Wednesday, February 23, 2011

ಸಪ್ತಪದಿಗೆ ಹನ್ನೆರಡು ವಸಂತಗಳುಅಂದಿನ ಏಳು ಹೆಜ್ಜೆಗಳ ಅನುಬಂಧ
ನಾಳೆಗೆ ಹನ್ನೆರಡು ವರುಷಗಳ ಸಂಬಂಧ

ಆ ಏಳು ಹೆಜ್ಜೆಯ ನೆಡಿಗೆ
ಜಾರಿಸಿತು ಒಲವಿನಾ ಮಡಿಲಿಗೆ

ಅಪ್ಪ ಅಮ್ಮನ ಆಯ್ಕೆಯ ಕಾಣಿಕೆ
ನನ್ನಲ್ಲಿ ಬೆರೆತುಹೋಗುವಂತೆ ಮಾಡಿದೆ
ಅವನ ಪ್ರೀತಿ-ಪ್ರೇಮದ ಬೆಸುಗೆ

ಇಷ್ಟು ವಸಂತಗಳಲಿ ಉರುಳಿದ ಜೀವನ
ಸುಖ-ದುಃಖಗಳ ಸಮದೂಗಿಸುವ ಬಂಧನ

ಹಲವು ಬಗೆಯ ಸಮರಸವ ಕಲಿಸಿದ ಜೀವನಕೆ
ಪೇರಿಸುವ ಹಸಿರು ತುಂಬಿದ ಒಲವಿನಾ ತೋರಣ

ಅವನ ಹೆಜ್ಜೆಗೆ ಧನಿಯಾದ ನನಗೆ
ಪ್ರಶಂಸೆಯ ಮೆಟ್ಟಿಲೇರಿ ಬಂದಿದೆನ್ನ ಜೊತೆಗೆ

ಹನ್ನೆರಡರ ಹಿಂದಿರುಗಿ ನೋಡಿದರೆ
ನನ್ನೊಳಗೆ ಎಲ್ಲವೂ ಹೊಸತನದ ಧರೆ


ಚಿತ್ರ: ತಮ್ಮನ ಕಾಣಿಕೆ (ಆ ಚಿತ್ರ ಕೊಟ್ಟ ಅವನ ಸ್ನೇಹಿತನಿಗೆ ಧನ್ಯವಾದಗಳು)


28 comments:

ಶಿವಪ್ರಕಾಶ್ said...

Happy Wedding Anniversary Akka :)

Manju M Doddamani said...

ಹೊಸತನದ ಧರೆ ಇರಲಿ ಎಂದು
ತುಂಬಿ ತುಳುಕಲಿ ಮತ್ತಷ್ಟು ಸುಖ ಶಾಂತಿ
ನಿಮ್ಮ ದಾಂಪತ್ಯದಲ್ಲಿ..!

ಚಿಕ್ಕವನ ಚಿಕ್ಕ ಶುಭಾಶಯ
Happy Wedding Anniversary

ಸೀತಾರಾಮ. ಕೆ. / SITARAM.K said...

Happy Wedding Anniversary

ಮನಸಿನ ಮಾತುಗಳು said...

Sugunakka and Maheshanna,

Ibbarigu happy wedding anniversary...:-)

HegdeG said...

Happy wedding anniversary.

V.R.BHAT said...

ಜೀವನ ಬಂಡಿಗೆ ಗಂಡ-ಹೆಂಡತಿ ಚಕ್ರಗಳು, ಸಪ್ತಪದಿಯೋ ತ್ರಿಪದಿಯೋ ಚೌಪದಿಯೋ ಒಟ್ಟಾಗಿ ಹಾಡಿದಾಗ, ಹೆಜ್ಜೆಯಿಟ್ಟಾಗ ಅದರಲ್ಲಿದೆ ನಿಜವಾದ ತಿರುಳು. ನಿಮ್ಮ ಅನ್ಯೋನ್ಯ ದಾಂಪತ್ಯ ಸದಾ ನೆಮ್ಮದಿಯಿಂದ, ಸಮೃದ್ಧಿಯಿಂದ ಕೂಡಿರಲಿ ಎಂದು ತೌರಮನೆಯ ಕಡೆಯಿಂದ ಹಾರ್ದಿಕವಾಗಿ ಶುಭಾಶಂಸನೆಗೈಯ್ಯುತ್ತಿದ್ದೇವೆ, ಶುಭಮಸ್ತು.

Digwas Bellemane said...

Happy Wedding Anniversary

ಸುಮ said...

ಹನ್ನೆರಡು ಅರವತ್ತಾದರೂ ಭಾಂದವ್ಯ ಹೀಗೆ ಇರಲೆಂದು ಹಾರೈಕೆ.

shivu.k said...

ಸುಗುಣಕ್ಕ,

happy wedding anniversary..ಇದು ನೂರಾಗಲಿ...

ವಾಣಿಶ್ರೀ ಭಟ್ said...

bandhavya noooru vasanta datali...

mahabalagiri said...

Happy Wedding Anniversary

balasubramanya said...

ಸುಗುಣ ಮೇಡಂ ನಿಮ್ಮ ಸಮರಸದ ಜೀವನದ ಹಾದಿಯಲ್ಲಿ ಹನ್ನೆರಡು ಮೈಲು ಬಂದಿದ್ದೀರಿ ,ನಿಮಗೆ ಶುಭಾಶಯಗಳು. ಹನ್ನೆರಡು ಮೇಲಿನ ಹಾದಿಯಲ್ಲಿ ಕಂಡ ಸುಂದರ ದೃಶ್ಯಗಳು ನಿಮ್ಮ ಬದುಕಿನ ದಾರಿ ದೀಪವಾಗಲಿ. ಕಷ್ಟಗಳು ನಿಮ್ಮ ಸಾಹಸದ ಬದುಕಿನ ಗೆಲುವಿನ ಮೆಟ್ಟಿಲಾಗಿ ನಿಮ್ಮ ಜೀವನ ಕೀರ್ತಿ ಬೆಳಗಿಸಲಿ.ಮುಂದಿನ ಹಾದಿಯನ್ನು ನೀವಿಬ್ಬರು " ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ " , ದಂಪತಿಗಳಿಗೆ ಹೃದಯ ಪೂರ್ವಕ ಶುಭಾಶಯಗಳು. ನಿಮ್ಮ ಜೀವನ ಸುಖವಾಗಿರಲಿ.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

ನಾಗರಾಜ್ .ಕೆ (NRK) said...

ಮಹೇಶ್ ಸರ್ - ಸುಗುಣಕ್ಕ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು.
ಸದಾ ನಗುವಿರಲಿ . . . .:-)
ಈ ಸುಸಂದರ್ಭದಲ್ಲಿ "ವರಕವಿ ದ.ರಾ. ಬೇಂದ್ರೆ" ಅವರ ಸಾಲುಗಳು

"ನಲ್ಲನಲ್ಲೆಯರ ಲಲ್ಲೆ"

ನಲ್ಲ:::'ನಲ್ಲೆ ! ನಿನ್ನ ಮಾತಿನಲ್ಲೆ
ಹುಟ್ಟಿಬಂತು ಹುಟ್ಟು- ಲಲ್ಲೆ;
ಹೂಂಗುಟ್ಟಿ ಹುದುಗಬಲ್ಲೆ,
ಒಲ್ಲೆಯೆಂದು ಒಲಿಸಬಲ್ಲೆ.'

ನಲ್ಲೆ::: 'ನಲ್ಲ ! ನಿನ್ನ ಉಸಿರಿನಲ್ಲೇ
ಗಾನದೊಂದು ಗಮಕವಿಲ್ಲೆ?
ಆ ಪ್ರಾಣವಿಲ್ಲದಲ್ಲೇ
ಗಾಳಿಮಾತು ಜೊಳ್ಳು ಲಲ್ಲೆ!'

ಇಬ್ಬರೂ::: 'ಬಾನು ಬೆಳಕ ಹೂಡಿದಲ್ಲೆ
ಕಡಲಿನಲ್ಲಿ ಮೂಡಿದಲ್ಲೆ;
ನಲ್ಲ ನಲ್ಲೆ ಕೂಡಿದಲ್ಲೆ
ಹಿಗ್ಗಿಗುಂಟೆ ಮೇರೆ ಎಲ್ಲೆ ?'

Ashok.V.Shetty, Kodlady said...

Happy Anniversary Suguna Madam....

ವನಿತಾ / Vanitha said...

Happy Anniversary Suguna -Maheshanna:) & Wishing you both many more years of togetherness:)
- Luv,
Vanitha & Shreya (Vinod alle nimge wish maadtare)

ಶಾನಿ said...

Anniversary congratulations!

Pradeep Rao said...

ಮೃದು ಮನದ ಮನ ಮುಟ್ಟುವ ಮೃದು ಭಾವನೆಗಳ ಕವನ! ಅದ್ಭುತ! Wishing you
***** HAPPY ANNIVERSARY in Advance*****

Ittigecement said...

ನಿಮ್ಮ..
ಪ್ರೇಮದ ಬಾಂಧವ್ಯವು...
ಬೆಳೆದು ಹೆಮ್ಮರವಾಗಲಿ...

ಅನು ದಿನವು... ನಗುತಲಿರಿ..
ನವ ಜೋಡಿಗಳ ಹಾಗೆ...

ಇದು ನಮ್ಮೆಲ್ಲರ ಪ್ರೀತಿಯ.. ಮಮತೆಯ ಆಶಯ... !!

ಮನಮುಕ್ತಾ said...

Suguna @ Mahesh,
Wish you Happy Wedding anniversary.

ಚುಕ್ಕಿಚಿತ್ತಾರ said...

Happy Wedding Anniversary

Kirti said...

ನೀನಾಡದ ಮಾತು ನನ್ನಲ್ಲಿದೆ
ನಿನ್ನಯ ಪ್ರೀತಿ ನನ್ನದಿದೆ
ನೀನು ನನ್ನ ಜೀವ
ನಾನು ನಿನ್ನ ಉಸಿರು
ನೀನಾಡಿದ ಮಾತು ಮನಸಲ್ಲಿದೆ
ನಿನ್ನಯ ಮುನ ನನ್ನಲ್ಲಿದೆ
ನೀನು ನನ್ನ ಪ್ರೀತಿ
ನಾನು ನಿನ್ನ ಹೃದಯ

ಈ ಕವನ ನಿಮಗಾಗಿ ನೀವು ಸದಾಕಾಲ ಖುಷಿಯಿಂದಿರಿ .. ಶುಭಾಶಯಗಳು

ಸವಿಗನಸು said...

ಶುಭ ಹಾರೈಸಿದ ಎಲ್ಲಾ ಬಂಧುಬಳಗದವರಿಗೆಲ್ಲಾ ಹೃದಯಪೂರ್ವಕ ಧನ್ಯವಾದಗಳು.....
ಸುಗುಣ ಮಹೇಶ್

Anonymous said...

Wish you a very happy wedding anniversary..:)

sunaath said...

ಸುಗುಣಾ-ಮಹೇಶ,
ನಿಮಗೆ ಹಾರ್ದಿಕ ಶುಭಾಶಯಗಳು. ಜೊತೆಯಾಗಿ ನೂರುಕಾಲ ಸುಖವಾಗಿ ಬಾಳಿರಿ ಎಂದು ಹಾರೈಸುತ್ತೇನೆ.

ವಿದ್ಯಾ ರಮೇಶ್ said...

Wish you happy wedding anniversary!!

ಜಲನಯನ said...

ಸುಂದರ ಭಾವನೆಗಳ ಕ್ಷೀರಾಭಿಷೇಕದ ಶಿವರಾತ್ರಿ ..
ಹಾಲಾವನ್ನು..ಹಾಲಂತೆ ಕುಡಿದವಗೆ ನಮನ ಚನ್ನಾಗಿದೆ ಚನ್ನಾಗಿದೆ...ಶುಭಾಶಯಗಳು...

ಸುಧೇಶ್ ಶೆಟ್ಟಿ said...

ShubhashayagaLu.. thadavaagiddakke kshame irali.. heege kushi kushi aagiri :)

ಓ ಮನಸೇ, ನೀನೇಕೆ ಹೀಗೆ...? said...

Belated anniversary wishes Suguna...:)have a happiest years ahead.