Sunday, June 28, 2009

ಭಾವನೆ

ಭಾವನೆಗೆ ನಿಲುಕದ ದೋಣಿ
ರಭಸದಿ ದಾಟಿದೆ ಕಡಲ ಗಣಿ!!!

ಭಾವನೆ ಮನದ ತೊಳಲಾಟ
ಒಮ್ಮೆ ಸ್ಪಂದಿಸಲಿ ನಿನ್ನ ಒಡನಾಟ!!!

ಭಾವುಕತೆಗಾಗಿ ಆತ್ಮೀಯ ಭಿಕ್ಷೆ
ಮರ್ಕಟ ಮನಕೇಕೆ ನೀಡುವೆ ಶಿಕ್ಷೆ!!!

ಭಾವಿಸುವ ಭಾವ ನಿನ್ನದಾಗಲಿ
ಅದ ಅನುಭವಿಸುವ ಜೀವ ನಾನಾಗಲಿ!!!

ಭಾವನೆ ಕಲ್ಪನೆಯ ಜೇನುಗೊಡು
ಜೇನ ಹೀರಿ ಕಟ್ಟು ಸಿಹಿ ಭಾವನೆಯ ಗೂಡು!!!

ಎಲ್ಲರೊ ಭಾವ ಜೀವಿಗಳೆಂಬುದು ನನ್ನ ನಿಟ್ಟು
ನಿನಗೊ ತಿಳಿದಿರಲಿ ಭಾವುಕತೆಯ ಗುಟ್ಟು..



15 comments:

Ittigecement said...

ಭಾವನೆಗಳು...
ಭಾವಿಸಿಕೊಂಡ ಹಾಗೆ....

ತುಂಬಾ ಚೆನ್ನಾಗಿ...
ಹ್ರದಯಕ್ಕೆ ತಟ್ಟುವ ಹಾಗೆ..
ಸುಂದರವಾಗಿ ಬಂದಿದೆ....

ಅಭಿನಂದನೆಗಳು...

ಮನಸು said...

dhanyavadagaLu prakashanna... nimma anisike kushi kottide

Mahesh said...

ಮನಸು,
ನಿನ್ನ ಭಾವನೆಗಳು ಸಧಾ ಇಡೆರಲಿ

Prabhuraj Moogi said...

ಅಬ್ಬ ರಜೇಲೂ ಬರೆದೀದೀರಾ... ಭಾವನೆ ಕಲ್ಪನೆ ಚೆನ್ನಾಗಿದೆ.

jithendra hindumane said...

ನಿಮ್ಮ ಕವನದಲ್ಲಿ ಸ್ನೇಹದ ಮಹಾಪೂರ ಉಕ್ಕಿಹರಿದಿದೆ....

ಒಂದುಕ್ಷಣ ಅದರಲ್ಲಿ ತೇಲುವಂತೆ ಮಾಡಿದಿರಿ....

SSK said...

ಮನಸು ಅವರೇ,
ಭಾವನೆಗಳ ಆಳಕ್ಕಿಳಿದು, ಅಕ್ಷರಗಳನ್ನು ಹೆಕ್ಕಿ ಹೆಣೆದಿರುವ ಕವಿತೆ ತುಂಬಾ ಸೊಗಸಾಗಿದೆ!

ಸಾಗರದಾಚೆಯ ಇಂಚರ said...

ಮನಸು,
ಭಾವನೆಗಳ ಕವಿತೆ ತುಂಬಾ ಚೆನ್ನಾಗಿದೆ. ಪುನಃ ಬ್ಲಾಗ್ ಲೋಕಕ್ಕೆ ಬಂದಿರುವ ವಿಷಯ ಸಂತಸ ನೀಡಿತು. ಒಳ್ಳೆಯ ಕವನ

sunaath said...

ಮನಸು,
ಭಾವನೆಯಿರದ ಬಾಳು ಬಾಳೆ?
ಕವನ ಸೊಗಸಾಗಿದೆ.

ಜಲನಯನ said...

ಮನಸು ಮೇಡಂ --ನನ್ನ ಭಾವ ಮಂಥನ ಒಮ್ಮೆ ನೋಡಿ..
ನಿಮ್ಮ ಈ ಕವನಕ್ಕೆ ಪ್ರತಿಕ್ರಿಯೆ ಎಂದುಕೊಳ್ಳಿ...ಆ ಕವನ ಹುಟ್ಟಿದ್ದು ನಿಮ್ಮ ಈ ಕವನದಿಂದ
ಭಾವಕ್ಕೆ-ಭಾವ ಮಂಥನಕ್ಕೆ ಮಂಥನ...ಹೇಗೆ??

Guruprasad said...

ಮನಸು,,, ತುಂಬ ಚೆನ್ನಾಗಿ ಇದೆ ... :- )

ಮನಸು said...

ellarigu nanna dhanyavadagaLu nimma anisike sada nammondigirali

shivu.k said...

manasu medam.,

bhavanegaLa kavana tuMba cennagide.

Unknown said...

ಚೆನ್ನಾಗಿದೆ...

ಮನಸು said...

shivu sir,
dhanyavadagalu nimma anisike sada baruttirali

ಮನಸು said...

ravi..
nimma mechuge kushi kottide dhanyavadagaLu