Wednesday, January 28, 2009

ದೊರೆ ಮಾಡಿದ್ದಕ್ಕೆ ದಂಡ ಇಲ್ಲ.........!!!


ಇದು ನಾನು ಕೇಳಿದ್ದು ಕೆಲವು ಸಂದರ್ಭ ಕಣ್ಣಾರೆ ಕಂಡಿದ್ದು....
ಇತ್ತೀಚೆಗೆ ಎಲ್ಲರಿಗೊ ತಿಳಿದ ಹಾಗೆ ಹಣದ ಇಳಿಕೆಯಿಂದ ಪ್ರಪಂಚದ ಎಲ್ಲಾ ಕಡೆಗಳಲ್ಲೊ ಎಲ್ಲಾ ಕಂಪನಿಗಳಲ್ಲೊ ನೌಕರರ ಕಡಿತ ನೆಡೆಯುತ್ತಲೇ ಇದೆ ಎಲ್ಲಿ ನೋಡಿದರು ಹಣದ ವ್ಯಯ ಎಲ್ಲಿ ಉಳಿಸಬಹುದು ಎಂಬ ಚಿಂತೆಯಲ್ಲೇ ಕಂಪನಿಯಲ್ಲಿರುವ ಎಲ್ಲರ ಮೇಲೆ ಒತ್ತಡವೇರುವ ಸ್ಥಿತಿ ಬಂದಿದೆ...
ಹೀಗಿರುವಾಗ ನನ್ನದೊಂದು ಸಣ್ಣ ಪ್ರಶ್ನೆ ಕಾಡಿದ್ದೇನೆಂದರೆ.... ಮೊನ್ನೆ ನಮ್ಮ ಚಿರಪರಿಚಿತರೇಳಿದರು ಅವರ ಕಂಪನಿಯ ವ್ಯವಸ್ಥಾಪಕರು ಜರ್ಮನಿ,ಯೂರೋಪ್ ಅಂತ ಹೇಳಿ ನಾಲ್ಕಾರು ದೇಶ ಸುತ್ತಿ ಅಲ್ಲಿರುವ ಕೆಲವು ಕಂಪನಿಗಳನ್ನು ಪರಿಶೀಲಿಸಿ ಅಲ್ಲಿನ ವ್ಯವಸ್ಥೆ ಇವರ ಕಂಪನಿಗೆ ಬೇಕಾದ ಸಾಮಗ್ರಿಗಳನ್ನು ತರಿಸಿಕೊಳ್ಳಲು ಎಲ್ಲದರ ವಿಶ್ಲೇಷಣೆಗೆಂದು ಇವರ ಜೊತೆ ಮತ್ತೂ ಕೆಲವರನ್ನು ಕರೆದುಕೊಂಡು ಹೋಗಿದ್ದಾರೆಂದು ನಾನು ಕೇಳಿದೆ ಅಷ್ಟು ಅವಶ್ಯಕತೆಯೇ ಹೋಗಲು ಇತ್ತೀಚೆಗಷ್ಟೆ ಅವರ ಕಂಪನಿಯಲ್ಲಿ ಸುಮಾರು ೩೦ ರಿಂದ ೪೦ ಜನರನ್ನು ಕೆಲಸದಿಂದ ತೆಗೆದಿದ್ದರು ಅದು ೧೦ ದಿನಗಳ ಅವಧಿ ಕೊಟ್ಟು ಕೆಲಸದಿಂದ ಹೋಗಬೇಕೆಂದು ..ಅವರು ೧೦ ದಿನದಲ್ಲಿ ಹೇಗೆ ತಯಾರಿ ನೆಡೆಸುತ್ತಾರೆ ಅವರಿಗೆ ಆದ ಸಂಸಾರ, ಅವರದೆ ಆದ ಕೆಲವು ಖರ್ಚು ವೆಚ್ಚ ಎಲ್ಲವೊ ನಿಭಾಯಿಸುವುದು ಬಲು ಕಷ್ಟ ಅಲ್ಲವೇ..? ಕಾರಣ ಕೇಳಿದರೆ ನಮ್ಮ ಕಂಪನಿಯಲ್ಲಿ ಹಣ ಇಲ್ಲ ಯಾವುದೆ ವ್ಯವಹಾರಗಳು ನೆಡೆಯುತ್ತಿಲ್ಲ ಇದೆ ಉತ್ತರಗಳು ಬರುತ್ತೆಂದು ನನ್ನ ಸ್ನೇಹಿತೆ ಹೇಳಿದಳು...

ಇನ್ನು ಇಷ್ಟೆಲ್ಲ ತೊಂದರೆ ಇರುವಾಗ ವ್ಯವಸ್ಥಾಪಕರಾಗಲಿ ಅವರೊಂದಿಗೆ ಹೋಗೊ ಜನರಾಗಲಿ ಬೇಕಿತ್ತೆ ಎಂಬ ಪ್ರಶ್ನೇ... ನನ್ನದು... ಅವರ ಕಚೇರಿಯಲ್ಲಿ ಇದು ಹೊಸತೆನಲ್ಲ ತಿಂಗಳಿಗೆ ೩,೪ ಭಾರಿ ಹಲವು ದೇಶ ಸುತ್ತುವುದೇ ಕೆಲಸ ಹೀಗೆ ಹಲವು ಕಂಪನಿಗಳಲ್ಲಿ ನೆಡೆಯುತ್ತಲಿದೆ... ಒಂದು ಭಾರಿ ಹೊರದೇಶಕ್ಕೆಂದು ಹೋಗಿ ಬಂದರೆ ಸಾಕು ಲಕ್ಷಾಂತರ ದಿನಾರುಗಳು ಖರ್ಚು ವೆಚ್ಚ ಭರಿಸಬೇಕಾಗುತ್ತದೆ.....

ಈ ಮಾತಿನ ಮಧ್ಯೆ ನನ್ನ ಸ್ನೇಹಿತೆಗೆ ಹೇಳಿದೆ ಅವರು ಒಂದು ಭಾರಿ ಭರಿಸೊ ಹಣ ೩ ನೌಕರರ ಸಂಬಳಕ್ಕೆ ಸಮಾನ ಸಣ್ಣ ಕೆಲಸದಲ್ಲಿರುವ ಆ ಬಡ ಜೀವಿಗಳಿಗೆ ಕೊಡಲು ಹಣವಿಲ್ಲ ಇವರ ಮಜಕ್ಕೆ ಹಣವೆಲ್ಲಿಂದ ಬರುತ್ತೆಂದು ಕೇಳಿದಕ್ಕೆ ಅವಳ ಉತ್ತರ ದೊರೆ ಮಾಡಿದ್ದು ದಂಡಂ ಲೇದು...! ಎಂದು ತೆಲುಗಿನ ನುಡಿ ಮುತ್ತು ಸುರಿಸಿದಳು... ನನಗು ಆ ಮಾತು ಸರಿ ಎನಿಸಿತು.. ದೊಡ್ಡವರು ಸ್ವಲ್ಪ ಯೋಚಿಸಿ ಎಲ್ಲಿ ಉಳಿಸಬೇಕು.. ಹೇಗೆ ಉಳಿತಾಯಕ್ಕೆ ಕೈಚಾಚಬೇಕು ಎಂದು ಯೋಚನಾಶೀಲರಾಗ ಬೇಕೆಂದು ನನ್ನಾಸೆ..

ಇನ್ನು ಹಣವಿಲ್ಲ ಎಲ್ಲ ಕಡೆ ಹಣ ಇಳಿಕೆ ಹೆಚ್ಚಾಗಿದೆ...ಹಾಗೆ ಹೀಗೆ ಎಂದು ಹೇಳುತ್ತಾರೆ ಇನ್ನು ಕಂಪನಿಗಳಿಗೆ ವರಮಾನ ಹೆಚ್ಚು ಬಂದರೆ ಅವರೆಲ್ಲ ಕೆಳವರ್ಗದ ನೌಕರರಲ್ಲಿ ಹಂಚುತ್ತಾರ..? ಖಂಡಿತ ಇಲ್ಲ...
ಪ್ರಪಂಚದಲ್ಲಾಗಿರೋ ಈ ಹಣದ ಒಡೆತಕ್ಕೆ ಬಡ ಕುಟುಂಬಗಳು ಮಮ್ಮಲಮರುಗಿಹೋಗಿವೆ... ನಾನು ಭಾರತದಲ್ಲಿ ಇಲ್ಲದಿದ್ದರೊ ಇಲ್ಲಿರುವ ಭರತ ಮಕ್ಕಳ ನೋವು ಅವರಲ್ಲಿನ ಮನದ ತುಳಿತ ಎಲ್ಲವೊ ಕಣ್ಣ ಮುಂದೆ ನೆಡೆಯುತಿದೆ.
ಅರಬ್ಬಿ ರಾಷ್ಟ್ರಗಳಿಗೆ ಬಂದಿರುವ ಕೂಲಿವರ್ಗದ ಜನ ಏಜೆಂಟರುಗಳಿಗೆಂದು ಒಂದಷ್ಟು ಹಣ ನೀಡಿ ಇಲ್ಲಿ ಬರಿ ೮ ರಿಂದ ೧೦ ಸಾವಿರ ರೂಪಾಯಿಗೆಂದು ಕೆಲಸಕ್ಕೆ ಬಂದಿರುತ್ತಾರೆ (ಕೆಲವರೊ ಇನ್ನು ಕಡಿಮೆ ಸಂಬಳಕ್ಕೆ ಬಂದಿದ್ದಾರೆ) ದಿನವಿಡಿ ದುಡುದು ಅದರಲ್ಲಿ ತಮ್ಮ ಖರ್ಚು ವೆಚ್ಚ ಎಲ್ಲ ಕಳೆದು ಊರಿಗೆ ಅವರನ್ನೆ ಅವಲಂಬಿಸಿರುವವರಿಗೆಂದು ತಿಂಗಳಲ್ಲಿ ಸ್ವಲ್ಪ ಹಣ ಕಳಿಸಬೇಕು... ಇಂತಹ ಸ್ಥಿತಿಯಲ್ಲಿ ಇರೊ ಈ ಪುಟ್ಟ ಸಂಸಾರಗಳ ಹೂರೆ ಹೊರುವುದು ಬಲು ಕಷ್ಟ....

ಇಲ್ಲಿನ ಹವಮಾನ ಅಷ್ಟು ಸರಿ ಇಲ್ಲ ಬೇಸಿಗೆಯಲ್ಲಿ ಬಿಸಿ ಹೆಚ್ಚು ಕೆಲವರು ಈ ತಾಪಕ್ಕೆ ಸತ್ತದ್ದು ಉಂಟು... ಇನ್ನು ಚಳಿಗಾಲದಲ್ಲಿ ತುಂಬ ಚಳಿ... ಹೀಗಿರುವಾಗ ಅವರು ಯಾವುದೇ ಒಡೆತಕ್ಕೊ ಎದೆಗುಂದದೆ ಕಂಪನಿಯ ಏಳ್ಗೆಗೆಂದು ಶ್ರಮಿಸುತ್ತಾರೆ ಇಂತಹ ಬಡ ಜೀವಕ್ಕೆ ಯಾರು ಆಸರೆ ...ಈ ಹಣ ಏನೆಲ್ಲ ಮಾಡಿಸುತ್ತೆ... ?
ಕಂಪನಿಗಳಲ್ಲಿ ಕೆಲಸವಿಲ್ಲವೆಂದು ಕಳಿಸದೆ ಬರುತ್ತಿರುವ ಸಂಬಳದಿ ಸ್ವಲ್ಪ ಕಡಿತ ಮಾಡಿಯಾದರು ಅಲ್ಲಿರುವ ನೌಕರರನ್ನು ಮುಂದುವರಿಸಿದರೆ... ಅವರ ಕುಟುಂಬವೂ ಉಳಿಯುತ್ತೆಂಬುದು ನನ್ನ ಅಭಿಪ್ರಾಯ... ವ್ಯವಸ್ಥಪಾಕರಾಗಲಿ ಕಂಪನಿಗೆ ಸಂಬಂದಿಸಿದ ಎಲ್ಲ ಮೇಲ್ದರ್ಜೆಯ ಅಧಿಕಾರಿಗಳು ಐಶಾರಾಮಿ ಜೀವನಕ್ಕೆ ಕಡಿವಾಣವಾಕಿ ಬಡ ಜೀವಕ್ಕೆ ಆಸರೆಯಾದರೆ ಬಲು ಒಳಿತು ಎಂಬುದು ನನ್ನ ಮಹದಾಸೆ... ಆದರೆ ಇದೆಲ್ಲ ಕೈಗೂಡುವುದು ಸಾಧ್ಯವೇ ತಿಳಿಯದು..

ಹೂರದೇಶದಲ್ಲಿ ಕೆಲಸವಿಲ್ಲದೆ ಇರುವುದು ಬಲು ಕಷ್ಟ....ನಮ್ಮೂರಾದರೇನೊ ಅಲ್ಪಸ್ವಲ್ಪ ನಿಭಾಯಿಸೊ ಧೈರ್ಯ, ನನ್ನವರೊ ಅನ್ನೊ ಜನ, ನನ್ನದೊ ಎಂಬ ವಸ್ತು ಎಲ್ಲವೊ ಇರುತ್ತೆ ಆದರಿಲ್ಲಿ ನನ್ನದೂ ಎನ್ನುವುದೇನು ಇಲ್ಲ... ಎಲ್ಲವೊ ಪರರದೆ
...

16 comments:

Anonymous said...

Hey!! Good One!!

ನಿಮ್ಮ ಮನದ ತುಡಿತ ಅರ್ಥವಾಗಿದೆ ಆದರೆ ದೊಡ್ಡ ಜನಕ್ಕೆ ಅರ್ಥವಾಗಬೇಕಲ್ಲ
ಹೀಗೇ ಬರೆಯುತ್ತಲಿರಿ...

Anonymous said...

Wonderfully written about present day situation, yes you are quiet right. Everybody has to think about this.

Gurumurthy Hegde

ಮನಸು said...

Anonymous..

ಧನ್ಯವಾದಗಳು..
ಕಣ್ಣಾರೆ ಕಂಡಾಗ ಮನ ಕಲಕುತ್ತೆ.....

ಮನಸು said...

Guru..

Welcome to my blog .

Present situation is very bad & low category workers are facing lot of problems other than higher category employees..

thnx, keep reading...

Regards...

Ittigecement said...

ಮನಸು...

ಸಮಯೋಚಿತ ಲೇಖನ...

ಜ್ವಲಂತ ಸಮಸ್ಯೆಯನ್ನು ವಾಸ್ತವಿಕದ ತಳಹದಿಯಲ್ಲಿ ವಿಷ್ಲೇಶಿಸಿದ್ದೀರಿ..

ಕೆಲಸದಿಂದ ತೆಗೆಯುವ ಬದಲು ಸ್ವಲ್ಪ ಸಂಬಳದಲ್ಲಿ ಕಡಿತ ಮಾಡಿ ಮುಂದುವರೆಸುವದು ಒಳ್ಳೆಯದು..

ಕೆಲವು ಕಂಪನಿಗಳು ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೂ ಇದೆ..

ಕಣ್ತೆರೆಸುವಲೆಖನಕ್ಕಾಗಿ..

ಅಭಿನಂದನೆಗಳು...

ಮನಸು said...

ಧನ್ಯವಾದಗಳು ಪ್ರಕಾಶ್ ಸರ್..

ಜ್ವಲಂತ ಸಮಸ್ಯೆಗೆ ಎಲ್ಲರು ಅವರವ ಸ್ಥಾನದಲ್ಲಿ ನಿಂತು ಪರಿಹಾರ ಹುಡುಕಬೇಕು ಇಲ್ಲವಾದರೆ ಎಲ್ಲವೂ ಕೈ ಮೀರಿ ಹೋಗುತ್ತೆ .

ವಂದನೆಗಳು ....

Prabhuraj Moogi said...

ಬಹಳ ಸರಿಯಾಗಿ ಹೇಳಿದ್ದೀರಿ... ಮೊನ್ನೆ ಯಾವುದೋ ಫಾರವರ್ಡ್ ಮಾಡಿದ ಮೇಲ್ ನಲ್ಲಿ ಬಂದ ಕಥೆ ಹೀಗಿತ್ತು "ಜಾಗ ಖಾಲಿ ಇದೆ ಅಂತಾ ಕಾಯೂಕೆ ವಾಚಮನ್ ನೇಮಿಸಿದರಂತೆ, ಅವನಿಗೆ ಕೆಲಸ ಹೇಳಿಕೊಡಲು ಒಬ್ಬ ಇನ್ಸಟ್ರಕ್ಟರ್ರು ಅವ ಹೇಳಿದ್ದು ಬರೆಯಲೊಬ್ಬ ರೈಟರ್ ನೇಮಿಸಿದರಂತೆ, ಕೆಲ್ಸದ ಕ್ವಾಲಿಟಿ ನೊಡಲು ಸೂಪರ್ವೈಜರುಗಳು, ಇವರ ಸಂಬಳ ಕೊಡಲು ಫೈನಾನ್ಸು, ಇವರೆಲ್ಲರ ನೊಡಿಕೋಳ್ಳಲು ಮ್ಯಾನೇಜರ್ ಒಬ್ರನ್ನು ನೇಮಿಸಿದರಂತೆ, ಕೊನೆಗೆ ಬಜೆಟ್ಟು ಜಾಸ್ತಿ ಆಯ್ತು ಅಂತ ವಾಚಮನ್ ಲೇ ಆಫ್ ಮಾಡಿದ್ರಂತೆ" ನಿಜವಾಗಿ ಬೇಕಾಗಿದ್ದದು ಅಲ್ಲಿ ವಾಚಮನ್ ಮಾತ್ರ... ವಾಸ್ತವ ಹೀಗೇನೇ...

ಮನಸು said...

ಧನ್ಯವಾದಗಳು..

ನೀವು ಹೇಳುವುದು ನಿಜ, ವಾಸ್ತವನ್ನು ಅರ್ಥ ಮಾಡಿಕೊಳ್ಳುವವರು ಯಾರು ಎಂಬುದು ತಿಳಿಯದು...

ಕಂಪೆನಿಯ ಜವಾಬ್ದಾರಿಯುತ ಜನ ಒಳ್ಳೆಯ ಸಮಯೋಚಿತ ತೀರ್ಮಾನಗಳನ್ನು ಕೈಗೊಂಡರೆ ಖಂಡಿತ ಯಾವ ಸಮಸ್ಯೆಯೂ ಬಿಡಿಸಲಾರದಂತ ಖಗ್ಗಂಟೆನಲ್ಲ
ಎಂಬುದು ನನ್ನ ಅಭಿಪ್ರಾಯ..

Premi said...

ಇದು ವಾಸ್ತವ.. ಇಂದಿನ ಈ ಸಕಲ ಸೌಕರ್ಯಗಳು ಇರೋದಾದರು ನಮ್ಮಲ್ಲಿ ನಮ್ಮ ದೇಶದಲ್ಲಿ "ನಿರುದ್ಯೋಗ ಔಷಧಿ ಇಲ್ಲದ ರೋಗ".. ಬರಗಾಲಕ್ಕೆ ಹೊಣೆ ಯಾರು? ಈ ಸಮಸ್ಯೆನ ಎಷ್ಟೋ ಜನ ನಿವಾರಿಸೋದಕ್ಕಿಂಥ ಈ ಸಮಯ ಎಷ್ಟುತರ ತಮಗೆ ಸ್ವ ಉಪಯೋಗಿಸ್ಕೊಬೇಕು ಅನ್ನೋಧೆ ದೊಡ್ಡ ಸಮಾಲೋಚನೆ ಅಲ್ವೇ ...!

ನಿಮ್ಮ ಅನಿಸಿಕೇನೆ ನನ್ನ ಅನಿಸಿಕೆ.. ಮತ್ತೇನು ಅಭಿಪ್ರಾಯ ಹೇಳೋದು ಅಲ್ವಾ.. ಚೆನ್ನಾಗಿ ಬರೆದಿದ್ದೀರಿ..


ಪ್ರೇಮ...

ಮನಸು said...

ಧನ್ಯವಾದಗಳು.. ಪ್ರೇಮ
ನನ್ನ ಬ್ಲಾಗಿಗೆ ಸ್ವಾಗತ..
ವಾಸ್ತವತೆಯನ್ನು ಅವರವರ ಸ್ಥಾನದಲ್ಲಿ ನಿಂತು ಸಮಸ್ಯೆಗಳಿಗೆ ಸಮಯೋಚಿತ ಉತ್ತರ ಹುಡುಕುವುದೇ ಇದಕ್ಕೆ ಪರಿಹಾರ.......ಬರಗಾಲ ನಮ್ಮನ್ನೇ ತಿನ್ನುತ್ತದೆ.. ಅದಕ್ಕೆ ಪರಿಹಾರ ವಿದ್ಯೆ, ಜೊತೆಗೆ ನಾಗರಿಕತೆ, ಒಳ್ಳೆಯ ಆಚಾರ ವಿಚಾರಗಳು ಬೆಳಿಸಿಕೊಂಡರೆ ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದು
ಹೀಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಸದಾ ಬರುತ್ತಿರಲಿ..
ವಂದನೆಗಳು..

ತೇಜಸ್ವಿನಿ ಹೆಗಡೆ said...

ಮನಸು,

ಅದಕ್ಕೇ ತಾನೇ ಹೇಳುವುದು.. ಪರದೇಶದಲ್ಲಿ ಏನಿದ್ದರೂ ನಾವು ಪರದೇಶಿಗಳೇ ಎಂದು! ಅಮಾಯಕರ, ಅಸಾಹಕರ ಗೋಳಿಗೆ ಕಣ್ಣೀರಿಗೆ ನಮ್ಮ ಮನಸು ಮಿಡಿಯಬಹುದೇ ಹೊರತು ನಾವೇನೂ ಮಾಡುವಂತಿಲ್ಲ. ಅಲ್ಪ ಸ್ವಲ್ಪ, ಆತ್ಮೀಯತೆ, ಸಹಾಯಗುಣ, ಕರುಣೆ ಎಲ್ಲಾ ಇರುವುದು ಭಾರತದಲ್ಲೇ ಅಷ್ಟೇ. ಉಳಿದ ದೇಶಗಳಿಗೆ ಹೋಲಿಸಿದರೆ ಮಾನವ ಧರ್ಮ ಅಲ್ಪವಾದರೂ ಉಳಿದಿರುವುದು ಇಲ್ಲೇ.. ಅಲ್ಲವೇ? ಉತ್ತಮ ಲೇಖನ.

ಮನಸು said...

ಧನ್ಯವಾದಗಳು ತೇಜಸ್ವಿನಿಯವರೇ..

ನಿಮ್ಮ ಭೇಟಿ ನನಗೆ ಸಂತಸ ಕೊಟ್ಟಿದೆ, ಭಾರತೀಯರಲ್ಲಿ ಮಾನವೀಯತೆ ಖಂಡಿತ ಉಳಿದಿದೆ ಇಲ್ಲವಾದರೆ ನಾವೆಲ್ಲೋ ಇರಬೇಕಿತ್ತು...

ನಿಜ ಇಲ್ಲಿ ಕೆಲವರು ಕೆಲಸವಿಲ್ಲದೆ ಊರಿಗೂ ಹೋಗಲಾಗದೆ ದ್ವಂದ್ವದಲ್ಲಿ ಮುಳುಗಿದ್ದಾರೆ, ಅವರ ತೊಳಲಾಟ ಮನ ಕಲಕುವಂತಹುದು.........

ಹೀಗೆ ನಿಮ್ಮ ಭೇಟಿ ನಿರಂತರವಾಗಿರಲಿ ಎಂದು ಬಯಸುತ್ತೇನೆ........

ವಂದನೆಗಳು..

shivu.k said...

ನಿಮ್ಮ ಮನದ ಭಾವನೆ ಅರ್ಥವಾಗಿದೆ....ಪ್ರಸ್ತುತ ಸನ್ನಿವೇಶವನ್ನು ಚೆನ್ನಾಗಿ ಬರೆದಿದ್ದೀರಿ.. ಕಂಪನಿಗಳಿಗೆ ಯಾವಾಗ್ ಬುದ್ದಿ ಬರುತ್ತೋ ದೇವರೆ ದಾರಿ ತೋರಬೇಕು..

ಬರಹದಲ್ಲಿ ವಸ್ತು ನಿಷ್ಟ ಕಾಳಜಿ ಇದೆ...ಹೀಗೆ ಬರೆಯುತ್ತಿರಿ...

ಮನಸು said...

ಧನ್ಯವಾದಗಳು,

ಕಂಪನಿಗಳಿಗೆ ಬುದ್ದಿ ಬರುವುದಿಲ್ಲ ಅವರು ಅವರದೇ ಆಲೋಚನೆಗಳಲ್ಲಿ ಮುಳುಗಿರುತ್ತಾರೆ...
ನಿಮ್ಮ ಬರುವಿಕೆ ಹೀಗೆ ಇರಲೆಂದು ಬಯಸುತ್ತೇನೆ...

ವಂದನೆಗಳು...

Anonymous said...

ನೀವು ಹೇಳಿದ್ದು ರೂಪಾಯಿಗೆ ಹನ್ನೆರಡಾಣೆ ನಿಜ. ಆದರೆ ಕೆಲ ಬುದ್ಧಿವಂತ ಕಂಪೆನಿಗಳು ಕೆಳಲೆವೆಲ್ ನ ಕೆಲಸಗಾರರನ್ನುಳಿಸಿಕೊಂಡು ಮ್ಯಾನೇಜ್ ಮೆಂಟ್ ಲೆವೆಲ್ ನಲ್ಲಿರುವವರಿಗೆ ಅರ್ಧಚಂದ್ರ ನೀಡಿದೆ.

-ರಂಜಿತ್.

ಮನಸು said...

ರಂಜಿತ್,
ಧನ್ಯವಾದಗಳು... ನನ್ನ ಅಂಕಣಕ್ಕೆ ನಿಮಗೆ ಸ್ವಾಗತ, ಸುಮಾರು ಕಂಪನಿಗಳಲ್ಲಿ ಹಾಗೆ ಅವರುಗಳಿಗೆ ತೊಂದರೆ ಮಾಡಿಕೊಳ್ಳೋಲ್ಲ ಬೇರೆಯವರು ಏನಾದರೇನು ಎಂದು ಸುಮ್ಮನಿದ್ದುಬಿಡುತ್ತಾರೆ..

ಹೀಗೆ ಬರುತ್ತಲಿರಿ ನಿಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ..

ವಂದನೆಗಳು