
ಅಂದಿನ ಏಳು ಹೆಜ್ಜೆಗಳ ಅನುಬಂಧ
ನಾಳೆಗೆ ಹನ್ನೆರಡು ವರುಷಗಳ ಸಂಬಂಧ
ಆ ಏಳು ಹೆಜ್ಜೆಯ ನೆಡಿಗೆ
ಜಾರಿಸಿತು ಒಲವಿನಾ ಮಡಿಲಿಗೆ
ಅಪ್ಪ ಅಮ್ಮನ ಆಯ್ಕೆಯ ಕಾಣಿಕೆ
ನನ್ನಲ್ಲಿ ಬೆರೆತುಹೋಗುವಂತೆ ಮಾಡಿದೆ
ಅವನ ಪ್ರೀತಿ-ಪ್ರೇಮದ ಬೆಸುಗೆ
ಇಷ್ಟು ವಸಂತಗಳಲಿ ಉರುಳಿದ ಜೀವನ
ಸುಖ-ದುಃಖಗಳ ಸಮದೂಗಿಸುವ ಬಂಧನ
ಹಲವು ಬಗೆಯ ಸಮರಸವ ಕಲಿಸಿದ ಜೀವನಕೆ
ಪೇರಿಸುವ ಹಸಿರು ತುಂಬಿದ ಒಲವಿನಾ ತೋರಣ
ಅವನ ಹೆಜ್ಜೆಗೆ ಧನಿಯಾದ ನನಗೆ
ಪ್ರಶಂಸೆಯ ಮೆಟ್ಟಿಲೇರಿ ಬಂದಿದೆನ್ನ ಜೊತೆಗೆ
ಹನ್ನೆರಡರ ಹಿಂದಿರುಗಿ ನೋಡಿದರೆ
ನನ್ನೊಳಗೆ ಎಲ್ಲವೂ ಹೊಸತನದ ಧರೆ
ಚಿತ್ರ: ತಮ್ಮನ ಕಾಣಿಕೆ (ಆ ಚಿತ್ರ ಕೊಟ್ಟ ಅವನ ಸ್ನೇಹಿತನಿಗೆ ಧನ್ಯವಾದಗಳು)