Showing posts with label ಸಾಲುಗಳು........ Show all posts
Showing posts with label ಸಾಲುಗಳು........ Show all posts

Tuesday, May 3, 2011

ಸಾಲುಗಳು

-1-
ಕಡಲು ತಾ ಮಾಡಿದ ತಪ್ಪಿಗೆ
ತೀರದಲಿ ದಿಟ್ಟಿಸುತ್ತ ನಿಂತ ನನ್ನ
ಪಾದ ಸ್ಪರ್ಶಿಸಿ ಕ್ಷಮಿಸೆನ್ನುತಿದೆ....

ಹೇಗೆ ಮನ್ನಿಸಲಿ
ಎಂದೂ ಮಾಸದ ತಬ್ಬಲಿಯ ಗಾಯ
ನನ್ನ ಜೀವನವನ್ನೇ ಹುಣ್ಣು ಮಾಡಿಸಿದೆ..

-----
-2-

ಹೇ ಕಡಲೇ
ನೀ ಆದೆ ಅಂದು ಹೆಬ್ಬುಲಿ
ನೋಡು
ನಾನಿಂದು ತಬ್ಬಲಿ...

-----

-ಹೂ-

ನಾನು ಪೂಜೆಗೆ ಶ್ರೇಷ್ಠವೆಂದು
ನನ್ನ ಚಿವುಟಿ ಕಿತ್ತರು...

ಆದರೆ

ನಾನೂ ಒಂದು
ಉಸಿರಾಡುವ
ಜೀವವೆಂಬುದ ಮರೆತರು...
-----

-ನಾನು-

ಭುವಿಯ ಮಂಚದಲಿ
ಪ್ರಕೃತಿ ಮಡಿಲಿನಲಿ
ಮಲಗುವೆ....

ಸುತ್ತಮುತ್ತಲ ಜನರ ಹಾರೈಕೆ
ಅಕ್ಕಪಕ್ಕದವರ ಅನ್ನ ಬಟ್ಟೆಯಲಿ
ದಿನವ ಕಳೆವೆ...

ಕಾರಣ

ಗೊತ್ತಿಲ್ಲ ನಾನು ಯಾರು
ಯಾವ ಮನೆಯವ
ಯಾರ ಮಗನೆಂದು....

-----

ಚಿತ್ರಗಳು @ ಅಂತರ್ಜಾಲ

Tuesday, April 19, 2011

-ಸಾಲುಗಳು-


-
-
ಮಧ್ಯರಾತ್ರಿ ಸಾಕು ನಾಯಿ
ಗೂಳಿಡುತ್ತ ಅಳುತ್ತಿತ್ತು..

ಎಲ್ಲಿಂದಲೋ ಸಾವಿನ ಸೂತಕ ಛಾಯೆ
ಬರುವುದೆಂದು ಮನೆಯೇ ಆತಂಕದಲ್ಲಿತ್ತು....

ಸಾವಿನ ಸೂತಕ ಎಲ್ಲಿಂದಲೋ ಅಲ್ಲ
ಮನೆಯದೇ ಎಂದು ಅರಿವಾದಾಗ
ರಾತ್ರಿ ನೆಡೆದ ಮಗಳ ಪ್ರೇಮ ವಿವಾಹದ
ಘರ್ಷಣೆಗಳು ಎಲ್ಲರ ಕಣ್ಣ ಮುಂದೆ ಬಂದಿತ್ತು......
--------

--
ಅವಳು
ಭೋಳು ಮರ
ಎಂದು
ಬಳಿದರು ಬಿಳಿ ಬಣ್ಣ...

---------

-೩-
ಮಾರ್ಜಾಲ ಹೆದ್ದಾರಿಯಲಿ
ಯಾರ ಭಯವಿಲ್ಲದೆ ಮಲಗಿತ್ತು
ಕಾರಣ
ನಾಲ್ಕು ಚಕ್ರದ ವಾಹನ
ಅವನನ್ನ ಗಾಢನಿದ್ರೆಗೆ ತಳ್ಳಿತ್ತು....
--------

-
-
ಕಡಲಿನಂತಾ
ಆಸೆಗಳು
ಸುನಾಮಿ ಅಲೆಗಳಿಗೆ
ಕಾರಣ
-------
-೫-

ಮೋಸಗೈದ ಹೆಜ್ಜೆಗಳು
ಕಡಲ ಅಬ್ಬರಕೆ ಮಾಸಿದೆ...
ಆದರೆ
ನೆನಪುಗಳು ಮಾತ್ರ ಹಾಗೆ ಉಳಿದಿದೆ...



ಚಿತ್ರ: ಅಂತರ್ಜಾಲ