Thursday, May 28, 2009

ಪಯಣ

ಮುಸುಕು ಕವಿದ ಬಾಳಿಗೆ
ನೀನಿಲ್ಲದೆ ಪ್ರಯಾಣ ಬೇಸರಿಕೆ
ವಿಷಾದ ಮೂಡಿಸಿದೆ ಮನಸಿಗೆ
ನಿನ್ನನೊ ಕರೆದೊಯ್ಯುವ ಅನಿಸಿಕೆ
ಬರುವೆಯಾ ನಲ್ಲ ನನ್ನೊಂದಿಗೆ..!!?


ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು


ಮಳೆಗಾಲದ ಜಡಿ ಹಿಡಿದಂತಿದೆ ಕಣ್ಣಿಗೆ
ಬಳಲಿಕೆಯಲಿ ತೊಡಲಾಡುವಳೀ ಮಲ್ಲಿಗೆ
ಪ್ರಿಯಾ!! ಒಮ್ಮೆ ಹೇಳಿಬಿಡು ಮೆಲ್ಲಗೆ
ಬರುವೆ ಚಿನ್ನ ನಿನ್ನೊಂದಿಗೆ!!!


ಬರುವುದಾದರೆ ನಲ್ಲ ಊರಿಗೆ
ನಡೆ ಪಯಣಿಸೋಣ ಜೊತೆ ಜೊತೆಗೆ
ಹೊವಿನ ಹಾದಿ ಸೊರ್ಯ ಚುಂಬನದೆಡೆಗೆ
ನಮ್ಮ ದಾರಿ ನಮ್ಮೂರ ಕರುನಾಡಿಗೆ!!!

16 comments:

Anonymous said...

Hi Dear!!!
Super kavana... maheshge nodidra kavana!!!

idanna nodi hordtare bidu ayta!!

Great Dear!!

Regards
Kavya
UK

ಶಿವಪ್ರಕಾಶ್ said...

ಮನಸು ಅವರೇ,
ನಿಮ್ಮವರಿಗೂ ಕೂಡ ನಿಮ್ಮ ಜೊತೆ ಪಯಣಿಸುವ ಆಸೆ ಇದೆ, ಆದ್ರೆ ಕೆಲಸದ ಒತ್ತಡದಿಂದ ಬರಲಾಗುತ್ತಿಲ್ಲ ಅನ್ಸುತ್ತೆ.
ಪ್ರತಿಯೊಂದು ಸಾಲುಗಳು ತುಂಬಾ ಚನ್ನಾಗಿವೆ.
ನಿಮ್ಮ ಜೊತೆ, ನಿಮ್ಮವರು ಪಯಣಿಸಲಿ ಎಂದು ಆಶಿಸುತ್ತೇನೆ. :)
ಧನ್ಯವಾದಗಳು

mahesh said...

ಪ್ರಿಯೆ,
ನನ್ನ ನಿನ್ನ ನದುವೆ ಸಮುದ್ರ ಇದ್ದರೂ ನನ್ನ ಮನಸು ನಿನ್ನ ಮ್ರುದುಮನಸಿನಲ್ಲಿರುತ್ತೆ
ನಿನ್ನ ಬಿಲ್ಕೊದುವಾಗ ನಿನಗರಿಯದೆ ನನ್ನ ಮನಸು ನಿನ್ನಲ್ಲಿ ಸೆರಿರುತ್ತೆ
ಹೊಗಿ ಬಾ ತವರಿಗೆ ನಿನ್ನ ಸಿಹಿ ನೆನಪು ಸದಾ ಇರುತ್ತೆ

PARAANJAPE K.N. said...

ಮೃದುಮನಸಿನ ಕವನ ಪಯಣ ಹೀಗೆಯೇ ಸಾಗಲಿ, ಚೆನ್ನಾಗಿದೆ. ಕವನದ ಸಾಲುಗಳು ಆಪ್ತವಾಗಿವೆ.

shivu.k said...

ಮನಸು ಮೇಡಮ್,

ಕವನದಲ್ಲಿನ ನಿಮ್ಮ ಅಭಿವ್ಯಕ್ತಿ ಚೆನ್ನಾಗಿ ಅರ್ಥವಾಗುತ್ತದೆ....ಸಾಧ್ಯವಾಗಲಿ ನೀವು ಅಂದುಕೊಂಡಂತೆ.

ಕವನ ಚೆನ್ನಾಗಿದೆ...

ಸಾಗರದಾಚೆಯ ಇಂಚರ said...

ಮ್ರದುಮನಸು,
ಊರಿಗೆ ನಿಮ್ಮ ನಲ್ಲನು ಬರಲಿ, ತುಂಬಾ ಸೊಗಸಾಗಿದೆ ಕವನ

Prabhuraj Moogi said...

ವಿರಹದ ಬಗೆಗಿನ ಬರಹ ಮನದಿಂದ ಹಾಗೆ ಹೊರಬಂದ ತರಹ ಇದೆ.. ಪ್ರಯಾಣಕ್ಕೆ ಶುಭ ಹಾರೈಕೆಗಳು

ಜಲನಯನ said...

ಮನಸು ಮೇಡಂ ನಿಮ್ಮ ದುಗುಡವನ್ನು ನೀವು ಬಹಳ ಚನ್ನಾಗಿ ಹೇಳಿಕೊಂಡಿದ್ದೀರಿ
Sorry ನಿಮ್ಮ ಬ್ಲಾಗ್ ನೋಡುವುದಕ್ಕೆ ಮುಂಚೆಯೇ ಸ್ವಲ್ಪ shocking ಬ್ಲಾಗ್ ಪೊಸ್ಟ್ ನಾನು ಜಲನಯನದಲ್ಲಿ ಮಾಡಿಬಿಟ್ಟಿದ್ದೇನೆ...
ತಮಾಷೆ ಅಂದ್ಕೊಂಡು ಮಹೇಶ್ ನ ಕ್ಷಮಿಸಿಬಿಡಿ (ನನ್ನ ಹಾಗೇ ಅವರೂ ಯೋಚಿಸಿದರೆ..ಅಂದರೆ ನಿಯಮ ಏನಲ್ಲ..??!! ಹಹಹಹ)
ಪ್ರಯಾಣ ಸುಖಕರವಾಗಲಿ, ನಿಮ್ಮ ಅಪ್ಪ-ಅಮ್ಮ ಮತ್ತು ಆತ್ಮೀಯರಿಗೆ ನಮನಗಳು. ಮಹೇಶ್ ಬೇಗ ನಿಮ್ಮನ್ನು ಸೇರಲಿ ಅಂತ ಹಾರೈಸಬಹುದಷ್ಟೇ..
(ಅದು ಅವರಿಗೆ ಬಿಟ್ಟದ್ದು).....

ಮಲ್ಲಿಕಾರ್ಜುನ.ಡಿ.ಜಿ. said...

ನಿಮ್ಮ ಕವನದ ಪಯಣ ತುಂಬಾ ಆಪ್ತವಾಗಿದೆ. ಕರುನಾಡಿಗೆ ನಿಮ್ಮ ಗೆಳೆಯ ಬಂದೇ ಬರುವರು. ಶುಭ ಹಾರೈಕೆಗಳು.

Ittigecement said...

ಮನಸು....

ನಲ್ಲನೊಡನೆ ಪಯಣಿಸುವ..
ನಿಮ್ಮ ಮನದಾಸೆ...
ಈ ಕವನದಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ...

ಬಹುಷಃ ನಿಮ್ಮ ಇನಿಯನಿಗೆ ಈ ಕವನ ಓದಿ
ಬರಲಾರೆ ಎನ್ನಲಿಕ್ಕೆ ಬಹಳ ಕಷ್ಟವಾಗಿರಬೇಕು..

ಮಹೇಶರು ಮನ ಬದಾಲಿಯಿಸಿ
ನಿಮ್ಮ ಮನಸಿನ ಆಸೆಯಂತೆ..
ನಿಮ್ಮೊಡನೆ ಪಯಣಿಸಲೆಂದು ಹಾರೈಸುವೆ...

ಅಭಿನಂದನೆಗಳು...
ಚಂದದ ಕವನಕ್ಕೆ...

ಚಂದಿನ said...

ಸುಂದರ ಗೀತೆಯಂತೆ ಮೂಡಿ ಬಂದಿದೆ.
ಓದುವಾಗ ಮುದ ನೀಡುತ್ತದೆ.

-ಚಂದಿನ

sunaath said...

ಮನಸು,
ನಿಮ್ಮ ಕನಸು ನನಸಾಗಲಿ!

ಜ್ಞಾನಮೂರ್ತಿ said...

ಮನಸು ಅಕ್ಕ ,

ಒಂಟಿ ಗಿಣಿಗೆ ಜೊತೆಯಿಲ್ಲದಾಗುವುದು
ರವಿತೇಜನಿಗೆ ಕಳೆ ಕುಂದುವುದು
ಹಾಡೋ ಹಕ್ಕಿಗೆ ಧನಿ ಹೊರಡದಾಗುವುದು
ಹೂವು ತನ್ನ ನಸುಗಂಪು ಸೊಸದಂತಾಗುವುದು
ಈ ಸಾಲುಗಳು ತುಂಬಾ ಇಷ್ಟವಾದವು….

ನನ್ನ ಗೆಳೆಯ ನಿಮ್ಮಂತೆಯೇ ಒಂದು ಪಯಣದ ಕವನ ಬರೆದಿದ್ದಾನೆ ನೋಡಿ http://balipashu.blogspot.com

ಮನಸು said...

ಎಲ್ಲರಿಗೊ ನನ್ನ ಧನ್ಯವಾದಗಳು... ನಿಮ್ಮ ಅನಿಸಿಕೆ, ಆಶಯ ಎಲ್ಲವೊ ನೆರೆವೇರುವುದೆಂದು ಭಾವಿಸಿದ್ದೇನೆ ಕಾದು ನೋಡೋಣ ಹಾ ಹಾ...
ವಂದನೆಗಳು

Unknown said...

ನಿಮ್ಮ ಪಯಣ ಸುಖಕರವಾಗಿರಲಿ...

ಚಂದಿನ said...

ಮುದ್ದಾದ ಕವನ,
ಮತ್ತೆ ಭೇಟಿಯಾಗುವ ಮುನ್ನ,
ನಿಮ್ಮ ಪಯಣ ಮತ್ತೆ ರಜೆಯ ವಿರಾಮ
ಅಮೋಘವಾಗಿರಲೆಂದು ಹಾರೈಸುವ,

-ಚಂದಿನ