Tuesday, February 17, 2009

ಮನದ ಪ್ರಶ್ನೆ?


ಕರುನಾಡ ಬಿಟ್ಟು ಬಂದೆವು ಮರುಭೊಮಿಗೆ
ಅಂದು ಬಂದದ್ದು ಬರಿ ಎರಡು ವರ್ಷದ ದುಡಿಮೆಗೆ
ಈವರೆಗಾದದ್ದು ಐದು ವರ್ಷದ ನೆಡಿಗೆ
ಎಂದು ತಿರುಗಿ ನೋಡುವೆವೊ ನಮ್ಮೂರ ಕಡೆಗೆ
ದಿನದಿನವು ಬದಲಾದ ಜೀವನದ ಘಳಿಗೆ
ಕೆಲವೊಮ್ಮೆ ನೊಂದು ಹೇಳುವುದೆನ್ನ ಮನ ನಡೆ ನಿಮ್ಮೂರಿಗೆ
ಏಕೆ..? ಏನಿದೆಯೆಂದು ಬಂದೆ ಮರಳುಗಾಡಿನ ಧರೆಗೆ
ಐಷಾರಾಮ ಜೀವನಕ್ಕೆ ಕೊಟ್ಟ ನಿನ್ನ ನೀನೆ ಧೇಣಿಗೆ
ಇದುವರೆಗೂ ಉತ್ತರಿಸಲಾಗದೆ ಉಳಿದೆ..! ನನ್ನ ಮನದ ಪ್ರಶ್ನೆಗೆ ....

11 comments:

ಸಂದೀಪ್ ಕಾಮತ್ said...

ಇರವುದೆಲ್ಲವ ಬಿಟ್ಟೂ ಇರದುದರೆಡೆಗೆ ತುಡುವುದೇ ಜೀವನ ...
-ಗೋಪಾಲ ಕೃಷ್ಣ ಅಡಿಗ

shivu.k said...

ಮೇಡಮ್,

ಇದ್ದೂರು ಬಿಟ್ಟ ಊರು ಎರಡು ಪ್ರೀತಿಸುವುದು...ಅನುಭವಿಸುವುದು....ಅಷ್ಟೇ...

Ittigecement said...

ಮನಸು...

ನಾನೂ ಕತಾರ ದೇಶದಲ್ಲಿದ್ದೆ..

ತುಂಬಾ ಒಂಟಿತನ ಕಾಡಿತ್ತು...

ಬಡತನ, ಧೂಳು ಇದ್ದರೂ ನಮ್ಮ ನಾಡು,ನೆಲ, ಭಾಷೆ ಚಂದ...

ಇಲ್ಲಿಯೇ ನೆಲೆಯೂರಲು ನಿರ್ಧರಿಸಿ.. ಬಂದುಬಿಟ್ಟೆ..

ಈಗನಿಸುತ್ತದೆ..

ಸರಿಯಾಗಿತ್ತು ನನ್ನ ನಿರ್ಣಯ,,,

ನಿಮ್ಮ ಮಾತು ಮನಸ್ಸಿಗೆ ತಾಟುವಂತಿದೆ...

ವಂದನೆಗಳು

ಶಿವಪ್ರಕಾಶ್ said...

ನೀವು ಇದನ್ನು ಆಗಲೇ ಪೋಸ್ಟ್ ಮಾಡಿದ್ದಿರಿ
http://mrudhumanasu.blogspot.com/2008/07/blog-post_15.html

ನಾನು ಬಹಳ ದಿನಗಳ ಹಿಂದೆಯೇ ನಿಮ್ಮ ಬ್ಲಾಗ್ನಲ್ಲೆ ಓದಿದ್ದೆ. ಆಗ ಕಾಮೆಂಟ್ ಬರೆಯಲು ಸಮಯ ಸಿಕ್ಕಿರಲಿಲ್ಲ.
ಬಹಳ ಚನ್ನಾಗಿ ಬರೆದಿದ್ದೀರಿ..
ಧನ್ಯವಾದಗಳು..

ಮನಸು said...

ಧನ್ಯವಾದಗಳು ಎಲ್ಲರಿಗು...
*ಸಂಕೇತ್..
ನಿಮಗೆ ಸ್ವಾಗತ..ಅಡಿಗರ ಹಾಡಿನಂತೆ ಸಾಗಿದೆ ಜೀವನ..
ಹೀಗೆ ಬರುತ್ತಲಿರಿ..
ಶಿವು ಸರ್,
ಇದ್ದೊರು ಬಿಟ್ಟೂರು ಎರಡು ನನಗೆ... ನೆಮ್ಮದಿ ಕೊಟ್ಟಿದೆ...ಎರಡು ಜೀವನವನ್ನು ಅನುಭವಿಸುತ್ತಿದ್ದೇನೆ..
ಪ್ರಕಾಶ್ ಸರ್,
ಮರುಭೂಮಿ ಜೀವನ ನಿಮಗೆ ಹೆಚ್ಚೇನು ಹೇಳುವುದಿಲ್ಲ... ನಮ್ಮೂರು ನಮಗೆ ಚೆನ್ನ.. ನೀವು ಒಳ್ಳೆ ನಿರ್ಧಾರ ಮಾಡಿದ್ದೀರಿ..ನಮ್ಮದು ಇನ್ನು ಆ ನಿರ್ಧಾರ ಆಗಿಲ್ಲ ಯಾವಾಗ ಬರುವುದೂ ಆ ನಿರ್ಧಾರ ಎಂದು ಕಾಯುತ್ತಲಿದ್ದೇನೆ.. ನಾವು ಎಷ್ಟೇ ಇರಲಿ.. ಏನೇ ಇರಲಿ, ಕೊನೆಯಲ್ಲಿ ನಾವು ಇಲ್ಲಿ ಒಂಟಿ ಅನ್ನೂದು ಮಾತ್ರ ನಿಜ.
ಶಿವಪ್ರಕಾಶ್,
ಹೌದು, ಈ ಮುಂಚೆ ಬಿತ್ತರಿಸಿದ್ದೆ ಕಾರಣಾಂತರದಿಂದ ನನ್ನ ಸ್ನೇಹಿತೆಗಾಗಿ ಮತ್ತೂಮ್ಮೆ... ಅಷ್ಟೆ...ಅಲ್ಲದೆ ನನ್ನ ಪ್ರಶ್ನೆಗೆ ಇನ್ನು ಉತ್ತರ ಹುಡುಕೊ ನಿಟ್ಟಿನಲ್ಲಿ ಇದ್ದೇನೆ ಹ ಹ ಹ... ಆ ಉತ್ತರ ಸಿಕ್ಕಿಲ್ಲ ಅಂತ... ಮತ್ತೊಮ್ಮೆ ನಿಮ್ಮಗಳ ಮುಂದೆ ತಂದಿದ್ದೇನೆ..
ಧನ್ಯವಾದಗಳು..

Anonymous said...

Dear Manasu,

human mind is such a wonderful thing which neverever satisfy with present situation. When food is spicy, we need some sweet, when it is sweet, we need little spicy. When hot, we hate. When cold, we scold. This is the strategy of life. These are all part and parcel of life, so enjoy the present situation and ever forget motherland.
Thanks for wonderful poem.
Guru

ಮನಸು said...

Thnx for your comments guru... i agree what ever you said is right,
ಮನಸಿನ ತುಮುಲ ಮನಸಿಗೆ ಗೊತ್ತು... ಅದು ಏನು ಬೇಕೋ ಅದನ್ನೆಲ್ಲಾ ಯೋಚಿಸುತ್ತೆ.. ಅಲ್ಲವೇ? ಅದ ಸ್ಥಿಮಿತ ಇಡೋದು ಬಹಳ ಕಷ್ಟ ... ಇದು ಕೂಡ ಹಾಗೆ, ಹೀಗೆ ಬೇಸರದ ಸಮಯದಿ ಮನಸಿಗೆ ನನಗೆ ನಾನೇ ಪ್ರಶ್ನೆ ಹಾಗಿಕೊಂಡೆ... ಅಷ್ಟೆ..
ನಾನು ಇರೋ ಊರಿನ ಮೇಲೆ ಬೇಸರವೇನಿಲ್ಲ ನಾವು ಇಲ್ಲಿನ ಜನ, ಭಾಷೆ, ನಡೆ ನುಡಿ ಎಲ್ಲವನ್ನು ನೋಡಿ ಕಲಿಯೋದು ಬಹಳ ಇದೆ... ನಮಗೆ ಅನ್ನ ನೀಡೋ ದೇಶವನ್ನು(ಸಾಕು ತಾಯಿಯನ್ನು) ನಾ ಮರೆಯೋದಿಲ್ಲ...ಪ್ರೀತಿಸುವೆ.. ಗೌರವಿಸುವೆ...ಆದರು ಹೆತ್ತಮ್ಮನ ನೆನಪು ಕಾಡದೇ ಇರುತ್ತೆಯೆ ಹೇಳಿ?

Girish Jamadagni said...

Manasu,

Deciding on when to return to India is the biggest dilemma & toughest decision for all NRIs. Timing to return is purely personal & there is nothing called right or wrong. We NRIs are lucky that we enjoy best of both worlds!
Good one....Keep writing.....
Girish Jamadagni (Singapore)

ಮನಸು said...

thnq sir and welcome to my blog, keep visiting

Regards,
Manasu

ತೇಜಸ್ವಿನಿ ಹೆಗಡೆ said...

ಮೃದುವಚನ್‌ನ ಮೃದು ಶುಭಾಶಯದ ಪರಿ ಮುದ ಕೊಟ್ಟಿತು...:) ಹಾಗೆಯೇ ನಿಮ್ಮನ್ನು ಕಾಡುವ ಪ್ರಶ್ನೆಗಳು ಮನತಟ್ಟಿದವು.

ಮನಸು said...

ತೇಜಸ್ವಿನಿಯವರೇ..

ಬಹಳ ಧನ್ಯವಾದಗಳು..