಗೋ ಸಹಾಯ ಹಸ್ತ ಚಾಚಬೇಕೆಂಬ ನಿಲುವಿಗೆ ಬಂದೆನು.
ಈ ಚಿತ್ರ ಎಲ್ಲರೊ ನೋಡ ಬೇಕಾದ್ದೆ ಹಾಗೆ ಹೊಸ ಜೀವನದ ಹೊಸ್ತಿಲಲ್ಲಿ ನವ್ಯಪ್ರಜ್ಞೆ ಮೂಡಿಸಬೇಕಾದ್ದದೇ ಹೊರತು ಮೂಢರಂತೆ ವರ್ತಿಸಬೇಕಾದದ್ದು ಅಲ್ಲವೇ ಅಲ್ಲ.
ಧನ್ಯವಾದಗಳು
20 comments:
ಒಂದು ಉತ್ತಮ ಚಿತ್ರದ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು.
ವಿವರಣೆ ಚೆನ್ನಾಗಿದೆ.
ಧನ್ಯವಾದಗಳು.
-ಅನಿಲ್
ಧನ್ಯವಾದಗಳು ಸುನಾಥ್ ಸರ್, ನಾನು ಚಲನ ಚಿತ್ರ ನೋಡುವುದೇ ಕಡಿಮೆ ಅಂತಹದರಲ್ಲಿ ಅಂದು ಕುಳಿತು ನೋಡಿದೆ ನೋಡಿದ್ದಕ್ಕೇ ಒಳ್ಳೆಯದೇ ಆಯಿತು ತಿಳಿದುಕೊಳ್ಳುವುದು ಬಹಳವಿದೆ ಎಂದೆನಿಸಿತು.
ವಂದನೆಗಳು.
ಅನಿಲ್ ಸರ್,
ನಿಮಗೆ ಸ್ವಾಗತ ನಮ್ಮೊಂದಿಗೆ ಸದಾ ಹೀಗೆ ಇರಿ, ಚಿತ್ರದಲ್ಲಿದ್ದಿದು ಇಲ್ಲಿ ವಿವರಣೆಯಾಗಿ ಮೂಡಿದೆ ಅಸ್ಟೆ ಆದರೆ ಆ ಚಿತ್ರದ ಸಾರಂಶ ನಾವೆಲ್ಲ ಅರಿಯಬೇಕಿದೆ.
ಧನ್ಯವಾದಗಳು
ಚಿತ್ರದ ವಿವರಣೆ ತುಂಬ ಚೆನ್ನಾಗಿ ಕೊಟ್ಟಿದ್ದಿರಾ.....ಟೈಮ್ ಸಿಕ್ಕಾಗ ಈ ಚಿತ್ರವನ್ನು ನೋಡುತ್ತೇನೆ.......
Guru
ರೂಪಾ ಅಯ್ಯರ ಅವರ ಈ ಸಿನೆಮಾ ಬಗ್ಗೆ ಪತ್ರಿಕೆಯಲ್ಲಿ ಎಂದೊ ಒಮ್ಮೆ ಓದಿದ್ದೆ, ಆವರು ಮಾಡುತ್ತಿರುವ ಸಮಾಜ ಸೇವೆ ಬಗ್ಗೆ ಕೂಡ ಬರೆದಿದ್ದರು, ನಿಮ್ಮ ಚಿತ್ರ ನಿರೂಪಣ ಓದಿದ ಮೇಲೆ ಕುತೂಹಲವಾಗಿ ನೋಡಬೇಕೆನಿಸಿದೆ, ನೋಡೋಣ ಓಳ್ಳೆ ಫಿಲ್ಮ ಅನಿಸುತ್ತದೆ..
ಮನಸು ಮೇಡಮ್,
ಚಿತ್ರದ ವಿವರಣೆ ಚೆನ್ನಾಗಿದೆ. ನಾನು ಚಿತ್ರವನ್ನು ನೋಡಬೇಕೆನಿದೆ. ಬಿಡುವಾದಾಗ ಖಂಡಿತ ನೋಡುತ್ತೇನೆ...
ಧನ್ಯವಾದಗಳು
ಏಯ್ಡ್ಸ ಒಂದು ಮಾರಕ ರೋಗವಾಗಿ ಕಾಣಿಸಿಕೊಂಡು ಕೆಲವೊಮ್ಮೆ ಎಲ್ಲಿಂದಲೋ ಸೋಂಕುತಗುಲಿದವರು ನರಳುವಂತಾಗುತ್ತಾರೆ. ಇದರಲ್ಲಿ ಮಕ್ಕಳ ಪಾಡು ಒಂದು ರೀತಿಯದ್ದಾದರೆ ಗಂಡಿನ ಅಜಾಗರೂಕತೆಯಿಂದಲೋ ಸ್ವೇಚ್ಛಾ ಪ್ರವೃತ್ತಿಯಿಂದಲೋ ಹೆಣ್ಣಿಗೆ ತಗುಲಿದರೆ ಮತ್ತೊಂದು ರೀತಿಯ ಮಾನಸಿಕ ಮತ್ತು ದೈಹಿಕ ಹಿಂಸೆ. ಇನ್ನು ಚಿಕಿತ್ಸಾ ಅಚಾತುರ್ಯಗಳಿಂದ ಸೋಕಾದರೆ ಅದೂ ಮೂಕವೇದನೆಯೇ.. ಈ ರೋಗಕ್ಕೆ ಔಷಧಿಗಳು ಬರಲಾರಂಭಿವೆ, ಗರ್ಭಮೂಲದ ಸೊಂಕನ್ನು ಮಗುವಿಗೆ ಹಾನಿಕಾರಕವಾಗದಂತೆ ಮಾಡುವ ಚಿಕಿತ್ಸಾ ವಿಧಾನಗಳು ಬಂದಿವೆ. ಜನರಲ್ಲಿ ತಿಳುವಳಿಕೆ ಮೂಡಿಸಿ ಏಯ್ಡ್ಸ್ ರೋಗಿಗಳನ್ನು ಮಾನವತೆಯಿಂದ ಪರಿಗಣಿಸಿ ನಡೆದುಕೊಂಡರೆ ಅದೇ ಒಂದು ರೀತಿಯ ಸಾಂತ್ವನ ರೂಪದ ಚಿಕಿತ್ಸೆ.
ಮನಸು ಮೇಡಂ ,...ಸಾರಿ..ಆ ದಿನ ನನಗೆ ಚಿತ್ರ ಪ್ರದರ್ಶನದವರೆಗೆ ಉಳಿಯಲಾಗಲಿಲ್ಲ...ಅವಕಾಶ ಸಿಕ್ಕರೆ ನೋಡುವ ಹಂಬಲ...
Thanks for the blog post
ಮನಸು....
ಇಂಥಹ ಚಿತ್ರಗಳೆಂದ ನನಗೆ ಬಹಳ ಇಷ್ಟ.
ನನಗಿನ್ನೂ ನೋಡಲಾಗಲಿಲ್ಲ.
ನಿಮ್ಮ ಲೇಖನ ಓದಿದ ಮೇಲೆ ನೋಡಬೇಕೆಂಬ ಆಸೆಯಾಗುತ್ತಿದೆ..
ಒಂದು ಒಳ್ಳೆಯ ಚಿತ್ರದ ಬಗೆಗೆ ವಿಮರ್ಶಿಸಿದ್ದಕ್ಕೆ ಧನ್ಯವಾದಗಳು.
ಗುರು,
ನಾವೆಲ್ಲ ತಿಳಿದವರು ಆದಷ್ಟು ಒಳ್ಳೆಯದಕ್ಕೆ ಹೆಚ್ಚು ಮನ ಓಲಿಸೋಣ... ಖಂಡಿತ ನೋಡಿ ನಿಮಗು ಚಿತ್ರ ನೋಡಿದ್ದಕ್ಕೆ ಬೇಸರವಾಗೋಲ್ಲ.
ಧನ್ಯವಾದಗಳು
ಪ್ರಭು,
ರೂಪ ಅಯ್ಯರ್ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಸಮಾಜಸೇವೆ ಪ್ರಾರಂಭಿಸಿದ್ದಾರೆ... ನಿಜಕ್ಕೊ ಅವರ ಧ್ಯೆಯ ಮೆಚ್ಚಬೇಕಾದ್ದೇ... ನೋಡಿ ಚಿತ್ರ ಚೆನ್ನಾಗಿದೆ ನೀವು ಒಳ್ಳೆಯದನ್ನೇ ಹೆಚ್ಚು ಪ್ರೋತ್ಸಾಹಿಸುತ್ತೀರಿ ಖಂಡಿತ ನಿಮಗೆ ಈ ಚಿತ್ರ ಇಷ್ಟವಾಗುತ್ತದೆ.
ವಂದನೆಗಳು
ಶಿವು ಸರ್,
ಧನ್ಯವಾದಗಳು... ನೋಡಾಲೇ ಬೇಕು ನೀವೆಲ್ಲ ದಿನಬೆಳಗಾದರೆ ಹೆಚ್ಚು ಹೆಚ್ಚು ಜನರನ್ನು ನೋಡುತ್ತೀರಿ ಸ್ಪಂದಿಸುತ್ತೀರಿ ಇಂತಹ ಚಿತ್ರದಿಂದ ನೀವು ಪ್ರೇರಾಣಾತೀತರಾಗಿ ಹಲವರಲ್ಲಿ ಅರಿವು ಮೂಡಿಸುವ ನಿಟ್ಟು ನೀವು ಮಾಡುತ್ತೀರಿ
ವಂದನೆಗಳು
ಅಜಾದ್ ಸರ್,
ನೀವು ಅಂದು ಹುಷಾರಿಲ್ಲದೆ ತೆರಳಿದಿರೆಂದು ಮಹೇಶ್ ಹೇಳಿದ್ದರೊ...... ನೀವು ನೋಡಿದ್ದರೆ ನಿಮಗೊ ಖಂಡಿತ ಇಷ್ಟವಾಗುತ್ತಿತ್ತು ಊರಿಗೆ ಹೋದಾಗ ನೋಡಿಬನ್ನಿ, ಮಹಾಮಾರಿಯ ಹಿಂದಿನ ನೋವು ನಾವೆಲ್ಲ ತಿಳಿಯಬೇಕಿದೆ...
ವಂದನೆಗಳು
ಪ್ರಕಾಶ್ ಸರ್,
ನೀವು ನೋಡಿ ನಿಮ್ಮವರಿಗೆಲ್ಲ ತಿಳಿಸಿ... ಅಂದು ಇಲ್ಲಿ ಈ ಚಿತ್ರ ನೋಡಿದ ಎಲ್ಲ ಕಣ್ಣುಗಳು ಒದ್ದೆಯಾಗಿದ್ದವು, ಮನಸು ಭಾರವಾಗಿಬಿಟ್ಟಿತ್ತು. ನಾವು ಯಾರಿಗು ಒಳ್ಳೆಯದು ಮಾಡದಿದ್ದರೊ ಪರವಾಗಿಲ್ಲ ಕೆಟ್ಟದ್ದು ಮಾಡದೆ ತೊಂದರೆ ಕೊಡದ ಇದ್ದು ಬಿಟ್ಟರೇ ಅದೇ ಒಳ್ಳೆಯದು... ಮಕ್ಕಳೊ ಸಹ ಕೂತು ನೋಡುವಂತಹದು ನನ್ನ ಮಗ ಪೂರ್ತಿ ಚಿತ್ರ ನೋಡಿ ಅವನೊ ಭಾರದ ಮನಸಿನಿಂದ ಬೇಸರದಿ ಮನೆಗೆ ತೆರಳಿದ..ಅವನಿಗೊ ಅರಿವಾಯಿತು ಸಹ.
ಧನ್ಯವಾದಗಳು
ಒಂದು ಒಳ್ಳೆಯ ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು..
ತಪ್ಪದೆ ಈ ಚಿತ್ರವನ್ನು ನೋಡುತ್ತೇನೆ.
ಧನ್ಯವಾದಗಳು ಶಿವಪ್ರಕಾಶ್,
ಈ ಚಿತ್ರ ನೋಡಿ. ಒಳ್ಳೆಯದನ್ನು ಕಲಿಯೋಣ ಅಲ್ಲವೇ
ವಂದನೆಗಳು
Dear Mr.Manasu!
Namaskaara.
Thank you very much for the wonderful article. Every one liked it. My special kids are also very happy, you have helped me to market it in a better way. DhanyavaadagaLu.
Roopa Iyer
www.RoopaIyer.com
ರೂಪ
ಧನ್ಯವಾದಗಳು. ನಿಮ್ಮ ಅನಿಸಿಕೆ ನನಗೆ ಖುಷಿಕೊಟ್ಟಿದೆ ಆದರೆ ವಿಷಾದವೆಂದರೆ ಇಂತಹ ಚಿತ್ರಗಳು ನಮ್ಮ ಜನರಿಗೆ ಮುಟ್ಟುತ್ತಿಲ್ಲ, ಎಲ್ಲರು ಬಂದು ನೋಡುವಂತಾಗಬೇಕು ಅಷ್ಟೆ..
ಹೆಚ್ಚು ಪ್ರಚಾರ ಗಳಿಸಿ ಚಿತ್ರದ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಲೆಂದು ಆಶಿಸುತ್ತೇನೆ.
ವಂದನೆಗಳು
Manasu avare tumba dhanyadagalu.
Olleyadanna ellarigu tilisabekante
barita iri
laxman
ಲಕ್ಷ್ಮಣ್ ಸರ್,
ನಿಜ ಒಳ್ಳೆಯದನ್ನು ತಿಳಿಸಿಬಿಡಬೇಕು... ಖಂಡಿತಾ ಒಳ್ಳೆಯದೆನಿಸಿದ್ದನ್ನೆಲ್ಲಾ ತಿಳಿಸುವೆ...
ವಂದನೆಗಳು
ನಿಜ..ಇಂದು ಇದ್ದಂತೆ ನಾಳೆ ಇರುವುದಿಲ್ಲ..
ಆದರೆ ಇದನ್ನು ಅರಿತು ಕೂಡ ನಾವು ಬದುಕುವದು ನೀರ ಮೇಲಿನ ಗುಳ್ಳೆಯಂತೆ....
ಜಿತೇಂದ್ರ ರವರೆ
ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತ, ನೀವು ಹೇಳುದ್ದು ನಿಜ ನಮ್ಮ ಜೀವನ ನೀರ ಮೇಲಿನ ಗುಳ್ಳೆಯಂತೆ...ಹೀಗೆ ಬರುತ್ತಲಿರಿ ಎಲ್ಲ ಲೇಖನಿಗಳಿಗೆ ನಿಮ್ಮ ಅನಿಸಿಕೆ ತಿಳಿಸುತ್ತಲಿರಿ
ವಂದನೆಗಳು
ಒಳ್ಳೆಯ ಅರಿವು ಮೂಡಿಸುವ ಬರಹ.ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ. ಇಂತಹ ಮಕ್ಕಳಿಗೆ ಕೈಲಾದ ಸಹಾಯ ಮಾಡಲು ಸಿದ್ದ.
Post a Comment