ಸಣ್ಣ ಬಿಸಿಯೊಂದು ತಾಕಿ ಒಡಕಾದ ಗಾಜು
ಮರು ಲೇಪಿಸಲಾಗದೆ ಮೂಡಿತೊಂದು ಗೆರೆಯು
ಏನೊಂದು ಅರಿಯದ ಬಿಸಿಯು ತನ್ನ ಕಾವ ಮರೆತು
ಬಿರುಕು ಹುಟ್ಟಿಸಿ ಬಳಕೆ ಕಸಿಯಿತು
ತನ್ನೊಳಗಿನ ಶಕ್ತಿ ಟೊಳ್ಳೆಂದು ಬಯಸಿ
ಗಾಜು ಹಿತವಾದ ಶಾಖಕೆ ಪರವಶವಾಯಿತು
ಬಲವಿಲ್ಲದ ಕಾವು ಒಡಕಲ್ಲದ ಗಾಜು
ತನ್ನರಿವು ಅರಿಯದೆ ಒಬ್ಬರಿಗೊಬ್ಬರು ಆಹುತಿ
ಮುಖಾಮುಖಿ ಭೇಟಿ ಇನ್ನೆಲ್ಲಿ
ಗಾಜಿನ್ನು ಕಸದ ಬುಟ್ಟಿಯಲ್ಲಿ ...!!!
ಗಾಜಿನ ತಟ್ಟೆ ಆಕಸ್ಮಿಕವಾಗಿ ಕಾವು ತಾಕಿ ಚೂರಾದ ಸಂದರ್ಭದಲ್ಲಿ ಮನಸ್ಸಿಗೆ ಹೊಳೆದ ಸಾಲುಗಳು :) :)
3 comments:
ಕಾವಿಗೆ ಹೃದಯವಿಲ್ಲ, ಗಾಜು ಬಲಿ ಪಶು. ಬಹು ಅರ್ಥಗಳನ್ನು ಮನಸ್ದಿಗೆ ನಾಟಿಸುವ ಕವನ.
Jeevanada aneka sandarbhagaLu heege Suguna.... gaaju bali pashu aadange, manasu saha! yaava fevi-bond haaki antisoku aagolla...... gud1...
ಬಹಳ ಚೆಂದದ ಕವಿತೆ ಸುಗುಣ ಮೇಡಂ. ಸಣ್ಣ ಅಪಘಾತಕ್ಕೆ ಒಡೆದು ಉಪಯೋಗವಿಲ್ಲದಂತಾಗುವುದು ಗಾಜು ಮಾತ್ರವಲ್ಲ ಸಂಭಂಧಗಳು ಕೂಡ.
Post a Comment