Showing posts with label ಭಾಸ್ಕರ. Show all posts
Showing posts with label ಭಾಸ್ಕರ. Show all posts

Monday, May 9, 2011

ಆಸರೆ


-1-

ಒಂಟಿ ಚಕ್ರಕೆ
ಊರುಗೋಲು...

ಹಸಿದ ಹೊಟ್ಟೆಗೆ
ಕಡಲ ನೀರು...

ಬೆಂದ ಹೊಟ್ಟೆಗೆ
ಎಳೆ ಬಿಸಿಲು..

ನೊಂದ ಮನಸಿಗೆ
ಸಾಂತ್ವಾನಿಸುವ ತಂಗಾಳಿ....

ಇದೇ ತೃಪ್ತಿಯಲಿ
ನನ್ನ ಬದುಕು.......

----------------------------------------------------

-2-

ಕಾಲು ಇಲ್ಲ ಕವಳವಿಲ್ಲ ನಾನು ಬಡವ
ಅರೆಹೊಟ್ಟೆಯಲ್ಲೇ ಕಳೆಯಬೇಕಿದೆ ದಿನವ
ಒಂಟಿ ಕಾಲಿಗೆ ಊರುಗೋಲು ಆಸರೆ
ಬಡತನಕೆ ನನ್ನ ಜೀವನ ಕೈಸೆರೆ
ಬವಣೆ ಬದುಕಲಿ ಜೀವ ಕುಂದಿದೆ
ಬೊಗಸೆ ನೀರಿನಷ್ಟು ಶಕ್ತಿಯನಾದರೂ ನೀಡಬಾರದೆ ಭಾಸ್ಕರ....

ಕಡಲ ರಥವನೇರಿದ ರವಿತೇಜನೆ
ಹಸುಗೂಸಿಗೂ ನಿನ್ನ ಎಳೆಬಿಸಿಲು
ಹಸಿರ ಪೈರಿಗೂ ನಿನ್ನ ಎಳೆ ತಾಪ
ಎಲ್ಲ ಜೀವರಾಶಿಗೆ ಕಳೆಯ ನೀಡಿ
ಭುವಿಗೆ ಬೆಳಕ ಚೆಲ್ಲುವುದ ತಿಳಿದವ
ಅಂದು ಕುಂತಿಗೆ ಕೂಸ ನೀಡಿದವ
ಎಲ್ಲ ಜೀವಿಗೆ ಬೇಕಾದವ ನೀನಾಗಿರುವಾಗ
ನಿಶಕ್ತಿ ಬಂದೆರಗಿದ ನನ್ನ ಕಾಲಿಗೆ ಪುಷ್ಠಿ ನೀಡಬಾರದೆ ಹೇಳೋ ಭಾಸ್ಕರ...


ಚಿತ್ರ: ದಿಗ್ವಾಸ್