Sunday, May 10, 2009

ಅಮ್ಮನೇ ದೈವ!!!!

ನಿನ್ನುಸಿರ ತವಕ
ಬಲು ದೂರವಿದೆ.....
ನಿನ್ನ್ ಬಿಸಿ ಉಸಿರು
ತಾಕಲು ಸಮುದ್ರ ಅಡ್ಡವಿದೆ....
ನಿನ್ನ್ ಪ್ರೀತಿ ಪುಳಕ
ನನಗರಿವಿದೆ......
ನಿನ್ನ್ ಪ್ರೀತಿ ಹಾರೈಕೆ
ಹೃದಯಸ್ಪರ್ಶಿಸಿದೆ......
ಅಮ್ಮ ನಾನಿನ್ನ
ಪ್ರೇಮಸುಧೆ .....
ನೀ ಎನ್ನ ದೈವ
ಎಂದು ಮನ ಪೂಜಿಸುತಿದೆ.....
ನಿನ್ನ್ ಪೂಜೆಗೆ ಹೂ,ಗಂಧ
ಕಡ್ಡಿ,ಕರ್ಪೂರ ತರುವಾಸೆ ಎನಗಿಲ್ಲ....
ಹೂವಾಗಿ ಎನ್ನ
ಹೃದಯ ಕಮಲವಿದೆ.....
ಗಂಧವಾಗಿ ಎನ್ನ
ಮುದ ಪ್ರೇಮವಿದೆ....
ಕಡ್ಡಿ,ಕರ್ಪೂರವಾಗಿ ಎನ್ನ
ಕರವು ಕಾದಿದೆ.....
ಎನ್ನ ದೇಹದ ದೇಗುಲಕೆ
ನೀನೇ ದೈವ.....
ಅಂದು ನಿನ್ನ ಮಡಿಲು
ಕೊಟ್ಟ ಜೀವ.....
ಎನ್ನಮ್ಮ ನೀ
ಕರುಣಾಮಯಿ.....
ನಿನ್ನ್ ಒಡಲ
ಹರಸು ತಾಯಿ.....
ನನ್ನ್ ಪ್ರಾಣ ಪಕ್ಷಿ
ಹಾರುವ ಮುನ್ನ....
ನಿನ್ನ ಪಾದಕೆ
ಎರಗುವೆನಮ್ಮ.....
ಕೊನೆಯ ನನ್ನುಸಿರು
ಬಂದು ಸೇರುವುದು ನಿನ್ನೊಂದಿಗೆ....
ಅಲ್ಲಿವರೆಗು ಸಲ್ಲಿಸುವೆ
ಪ್ರೇಮಗುಚ್ಚ ನಿನ್ನ ಪಾದಕೆ.....
ನಿನ್ ಪ್ರೀತಿ ಎನಗೆ ಆಸರೆ
ನಾನು ನಿನ್ನ ಕೈ ಸೆರೆ....
**************
ಅಮ್ಮನಿರೊ ಊರಿಂದ ದೂರವಿದ್ದು ಅಮ್ಮನ ಹಾರೈಕೆ, ಅಮ್ಮನೊಂದಿಗೆ ಬೆರೆಯಲು ಕಾಲ,ಸಮಯ,ಜೀವನ ಎಲ್ಲವೊ ಅಡ್ಡವಿದೆ ನನ್ನಮ್ಮನ ಪ್ರೀತಿಗೆ ಸಣ್ಣದೊಂದು ಕವನ ಶೈಲಿ ಅಷ್ಟೆ...ಅಮ್ಮನ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ ಆದರು ನನ್ನ ಮನದಾಳದ ಮಾತು ನಿಮ್ಮೊಂದಿಗೆ.
ಇಲ್ಲಸಲ್ಲದ ದೇವರ ಹುಡುಕುವದ ಬಿಟ್ಟು...... ಇಷ್ಟು ದೊಡ್ಡ ದೇಹಕೊಟ್ಟ ನನ್ನಮ್ಮನೇ ದೈವ, ನನಗೆ ಅಮ್ಮನೇ ಸರ್ವಸ್ವ, ನಾ ನನ್ನ ಮಗುವಿಗೆ ಅಮ್ಮನಾದರೊ ನನಗೆ ನನ್ನ ಅಮ್ಮನೇ ಎಲ್ಲ...ಇಷ್ಟು ಒಳ್ಳೆ ಜೀವನ ನೆಡೆಸಲು, ನನ್ನ ಬೇಕು ಬೇಡಗಳನ್ನು ನೀಗಿಸಿದ ನನ್ನಮ್ಮನೇ ದೈವ. ಅಂತ ಅಮ್ಮನಿಗೆ ಹೃದಾಯಂತಾರಾಳದಲಿ ಸಲ್ಲಿಸುವೆ ಪೂಜ್ಯಭಾವ...ಅಮ್ಮ ನೊರುಕಾಲ ಬಾಳಲಿ ಅವಳ ಪ್ರೀತಿ ನನ್ನೊಂದಿಗೆ ಸದಾ ಇರಲೆಂದು ಬಯಸುತ್ತೆನೆ.
ವಂದನೆಗಳು
ಶುಭಮಸ್ತು.

22 comments:

sunaath said...

ನಿಜ, ಅಮ್ಮನೇ ದೇವರು.

Prabhuraj Moogi said...

ಅಮ್ಮ ಬಗೆಗಿನ ಕವನ ಚೆನ್ನಾಗಿದೆ,ನಾನೂ ಅಮ್ಮ ಬಿಟ್ಟು ದೂರದಲ್ಲಿರುವುದರಿಂದ ಅಮ್ಮನ ಬಗೆಗೆ ನನಗೂ ಪ್ರೀತಿ, ಸದಾ ನನ್ನ ತಿಂಡಿ ತಿನಿಸುಗಳ ಹಿಂದಿರುವ ಅಮ್ಮ ಅವಳ ಪ್ರೀತಿ ಅದಕ್ಕೆ ಬೆಲೆಯಿಲ್ಲ, ಅದರೇನು ಮಾಡೊದು ಕೆಲಸ ಅಂತ ದೂರ ಇರಬೇಕಾಗುತ್ತದೆ..

ಜಲನಯನ said...

ಜೀವಂತ ದೇವರು
ಜೀವಕಾರಣೀ ಮಾತೃ
ಈ ಮಾತುಗಳಲ್ಲಿ ಎಂತಹ ಅದಮ್ಯ ಅರ್ಥವಿದೆ?
ತಾಯಿ ದೇವರಿಗಿಂತ ಇನ್ನು ದೇವರುಂಟೇ?ನಿಮ್ಮ ಸಮರ್ಪಣಾ ಭಾವ ತಾಯಿಯ ಬಗ್ಗೆ ಅಭಿನಂದನಾರ್ಹ...ಮನಸು ಅವರೇ...
ಎಲ್ಲರಲ್ಲೂ ಈ ಭಾವ ಬಂದರೆ ವೃದ್ಧಾಶ್ರಮಗಳಲ್ಲಿ ಕಂಬನಿಗರೆವ ತಾಯಿಹೃದಯ ಮಮತೆಗರೆಯುತ್ತಿತ್ತು

Laxman said...

Nivu elliddarenu? Nimmannu kayuttade,harasuttade,poshisuttade amman preeti,vatsalya, haraike

shivu.k said...

ಮನಸು ಮೇಡಮ್,

ಅಮ್ಮಂದಿರ ದಿನದಂದೂ ಅಮ್ಮನಿಗೆ ಒಂದು ಸುಂದರ ಕವನದಿಂದ ಪ್ರೀತಿಯ ಸಮರ್ಪಣೆ.

ಮನಸು said...

ಸುನಾಥ್ ಸರ್,
ನೀವು ಹೇಳಿದ್ದು ನಿಜ ಅಮ್ಮನೇ ದೇವರು...
ವಂದನೆಗಳು
ಪ್ರಭು,
ಕೆಲಸ ಜೀವನದಲ್ಲಿ ಅತಿ ಮುಖ್ಯವಾಗಿಬಿಟ್ಟಿದೆ....ಅದರಿಂದ ನಾವು ದುಡಿಮೆ ಬಯಸಿ ದೊರ ದೂರ ಸಾಗುತ್ತಲಿದ್ದೇವೆ ಕೆಲವನ್ನು ನಮ್ಮ ಜೀವನದಿಂದ ಕಳೆದುಕೊಳ್ಳುತ್ತಲಿದ್ದೇವೆ.
ಧನ್ಯವಾದಗಳು
ಅಜಾದ್ ಸರ್,
ಅಮ್ಮ ,ಅಪ್ಪ ಇವರಿಬ್ಬರು ಎರಡು ಕಣ್ಣುಗಳಿದ್ದಂತೆ..... ನನಗೆ ಆ ಎರಡು ಕಣ್ಣು ಬೇಕಾದಷ್ಟು ಮಾಡಿವೆ ನನ್ನ ಜೀವನಕ್ಕೆ ದಾರಿದೀಪ.......ಇಷ್ಟೆಲ್ಲಾ ನನ್ನ ಒಳಿತಿಗೇ ಅವರೇ ಕಾರಣ. ಇರುವುದನ್ನು ಪೊಜಿಸೋಣ ಇಲ್ಲದುದನ್ನು ಬಯಸುವ ಮೊದಲು ಅಲ್ಲವೇ...?
ಧನ್ಯವಾದಗಳು

ಮನಸು said...

ಲಕ್ಷ್ಮಣ್ ಸರ್,
ನೀವು ಹೇಳುವುದು ಸತ್ಯ ಅಮ್ಮನ ಆಶಿರ್ವಾದ, ಪ್ರೀತಿ ನಾವು ಎಲ್ಲಿದ್ದರೊ ಇರುತ್ತೆ...ಚಿರಕಾಲ. ಅವರ ಹಾರೈಕೆಯೆ ನಮ್ಮನ್ನ ಕಾಯುತ್ತಲಿರುವುದು.
ನಿಮ್ಮ ಹಿತನುಡಿ ಸಂತೋಷವೆನಿಸಿದೆ.
ಧನ್ಯವಾದಗಳು
ಶಿವು ಸರ್,
ಹೌದು, ಅಮ್ಮನಿಗೆ ಈ ಕವನ ಸಮರ್ಪಣೆ.
ವಂದನೆಗಳು

Premi said...

Bahala Chennagidhey.... Amma Amma Amma... Novinallu Nalivinallu nammellara baayalli baro shabdha AMMA..... An expression that never ends towards Mother...

Unknown said...

Nimma Kavana Hrudaya Sparshiyaagide, enthahavarannu ammana nenapige badidebbisutthe.

ಮನಸು said...

ಧನ್ಯವಾದಗಳು ಪ್ರೇಮ......ನಿನಗೆ ಅಮ್ಮ ಅಂದರೇನು ಅಂತ ನನಗಿಂತ ನಿನಗೆ ಹೆಚ್ಚು ಅರ್ಥವಾಗಿರೋದು, ತಾಯಿಯ ಪಾತ್ರ ನಿನ್ನ ಹಾಗು ನಿಮ್ಮ ಅಕ್ಕಂದಿರಿಗೆ ಹೆಜ್ಜೆ ಹೆಜ್ಜೆಗು ಪ್ರೋತ್ಸಾಹ, ಆಸರೆ, ನಿಲುವಿಗೆ ಎಲ್ಲಕ್ಕೊ ನಿನ್ನಮ್ಮ ದೇವರು. ನನ್ನ ಕಡೆಯಿಂದ ಆ ಅಮ್ಮನಿಗೆ ಶುಭಾಶಯಗಳು ಸದಾ ಸುಖವಾಗಿರಲೆಂದು ಪ್ರಾರ್ಥಿಸುತ್ತೇನೆ.
ವಂದನೆಗಳು

ಮಂಜುಳ ನೀವು ನನ್ನ ಕವನ ಮೆಚ್ಚಿದ್ದಕ್ಕೆ ಹಾಗು ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು, ನನಗೆ ಬಹಳಾ ಖುಷಿಯಾಗಿದೆ.......ನಿಮ್ಮ ಅಮ್ಮ ಆದರ್ಶ್ ವ್ಯಕ್ತಿ, ನಿಮ್ಮ ತಾಯಿಗೆ ನನ್ನ ಹೃದಯಪೂರ್ವಕ ವಂದನೆಗಳು......
ಧನ್ಯವಾದಗಳು ಹೀಗೆ ಬರುತ್ತಲಿರಿ.

ಸಾಗರದಾಚೆಯ ಇಂಚರ said...

Good one, keep going

ಶಿವಪ್ರಕಾಶ್ said...

ಜೀವನದಲ್ಲಿ ತೀರಿಸಲಾಗದ ಋಣ ಅಂದ್ರೆ ತಾಯಿಯ ಋಣ.
Happy mothers day.

ಮನಸು said...

ಗುರುಮೂರ್ತಿ
ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ಇರಲಿ
ಶಿವಪ್ರಕಾಶ್,
ನೀವು ಹೇಳಿದ್ದು ನಿಜ, ಅಮ್ಮಂದಿರು ಎಷ್ಟೆಲ್ಲಾ ಮಾಡುತ್ತಾರೆ ನಾವು ಅವರಿಗೇನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ ಕೆಲವೊಮ್ಮೆ, ಧನ್ಯವಾದಗಳು

Guruprasad said...

ಮನಸು,,, ಸೂಪರ್...ಅಮ್ಮನ ಬಗ್ಗೆ ಒಳ್ಳೆ ಕವನ,,,, ತುಂಬ ಚೆನ್ನಾಗಿ ವಿವರಿಸಿದ್ದಿರ....ನಿಮ್ಮ ಮನಸಿನ ತಳಮಳ ಗಳನ್ನೂ...
ನಿಮ್ಮ ಅಮ್ಮನಿಗೆ ನನ್ನ ಕಡೆ ಇಂದ Mothers day ಶುಭಾಶಯಗಳು
ಗುರು

ಮನಸು said...

ಗುರು
ಧನ್ಯವಾದಗಳು, ಮನಸಿನಲ್ಲೇ ಅಮ್ಮನ ಪೊಜ್ಯಬಾವ ತುಂಬಿರುತ್ತೆ ಅಲ್ಲವೆ..? ಅಮ್ಮ ಎಲ್ಲರ ಅಮ್ಮಂದಿರು ಹಾಗೆ.

Roopa said...

ಅಮ್ಮನ ಬಗ್ಗೆ ಬರೆದಷ್ಟು ಆಕೆ ಅದನ್ನೆಲ್ಲಾ ಮೀರಿ ಬೆಳೆಯುತ್ತಾಳೆ.
ತಾಯಿಯ ಹೃದಯವನ್ನು ವರ್ಣಿಸಿದಷ್ಟು ದೂರಕ್ಕೆ ನಿಲ್ಲುವಂತಹದ್ದು
ಚಂದದ ಕವನ ಅಮ್ಮನಿಗೆ ಅರ್ಪಣೆ ಮಾಡಿದ್ದಕೆ ಸಂತೋಷವಾಯ್ತು

ಮನಸು said...

ರೂಪ ನಿಮಗೆ ಸ್ವಾಗತ, ಅಮ್ಮನ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಲಿರಿ.

ಧರಿತ್ರಿ said...

ಗುರು ಬ್ಲಾಗಿಗೆ ಹೋದ್ರೆ ಅಲ್ಲಿ ಅಮ್ಮನ ಬಗ್ಗೆ ಬರೆದಿದ್ದಾರೆ. ಅಲ್ಲಿಂದ ಇಲ್ಲಿ ಬಂದ್ರೆ ಇಲ್ಲಿಯೂ ಅಮ್ಮನ ಕಲರವ..ಮನಸ್ಸೆಲ್ಲಾ ಖುಷಿಯ ಸಂಭ್ರಮದಲ್ಲಿ ಹಾರಿಬಿಡ್ತು.
ಅಮ್ಮ ಎಂದರೆ ಏನೋ ಹರುಷವು
ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಎಂದೂ ಕಾಣದಾ ಸುಖವಾ ಕಂಡೆವು...

ಮೂರು ನದಿಯು ಸೇರಿ ಹರಿದು ಬಂದರೇನು?
ಜನರು ಅದರ ರಭಸ ಕಂಡು ಕಡಲು ಎನುವರೇನು?
ಆಹಾ....ಅಹಹ.....
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ..
ಚಿ! ಉದಯಶಂಕರ್ ಕಳ್ಳ-ಕುಳ್ಳ ಚಿತ್ರಕ್ಕೆ ಬರೆದ ಹಾಡು ನಿಮಗಾಗಿ.
ಅಭಿನಂದನೆಗಳು
-ಧರಿತ್ರಿ

ಮನಸು said...

ಧನ್ಯವಾದಗಳು ಧರಿತ್ರಿ, ನನಗಾಗಿ ನೀವೊಂದು ಹಾಡನ್ನೇ ಇಟ್ಟು ಬಿಟ್ಟಿರಲ್ಲ ನಿನ್ನ ಅಕ್ಕನಿಗಾಗಿ.....ನನಗೆ ತಂಗಿ ಇಲ್ಲ ಆದರು ನೀವು ತಂಗಿಯಂತೆ ಪ್ರೀತಿ ಮಾತನಾಡಿದಿರಲ್ಲ ನನ್ನ ಖುಷಿ ಎಲ್ಲೇ ಮೀರಿದೆ....
ವಂದನೆಗಳು...

Ittigecement said...

ಮನಸು....

ದೇವರು ಎಲ್ಲಾ ಕಡೆ ಇರಲಾಗುವದಿಲ್ಲವೆಂದು...
ಅಪ್ಪ, ಅಮ್ಮನನ್ನು ಸ್ರಷ್ಟಿಸಿದನಂತೆ..

ಅಮ್ಮ ದೇವರು...

ಸುಂದರವಾದ, ಅರ್ಥಗರ್ಭಿತ,
ಭಾವಪೂರ್ಣವಾದ ಕವನ...

ನನಗೂ ಅಮ್ಮನ ನೆನಪಾಯಿತು...

ಮನಸು said...

ಬಹಳ ದಿನಗಳ ನಂತರ ಬಂದಿದ್ದೀರಿ ಧನ್ಯವಾದಗಳು ಸರ್, ಅಮ್ಮನ ನೆನಪು ಎಂದೆಂದಿಗು ಇರುತ್ತೆ ಅಲ್ಲವೆ..?

ದಿನಕರ ಮೊಗೇರ said...

........................................................................ಇಷ್ಟೆಲ್ಲಾ ಹೇಳಬಹುದು ಅಮ್ಮನ ಬಗ್ಗೆ..... ಥ್ಯಾಂಕ್ಸ್ ......