Thursday, April 1, 2010

ಕುಸುಮಕೋಮಲೆ -೪


ದಿನಗಳು ಉರುಳಿದರೆ ಹಳೆಯದನ್ನು ಮರೆತು ಹೊಸತನ್ನು ಸ್ವೀಕರಿಸುವುದು ಮನುಷ್ಯನ ಲಕ್ಷಣ, ಅಂತೆಯೇ ಇಲ್ಲು ಸಹ ಹಾಗೆ ನೆಡೆಯಿತು ಮಗಳ ಸಾವಿನ ನೋವು ಮರೆಯಲು ಮೊಮ್ಮಗಳ ನಗು ಕಾರಣವಾಯಿತು. ಆ ಮುಗ್ಧ ಮಗು ಎಲ್ಲರನ್ನು ಅಷ್ಟು ಆಕರ್ಷಿಸಿತ್ತು. ಈ ಮಗುವಿಗೂ ಹಿಂದೂ ಹೆಸರಿಟ್ಟುಬಿಟ್ಟರು ಆ ಹೆಸರೆ ಕುತ್ತಾಗಿತ್ತೆಂದು ತಿಳಿದೂ ಮತ್ತೆ ಅದನ್ನೇ ಆರಿಸಿದ್ದರು. ನೆನಪು ಮಾಸದಿದ್ದರೂ ಇರುವವರಿಗಾಗಿ ಜೀವನ ಎಂಬಂತೆ ಅಪ್ಪ ಅಮ್ಮ ಜೀವಿಸುತ್ತಲಿದ್ದರು.

ಇತ್ತ ಕ್ಷಮ, ರಾಜೀವ್ ತಮ್ಮದೇ ಓದಿನಲ್ಲಿ ಮುಳುಗಿದ್ದರು, ಕ್ಷಮಳ ಜೀವನದಲ್ಲಿ ಇಷ್ಟೆಲ್ಲಾ ನೆಡೆದರೂ ತನ್ನ ಪ್ರೀತಿಗೆ ಯಾವ ಕೊರತೆ ಬಾರದಂತೆ ಸಾಗಿದಳು, ಸಂಕೇತ್ ತನ್ನ ಪ್ರೀತಿಯಲ್ಲಿ ಕೆಲಸದ ಕಡೆ ಗಮನವೂ ಕಡಿಮೆಯಾಯಿತು. ಪ್ರೀತಿ ಕುರುಡು ಮಾಡುತ್ತದೆಂಬುದು ಇದಕ್ಕೆ ಅನ್ನಿಸುತ್ತೆ. ಅವನು ಕೆಲಸ ಬಿಟ್ಟು ಇವಳಿಗಾಗಿ ಶಾಲಾ ಸಮಯದಲ್ಲಿ ಬಂದು ಶಾಲೆಯ ಮುಂದೆ ಟಿಕಾಣಿ ಹೂಡುತ್ತಲಿದ್ದ ಬರುವಾಗ ಹೋಗುವಾಗ ಜೊತೆಯಲ್ಲೇ ಓಡಾಡುತ್ತಲಿದ್ದ. ಇವರಿಬ್ಬರ ವಿಷಯ ಅವರಿದ್ದ ಅಕ್ಕಪಕ್ಕದವರೆಲ್ಲರಿಗೂ ತಿಳಿದು. ಗುಲ್ಲೆದಂತೆ ಒಬ್ಬರಿಂದೂಬ್ಬರಿಗೆ ಹರಡಿಬಿಟ್ಟಿತ್ತು. ಆಶ್ಚರ್ಯವೆಂದರೆ ಊರಿಗೆಲ್ಲ ತಿಳಿದರೂ, ಮನೆಯಲ್ಲಿ ಯಾರೊಬ್ಬರಿಗೂ ತಿಳಿದಿರಲಿಲ್ಲ. ಎಷ್ಟು ದಿನ ತಾನೆ ಮುಚ್ಚಿಡಲು ಸಾಧ್ಯ ಕೊನೆಗೊಂದು ದಿನ ಅವಳ ಅಣ್ಣನಿಗೆ ಯಾರೋ ಹೇಳಿಬಿಡುತ್ತಾರೆ. ಅವನಿಗೆ ಎಲ್ಲಿಲ್ಲದ ಕೋಪ ಮನೆಗೆ ಬಂದವನೇ ತಂಗಿಗೆ ಹಿಗ್ಗಾ ಮುಗ್ಗ ಬಾರಿಸಿಬಿಡುತ್ತಾನೆ. ಏಕೆಂದು ಅಮ್ಮ ಅಪ್ಪ ಎಷ್ಟು ಕೇಳಿದರು ಹೇಳದೆ ಫಿಲ್ಮಿ ಸೀನಿನಂತೆ ರೂಮಿನಲ್ಲಿ ಕೂಡಿ ಹಾಕಿ. ಕೊನೆಗೆ ಅಪ್ಪ ಅಮ್ಮನಿಗೆ ಇರುವ ವಿಷಯವನ್ನೇಳಿ ಇವಳಿಂದಲೇ ಅಕ್ಕ ಸತ್ತಿದ್ದು ಅಂತ ಎಲ್ಲಿಂದಲೋ ತಿಳಿದದ್ದನ್ನು ಅಮ್ಮ ಅಪ್ಪನ ಮುಂದೆ ಉಸುರುತ್ತಾನೆ. ಅಪ್ಪ ಅಮ್ಮನಿಗೂ ಎಲ್ಲಿಲ್ಲದ ಕೋಪ ಇವಳಿಗೆ ನಾವು ಕೊಟ್ಟ ಸದರ ಹೀಗೆ ಮಾಡಿದೆ ಎಂದು ಊಟ ತಿಂಡಿ ನೀಡದೆ ಮನೆಯಲ್ಲೇ ಇರಿಸುತ್ತಾರೆ. ಇದನ್ನು ತಿಳಿದ ಹಲವರು ಅಮ್ಮ ಅಪ್ಪ ಅಣ್ಣನನ್ನು ಸಮಾಧಾನಿಸಿ ಅವಳು ವಿದ್ಯಾವಂತೆ ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿ ಅವಳಿಗೆ ಸ್ವಾತಂತ್ರ್ಯದಿ ಓಡಾಡುವಂತೆ ಮಾಡುತ್ತಾರೆ. ಬೋನಿನಿಂದ ಹೊರ ಬಂದ ಗಿಳಿ ಎಷ್ಟು ದಿನ ಎಂದು ಹಾಗೆ ಇರುತ್ತೆ ಅವಳ ಪ್ರೇಮಾಂಕುರ ಅಂದು ತಿಳಿಯದೇ ಬೆಳೆದುಬಿಟ್ಟಿತ್ತು ಅದನ್ನ ಮತ್ತೆ ಜೀವ ತುಂಬಿಸಬಾರದೆಂದರೂ ಬಿಡದೆ ಅತ್ತಕಡೆ ಸೆಳೆದುಬಿಟ್ಟಿತ್ತು.

ಹಲವು ದಿನಗಳ ನಂತರ ತನ್ನ ಪ್ರಿಯತಮ ಸಂಕೇತ್ ನನ್ನು ನೋಡದ ಕ್ಷಮ ಅವನನ್ನು ಭೇಟಿ ಮಾಡಲು ಹೋಗುತ್ತಾಳೆ. ಅವನ ಆಫೀಸಿನತ್ತ ಹೆಜ್ಜೆಹಾಕುತ್ತಲಿದ್ದವಳಿಗೆ ಒಂದು ಆಘಾತ ಕಾದಿತ್ತು.... ಅವನ ಆಫೀಸ್ ಬೀಗ ಜಡಿದಿದ್ದ ಕಾರಣ ಅವನ ಸ್ನೇಹಿತನನ್ನು ವಿಚಾರಿಸಿದಾಗಲೇ ತಿಳಿದಿದ್ದು ಸಂಕೇತನ ಮದುವೆಯೆಂದು ಈ ವಿಷಯ ಅವಳ ಸುಕೋಮಲ ಮನಸಿಗೆ ದೊಡ್ಡ ಆಘಾತವನ್ನೇ ತಂದಿದ್ದಂತು ಸತ್ಯ.... ಮನೆಗೆ ಬಂದವಳೇ ಏನೋ ಕಳೆಗುಂದಿದಂತೆ ಮನಸಲ್ಲಿ ಸ್ಮಶಾನ ಮೌನ ಆವರಿಸಿತ್ತು. ಈ ಮೌನ ಗುರುತಿಸಿದ ಮನೆಯವರಿಗೆ ಆ ವಿಷಯ ತಿಳಿದಿದ್ದರು ಒಳ್ಳೆಯದಾಯಿತೆಂದು ಸುಮ್ಮನಿದ್ದು ಬಿಟ್ಟರು. ಆದರೆ ಈ ಕೋಮಲೆ ಅಷ್ಟು ಬೇಗ ಅವನನ್ನು ಮರೆಯಲು ಸಾಧ್ಯವಾಗಲಿಲ್ಲ. ನಿದ್ರಾಹಾರಗಳನ್ನೆಲ್ಲ ಬಿಟ್ಟಳಾದರೂ ಕೊನೆಗೆ ಹೊಟ್ಟೆಗೇನು ಗೊತ್ತು ಮನಸಿನ ತೊಳಲಾಟ ಒಂದಲ್ಲಾ ಒಂದು ದಿನ ತಿನ್ನುವಂತೆ ಹೊಟ್ಟೆ ಮಾಡಿಬಿಡುತ್ತದೆ.

ಪ್ರಾರಂಭ ಸುಕೋಮಲವಾಗಿತ್ತು ಬರಬರುತ್ತ ಎಲ್ಲವೂ ವಿಚಿತ್ರವೆನಿಸ ತೊಡಗಿತು. ಸಂಕೇತನ ಪ್ರೀತಿಯಲಿ ತೇಲಿಹೋಗಿದ್ದಳು, ಅವನ ಮದುವೆ ಎಂದು ತಿಳಿದರೂ ಅವಳ ಒಳ ಮನಸು ಅವನಿಗಾಗಿ ಆಲಾಪಿಸುತ್ತಿತ್ತು. ಇತ್ತ ಮನೆಯವರ ಮಾತಿಗೆ ಬಿದ್ದು ಸಂಕೇತ ದೂರದ ಊರಲ್ಲಿ ಮದುವೆ ಮಾಡಿಕೊಂಡು ಬಂದಿದ್ದಾನೆ ಆದರೆ ಅವನಿಗೂ ಕ್ಷಮಳನ್ನು ಮರೆಯುವಂತಾಗಲಿಲ್ಲ ಇತ್ತ ಕೈ ಹಿಡಿದವಳಿಗೂ ದ್ರೋಹ ಮಾಡಲು ಮನಸು ಒಪ್ಪಲಿಲ್ಲ. ಕ್ಷಮಳಿಗೆ ತನ್ನ ಮುಖ ತೋರಿಸಬಾರದೆಂದು ದೂರದ ಊರಲ್ಲಿ ತನ್ನ ಕೆಲಸ ಮಾಡುತ್ತಾನೆ...

ಮತ್ತೆ ಈ ಪ್ರೇಮಿಗಳು ಭೇಟಿಯಾಗುವರೆ ಕಾದುನೋಡಿ...........

21 comments:

ಶಿವಪ್ರಕಾಶ್ said...

sad ending akkayya :(

ತೇಜಸ್ವಿನಿ ಹೆಗಡೆ said...

ಉತ್ತಮ ಪ್ರಯತ್ನ. ಕೋಮಲೆಯ ಕಥೆ ಮುಂದುವರಿಯಲಿ...

Subrahmanya said...

ಕೆಲವು ಪದಗಳ ಉಚ್ಹಾರಣೆಯ ದೋಷವಿದೆ. ( ಊಡು ...ಹೂಡು, ಹೀಗೆ)...ಸರಿಪಡಿಸಿಕೊಳ್ಳಿ.

ಕತೆ ಹೇಳುವ ಪರಿ ಮತ್ತು ಪ್ರಯತ್ನ ತುಂಬ ಇಷ್ಟವಾಯ್ತು.

ಮನಸು said...

ಶಿವು,
ಧನ್ಯವಾದಗಳು, ಹೌದು ವಿಷಾದವಿದೆ ಆದರೆ ಇದು ಜೀವನ ಏನು ಮಾಡಲಾಗದು ಅಲ್ಲವಾ..? ಮುಂದೆ ನೋಡು ಕ್ಷಮ ಏನಾಗುತ್ತಾಳೆಂದು...

ಮನಸು said...

ತೇಜಸ್ವಿನಿಯವರೆ,
ಧನ್ಯವಾದಗಳು ನೀವು ನನ್ನ ಕಥೆಯ ಎಳೆಯನ್ನು ಮೆಚ್ಚಿದ್ದೀರಿ, ಕೋಮಲೆಯ ಮುಂದಿನ ಜೀವನ ಏನಾಗುವುದೆಂದು ಕಾದು ನೋಡಿ

ಮನಸು said...

ಸುಬ್ರಹ್ಮಣ್ಯರವರೆ,
ನನಗೂ ಆ ಶಬ್ಧದ ಬಗ್ಗೆ ಅನುಮಾನವಿತ್ತು ಬಹಳ ಧನ್ಯವಾದಗಳು ಸರಿಪಡಿಸಿದ್ದಕ್ಕೆ..... ನನ್ನ ಕಥೆಯ ಪರಿ ಮೆಚ್ಚುಗೆ ಏನಿಸಿದ್ದಕ್ಕೆ ಧನ್ಯವಾದಗಳು...ಹಾಗೆ ಇದು ಮೊದಲ ಪ್ರಯತ್ನ ನನಗೆ ಅಷ್ಟು ಚೆಂದದಿ ಕಥೆ ಬರೆಯುವುದು ಬರುವುದಿಲ್ಲ ಆದರೂ ಪ್ರಯತ್ನವಷ್ಟೆ...

ವನಿತಾ / Vanitha said...

ಕುಸುಮಕೋಮಲೆ ಚೆನ್ನಾಗಿದೆ..ನಾಲ್ಕು ಭಾಗಗಳನ್ನೂ ಒಟ್ಟಿಗೆ ಓದಿದೆ:)

shivu.k said...

ಕುಸುಮ ಕೋಮಲೆ ಚೆನ್ನಾಗಿದೆ. ಮರೆತಿದ್ದನಾದ್ದರಿಂದ ಮತ್ತೊಮ್ಮೆ ಎಲ್ಲಾವನ್ನು ಓದಿದೆ. ಮುಂದೇನು ಅನ್ನುವ ಕುತೂಹವಲವಿದೆ. ಬೇಗ ಬ್ಲಾಗಿನಲ್ಲಿ ಹಾಕಿ...

ದಿನಕರ ಮೊಗೇರ said...

neevu dhaaraavaahi maado lakshana kaantaa ide...... chennaagide munduvarisi......

ಸೀತಾರಾಮ. ಕೆ. / SITARAM.K said...

Nice story... but make installments fast otherwise every time we have to read earlier post to keep continuity :-)))

Ittigecement said...

ಮನಸು...

ಮೊದಲ ಭಾಗಳಲ್ಲು ಓದಿ ಮರೆತು ಹೋಗಿತ್ತು..
ಮತ್ತೊಮ್ಮೆ ಓದಿದೆ...

ತುಂಬಾ ಚೆನ್ನಾಗಿ ಮೂಡಿ ಬಂದಿದೆ...

ಸತಾಯಿಸ ಬೇಡಿ.. ಬೇಗ ಮುಂದುವರೆಸಿ...

satya said...

Thumbane Chennagide dharavahi madbahudu

ಮನಸು said...

ವನಿತಾ...
ಧನ್ಯವದಗಳು ನಿಮ್ಮ ಅನಿಸಿಕೆಗಳಿಗೆ ಹೀಗೆ ಬರುತ್ತಲಿರಿ

ಮನಸು said...

ದಿನಕರ್ ಸರ್...
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ಧಾರಾವಾಹಿ ಮಾಡುವ ಯೋಜನೆಯಿಲ್ಲ... ಆದರೆ ಈ ಕಥೆ ಕಂತುಗಳಾಗಿ ಬರುತ್ತಲಿರಿರುವುದರಿಂದ ಹಾಗೆ ಅನ್ನಿಸಿರಬೇಕು ಆದಷ್ಟು ಬೇಗ ಮುಗಿಸುತ್ತೇನೆ.

ಮನಸು said...

ಶಿವು ಸರ್...
ಧನ್ಯವಾದಗಳು ನೀವು ಮತ್ತೊಮ್ಮೆ ಓದಿ ಕಥೆಯನ್ನು ನೆನಪು ಮಾಡಿಕೊಂಡದ್ದಕ್ಕೆ, ತಡವಾಗಿ ಈ ಸಂಚಿಕೆಯನ್ನು ಬಿತ್ತರಿಸಿದ್ದಕ್ಕೆ ಕ್ಷಮೆ ಇರಲಿ. ಕುತೂಹಲವಿರಲಿ ಹೀಗೆ ಆದಷ್ಟು ಬೇಗ ಮುಂದಿನ ಕಂತು ಬರಲಿದೆ.

ಮನಸು said...

ಸೀತಾರಾಮ್ ಸರ್...
ಧನ್ಯವಾದಗಳು, ಹಾಗೆ ಕ್ಷಮೆಯನ್ನು ಕೋರುವೆ ಆರೋಗ್ಯ ಸರಿ ಇಲ್ಲದ ಕಾರಣ ಈ ಕಂತು ತಡವಾಗಿ ಈ ಕಂತು ಬಂದಿದೆ... ಮುಂದಿನ ಭಾಗ ಆದಷ್ಟು ಬೇಗ ಬಿತ್ತರಿಸುವೆ.

ಮನಸು said...

ಪ್ರಕಾಶಣ್ಣ,
ಸತಾಯಿಸುವಾಸೆ ಇಲ್ಲ ಕಾರಾಣಾಂತರದಿಂದ ತಡವಾಗಿತ್ತು ಮುಂದೆ ಆದಷ್ಟು ಬೇಗಬರುವುದು. ವಂದನೆಗಳು

ಮನಸು said...

ಸತ್ಯರವರೆ,
ನಿಮ್ಮ ಮೊದಲಭೇಟಿಗೆ ಸ್ವಾಗತ ಜೊತೆಗೆ ಧನ್ಯವಾದಗಳು ಧಾರಾವಾಹಿ ತರ ಎಳೆದಿದ್ದೀರಿ ಎಂದೆನಿಸಿರಬೇಕು ಹಹಹ..... ಮುಂದಿನಭಾಗದಲ್ಲಿ ಮುಗಿಸಲು ಪ್ರಯತ್ನಿಸುವೆ ವಂದನೆಗಳು.

Snow White said...

:) mundina kantige kayutiddenne madam :) :)

ಸುಧೇಶ್ ಶೆಟ್ಟಿ said...

ಏನ್ರಿ..... ಸಣ್ಣ ಕಥೆ ಎ೦ದು ಹೇಳಿ ಕಥೆ ಮು೦ದುವರಿಯುತ್ತ ಇದೆ :) ನನಗೆ Competition ಕೊಡುತ್ತಿದ್ದೀರೋ ಹೇಗೆ?

ತಮಾಷೆಗೆ ಅಂದೆ. ಮು೦ದಿನ ಭಾಗಕ್ಕೆ ಕಾಯುತ್ತೇನೆ. ಈ ಭಾಗ ಚೆನ್ನಾಗಿತ್ತು.

Unknown said...

Mega Dhaaraavaahi... :-) Chennaagide...