ಆಫೀಸಿಗೆ ಬೆಳ್ಳಿಗ್ಗೆ ಬೆಳ್ಳಿಗ್ಗೆ ಎದ್ದು ರೆಡಿಯಾಗಿ ಹೋಗೋದು ಇದೆಯಲ್ಲಾ.... ಒಂದು ತರಾ ಬೇಜಾರು....... ಏನು ಮಾಡೋದು ಹೊಟ್ಟೆಪಾಡು... ಹೋಗ್ಲೇಬೇಕು.......
ಯಾವಾಗಲೂ ಬೆಳ್ಳಿಗ್ಗೆ ೬.೪೦ ಅಷ್ಟರಲ್ಲಿ ನನ್ನವರು ರೆಡಿಯಾಗಿ ನಿಲ್ಲಿಸಿದ್ದ ಕಾರನ್ನು ಸ್ವಲ್ಪ ಹೊತ್ತು ಸ್ಟಾರ್ಟ್ ಮಾಡಿ ಆನಂತರ ಮನೆ ಮುಂದಕ್ಕೆ ತಂದು ನನಗಾಗಿ ಕಾಯೋ ವಾಡಿಕೆ... ಏನು ಮಾಡೋದು ನಾವು ಹೆಂಗಳೆಯರು ಸ್ವಲ್ಪ ಹಾಗೆ ಕನ್ನಡಿ ಎಂಬ ಭೈರವನ ಜೊತೆ ಒಡನಾಟ ಜಾಸ್ತಿ..... ಅಂದು ಹೊರಗಡೆ ನನಗಾಗಿ ಕಾರ್ ನಿಲ್ಲಿಸಿ ಕಾಯುತ್ತಿದ್ದ ನನ್ನವರು ಬೈಯ್ದಾರು ಎಷ್ಟೊತ್ತು ಶೃಂಗಾರ ಮಾಡಿಕೊಂಡು ಬೇಗ ಬರೋದಿಕ್ಕೆ ಆಗೋಲ್ಲವಾ..... ಎಂದರೆ..!!? ಎಂದು ಲಘುಬಗೆಯಿಂದ ಮನೆಗೆ ಬೀಗ ಜಡಿದು ಓಡುತ್ತಿದ್ದೆ..... ಅಷ್ಟರಲ್ಲಿ ನನ್ನ ಮುಂದೆ ಒಬ್ಬಾಕೆ ಹೋಗ್ತಾ ಇದ್ದಳು ನಾನು ಅವಳನ್ನೂ ಹಿಂದಿಕ್ಕಿ ಬರಬರನೇ ಹೋದವಳೇ ಎದುರೇ ಇದ್ದ ಕೆಂಬಣ್ಣದ ಕಾರನ್ನು ಹತ್ತಲು ಹತ್ತಿರವಾಗುತ್ತಿದ್ದಂತೆ ನನಗೆ ಕಾರಿನಲ್ಲಿರೋರು ಯಾರು ಅಂತ ಅನ್ನಿಸ್ತಾ ಇತ್ತು......... ಅಯ್ಯೋ ಇದೇನು ನನ್ನವರು ಗಡ್ಡ ಬಿಟ್ಟಿಲ್ಲ... ಶೇವ್ ಮಾಡ್ತಾರಲ್ಲಾ ಯಾವಾಗಲೂ, ಇಂದು ಅವರ ಮುಖ ನೋಡಿದ್ನಾ ಇಲ್ವಾ........ ಮಬ್ಬು ಮಬ್ಬಾಗಿ ಕಾರಿನೊಳಗಿರುವ ವ್ಯಕ್ತಿ ಕಾಣ್ತಾ ಇದ್ರು....... ಕನ್ನಡಕ ಬೇರೆ ಹಾಕಿರ್ಲಿಲ್ಲ..... ಏನೋ ಬಿಡು ಎಂದು ಮತ್ತೂ ಹತ್ತಿರ ಹೋಗ್ತಾ ಇದ್ದ ಹಾಗೆ ಕಾರ್ ಒಳಗಿಂದ ಕೈ ಅಲುಗಾಡಿದ ರೀತಿ ಕಾಣುಸ್ತಾ ಇತ್ತು ............ ಭಿಕ್ಷೆಗೆ ಬಂದವರನ್ನ ಮುಂದಕ್ಕೆ ಹೋಗು ಅಂತಾರಲ್ಲ ಹಾಗೆ ಸನ್ನೇ ಮಾಡುತ್ತಿರುವ ಹಾಗೆ ಕಾಣಿಸಿತು ಆದರು........ ನಾನು ಕಾರಿನ ಫ್ರೆಂಟ್ ಸೀಟ್ ಬಾಗಿಲು ತೆಗೆದೆ ಆಗಲೇ ಗೊತ್ತಾಗಿದ್ದು ನೋಡೀ..........
ಅಬ್ಬಾ..!!!! ಇದು ನನ್ನವರಲ್ಲ ನಮ್ಮ ಕಾರಲ್ಲಾ ನಾನು ಯಾವುದೋ ಕಾರಿಗೆ ......... ಹತ್ತಿಕೊಳ್ಳಲು ಬಂದುಬಿಟ್ಟಿದ್ದೀನಿ ಎಂದು. ಆಮೇಲೆ ಮುಂದೆ ನೋಡಿದ್ರೆ ಅಲ್ಲೇ ಇದೆ ನಮ್ಮ ಕಾರ್ ........ (ಆತ ಕೈ ಸನ್ನೆ ಮಾಡಿದ್ದು ಮುಂದಿರುವ ಕಾರ್ ನಿಮ್ಮದು ಎಂದು ಆಗ ಅರ್ಥವಾಯ್ತು) ನನ್ಗೆ ನಾಚಿಕೆಯಾಗಿ ಸಾರಿ ಕೇಳಿದೆ.......... ಕಾರಿನಲ್ಲಿ ಕುಳಿತಿರುವವ ಏನೋ ಸುಮ್ಮನಾದ ನಾನು ಒಬ್ಬಾಕೆನ ಹಿಂದಿಕ್ಕಿ ಬಂದಿದ್ದೆನಲ್ಲಾ .....!!! ಆಕೆ ಗುರ್ ಎಂದಾಳು ಎಂದು ಹಿಂತಿರುಗಿ ಅವಳಿಗೂ ಸಾರಿ ಹೇಳಿದೆ..........ಆಕೆ ಏನೂ ಮಾತನಾಡಿದ್ದು ಕೇಳಿಸಲಿಲ್ಲ, ಜೊತೆಗೆ ಅವರ ಮುಖಭಾವವೂ ತಿಳಿಯಲಿಲ್ಲ ಕಾರಣ ಅವರ ಕಣ್ಣು ಮಾತ್ರ ಕಾಣುವಂತಿದ್ದ ಉಡುಪು.....ಆದ್ರೂ ಅವರ ಕಣ್ಣಿನಲ್ಲೇ ಗೊತ್ತಾಯ್ತು ಪರವಾಗಿಲ್ಲ ಎಂದಿದ್ದು..........
ಅಯ್ಯೋ....... ಅವರಿರ್ಲಿ ಇಲ್ಲಿ ನನ್ನವರು ಕಾರಿನಲ್ಲೇ ಕೂತು..... ಹಿಂಬದಿ ಬರುವ ಕಾರುಗಳ ಕಾರುಬಾರು ನೋಡುವ ಕನ್ನಡಿಯಲ್ಲೇ ನನ್ನನ್ನು ನೋಡ್ತಾ ಇದ್ದಾರೆ..... ಹುಸಿ ಹುಸಿ ನಗುವಿನಲ್ಲಿ ನಿನ್ಗೆ ಅಷ್ಟು ಗೊತ್ತಾಗೋಲ್ವ ನಮ್ಮ ಕಾರು ಯಾವ್ದು ಅಂತಾ...!!!!
ಅಯ್ಯೋ ಇಲ್ಲಪ್ಪ ನಾನು ಆತುರವಾಗಿ ಬರ್ತಾ ಇದ್ದೇ ಅಲ್ಲದೇ ಆ ಕಾರು LANCER.... ಒಂದೇ ಬಣ್ಣ.... ಕನ್ನಡಕ ಬೇರೆ ಹಾಕಿರ್ಲಿಲ್ಲ... ಮಬ್ಬು ಮಬ್ಬು ಒಳಗಿರೋರು ನೀವಲ್ಲ ಅಂತಾ ತಿಳಿಲಿಲ್ಲ....
ಕನ್ನಡಕ ಹಾಕ್ಕೊಳ್ಳೊದು ಅಲ್ವಾ....?
ಅಯ್ಯೋ ಕನ್ನಡಕ ಮತ್ತೆ ವಾಚ್ ಇವೆಲ್ಲಾ ಹಾಕಿಕೊಳ್ಳೋಸ್ಟರಲ್ಲಿ ಟೈಮ್ ಆಗುತ್ತೆ ಅದರ ಬದಲು ಕಾರಿನಲ್ಲಿ ಕುಳಿತಾಗ ಸಮಯ ಇರುತ್ತೇ ಅಂತಾ ದಿನಾ ಹಾಗೆ ತರ್ತೀನಲ್ಲ ಇವತ್ತು ಹಾಗೇ ಬಂದೆ...... ನೀವು ನಿಲ್ಲಿಸೋ ಜಾಗದಲ್ಲಿ ಆ ಕಾರು ತಂದು ಅದು ಅಲ್ಲದೆ ಒಂದೇ ತರಹದ ಕಾರು ನಿಲ್ಲಿಸಿದ್ರೆ ಹಿಂಗೆ ಆಗುತ್ತೆ....... ಏನು ಮಾಡೋದು...... ಆ ಗಂಡ ಹೆಂಡತಿ ಏನು ತಿಳಿದಿದ್ದ್ರೆ ಸಾಕು.... ಎಂದು........ ನಾ ಏನೇ ಬಡಬಡಾಯಿಸಿದರೂ ನನ್ನವರಿಗೆ ನಗುನೋ ನಗು....
ಇಷ್ಟೆಲ್ಲಾ ಮಾತಾಡುವಷ್ಟರಲ್ಲಿ ಆ ಕಾರ್ ನಮ್ಮ ಮುಂದೆ ಹಾರಿ ಹೋಯ್ತು ಅಷ್ಟರಲ್ಲಾಗಲೇ ಕನ್ನಡಕ ಕಣ್ಣಿಗೆ ಬಂದಿತ್ತು ಅಗೋ ನೋಡಿ ಆ ಕಾರಿನ ನಂಬರ್ ಕೂಡ ಹೆಚ್ಚು ಕಮ್ಮಿ ನಮ್ಮ ಕಾರಿನ ನಂಬರ್ ತರವೇ ಇದೇ......... ಏನು ಕರ್ಮನೋ ಬೆಳಿಗ್ಗೆ ಬೆಳಿಗ್ಗೆ ....... ನನ್ಗೆ ನಾಚಿಕೆಯಾಗೋ ಹಾಗೆ ಈ ಕೆಲಸ ಮಾಡಿದ್ದೆ ... ಅಂದು !!!...........
ಇದೆಲ್ಲಾ ಅವಾಂತರವಾದಾಗಿನಿಂದ ದಿನ ಕಾರ್ ನಂಬರ್ ಪ್ಲೇಟ್ ನೋಡಿ.... ಕಾರಿನೊಳಗೆ ಇರುವವರು ನನ್ನವರೇ ಎಂದು ಖಾತ್ರಿ ಮಾಡಿಕೊಳ್ಳುತ್ತೇನೆ ... ಅದು ಏನಾದರು ತಡವಾಗಿ ಆಚೆ ಹೋದರೆ....... ಸಾಮಾನ್ಯವಾಗಿ ನನ್ನವರ ಜೊತೆಯಲ್ಲೇ ಹೆಜ್ಜೆ ಹಾಕೋಕ್ಕೆ ಪ್ರಾರಂಭಿಸಿದ್ದೀನಿ ಯಾಕೆ ಗೊತ್ತಾ...!!! ಪಕ್ಕದಲ್ಲೇ ಇದ್ದರೆ ಅವರು ಯಾವ ಕಾರಿನಲ್ಲಿ ಕೂರುತಾರೋ ನಾನೂ ಅದೇ ಕಾರಿನಲ್ಲಿ ಕೂರುತ್ತೇನೆ...... ಇದೆ ಸರಿಯಾದ ಐಡಿಯಾ ಅಲ್ಲವೆ.....
ಈಗ ಆ ಕಾರಿನವರು ಎದುರು ಸಿಕ್ಕಾಗ ನಾನು ಅವರುಗಳ ಮುಖವೇ ನೋಡೋಲ್ಲ ........... ಗೊತ್ತಿಲ್ಲದವಳಂತೆ ಇದ್ದು ಬಿಡ್ತೀನಿ.... ಹೀಗೂ ಆಗುತ್ತೆ ಕೆಲವೊಮ್ಮೆ ಏನು ಮಾಡೋದು ಅಲ್ವಾ....???
ಈ ಲೇಖನ ಯಾಕೆ ಬರೆದೆ ಅಂತೀರಾ...!!! ಇವತ್ತು... ನಾನು ನನ್ನ ಕನ್ನಡಕವನ್ನ ಮರೆತು ಆಫೀಸಿಗೆ ಬಂದಿದ್ದೀನಿ (ನನ್ನವರಿಗೆ ಹೇಳ ಬೇಡಿ ಆಮೇಲೆ ಬೈತಾರೆ...!!!) ಹಹಹಹ ಇಂದು ಇಲ್ಲಿ ಆಫೀಸಿನಲ್ಲಿ ಏನು ಫಜೀತಿ ಆಗುತ್ತೋ ಗೊತ್ತಿಲ್ಲ ..... ಮಬ್ಬು ಮಬ್ಬಿನಲ್ಲೇ ಟೈಪಿಸಿದ್ದೇನೆ... ತಪ್ಪಿದ್ದರೆ ತಿದ್ದಿಕೊಳ್ಳಿ ಹಹಹಹ......
51 comments:
ಮನಸು ಮೇಡಮ್,
ಒಂದು ವೇಳೆ ಆ ಕಾರಿನ ಚಾಲಕರೂ ಕ್ಲೀನ್ ಶೇವ್ ಮಾಡಿಕೊಂಡವರೇ ಆಗಿದ್ದು, ನಿಮ್ಮವರನ್ನೇ ಸ್ವಲ್ಪ ಹೋಲತಾ ಇದ್ದರೆ, ಎಂಥಾ ಫಜೀತಿ ಆಗತಿತ್ತೋ ಏನೋ. ಕೇರ್ಫುಲ್ ಆಗಿ ಇರಿಯಮ್ಮಾ!
ಹ್ಹ ಹ್ಹ. ಒಳ್ಳೇ ತಮಾಷೆಯಾಗಿದೆ ಈ ಘಟನೆ.
ಆಫೀಸಿಗೆ ಬೆಳ್ ಬೆಳಗ್ಗೆ ೬.೪೦ ಕ್ಕೇ ಹೊರಡಬೇಕಾ ನಿಮ್ ದೇಶದಲ್ಲಿ!!
hahahah
tamaasheyaagide nimma kathe
kannadaka maribedi
Hushaaru akkayya... :(
ಕನ್ನಡಕ ಇಲ್ಲದೆಯೂ ನೀವು ಚೆನ್ನಾಗಿ ಟೈಪಿಸ್ತೀರಿ, ನಗಿಸುತ್ತೀರಿ ಅಂತ ಗೊತ್ತಾಯ್ತು!.
ಒಳ್ಳೆ ತಮಾಷೆಯಾಗಿತ್ತು. ನಿಮ್ಮೆಜಮಾನ್ರಿಗೆ ಹೇಳೊಲ್ಲ ಬಿಡಿ !.
ಹಹಹ... ಚೆನ್ನಾಗಿದೇರಿ ನಿಮ್ ಕಥೆ......
ಸುನಾಥ್ ಕಾಕ,
ಹಹಹ..... ನಿಜ ನಿಜ ನಿಮ್ಮ ಮಾತು ಸಧ್ಯ ಆ ವ್ಯಕ್ತಿ .... ಮುಂದಕ್ಕೆ ಹೋಗಮ್ಮ ಅನ್ನೋ ಹಾಗೆ ಸನ್ನೆ ಮಾಡಿದ್ದರು ಬೇರೆ ಹಹಹ... ಸರಿ ಕೇರ್ ಫುಲ್ ಆಗಿರ್ತೀನಿ ಖಂಡಿತಾ.... ಎಚ್ಚರ ನೀಡಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್...
ವಿ.ರಾ.ಹೆ
ಹೋ...೬.೪೦ ಅದು ಲೇಟಾಯ್ತು.... ಈಗ ಬೇಸಿಗೆ ೫೫ ಡಿಗ್ರಿ ಬಿಸಿಗೆ ಹೆದರಿ ಜನ ಎಲ್ಲಾ ರಜೆಗೆ ಹೋಗಿರ್ತಾರೆ ಜೊತೆಗೆ ಕೆಲವು ಕೆಲವು ಕಂಪನಿಗಳು ಬೆಳಗಿನ ಜಾವ ೪ ಗಂಟೆಗೆ ಕೆಲಸ ಇಟ್ಟಿರುವುದರಿಂದ ನಮ್ಮಂತವರಿಗೆ ಟ್ರಾಫಿಕ್ ಕಡಿಮೆ ಸ್ವಲ್ಪ ತಡವಾಗಿ ಬಿಡ್ತೀನಿ.... ಇಲ್ಲವಾದರೆ ೬.೧೦ಕ್ಕೆ ಮನೆ ಬಿಡ್ತಾ ಇದ್ದೆ.....
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ... ತಮಾಷೆ ಅನ್ನಿಸಿತು ಆದರೆ ಅಂದು ಒಂದು ಕ್ಷಣ ಹೆದರಿಬಿಟ್ಟೆ... ಹಿಂದೆ ಆ ಕಾರಿನವರ ಹೆಂಡತಿ ಬೇರೆ ಇದ್ದರು ... ಹೋ ದೇವರೆ ಬದುಕಿದೆ ಎನಿಸಿತು ಹಹಹ
ಗುರು,
ಕನ್ನಡಕ ಇವತ್ತು ಮರೆತಿದ್ದೆ.... ಆದರೆ ಆ ರೀತಿ ಫಜೀತಿ ಏನು ಆಗಿಲ್ಲ ಸಧ್ಯ.... ಧನ್ಯವಾದಗಳು...
ಮನಸು-ಸವಿಗನಸು...ಇಬ್ಬರಿಗೂ ಎಡವಟ್ಟು....ಹಹಹ ನಿಮ್ಮ ಕಂದ ಬೆಂಗಳೂರಲ್ಲಿ...ನನ್ನ ಮಡದಿ-ಮಗಳು ಬೆಂಗಳೂರಿನಲ್ಲಿ ನನ್ನದು ಒಂಥರಾ ಎಡವಟ್ಟಾದ್ರೆ...
ಆಯ್ಯೋ..ಹೌದು ಆ ಹೆಂಗಸು ನಿಮ್ಮನ್ನ ಹಿಂದಿಕ್ಕಿ ಮುಂದಕ್ಕೆ ಬಂದಿದ್ದರೆ ಮಹೇಶ್....ಹೊರಟೇ ಬಿಡ್ತಿದ್ರು...ಮತ್ತೆ ಓ ಅಯಾಮ್ ಸಾರಿ ,,,ಹಹಹಹ... ಹೌದು..ಕನ್ನಡಕ ಇಲ್ದೆ ಕನ್ನಡ ಟೈಪ್ ಮಾಡೋಕೆ ಆಗುತ್ತಾ..ನಾನೂ ಪ್ರಯತ್ಸ್ತೀನಿ...
ಸುಬ್ರಮಣ್ಯ ಸರ್,
ಸದ್ಯ ನೀವು ಸರ್ಟಿಫಿಕೇಟ್ ಕೊಟ್ಟಿರಲ್ಲಾ... ಥ್ಯಾಂಕ್ಸ್...... ಹಾ..!!! ಹೇಳಬೇಡಿ... ಮತ್ತಷ್ಟು ಬೈಸ್ಕೋತೀನಿ...
ಆದ್ರೂ ನೀವೆಲ್ಲ ನನ್ನ ಸಹಾಯಕ್ಕೆ ನಿಲ್ತೀರಿ ಅಂತ ಗೊತ್ತು ಅದಕ್ಕೆ ಇವತ್ತೇನಾದ್ರು ಬೈದ್ರೆ ಬಂದೇ ಬರುತ್ತೀರಿ ಎಂದು ಎಲ್ಲಾ ವಿಷಯ ತಿಳಿಸಿದ್ದೀನಿ.
ಧನ್ಯವಾದಗಳು... ಹೀಗೆ ತಥಾಸ್ತು ನೀಡ್ತಾ ಇರಿ.... ನಿಮ್ಮ ಆಶಿರ್ವಾದ ಬೇಕು
ಶಿವು,
ಹುಷಾರಾಗಿರ್ತೀನಪ್ಪ.... ಆದರೆ ಹಿಂಗೇನಾದ್ರು ಎಡವಟ್ಟು ಆದಾಗ ಅಕ್ಕನ್ನ ಬಂದು ಕಾಪಾಡು....
ಪ್ರಗತಿ,
ನಿಮಗೇನು ಈ ರೀತಿ ಆಗಿಲ್ಲವೆಂದುಕೊಳ್ಳುತ್ತೇನೆ... ಛೇ ಹಾಗೆ ಆಗೋದು ಬೇಡಪ್ಪ..... ಕಣ್ಣಿನ ಎಡವಟ್ಟು...... ಆತುರದ ಸಮಯ ಹೀಗಾಯ್ತು ...ನಗ್ತಾ ಇರಿ ಧನ್ಯವಾದಗಳು
ಅಜಾದ್ ಸರ್,
ಹಹಹ ಹಾಗೇನಾದ್ರು ಹಾಗಿದ್ದರೆ ಮಹೇಶ್ ಖುಷಿ ಪಡುತ್ತಿದ್ದರೇನೋ ಗೊತ್ತಿಲ್ಲ...... ಹಾಗೆಲ್ಲ ಟೈಪಿಸಲು ಹೋಗಬೇಡಿ ಆಫೀಸಿನಲ್ಲಿ ದೊಡ್ಡ ಸ್ಕ್ರೀನ್ ಸಿಸ್ಟಮ್ ಇತ್ತು ಅದು ಒಳ್ಳೇ ಟೀವಿ ಇದ್ದಾ ಹಾಗಿತ್ತು ಆದ್ದರಿಂದ ಸ್ವಲ್ಪ ಮಟ್ಟಿಗೆ ಕಾಣಿಸಿತು ಆದರೆ ತುಂಬಾ ಹತ್ತಿರದಿಂದ ನೋಡ್ತಾ ಇದ್ದೆ ಸಿಸ್ಟಮ್ ನಾ..... ಎಲ್ಲಾ ನಗ್ತಾ ಇದ್ದರು ಹಹಹ.....
ಮೇಡಂ, ನಿಮ್ಮ ಸ್ಥಿತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ : )) , ನಾನು ಇಲ್ಲಿನ ಹಳ್ಳಿಯ ನಾಟಕ ನೋಡಿದ ರೀತಿ ಆಯ್ತು ಇದು, ಅಂತೂ ಅವಾಂತರ ಅಷ್ಟಕ್ಕೇ ಬಗೆಹರಿಯಿತಲ್ಲ, ಚೆನ್ನಾಗಿದೆ ನಿಮ್ಮ ಘಟನೆ, ಥ್ಯಾಂಕ್ಸ್
ಮನಸು ಮೇಡಂ,
ಈ ಲೇಖನ ತುಂಬಾ ಸೊಗಸಾಗಿ ಓದಿಸಿಕೊಂಡು ಹೋಯಿತು... ಕನ್ನಡಕ ಇಲ್ಲದೆ ಬರೆದದ್ದಕ್ಕೋ ಗೊತ್ತಿಲ್ಲ.... ಹ್ಹ ಹ್ಹಾ... ಅಲ್ಲಾ ನೀವು ಹೀಗೆ ಮಾಡಿದ್ರೆ, ಮಹೇಶ್ ಸರ್ ಗತಿ ಏನು...... ... ನಕ್ಕು ನಕ್ಕು ಸಾಕಾಯ್ತು.....
ಹ್ಹ ಹ್ಹ..ಸಕತ್ತಾಗಿದೆ..:))
ಭಟ್ ಸರ್,
ಹಳ್ಳಿನೇನಾ ಸಾರ್ ನಾಟಕ....... ಎಲ್ಲಾ ಕಡೆ ನಾಟಕ ನೆಡೆಯುತ್ತ ಕೆಲವರು ಬಣ್ಣ ಹಚ್ಚಿ ನಾಟಕವಾಡುತ್ತಾರೆ ಇನ್ನು ಕೆಲವರು ಬಣ್ಣ ಹಚ್ಚದೆಯೇ ನಾಟಕವಾಡುತ್ತಾರೆ...ಹಹಹ್
ದಿನಕರ್ ಸರ್...
ಮಹೇಶ್ ಗತಿ ಏನು ಅಂತೀರಾ.... ಯಾರಿಗೆ ಗೊತ್ತು ಒಳ್ಳೆದೇ ಆಗ್ತಾ ಇತ್ತು ಎಂದು ಅವರು ಅಂದುಕೂಳ್ಳುತ್ತಿದ್ದರೇನೋ.... ಹಹಹ
ವನಿತಾ ನಗ್ತಾ ಇದ್ದೀರಾ.... ನನ್ನ ಫಜೀತಿಗೆ.... ನಿಮಗೇನು ಹೀಗೆ ಆಗಿಲ್ಲ ತಾನೆ... ಅಹಹಹ್
Akka, in mel jopaana... :)
kannadaka maribedi.... :-)
ಹುಶಾರ್ರೀ... ಸುಗುಣ..:)...:)
ಸುಗುಣ ಅವರೆ,
ಒಳ್ಳೇ ಫಚೀತಿನೇ ಆಗಿತ್ತು ಅಂತಾಯ್ತು....:) ತಪ್ಪು ಆಗೋದು ಸಹಜ ಬಿಡಿ.... ನಿಮ್ಮಿಂದ ಆಗಿದ್ದು ಏನೂ ದೊಡ್ಡ ತಪ್ಪಲ್ಲ... ತಪ್ಪು ಗ್ರಹಿಕೆ ಅಷ್ಟೇ... ಆದರೂ ಹೀಗೂ ಆಗಬಹುದು ಎನ್ನುವುದು ತಿಳಿಯಿತು :)
ದಿವ್ಯಾ,
ಜೋಪಾನವಾಗಿರ್ತೀನಿ, ಕನ್ನಡಕ ಮರೆತರೂ ನನ್ನವರ ಜೊತೆಯಲ್ಲೇ ಹೊರಡುತ್ತೇನೆ ಹಹಹ..... ಸರಿ ಅಲ್ವಾ.... ಧನ್ಯವಾದಗಳು
ಹಹಹ ಹುಷಾರಾಗಿರ್ತೀನಿ.... ಮತ್ತೆ ಇನ್ನೊಂದು ಯಡವಟ್ಟು ಮಾಡುವುದು ಬೇಡ ಅಲ್ಲವೇ ಹಹಹಹ
ತೇಜು,
ಸದ್ಯ ನೀವಾದ್ರು ಒಪ್ಪಿಕೊಂಡಿರಲ್ಲಾ, ನನ್ಗೆ ಸ್ವಲ್ಪ ಸಾತ್ ನೀಡಿದ್ದೀರಿ ತುಂಬಾ ಥ್ಯಾಂಕ್ಸ್..... ಹಹಹ ಕೆಲವೊಮ್ಮೆ ಅರ್ಜೆಂಟ್ ಇದ್ದಾಗ ಹೀಗೆ ಆಗುತ್ತೆ ಏನು ಮಾಡೋದು ಹಹಹ್
ಸುಗುಣ ಇನ್ನೂ ಮೇಲೆ ಕನ್ನಡಕ ಮರೆಯದೆ ಹಾಕಿಕೊಳ್ಳಿ ..ಇಲ್ಲಾಂದ್ರೆ ಮಹೇಶ್ ನಿಮ್ಮನ್ನು ಬಿಟ್ಟು ಆಫೀಸ್ ಗೆ ಹೊರಟೆ ಬಿಡುತ್ತಾರೆ ಅಷ್ಟೇ..ಕಾರಿನಲ್ಲಿ ಹೋಗುವಾಗ ಜಾಗ್ರತೆ ಯಾರ್ಯಾರೋ ಕಾರ್ ಹತ್ತಲು ಹೋಗಬೇಡಿ ಆಯ್ತಾ ಹ್ಹಾ ಹ್ಹ ಹ್ಹಾ
ಸುಗುಣರವರೆ,
ನಿಮ್ಮ ಸುಲೋಚನ ಪ್ರಕರಣ ಹಾಸ್ಯ ಭರಿತವಾಗಿ ನಗೆಯುಕ್ಕಿಸುವ೦ತಿತ್ತು. ಚೆನ್ನಾಗಿ ಬರೆಯುತ್ತೀರಿ. keep it up!
article ತುಂಬಾ ಚನ್ನಾಗಿ ಮೂಡಿಬಂದಿದೆ. . ಹಾಗೆ ಒಮ್ಮೆ ಬೇಟಿ ಕೊಡಿ ನನ್ನವಳಲೋಕಕ್ಕೆ
www.nannavalaloka.blogspot.com
SATISH N GOWDA
ha ha ha ha :)
ಶಶಿ ಅಕ್ಕ,
ಧನ್ಯವಾದಗಳು ಹಹಹ ಯೋಚಿಸಬೇಡಿ ಇನ್ನು ಮುಂದೆ ಹುಷಾರಾಗಿ ಇರ್ತೀನಿ....
ಪ್ರಭಾರವರೆ,
ನಿಮಗೂ ನಗು ಬಂತೆ.... ಸದಾ ನಗುವಿರಲಿ... ಧನ್ಯವಾದಗಳು....
ಸತೀಶ್,
ಧನ್ಯವಾದಗಳು..........ನಿಮ್ಮ ಬ್ಲಾಗ್ ಗೆ ಭೇಟಿ ನೀಡುವೆ.... ಸದಾ ಬರುತ್ತಲಿರಿ.
arya_forU .....
ನಗುವಲ್ಲೇ ಧನ್ಯವಾದಗಳು ನಿಮಗೆ
ಮನಸು...
ಹಾ..ಹ್ಹಾ...!!
ಈ ಘಟನೆಯಲ್ಲಿ ಪೂರ್ತಿಯಾಗಿ ಮಜಾ ತೆಗೆದುಕೊಳ್ಳುತ್ತಿದ್ದವ "ಮಹೇಶ್" ಅಲ್ಲವಾ?
ಬಹಳ ತುಂಟ.. !!
ನಾನು ಈ ಕನ್ನಡಕದ ಸಹವಾಸದಿಂದ ಬೇಸರವಾಗಿ ಮನೆಯಲ್ಲಿ/ ಕಾರಿನಲ್ಲಿ ಎಲ್ಲಕಡೆಯಲ್ಲೂ ಕನ್ನಡಕ ಇಟ್ಟುಕೊಂಡಿದ್ದೇನೆ..
ನೀವೂ ಹಾಗೆ ವ್ಯಾನಿಟಿ ಬ್ಯಾಗಿನಲ್ಲಿ ಕನ್ನಡಕ ಇಟ್ಟುಕೊಂಡುಬಿಡಿ...ಸಮಸ್ಯೆಯಾಗೊಲ್ಲ..
NIVE sorry nice!!!naanu kannadaka haakoondilla ivattu!!!
:-)))))))))))
ಪ್ರಕಾಶಣ್ಣ,
ಹೂ ನೋಡಿ, ಮಹೇಶ್ ಆ ಪ್ರಸಂಗದಲ್ಲಿ ಮಜಾ ತಗೊತಾ ಇದ್ದರು.... ಏನು ಮಾಡೋದು ನಾನು ಸುಮ್ಮನಿದ್ದೆ...
ನಾನು ಈಗ ಅದೇ ಕೆಲಸ ಮಾಡ್ತೀನಿ, ಕನ್ನಡಕವನ್ನು ಪರ್ಮನೆಂಟಾಗಿ ಬ್ಯಾಗನಲ್ಲಿ ಇಟ್ಟುಕೊಳ್ಳುತ್ತೇನೆ....
ಧನ್ಯವಾದಗಳು
ಸೀತಾರಮ್ ಸರ್,
ಕನ್ನಡಕ ಮರೆತು ಕಥೆಯನ್ನು ಉಲ್ಟಾ ಓದಿಲ್ಲ ತಾನೆ ಹಹಹ.... ಎಲ್ಲಿ ಇತ್ತೀಚೆಗೆ ನಿಮ್ಮ ಲೇಖನಗಳು ಬ್ಲಾಗ್ ನಲ್ಲಿ ಬರುತ್ತಿಲ್ಲ ಕನ್ನಡ ಹುಡುಕುತ್ತಲಿದ್ದೀರಾ ಏನು ಕಥೆ..?
ಧನ್ಯವಾದಗಳು
ಚೆನ್ನಾಗಿದೆ..ಚೆನ್ನಾಗಿದೆ..
ನಿಮ್ಮ ಅವಾಂತರದಿಂದ ನಮಗೂ ನಗು ಬಂತು..
ಮನಸು ರವರೆ ನಿಮ್ಮ ಬರಹವನ್ನ ಒಮ್ಮೆ ಓದಿದ್ದೆ, ಅದರೊ ಇನ್ನೊಮ್ಮೆ ಓದೋ ಅಸೆಂದ ಮತ್ತೆ ನಗೆ ಗಡಲಲ್ಲಿ ತೇಲುತ್ತಿದ್ದೇನೆ ಉತ್ತಮ ನರಹ ಧನ್ಯವಾದಗಳು . ನನ್ನವಳಲೋಕಕ್ಕೆ ಸ್ವಾಗತ ...... ನನ್ನ ಬ್ಲಾಗಿಗೆ ಪಲೋವರ್ ಆಗಬಹುದಲ್ಲವೇ...?
ಮನಸು ಮೇಡಮ್,
ನಿಮ್ಮ ಕಾರ್ ಕಿತಾಪತಿ ಚೆನ್ನಾಗಿದೆ...ನೀವು ಕನ್ನಡಕ ಹಾಕಿರದಿದ್ದರೂ ಎಲ್ಲವನ್ನು ತಪ್ಪಿಲ್ಲದೇ ಚೆನ್ನಾಗಿಯೇ ಬರೆದಿದ್ದೀರಲ್ಲ..
ಬರಹ ಓದುತ್ತಾ ಆಗಾಗ ನಗು ಬಂತು.
ಒಳ್ಳೆ ಫಜೀತಿಯಾಯ್ತಲ್ಲ ಸುಗುಣ!!
ಅಡ್ಡಿಯಿಲ್ಲ , ಬರಹದಲ್ಲಿ ತುಂಬ ತಪ್ಪುಗಳೇನೂ ಕಾಣಲಿಲ್ಲ.
(ಹೇಗೂ ನಿಮ್ಮಷ್ಟು ಕನ್ನಡ ಕೂಡ ನನಗೆ ಬರಲ್ಲ, ಹೆ ಹೆ..)
had nice laugh!!
:-)
malathi S
ಅಲ್ಲಾ ಕಣ್ರೀ,
ಇದೆಂತಾ ಪಜೀತಿ ಆಯ್ತು ಮಾರಾಯ್ರೇ........
ಪಾಪ, ಹೀಗೆ ಆದ್ರೆ ನಮ್ಮ ಮಹೇಶ್ ಸರ್ ಗತಿ........
ಇನ್ಮೇಲೆ ಕನ್ನಡಕ ಹಾಕಿಕೊಳ್ಳೋದು ಮರೀಬೇಡಿ.
ಸೊಗಸಾಗಿದೆ ನಿಮ್ಮ ಲೇಖನ, ಹಂಚಕೊಂಡಿದ್ದಕ್ಕೆ ಧನ್ಯವಾದಗಳು
ಸೊಗಸಾಗಿ ನಿರೂಪಿಸಿದ್ದೀರಿ ಮನಸು ಅವರೆ. ಕನ್ನಡಕದ ಸಹವಾಸ ಇಲ್ಲದೇ ಜೀವನವೇ ಇಲ್ಲ..ಕಿವಿ ಮಾತು..ಒ೦ದು spare ಇಟ್ಕೊಳ್ಳಿ ಆಫೀಸ್ ನಲ್ಲಿ..(ನಾನೂ ಎರಡು ಇಟ್ಟಿದ್ದೇನೆ, ಮನೇಲಿ ಒ೦ದು ಆಫೀಸ್ನಲ್ಲಿ ಒ೦ದು..ಕನ್ನಡಕ ಹುಡುಕೋಕೆ ಒ೦ದು ಕನ್ನಡಕ ಬೇಕಲ್ಲ..!!)
ಶುಭಾಶಯಗಳು
ಅನ೦ತ್
- ಕತ್ತಲೆ ಮನೆ...
ಧನ್ಯವಾದಗಳು, ಅವಾಂತರ ಏನು ಮಾಡುವುದು ಹೀಗಾಗಿ ಬಿಡುತ್ತೆ ಕೆಲವೊಮ್ಮೆ....
ಸತೀಶ್,
ಧನ್ಯವಾದಗಳು, ನಿಮ್ಮ ಬ್ಲಾಗ್ ಲೋಕವನ್ನು ನಾವು ಫಾಲೋ ಮಾಡುತ್ತಲಿದ್ದೇನೆ..
ಶಿವು ಸರ್,
ನೋಡಿ ಕಾರಿಗೂ ಕಿತಾಪತಿ ಆಗುತ್ತಲಿದೆ... ಕನ್ನಡಕ ಇರಲೇ ಬೇಕು ಇಲ್ಲದಿದ್ದರೆ ಈ ತರವಾಗುತ್ತೆ... ನೋಡಿ..
ಮಾಲತಿ...
ಹಹಹ ತಪ್ಪು ಸಿಕ್ಕಿಲ್ಲ ತಾನೇ ನಾನು ಬಚಾವ್........ನಿಮ್ಮ ನಗುವಿಗೆ ನಮ್ಮದೊಂದು ನಗು.....
ಪ್ರವೀಣ್,
ಹೆದರ ಬೇಡಿ ಮಹೇಶ್ ಸರ್ ಗೆ ಏನು ಆಗೋಲ್ಲ.... ಹಹಹ
ಜಿತೇಂದ್ರ....
ನಾವು ಇತ್ತ ಎಡವಟ್ಟಿನ ಗಿರಾಕಿ ಅಂತಾ... ನಿಮ್ಮಗಳ ಹತ್ತಿರವಲ್ಲದೆ ಇನ್ನು ಯಾರ ಹತ್ತಿರ ಹೇಳೋದಿ ಹೇಳಿ ಹಹ ಥ್ಯಾಂಕ್ಸ್ ....
ಅನಂತರಾಜ್ ಸರ್,
ನಿಜ ನಿಮ್ಮ ಕಿವಿಮಾತು.. ನಾನು ಈಗ ಎರಡು ಕನ್ನಡವನ್ನು ತೆಗೆದುಕೊಂಡಿದ್ದೇನೆ.... ಮತ್ತೊಂದು ಕಣ್ಣಿಗೆ ಇನ್ನೊಂದು ಕಣ್ಣಿನ ಆಸರೆ ಬೇಕು ಎಂದಾಗೆ ಇದೆ ನಿಮ್ಮ ಮಾತು ಥ್ಯಾಂಕ್ಸ್
ಹ ಹ ಹ....
ಹೆ ಹೆ ಹೆ...
ಹು..ಹು..ಹು... :)
:) ತುಂಬಾ ಚೆನ್ನಾಗಿದೆ, mam.
ಇಂತ ಎಡವಟ್ಟು ಆಗಾಗ ನಾನು ಮಾಡುತ್ತಿರುತ್ತೇನೆ..;)
Post a Comment