-1-
ನಲ್ಲನ ಬರುವಿಕೆಗೆ ಕಾದು ಕುಳಿತಿಹೆ
ಘಂಟೆಗಳು ಉರುಳುತಿದೆ
ರವಿಯ ಕಿರಣ ಸರಿಯುತಿದೆ
ಬರದ ನಲ್ಲನಿಗೆ ಮನಸು ಕಾಯುತಿದೆ.....
ಸಂಜೆ ನೆರಳು ನೀರೊಳು ಬೆರೆತು
ಅಲೆಯ ಉಂಗುರಕೆ ಸೇರಿತು
ಹೊತ್ತು ಕಳೆದರು ಏಕೋ ಕಾಣಲಿಲ್ಲ
ನನ್ನಿಯನ ಹೆಜ್ಜೆ ಗುರುತು....
ಪ್ರಜ್ವಲಿಸಿ ಬಿಂಬಿಸುವ ಮುಖ ಬಾಡಿ
ಬೇಸರಿಸಿದರೂ ಕೂತ ಬಂಡೆಯಲೆ
ನಿನ್ನೆಸರ ಕೆತ್ತಿ ಚಿತ್ರಿಸಿದೆ ಈ ನನ್ನ ಬೆರಳು
ಇದ ನೋಡಲೊಮ್ಮೆ ಇತ್ತ ನೀ ಮರಳು......
ನಿನ್ನೆಸರ ಪಟಿಸುವ ನನ್ನೀ ಹೃದಯ
ಒದ್ದೆಯಾಗದಂತಿರಲು ಬಾ ನನ್ನಿಯ....
ಕಣ್ಣ ಹನಿ ನೀರ ಅಲೆಯಾಗುವ ಮುನ್ನ
ನಲ್ಲ ನೀ ಬಂದು ಸೇರಿ ಬಿಡು ನನ್ನ

-2-
ಎಳೆಬಿಸಿಲ ಸೊಬಗಲಿ
ನೀರಿನ ಅಲೆಯ ನೋಡುತ
ಕಾದಿರುವಳು ರಾಧೆ
ಕೊಳಲ ಧನಿಗೆ ........
ಕಣ್ಣ ಸುತ್ತರಿಸಿ ನೋಡಿದರೂ
ಕಾಣದ ಗೋಪಿ ಲೋಲನ
ನೆನೆಸುತ ಅಲೆಯನೇ
ನಯನದಿ ಸೆರೆ ಹಿಡಿದಿಹಳು..........
ಮೌನಭಂಗಿಯಲಿ
ಇನಿಯನ ಹೆಸರ ಜಪಿಸುತ
ಜಲ ಕನ್ಯೆಗೆ ಕಲ್ಲ ಹೊಡೆದು
ಅಲೆಯ ಉಂಗುರವ ತರಿಸಿಹಳು.......
ಕಾದು ಕುಳುತಿರುವವಳ ಸೇರಲು
ಬರುವನೋ, ಇಲ್ಲವೋ ಅವಳ ಇಂದಿರ
ಆದರೆ ಮೌನವಿಸಿರುವ ಮುಖವ ನೋಡಲು
ಬಂದೇ ಬರುವನು ರಾತ್ರಿ ಚಂದಿರ......
(ಪ್ರಕಾಶಣ್ಣ ತೆಗೆದಿರುವ ಚಿತ್ರಕ್ಕೆ ನನ್ನ ಎರಡು ಕವನಗಳು)
ಧನ್ಯವಾದಗಳು ಕವಿತೆ ಹುಟ್ಟಿಸಿದ ಈ ಚಿತ್ರಕ್ಕೆ ಮತ್ತು ಚಿತ್ರದರಸಿ ಹಾಗೂ ಚಿತ್ರ ತೆಗೆದ ಕೈಗೆ....