Saturday, May 2, 2009

ಕರುಳ ಕುಡಿಗೆ ಹುಟ್ಟುಹಬ್ಬದ ಸಂಭ್ರಮ...

ಅಂದು ನೀ ಬಂದು ನನ್ನ ಜೀವನಕೆ ಹೊಸ ಆಯಾಮವನ್ನೇ ಮೂಡಿಸಿಬಿಟ್ಟೆ ಏನೋ ಪುಳಕ, ತನು ಮನವೆಲ್ಲಾ ಹೊಸ ಅನುಭವದತ್ತ ದಾಪುಗಾಲು ಅಂದೆನಗೆ ಎಲ್ಲವೊ ಹೊಸದು ಹೆಣ್ತನ ಹೀಗೆಲ್ಲ ಭೊರಮಿಸುತ್ತೆನುವ ಭಾವನೆ ನನ್ನಲಿಲ್ಲದ ದಿನ ನೀ ಬಂದು ನನ್ನ ಬಾಳ ಹಸನಾಗಿಸಿಬಿಟ್ಟೆ.
ಮುಸ್ಸಂಜೆಯ ಹೊತ್ತು ನಾನಲ್ಲಿ ನೋವಿಂದ ನಲುಗಿದ್ದೆ ಒಡಲ ಉರಿಗೆ ಬಾಡಿದ ಹೂವಂತಿದ್ದೆ ನೀ ಪುಟಿದು ಬಂದ ಕ್ಷಣ ಎಲ್ಲಾ ನೋವು ಮಾಯವಾಗಿತ್ತು. ನಿನ್ನೊಡನೆ ನನ್ನ ಬಾಲ್ಯ, ಅಮ್ಮನ ಹಾರೈಕೆ ಎಲ್ಲವನು ಅರಿತೆ, ನಿನ್ನ ಪುಟ್ಟ ಪುಟ್ಟ ಹೆಜ್ಜೆ ನನ್ನ ಜೀವನದ ಉನ್ನತಿಯ ಮೆಟ್ಟಿಲಿಗೆ ನಾಂದಿಯಾಡಿತು.. ನಿನ್ನ ತೊದಲ ನುಡಿ, ನಿನ್ನ ತುಂಟತನ, ಮೃದುತ್ವ ಎಲ್ಲವೊ ಮನೆ,ಮನ ಸೂರೆಮಾಡಿತ್ತು. ನಿನ್ನಿಂದ ದೊರವಿದ್ದ ದಿನಗಳಂತು ನರಕಯಾತನೆಯಂತಿತ್ತು ಅಂದಿನ ಒಡಲ ಉರಿ ಇಂದು ನೆನೆದರೆ ಕಣ್ಣೀರ ಧಾರೆ ಹರಿದುಬಿಡುವುದು. ನಿನ್ನಿಂದ ದೂರವಿದ್ದ ಕಹಿಮರೆತು ಮತ್ತೊಮ್ಮೆ ಸೇರಿದಾಗ ನೀ ತೋರಿದ ಮುನಿಸು ಸ್ವಲ್ಪ ಇರಿಸುಮುರಿಸು ಜೊತೆಗೆ ಮತ್ತೆಂದು ನನ್ನ ಸ್ವೀಕರಿಸುವುದಿಲ್ಲವೇನೆಂಬ ಭಯದ ಛಾಯೆ ಹೃದಯಾಂತರಾಳದಲ್ಲಿತ್ತು ಅದನಾರಲ್ಲೊ ತೋರ್ಪಡಿಸದೆ ಭಂಡಳಂತ್ತಿದ್ದೆ. ಆ ಕಹಿದಿನಗಳೆಲ್ಲ ಕಳೆದು ನನ್ನೊಡಲ ಉರಿ ತಣ್ಣಗಾಗಿಸಿ ನೀ ಎನ್ನ ಮಡಿಲು ಸೇರಿದೊಡೆ ನಾನು ನಿರಾಳವಾಗಿಬಿಟ್ಟೆ. ಅಂದಿನಿಂದ ನಾ ನಿನಗಾಸರೆ ನೀ ನನಗಾಸರೆಯಾಗಿಬಿಟ್ಟೆವು.......
ನಿನ್ನದು ಮುದ್ದು ಮನಸು ನನ್ನದು ಪೆದ್ದು ಮನಸು ಇಂತಹದರಲ್ಲಿ ಇಬ್ಬರು ನಲಿದ ಕ್ಷಣಗಳೆಲ್ಲಾ ಹುಚ್ಚು ತರಿಸಿದವೆಲ್ಲವು..... ಆ ಮುದ್ದು ಮನಸಿಗೆ ಮುದ ನೀಡೋ ಕನಸು ಎಷ್ಟೋ ಇದೆ ನಿನಗದು ಖುಷಿ ನೀಡುತ್ತೋ ಇಲ್ಲವೋ ಎಲ್ಲವನು ಕಾದು ನೋಡಬೇಕಿದೆ.
ನಿನ್ನ ಹಾರೈಕೆ ಮಾಡುವಲ್ಲಿ ಕಡಿಮೆಯೇನೋ ನಾ ತಿಳಿಯೇ ಎಲ್ಲರಂತೆ ನಾನಿಲ್ಲವೇನೋ, ನೀ ಬಯಸಿದಂತೆ ನಿನ್ನ ಹಾರೈಕೆ, ಪ್ರೀತಿ, ವಾತ್ಸಲ್ಯ ನೀಡುತ್ತಿಲ್ಲವೇನೋ ತಿಳಿಯೇ, ಅಂದು ನಿನ್ನೊಬ್ಬನೇ ಬಿಟ್ಟು ಹೋದಾಗ ಕಣ್ಣೀರ ನೀ ತುಂಬಿಕೊಂಡಾಗ ನಿನಗಾದ ದುಃಖದಲಿ ನನ್ನ ಶಪಿಸಿಬಿಟ್ಟೆಯೇನೋ ನಾ ತಿಳಿಯೇ ಆದರೆ ಒಂದಂತೂ ನಿಜ ನಿನ್ನೊಬ್ಬನನ್ನೇ ಬಿಟ್ಟು ನಾ ಹೋದಾಗ ಅನಾಥ ಪ್ರಜ್ಞೆ ನಿನ್ನಲ್ಲಿ ಎಲ್ಲಿ ಮೂಡಿಬಿಡುತ್ತೋ ಎಂಬ ಭಾವ ನನ್ನ ಮನಕೆ ಕಾಡದಿರಲಿಲ್ಲ...ನನ್ನ ಕರುಳ ಸಂಕಟ ಹೇಳಿಕೊಳ್ಳಲು ನೀನ್ನಿನ್ನು ಪುಟ್ಟ ಮಗು...ನನ್ನ ಮಾತನ್ನೆಲ್ಲಾ ಅರಿವ ವಯಸ್ಸು ನಿನ್ನದಲ್ಲ..... ಆದರೊ ಇಷ್ಟು ಪುಟ್ಟ ವಯಸ್ಸಿನಲ್ಲಿ ನಿನ್ನ ನೀ ನಿಭಾಯಿಸಿ ಆತ್ಮಬಲ, ಧೈರ್ಯ,ಶಿಸ್ತು, ನಿಲುವು, ಸ್ವಂತಕಾರ್ಯ ಎಲ್ಲವನು ರೂಢಿಸಿಕೊಂಡು ಬಿಟ್ಟೆಯಲ್ಲಾ ಕಂದ ನಿನಗೆ ನನ್ನ ಸಲಾಮು. ನಿನಗೆ ನಾ ಎಂದೆಂದು ಚಿರಋಣಿ ನೀ ಎಲ್ಲಾ ಮಕ್ಕಳಂತಲ್ಲ ನಿನ್ನಲ್ಲಿನ ವಿಶೇಷತೆ ಹೇಳತೀರದು. ಕಾಣದ ದೇಶದಲ್ಲಿ ನನ್ನವರೆಂಬವರು ಇಲ್ಲದ ಊರಲ್ಲಿ ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ ಬಾಗಿಲ ಬಳಿ ಬಂದೊಡೆ ಓಹ್!!! ಅಮ್ಮನಿಲ್ಲ ಕೆಲಸಕ್ಕೆ ತೆರೆಳಿದ್ದಾಳೆ ನನ್ಗೆ ನಾನೇ ಎಲ್ಲ ಎಂದು ಭಾವಿಸಿ ಬಾಗಿಲು ತೆರೆದು ಮತ್ತೆ ಬಾಗಿಲು ಭದ್ರಪಡಿಸಿ ನಿನ್ನ ಉಡುಪು ಬದಲಿಸಿ, ಮುಖ ತೊಳೆದು ಟೆಬಲಿನ ಮೇಲಿದ್ದ ಊಟ ತೆಗೆದು ತಿನ್ನುವಾಗ ನೀನೆಸ್ಟು ದಿನ ನೊಂದುಕೊಂಡೆಯೋ ನಾ ಅರಿಯೇ ನನಗೆ ಯಾರಿಲ್ಲ ನನಗಾಗಿ ನಾನೆ ಎಲ್ಲ ಎಂದು ನೊಂದು ತುತ್ತು ತುತ್ತಿಗು ತುತ್ತು ಕೊಡುವವಳ ಶಪಿಸಿದ್ದೆಯೇನೋ ನಾ ತಿಳಿಯೇ ನೀ ಏನೇ ತಿಳಿ ಇದು ನಿನ್ನಮ್ಮ ಎಂದೊ ನಿನ್ನ ಒಳಿತು ಬಯಸೋ ಅಮ್ಮ...........
ನನ್ನ ಉಸಿರ ಒಂದು ಭಾಗ ನೀ..........ನೀ ನನ್ನ ಸ್ನೇಹಿ, ನೀ ನನ್ನ ಪ್ರಾಣ, ನೀನೇ ಎನಗೆ ಎಲ್ಲಾ......ಕಂದ ಈ ನಿನ್ನ ಪೆದ್ದು ಮನಸಿನ ಅಮ್ಮ ಏನೇ ಮಾಡಿದ್ದರೊ ಮನ್ನಿಸಿ ಕ್ಷಮಿಸಿಬಿಡು ಮುಕುಂದ...... ನೀ ಎಲ್ಲವನು ಸಹಿಸಿ, ಎಲ್ಲದಕೊ ಪ್ರೋತ್ಸಾಹಿಸಿ ನನ್ನ ಜೀವನದ ಏಳ್ಗೆಗೆ ಬೆಳಕ ಹಿಡಿದ ಬೆಳಗಿನ ನೇಸರ.....ರಾತ್ರಿಯ ಚಂದ್ರಮ ಎಲ್ಲವೊ ನೀನೇ...ನನ್ನ ಒಡಲ ಚಂದ್ರಮಕೆ ಇಂದು ಎಂಟರ ಮುದ್ದು ಮಯಸ್ಸು...ನನ್ನ ಜೀವನದ ಬೆಳಕಿಗೆ ಹುಟ್ಟು ಹಬ್ಬದ ಸಂತಸದ ಚಂದ್ರಮ........ನನಗೋ ಬೆಳಕನೊಗಳುವ ಸಂಭ್ರಮ.............

ಕಂದ ನಿನಗೆ ನಿನ್ನ ಅಮ್ಮನಿಂದ ಹೃದಾಯಾಂತರಾಳದಿಂದ ಹುಟ್ಟುಹಬ್ಬದ ಶುಭಾಶಯಗಳು....
ಹಾಗು ನಿನ್ನಪ್ಪ ಮೋಟಗೊರಿಲ್ಲಾನಿಂದಲೂ ಪ್ರೀತಿಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು....
ನಿನ್ನ ದಿನ ಸುಸವಿದಿನ
ವರುಷಪೂರ್ತಿ.......ಶುಭದಿನ

19 comments:

ಶಿವಪ್ರಕಾಶ್ said...

ನಿಮ್ಮ ಕರುಳ ಕುಡಿಗೆ,
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...

Anonymous said...

ಲೇಖನ ತುಂಬ ಚೆನ್ನಾಗಿದೆ. ನಿಮ್ಮ ಮಗನಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು.
ವಂದನೆಗಳು

Prabhuraj Moogi said...

ಹುಟ್ಟುಹಬ್ಬದ ಶುಭಾಶಯಗಳು ನಮ್ಮಿಂದ ಕೂಡ... "ಶಾಲೆಯಿಂದ ಬಂದೊಡೆ ಅಮ್ಮ ಬಾಗಿಲು ತೆರೆದು ಎನಗೆ ಉಣಬಡಿಸುತ್ತಾಳೆ ಎಂಬ ಭಾವನೆಯಲಿ... " ಈ ಸಾಲುಗಳಲ್ಲಿ ನಗರ ಜೀವನದ ಕೆಲಸಮಾಡುವ ಗೃಹಿಣಿಯರ ಮನದ ಭಾವನೆಗಳನ್ನು ಬರೆದಿದ್ದೀರಿ... ಚೆನ್ನಾಗಿದೆ..

Guruprasad said...

ಮನಸು,,
ಲೇಖನ ತುಂಬ ಚೆನ್ನಾಗಿ ಇದೆ... ಮಗನ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಪರಿ... ವೆರಿ ನೈಸ್.....
ನಿಮ್ಮ ಪ್ರೀತಿಯ ಕಂದನಿಗೆ,,,,ನಮ್ಮ ಕಡೆ ಇಂದನು ಹುಟ್ಟಿದ ಹಬ್ಬದ ಶುಭಾಶಯಗಳು ..

ಗುರು

ಮನಸು said...

ಶಿವಪ್ರಕಾಶ್,
ನಿಮ್ಮ ಶುಭಾಶಯವನ್ನು ನನ್ನ ಮಗನೇ ಓದಿದ ಬಹಳ ಖುಷಿಪಟ್ಟ ಕೊಡ.....ತುಂಬು ಹೃದಯದ ಧನ್ಯವಾದಗಳು....
ವಂದನೆಗಳು
ಮನುವಚನ್,
ಮನಸು
ಅನಾಮಧೇಯರಿಗೆ,
ನಿಮ್ಮ ಹೆಸರು ತಿಳಿಸದೆ ಶುಭಾಶಯಕೋರಿರುವುದು ನೋಡಿ ನನ್ನ ಮಗನಿಗೆ ಯಾರೆಂದು ಕೇಳಿದಾಗ ಉತ್ತರಿಸದಾದೆ..ನಿಮ್ಮ ಹೆಸರು ಇದ್ದಿದ್ದರೆ ಮತ್ತೊ ಖುಷಿಪಡುತ್ತಲಿದ್ದ...
ಧನ್ಯವಾದಗಳು
ಮನುವಚನ್
ಮನಸು.....

ಮೂರ್ತಿ ಹೊಸಬಾಳೆ. said...

ಸುಗುಣಕ್ಕಾ,
ನೀವು ಬಹರೆನ್ ನಿಂದ ರಜೆಗೆ ಬಂದಾಗ ನಮ್ಮ ಮನೆಗೆ ಬಂದಿದ್ದಿರಿ.ಆಗ ಮೃದುವಚನ್ ಬೆಂಗಳೂರಿನಲ್ಲಿ ಓದುತ್ತಿದ್ದ ಆಗ ನಿಮ್ಮಲ್ಲಿನ ಅನಿವಾರ್ಯ ಕ್ಕಾಗಿ ಮಗನನ್ನ ಬಿಟ್ಟು ದೂರ ಉಳಿದು ನೊಂದುಕೊಳ್ಳುವ ತಾಯಿ”ಯನ್ನ ಗುರುತಿಸಿದ್ದೆ.
ನಂತರ ನೀವಂದುಕೊಂಡಂತೆ ನಿಮ್ಮ ಜೊತೆ ಕರೆದು ಕೊಂಡು ಹೋದಿರಿ ಈಗ ಮೊದಲು ನ್ಯಾಸಬೂತ ವಾಗಿರಿಸಲ್ಪಟ್ಟಿದ್ದ ವಾತ್ಸಲ್ಯವನ್ನ ಧಾರೆ ಎರೆದಿದ್ದೀರಿ. ಅವನ ಜವಾಬ್ದಾರಿ,ಓದಿನಲ್ಲಿನ ಶ್ರದ್ಧೆ,ಶಾಲೆಯ ಹೊರಗಿನ ಚಟುವಟಿಕೆ ಗಳನ್ನೆಲ್ಲ ಕೇಳಿ ಕಣ್ಣು ಮಂಜಾಗಿಸಿಕೊಳ್ಳುತ್ತಿದ್ದೆ.
ನಮ್ಮ ಕುಟುಂಬದ ಪರವಾಗಿ ನಿಮ್ಮ ಕುಲದೀಪಕ ನಿಗೆ Happy birth day ತಿಳಿಸಿಬಿಡಿ.
ಹಾಂ ಅಂದ ಹಾಗೆ ಮೋಟು ಗೋರಿಲ್ಲನಿಗೂ ನಮಸ್ಕಾರ ತಿಳಿಸಿಬಿಡಿ. ಹಿ ಹಿ ಹಿ

ಮನಸು said...

ಪ್ರಭು,
ನಿಮ್ಮ ಅನಿಸಿಕೆ ನನ್ನ ಮಗ ಇನ್ನು ಓದಿಲ್ಲ, ಸಂಜೆ ಓದುತ್ತಾನೆ... ನಿಮ್ಮ ಶುಭಾಶಯ ಅವನಿಗೆ ಶ್ರೇಯಸ್ಸ್ಕರವೆಂದು ಭಾವಿಸುತ್ತೇನೆ.. ಧನ್ಯವಾದಗಳು

ಗುರು,
ನನ್ನ ಮಗನ ಪರಿ ಎಷ್ಟು ಹೇಳಿದರೊ ಸಾಲದು, ಅವನಿಂದ ನಾನು ಇಷ್ಟೆಲ್ಲ..... ನಿಮ್ಮ ಅನಿಸಿಕೆ, ಶುಭಾಶಯಗಳಿಗೆ ನಾವು ಸದಾ ಋಣಿಗಳು... ನಿಮ್ಮ ಅನಿಸಿಕೆಗಳನ್ನು ನನ್ನ ಮಗ ಸಂಜೆ ತೊದಲು ನುಡಿಯಲ್ಲಿ ಓದುತ್ತಾನೆ ಏಕೆಂದರೆ ಅವನಿಗಿನ್ನು ಕನ್ನಡ ಒತ್ತಕ್ಷರಗಳನ್ನು ಓದಲು ಬಾರದು...ಪ್ರಯತ್ನವಂತು ಇದ್ದೇ ಇರುತ್ತೆ...
ಧನ್ಯವಾದಗಳು...

ಮನಸು said...

ಮೂರ್ತಿ:
ಹೌದು ನನ್ನ ನೋವಿನ ದಿನ ನಿಮಗೆ ತಿಳಿದೇ ಇದೆ.... ಮತ್ತೇನು ಹೇಳುವುದು ಬಿಡಿ.... ವಾತ್ಸಲ್ಯವೇನೋ ಧಾರೆ ಎರೆದ್ದಿದ್ದೇನೆ ಅವನಿಗೆ ತೃಪ್ತಿ ಇದ್ದರೆ ನಾನೇ ಧನ್ಯೆ...ಅವನು ಯು.ಕೆ.ಜಿ ಯಿಂದಲೇ ತನ್ನ ಕೆಲಸ ಎಲ್ಲವನ್ನು ತಾನೇ ನಿರ್ವಹಿಸುತ್ತಾನೆ ಮನೆ ಬೀಗ ತೆಗೆದು ತಾನೇ ಎಲ್ಲವನ್ನು ನಿಭಾಯಿಸುತ್ತಾನೆ ಇಲ್ಲಿವರೆಗು ಯಾರ ಆಶ್ರಯವನ್ನು ಬಯಸದೆ ಅವನನ್ನು ಅವನೇ ಕಾಪಡಿಕೊಂಡ್ಡಿದ್ದಾನೆ ದೇವರಿಗೆ ನಾನು ಧನ್ಯವಾದ ಹೇಳಲೇಬೇಕು....
ನಿಮ್ಮ ಶುಭಾಶಯ ಖಂಡಿತ ಅವನಿಗೆ ತಿಳಿಸುತ್ತೇನೆ.....
ಮೋಟಾಗೋರಿಲ್ಲ ಹಹಹ ಅದು ಚಿಂಟು ಯಾವುದೋ ಕಾರ್ ಟೊನ್ ನೋಡುತ್ತಾನೆ ಅದರಲ್ಲಿ ಯಾವುದೋ ತರಕಾರಿ ಅಂಗಡಿ ಮಾಲೀಕನಂತೆ ಅವನು ತಿಂಡುಪೋತನಂತೆ, ದಪ್ಪವಾಗಿದ್ದಾನಂತೆ ಅದಕ್ಕೆ ಅವರಪ್ಪನಿಗೂ ಆ ಹೆಸರು ಇಟ್ಟುಬಿಟ್ಟಿದ್ದಾನೆ ಹ ಹ ಹ ಹ....ನಮಸ್ಕಾರ ತಿಳಿಸುತ್ತೇನೆ ಹ ಹ ಹ
ಮುಂದಿನ ತಿಂಗಳು ಊರಿಗೆ ಹೋದಾಗ ನಿಮ್ಮ ಅಮ್ಮನನ್ನೊಮ್ಮೆ ನೋಡಿಬರುವೆ...
ನಿಮ್ಮ ಹಾಗು ನಿಮ್ಮ ಮನೆಯವರ ಶುಭಾಶಯಕ್ಕೆ ನಮ್ಮ ಧನ್ಯವಾದಗಳು....

shivu.k said...

ಸುಗುಣಕ್ಕ,

ತಡವಾಗಿದ್ದಕ್ಕೆ ಕ್ಷಮೆಯಿರಲಿ...ನಿಮಗೆ ಗೊತ್ತಿರುವಂತೆ ನನಗೆ ಕಳೆದ ಒಂದು ತಿಂಗಳಿಂದ ಕೆಲಸದ ಒತ್ತಡ.

ನಿಮ್ಮ ಮಗ ಮೃದುವಚನ್‌ಗೆ ಹುಟ್ಟುಹಬ್ಬದ ಶುಭಾಶಯಗಳು.

ಮಗನ ಮೇಲಿನ ಪ್ರೀತಿ ಅಭಿವ್ಯಕ್ತಿ ನಿಮ್ಮ ಲೇಖನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ...ತಾಯಿ ಮಗನ ಭಾಂಧ್ಯವ್ಯದ ಬಗ್ಗೆ ನನಗೆ ಹೆಚ್ಚೇನು ಬರೆಯಲು ಸಾಧ್ಯವಿಲ್ಲ. ಅದು ಅನುಭವಿಸಿದವರಿಗೆ ಗೊತ್ತು...

ಧನ್ಯವಾದಗಳು..

ಮನಸು said...

ಧನ್ಯವಾದಗಳು ನಿಮ್ಮ ಕೆಲಸದ ಒತ್ತಡದಲ್ಲೊ ನಮ್ಮೊಂದೆ ನಿಮ್ಮ ಅನಿಸಿಕೆ ಹಂಚಿಕೊಡಿರಲ್ಲ ನನಗೆ ಬಹಳ ಖುಷಿ...
ನಿಮ್ಮ ಶುಭಾಶಯಗಳನ್ನು ಖಂಡಿತ ನನ್ನ ಮಗನಿಗೆ ತಿಳಿಸುತ್ತೇನೆ. ಅನುಭವ ಎಲ್ಲವನ್ನು ತಿಳಿಸುತ್ತೆ ಅಲ್ಲವೇ? ನನ್ಗೆ ನನ್ನ ಮಗನೇ ಎಲ್ಲಾ.... ನಾವಿಬ್ಬರು ಸ್ನೇಹಿತರಂತಿದ್ದೇವೆ...

ವಂದನೆಗಳು

sunaath said...

ನಿಮ್ಮ ಚಿರಂಜೀವನಿಗೆ ಹುಟ್ಟುಹಬ್ಬದ ಶುಭಾಶಯಗಳು.
ನಿಮ್ಮ ಲೇಖನ ಭಾವಪೂರ್ಣವಾಗಿದೆ.

ಧರಿತ್ರಿ said...

ಪ್ರೀತಿಯ ಪುಟ್ಟ ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು. ನಿತ್ಯ ನಿನ್ನ ಮುಖದಲ್ಲಿ ಬೆಳದಿಂಗಳ ನಗೆ ಸೂಸುತ್ತಿರು. ಶುಭವಾಗಲೀ..ಪುಟ್ಟಾ...
ಏಯ್..ಆಮೇಲೆ ನಂಗೆ ಹುಟ್ಟುಹಬ್ಬದ ಪಾರ್ಟಿ ಇಲ್ವೇನು? ಅಮ್ಮಂಗೆ ಹೇಳು...ಸ್ವಲ್ಪ ಪಾರ್ಸೆಲ್ ಮಾಡಿ ಕಳಿಸಾಕೆ. ಒಬ್ನನೇ ತಿನ್ನಬೇಡ..ಆಯಿತಾ?

-ಧರಿತ್ರಿಯಕ್ಕ

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಮಗನಿಗೆ ನನ್ನಿಂದ ಹುಟ್ಟುಹಬ್ಬದ ಶುಭಾಶಯಗಳು,

ಜಲನಯನ said...

ಮನಸಾರೆ ಮನುವಿಗೆ

ತರಲಿ ಈ ದಿನ ಹರುಷ
ಪಸರಿಸಿ ಇಡೀ ವರುಷ
ಈ ವರುಷ ಮತ್ತೆ ಪ್ರತಿ ವರುಷ
ನನಸಾಗಿ ಹೆತ್ತವರ ಆಕಾಂಕ್ಷೆಗಳು

ಮನುವಚನ್ ಗೆ
ಶುಭಾಷಯಗಳೊಂದಿಗೆ
ಆಜಾದ್ ಅಂಕಲ್ ಮತ್ತು ಪರಿವಾರ

ಮನಸು said...

ಸುನಾಥ್ ಸರ್,
ನಿಮ್ಮ ಆರ್ಶಿವಾದ ಸದಾ ಚಿರಂಜೀವನ ಮೇಲಿರಲಿ.... ಭಾವನೆಗಳ ಪೂರವೇ ಜೀವನವಲ್ಲವೇ....ಅದರಲ್ಲಿ ಇದೊಂದು ಭಾವನೆ ಅಷ್ಟೆ..
ಧನ್ಯವಾದಗಳು..
ಧರಿತ್ರಿ
ನಿಮ್ಮ ಹಾರೈಕೆ ಬಹಳ ಚೆನ್ನಾಗಿದೆ. ನನ್ನ ಮಗ ನೀವು ಬರೆದಿದ್ದನ್ನು ನೋಡಿ ಖುಷಿಪಟ್ಟನು ನಾನು ಅವರನ್ನು ನೋಡಿದ್ದೀನಾ ನಮ್ಗೆ ಗೊತ್ತ ಈ ಅಕ್ಕ ಎಂದು ಕೇಳಿದನು ಹ ಹ ಹ... ನೋಡಿ ನೀವು ಅಕ್ಕ ಎಂದುಬಿಟ್ಟಿರಲ್ಲ...... ನೀವು ಅವನ್ನೊಮ್ಮೆ ಭೇಟಿ ಮಾಡಲೇ ಬೇಕು..ಏನಂತೀರಿ..? ಪಾರ್ಟಿ ಎಲ್ಲಾ ಏನು ಮಾಡೋದಿಲ್ಲ ನಮ್ಮಲ್ಲಿ ಆ ಅಭ್ಯಾಸವಿಲ್ಲ... ಸ್ವೀಟ್ಸ್ ಅಂತು ಕಳಿಸಿಕೊಡೋಣ ಬಿಡಿ... ಹ ಹ ಹ
ನಿಮ್ಮ ಪ್ರೀತಿಪೂರ್ವಕ ಶುಭಾಶಯಗಳಿಗೆ ನನ್ನ ವಂದನೆಗಳು... ಸದಾ ಪ್ರೀತಿ ಹಸಿರಾಗಿರಲಿ
ಧನ್ಯವಾದಗಳು
ಮೃದು ವಚನ್
ಮನಸು...

ಮನಸು said...

ಗುರು,
ನಿಮ್ಮ ಶುಭಾಶಯಗಳಿಗೆ ನಮ್ಮ ಧನ್ಯವಾದಗಳು...
ಅಜಾದ್ ಸರ್,
ನಿಮ್ಮ ಕವನ ಪೂರ್ಣ ಶುಭಾಶಯಗಳು ಬಹಳ ಚೆನ್ನಾಗಿದೆ...

ಎಲ್ಲಾ ಆಸೆಗಳ ಬತ್ತಳಿಕೆಗಳಲ್ಲಿ ಅಡಗಿರುವುದೇ ಜೀವನ
ಎಲ್ಲವನು ಸರಿದೂಗಿ ಸಾಗಿಸುವುದೇ ಮನುಜನ ಗುಣ....
ಫಲಾನು ಫಲಕ್ಕೆ ಕಾದು ನೋಡಬೇಕಿದೆ ಮುಂಬರುವ ದಿನ..
ಧನ್ಯವಾದಗಳು

ಜಲನಯನ said...

ಮನಸು ಮೇಡಂ
Congrats...ಎರಡು ಕುವೈತಿನ ಬ್ಲಾಗುಗಳನ್ನು
ಕೆಂಡಸಂಪಿಗೆಯ ‘ದಿನದ ಬ್ಲಾಗ್‘ ನಲ್ಲಿ ಪರಿಚಯಿಸಿದ್ದಾರೆ
ಕೆಂಡಸಂಪಿಗೆ ನೋಡಿ

ಧರಿತ್ರಿ said...

ಅಕ್ಕಾ..
ನಾನೂನು 'ಪಾರ್ಟಿ ಅಕ್ಕ' ಅಲ್ಲ ಪೆಪ್ಪರಮೀಠಾಯಿ ಅಕ್ಕ ಅನ್ನಿ ಪುಟ್ಟಂಗೆ! ನಾನು ತಮಾಷೆಗೆ ಪಾರ್ಟಿ ಅಂದೆ. ನಾನೂ ಮಾಡೋ ಅಭ್ಯಾಸವಿಲ್ಲ. ಸಿಗೋಣ ಒಂದು ದಿನ...ಆ ದಿನ ಬೇಗ ಬರಲಿ ಅಂತ ಆಶಿಸೋಣ ಅಲ್ವೆ?
ಪ್ರೀತಿ ನಿತ್ಯನೂತನ..ಸುಪ್ರಭಾತ.
-ಧರಿತ್ರಿ

ಸುಧೇಶ್ ಶೆಟ್ಟಿ said...

ಮನಸು ಅವರೇ...

ನಿಮ್ಮ ಮಗನಿಗೆ belated wishes....

ನಿಮ್ಮ ಮಾತೃ ವಾತ್ಸಲ್ಯ ಕ೦ಡು ತು೦ಬಾ ಸ೦ತೋಷವಾಯಿತು....