Thursday, June 16, 2011

ಗುಡಿಸಲಿನಲ್ಲೊಂದು ನಂದಾದೀಪ

ದೀಪ-೧

ಪುಟ್ಟ ಸಂಸಾರ ಗಂಡ ಹೆಂಡತಿ ಮೂರು ಮಕ್ಕಳು.......ಬೃಹತ್ ನಗರದ ಮಧ್ಯದಲ್ಲಿ ಪುಟ್ಟ ಗುಡಿಸಿಲಿನ ವಾಸ, ಸುತ್ತಲೂ ಅದ್ಧೂರಿ ಬಂಗಲೆಗಳಿದ್ದರೂ, ಅಲ್ಲಿ ಕೆಲವೇ ಕೆಲವು ಗುಡಿಸಲುವಾಸಿಗಳಿದ್ದರು. ಆ ಗುಡಿಸಲುಗಳೊಂದರಲ್ಲಿ ಈ ಪುಟ್ಟ ಚೆನ್ನಮ್ಮ ಮತ್ತು ಚೆನ್ನಯ್ಯನ ಕುಟುಂಬ ವಾಸವಾಗಿತ್ತು. ಚೆನ್ನಯ್ಯ ಅಂತ ಆರೋಗ್ಯವಂತನಲ್ಲ ವಾರಕ್ಕೆ ೪ ದಿನ ಕೆಲಸಕ್ಕೋದರೆ ಇನ್ನುಳಿದ ದಿನಗಳು ಮನೆಯಲ್ಲೇ ಆರೋಗ್ಯ ಕೆಟ್ಟು ಮಲಗುವಂತಹವನು ಇದನ್ನು ಕಂಡ ಚೆನ್ನಮ್ಮ ತನ್ನ ಗಂಡನನ್ನು ಮನೆಯಲ್ಲೇ ಉಳಿಯಲು ಬಿಟ್ಟು, ತಾನು ಕೆಲಸಕ್ಕೆ ಹೋಗುತ್ತಲಿದ್ದಳು. ಅಲ್ಲೇ ಸುತ್ತ ಮುತ್ತಲು ಇದ್ದ ಶ್ರೀಮಂತ ಮನೆಗಳಿಗೆ ಕೆಲಸ ಮಾಡುವುದು ಅವಳ ದಿನ ನಿತ್ಯದ ಕೆಲಸ...... ಈ ದಂಪತಿಗಳಿಗೆ ಮುದ್ದಾದ ಮೂರು ಮಕ್ಕಳು ಎರಡು ಹೆಣ್ಣು, ಒಂದು ಗಂಡು..... ದೊಡ್ಡ ಮಗಳು ಶಬರಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಲಿದ್ದಾಳೆ. ಈಕೆಗೆ ಅಮ್ಮನ ಕಷ್ಟ, ಅಪ್ಪನ ಆರೋಗ್ಯ ಎಲ್ಲದರ ಅರಿವಿದೆ. ಅದಕ್ಕಾಗೆ ಅಮ್ಮನೊಟ್ಟಿಗೆ ಕೈಜೋಡಿಸಿ ಅವಳೂ ಸಹ ಮನೆಗೆಲಸಕ್ಕೆ ಹೋಗುತ್ತಲಿರುತ್ತಾಳೆ. ಅಮ್ಮ ಮನೆ ಕಸಗುಡಿಸುತ್ತಿದ್ದರೆ ಶಬರಿ ಪಾತ್ರೆ ತೊಳೆಯುವ ಕೆಲಸ, ಈ ರೀತಿ ಇಬ್ಬರು ಹಂಚಿಕೊಂಡು ಕೆಲಸ ಮಾಡುತ್ತಿರುತ್ತಾರೆ.

ಶಬರಿ ಹೆಸರಿಗೆ ತಕ್ಕಂತೆ ಆ ರಾಮನಿಗಾಗಿ ಕಾದಿದ್ದ ಶಬರಿಯಂತೆ ಇವಳಲ್ಲೂ ಕಾಯುವ ಸಹನೆ ಬಹಳವಿತ್ತು. ಶಬರಿ ಓದುವ ಮನಸ್ಸು ಮಾತ್ರ ಅತಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಇವಳು ಶಾಲೆಯಲ್ಲೇ ಮೊದಲು, ಸಂಜೆ ಮನೆಗೆ ಬಂದೊಡನೆ ಅಮ್ಮನೊಟ್ಟಿಗೆ ಕೆಲಸ ಎಲ್ಲ ಕೆಲಸ ಮುಗಿಸಿ ಬರುವಷ್ಟರಲ್ಲಿ ರಾತ್ರಿ ೮ ಗಂಟೆ ಆನಂತರ ತನ್ನ ಓದಿನ ಕಡೆ ಗಮನ. ಸದಾ ಅಂದಿನ ಪಾಠವನ್ನು ತಪ್ಪದೇ ಓದುತ್ತಿದ್ದ ಶಬರಿಗೆ ಯಾವುದೇ ತೊಂದರೆ ಎದುರಿಸಲಿಲ್ಲ. ಎಸ್. ಎಸ್. ಎಲ್.ಸಿ ಪರೀಕ್ಷೆಗೆ ಇನ್ನೇನು ದಿನಗಳೆಣಿಸುವಂತಾಗಿದೆ ಸೀಮೆ ಎಣ್ಣೆ ಬುಟ್ಟಿ ಇಟ್ಟು ರಾತ್ರಿ ಎಲ್ಲಾ ಓದುತ್ತಿದ್ದಾಳೇ ಶಬರಿ, ಅಮ್ಮ ಅಪ್ಪ ಮಗಳ ಶ್ರಮ ಕಂಡು ಬೇಸರವೆನಿಸಿದೆ ಪಕ್ಕದಲ್ಲಿರೋ ಶ್ರೀಮಂತ ಮನೆಗಳಲ್ಲಿ ನಾಯಿ ಮಲಗುವ ಕೋಣೆಗೂ ದೀಪಾಲಂಕಾರವಿದೆ, ನಮ್ಮಂತ ನಿರ್ಗತಿಕರಿಗೆ ಆ ನಾಯಿಗಿರುವಷ್ಟು ಸೌಲಭ್ಯವಿಲ್ಲದಾಯಿತೆ. ಎಂದು ಮರುಕ ಒಂದು ಕಡೆ, ನಮ್ಮ ಹಣೆ ಬರಹವೇ ಹೀಗೆಂಬ ಸಮಜಾಯಿಸಿ ಮತ್ತೊಂದೆಡೆ.

ಶಬರಿ ಪರೀಕ್ಷಾ ದಿನಗಳಲ್ಲಿ ಕೆಲಸಕ್ಕೆ ಬರದಿರಲು ಅಮ್ಮ ತಾಕಿತ್ತು ಮಾಡಿರುತ್ತಾಳೆ. ನೀನು ಮನೆಯಲ್ಲೇ ಇದ್ದು ಓದು, ಕೆಲಸವೆಲ್ಲಾ ನಾನೇ ಮುಗಿಸಿ ಬರುವೆ ಎಂದು.... ಅತ್ತ ಮನೆಗೆಲಸದಲ್ಲಿ ತೊಡಗಿರುವಾಗ ಮನೆಯೊಡತಿ ಗತ್ತಿನಿಂದ ನಿನ್ನ ಮಗಳು ಬಂದಿಲ್ಲ, ಕೆಲಸ ನಿಧಾನವಾಗುತ್ತೆ......ದಿನವೆಲ್ಲಾ ಕೆಲಸ ಮಾಡ್ತಾನೇ ಇರು, ನಾವು ನೀ ಮುಗಿಸೋವರೆಗೂ ಕಾದು ಕುಳ್ತಿರ್ತೀವಿ ಎಂದು ಜೋರು ಧನಿಯಲ್ಲಿ ಕೇಳುತ್ತಲೇ, ಇತ್ತ ಚೆನ್ನಮ್ಮ ಇಲ್ಲಮ್ಮ, ಮಗಳಿಗೆ ಪರೀಕ್ಷೆ ಇದೆ ಅದಕ್ಕೆ ಓದಲೆಂದು ಬಿಟ್ಟುಬಂದೆ ಎಂದ ಕೂಡಲೇ ಮನೆಯೊಡತಿ ಓಹೋ.... ಅವಳು ಓದಿ ಈ ದೇಶವೇನು ಉದ್ಧಾರವಾಗಬೇಕಿಲ್ಲ, ಬರೆದಷ್ಟು ಬರೆಯಲಿ ಮುಂದಿನ ವರ್ಷದಿಂದ ಓದು ಬಿಡಿಸಿ ನಮ್ಮ ಮನೆ ಕೆಲಸಕ್ಕೆ ಬಿಡು ನಿನಗೆ ವಯಸ್ಸಾಯಿತು..... ನಿನ್ನ ಕೈಲಾಗೋಲ್ಲ ಎಂದು ಗದರಿಬಿಡುತ್ತಾಳೆ.....ಚೆನ್ನಮ್ಮ ಮನಸಲ್ಲೇ ಅಳುತ್ತಾ ಅವರ ಮಕ್ಕಳಾದರೆ ಓದಬಹುದು, ಆ ಮಕ್ಕಳು ಓದುವಾಗ ಅವರು ಕುಳಿತಲ್ಲೇ ಸೇವೆ ಮಾಡಬೇಕು, ತಿನ್ನಲೂ ಸಹ ಎದ್ದು ಬರುವುದಿಲ್ಲ, ಓದುವ ಮೇಜಿಗೆ ಎಲ್ಲವನ್ನು ತೆಗೆದೊಯ್ಯಬೇಕು....ಅಂತಹದರಲ್ಲಿ ನಾವು ಬಡವರು ನಮ್ಮ ಮಕ್ಕಳೂ ಓದಲೇ ಬಾರದೆ....??

ಅಂದು ಸಂಜೆ ಮನೆಗೆ ಬಂದವಳೆ ಮಗಳಿಗೆ ನೊಂದ ಮನಸಿನಿಂದಲೇ ಹೇಳುತ್ತಾಳೆ. "ಬಡತನವೇ ಒಂದು ಶಾಪ" ನಮಗೆ, ನೀನು ಆ ಶಾಪವನ್ನು ನಮ್ಮಿಂದ ದೂರ ಮಾಡಬೇಕು, "ನಾವು ಕೂಲಿ ಕೆಲಸಕ್ಕೆ ಮೀಸಲೆಂದು ಭಾವಿಸಿರುವವರ ಮಧ್ಯೆ ನಮಗೂ ಯಜಮಾನಿಕೆ ಮಾಡುವಷ್ಟು ಸಾಮರ್ಥ್ಯವಿದೆ" ಎಂಬಂತೆ ನೀನು ಸಾಧಿಸಿ ತೋರಿಸಬೇಕು . ನನಗೆ ಗೊತ್ತಿಲ್ಲ ಅದು ಹೇಗೆ ಓದುತ್ತೀಯೋ ಅಂತ ಒಟ್ಟಲ್ಲಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸು. ಎಂದು ಅಮ್ಮ ಮಗಳಲ್ಲಿ ಕಣ್ಣ ಕಂಬನಿಯೊಂದಿಗೆ ಬೇಡುತ್ತಾಳೆ......ಮಗಳಿಗೂ ಅಮ್ಮನಿಗೇನೋ ಬೇಸರವಾಗಿ ಹೀಗೆಳುತ್ತಲಿದ್ದಾಳೆ ಅವಳ ಆಸೆ ಹೇಗಾದರೂ ಮಾಡಿ ಪೂರೈಸಲೇ ಬೇಕು ಎಂಬ ಪಣ ತೊಡುತ್ತಾಳೆ.

ಇತ್ತ ಅಮ್ಮನದೂ ಮಾಮೂಲಿ ಕೆಲಸ ಅಪ್ಪ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕರೆತರುವುದು, ಮನೆ ಜವಾಬ್ದಾರಿ ವಹಿಸಿ ನೆಡೆಸುವುದು ಇದೇ ಕೆಲಸ.......ಜೊತೆಗೆ ಅಪ್ಪ ಮನೆಯಲ್ಲೇ ಇದ್ದು ಸಮಯ ಹಾಳು ಮಾಡದೆ ಬಿಸಾಡಿದ ನ್ಯೂಸ್ ಪೇಪರ್ ನಿಂದ ಪೊಟ್ಟಣವನ್ನು ಮಾಡಿ ಅಂಗಡಿಗೆ ಮಾರುತ್ತಲಿರುತ್ತಾನೆ. ಶ್ರಮದ ಜೀವನದಲ್ಲೂ ಸುಖಕಾಣುವುದು ಈ ಕುಟುಂಬದ ನಿಲುವು. ಶಬರಿಗೆ ಇನ್ನೇನು ಎರಡೇ ದಿನ ಪರೀಕ್ಷೆಗೆ.....ಪರೀಕ್ಷೆ ಬರೆಯಲು ಲೇಖನಿ ಇಲ್ಲ......ಅಮ್ಮನನ್ನು ಕೇಳಿದಳು ಅಮ್ಮ ಬರೆಯಲು ಪೆನ್ನು ಬೇಕಿತ್ತು ತಂದುಕೊಡುತ್ತೀಯಾ...? ಆಯ್ತು ಮಗಳೇ ಸಂಜೆ ಮನೆಗೆಲಸದವರ ಮನೆಯಲ್ಲಿ ಕೇಳಿ ತರುತ್ತೇನೆಂದಳು......

ಮನೆಗೆಲಸಕ್ಕೆ ಹೋಗಿದ್ದಾಗ ಮನೆಯೊಡತಿಯನ್ನು ಕೇಳಿದರೆ ಎಲ್ಲಿ ಅಪಶಕುನದ ಮಾತಾಡುವಳೋ ಎಂದು ಯೋಚಿಸಿ ಕೇಳಲೋ ಬೇಡವೆಂದು ಯೋಚಿಸುತ್ತಾ ಮಕ್ಕಳ ಕೋಣೆ ಸ್ವಚ್ಚಗೊಳಿಸಲು ಹೋದಾಗ ಆ ಮನೆಯ ಮಕ್ಕಳ ಪೆನ್ನುಗಳು, ಪೆನ್ಸಿಲ್ ಗಳನ್ನು ಕಂಡು ಮನದಲ್ಲೆಲ್ಲೋ ಆಸೆ ಮೂಡಿ, ಇಷ್ಟು ದುಬಾರಿ ಪೆನ್ನು ನನ್ನ ಮಗಳು ಜನ್ಮದಲ್ಲೂ ಕಾಣಲಾರಳು..........ಈ ಪೆನ್ನುಗಳನ್ನು ಉಪಯೋಗಿಸಿ ಬರೆದರೆ ನನ್ನ ಮಗು ಪರೀಕ್ಷೆಯಲ್ಲಿ ಚೆಂದಾಕಿ ಬರೆಯಬಹುದೆಂದು ಏನೋ ಆಸೆ ಪಟ್ಟು ಅಲ್ಲಿದ್ದ ಎರಡು ಪೆನ್ನು, ಎರಡು ಪೆನ್ಸಿಲ್ ಗಳನ್ನು ತೆಗೆದು ತನ್ನ ಸೆರಗಿನಲ್ಲಿ ಕಟ್ಟುಕೊಳ್ಳುತ್ತಿರವಾಗಲೇ...... ಆ ಮನೆಯೊಡತಿ ಬಂದು ಬಿಡುತ್ತಾಳೆ..........ಹೌಹಾರಿದ ಮನೆಯೊಡತಿ ಏನು ಕೆಲಸ ಮಾಡುತ್ತಲಿದ್ದೀಯಾ, ಕಳ್ಳತನ ಮಾಡ್ತಾ ಇದ್ದೀಯಾ..?!!! ಹಿಂಗೆ ಎಷ್ಟು ದಿನ ಏನೇನು ತಗೊಂಡು ಹೋಗಿದ್ದೀಯಾ... ನಿಮ್ಮಂತವರಿಂದ ನಾವು ನೆಮ್ಮದಿಯಾಗಿರೊಕ್ಕೆ ಆಗೋಲ್ಲ.....ಎಂದ ಕೂಡಲೇ ಕಾಲಿಗೆ ಬಿದ್ದ ಚೆನ್ನಮ್ಮ ಅಮ್ಮ, ಕ್ಷಮಿಸಿ, ನಾನು ಇದೇ ಮೊಟ್ಟ ಮೊದಲು ನಿಮ್ಮ ಮನೆ ವಸ್ತು ಮುಟ್ಟಿದ್ದು ನಾನಾಗಿ ಎಂದೂ ಒಂದು ಹುಲ್ಲುಕಡ್ಡಿಯನ್ನೂ ನಿಮ್ಮ ಮನೆಯಿಂದ ತಗೊಂಡು ಹೋಗಿಲ್ಲಮ್ಮ...ದಯವಿಟ್ಟು ಕ್ಷಮಿಸಮ್ಮ.....ಈ ಪೆನ್ನುಗಳ ಕೊಡದಿದ್ದರೂ ಪರವಾಗಿಲ್ಲ ........ ವಾಪಸ್ ಇಟ್ಟುಬಿಡುತ್ತೇನೆ. ದಯವಿಟ್ಟು ನನ್ನ ಕ್ಷಮಿಸಮ್ಮ.......ನಿನ್ನ ಕ್ಷಮಿಸೋದಾ ಇಂದು ಚಿಕ್ಕದು ನಾಳೆ ದೊಡ್ಡದು....ಹೀಗೆ ಕಳ್ಳತನ ಮಾಡ್ತೀಯಾ.ಹೋಗು ನಮ್ಮ ಮನೆಗೆ ಕೆಲಸಕ್ಕೆ ಬರ್ಕೂಡದು ................ ಇನ್ನು ಯಾವತ್ತೂ ಈ ಕಡೆ ತಲೆ ಹಾಕ್ಬೇಡ ಎಂದು ಒಮ್ಮೆಲೇ ಆಚೆ ತಳ್ಳಿ ಬಾಗಿಲು ಜಡಿದು ಬಿಡುತ್ತಾಳೆ......

ಚೆನ್ನಮ್ಮ ತನ್ನ ಮಗಳಿಗೆ ಪೆನ್ನುಗಳು ತೆಗೆದುಕೊಂಡು ಬರುವಳೇ...?
ಆ ಮನೆ ಕೆಲಸದವಳು ಮತ್ತೆ ಮನೆಗೆ ಸೇರಿಸಿಕೊಳ್ಳುವಳೇ ಇಲ್ಲವೇ..?
ಕ್ಷಮಿಸಲಾರದಂತ ತಪ್ಪೇ ಇದು ....? ಮುಂದೇನಾಗುವುದೆಂದೆ ದೀಪ-೨ ರಲ್ಲಿ ನೋಡೋಣ..

32 comments:

Manju M Doddamani said...

ಸ್ಟೋರಿ ತುಂಬಾ ಚನ್ನಾಗಿದೆ ಮುಂದುವರೆಸಿ :-) ಶುಭವಾಗಲಿ

~$ಮರೀಚಿಕೆ$~
ಮಂಜು

ಸಾಗರದಾಚೆಯ ಇಂಚರ said...

Hey tumbaa chennagide
mundina bhaaga bega haaki

baduku kelavomme kallatanakke edodduttade

Chennamma na kallatana da hindina ghana uddesha da munde kallatana sannadu

Anonymous said...

ಕಥೆ ಚೆನ್ನಾಗಿದೆ, ಚೆನ್ನಮ್ಮ ಕಳ್ಳತನ ಮಾಡಿದ್ದು ತಪ್ಪಲ್ಲ... ಮನೆಯೊಡತಿ ಮೊದಲು ವಿಚಾರಿಸಿ ಬೇಕಿತ್ತು... ಕಷ್ಟ ಎನ್ನುವರಿಗೆ ಇರುವವರು ಸ್ವಲ್ಪ ಸಹಾಯ ಮಾಡಿದರೆ ತಪ್ಪೇನಿಲ್ಲ.ಮುಂದಿನ ಕಂತಿಗಾಗಿ ಕಾಯುತ್ತೀನಿ
-ಕಾವ್ಯ

ಮನಸು said...

ಧನ್ಯವಾದಗಳು ಮಂಜು, ಖಂಡಿತಾ ಮುಂದುವರಿಸುವೆ...

ಮನಸು said...

ಧನ್ಯವಾದಗಳು ಗುರು, ಖಂಡಿತಾ ಆದಷ್ಟು ಬೇಗ ಮುಂದಿನ ಸಂಚಿಕೆ ಬೇಗ ಹಾಕುತ್ತೇನೆ. ನಿಜ ಕಳ್ಳತನ ಮಾಡಿದವರು ಯಾಕೆ ಮಾಡಿದ್ರು ಅದರ ಹಿನ್ನೆಲೆ ಎಂದು ತಿಳಿದರೆ ಖಂಡಿತಾ ಅರ್ಥವಾಗುತ್ತೆ... ಇಲ್ಲಿ ಚೆನ್ನಮ್ಮ ಮುಂದೇನು ಮಾಡ್ತಳೆ ನೋಡಬೇಕು.

ಮನಸು said...

ಥ್ಯಾಂಕ್ಸ್ ಕಾವ್ಯ, ನಿಜ ನಿನ್ನ ಮಾತು... ಮುಂದೇನಾಗುವುದು ಕಾದು ನೋಡೋಣ

sunaath said...

ಮನಸು,
ಸ್ವಾರಸ್ಯಕರವಾದ ಕತೆ. ನಿಜ ಹೇಳಬೇಕೆಂದರೆ, ಶ್ರೀಮಂತರಿಗಿಂತ ಬಡವರಲ್ಲಿಯೇ ಪ್ರಾಮಾಣಿಕತೆ ಹೆಚ್ಚಿಗಿರುತ್ತದೆ. ಅನಿವಾರ್ಯ ಪ್ರಸಂಗದಲ್ಲಿ ತಾಳ ತಪ್ಪುವದು ಸಹಜ. ಕತೆಯ ಬೆಳವಣಿಗೆಯನ್ನು ಕುತೂಹಲದಿಂದ ಕಾಯುತ್ತೇನೆ.

ವನಿತಾ / Vanitha said...

waiting for the next part :)

ವಾಣಿಶ್ರೀ ಭಟ್ said...

kathe chennagide..enagabahudemba kutuhala!!! mundu varesi :)

Ittigecement said...

ಕಥೆ ಚೆನ್ನಾಗಿದೆ..
ಕುತೂಹಲ .. ಮುಂದೆನಾಯ್ತು?

ಮಕ್ಕಳಿಗೆ ಓದಿಸುವ ಆಸೆ..
ಬಡತನ.. ಕಷ್ಟ ಏನೆಲ್ಲ ಮಾಡಿಸುತ್ತದೆ....

ಮುಂದುವರೆಸಿ.. ಜೈ ಹೋ !

ಚುಕ್ಕಿಚಿತ್ತಾರ said...

nice story..
continue..

shivu.k said...

ಸುಗುಣಕ್ಕ,
ಕತೆ ಕುತೂಹಲಕಾರಿಯಾಗಿದೆ. ಆಕೆ ಪೆನ್ನು ಕದಿಯಬಾರದಾಗಿತ್ತು. ಸನ್ನಿವೇಶದ ಬಲಿಪಶುವಾಗಿರುವಂತೆ ಕಾಣುತ್ತದೆ. ಬಡವರ ಪಾಡು ಯಾವಾಗಲೂ ಹೀಗೆ ಅಲ್ಲವೇ..

Pradeep Rao said...

ಚೆನ್ನಮ್ಮನ ಕಥೆ ಕೇಳಿ ಬಹಳಾ ಮರುಕ ಉಂಟಾಯಿತು.. ಅಯ್ಯೋ ಪಾಪ! ಮುಂದೇನಾಗುವುದೋ ಎಂದು ಕುತೂಹಲವಿದೆ.. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ..

ಸುಧೇಶ್ ಶೆಟ್ಟಿ said...

saraLavaagidhe niroopane... aasakthi moodiside kathe modhala bhaagadallE... mundina bhaagakke kaayuttiddene :)

ಅನಂತ್ ರಾಜ್ said...

ಬಡತನ-ದಾರಿದ್ರ್ಯದ ನೆರಳಿನಲ್ಲಿ ಬದುಕುವವರಿಗೆ, ಜೀವನ ಮೌಲ್ಯಗಳಾದ ಪ್ರಾಮಾಣಿಕತೆ, ನಿಷ್ಟೆ ಎಲ್ಲವೂ ಗೌಣವಾಗಿ ಬಿಡುತ್ತವೇನೋ? ಕಥೆಯನ್ನು ಮು೦ದುವರಿಸಿ ಮನಸು ಅವರೆ.
ಅಭಿನ೦ದನೆಗಳು.

ಅನ೦ತ್

ಮನಸು said...

ಸುನಾಥ್ ಕಾಕ,
ನಿಜ ನಿಮ್ಮ ಮಾತು ಪ್ರಾಮಾಣಿಕತೆ ಎಂಬುದು ಬಡವರಲ್ಲೇ ಹೆಚ್ಚು ಕಾಣುತ್ತೇವೆ. ತಪ್ಪು ಮಾಡೋದು ಸಹಜ ಅದನ್ನ ಸರಿಪಡಿಸಬಹುದು ಆದರೆ ಇಲ್ಲಿ ಮನೆಯೊಡತಿ ಏನು ಮಾಡ್ತಾಳೆ ನೋಡೋಣ.. ಧನ್ಯವಾದಗಳು

ಮನಸು said...

ವನಿತಾ,
ಧನ್ಯವಾದಗಳು... ನಿಮ್ಮ ಅನಿಸಿಕೆಗಳಿಗೆ

ವಾಣಿಶ್ರೀ
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ಖಂಡಿತಾ ಕುತೂಹಲವನ್ನು ಹೆಚ್ಚು ದಿನ ಕಾಯಿಸುವುದಿಲ್ಲ...

ಮನಸು said...

ಧನ್ಯವಾದಗಳು ಪ್ರಕಾಶಣ್ಣ,
ಬಡತನ ಏನೆಲ್ಲಾ ಮಾಡಿಸುತ್ತೆ ಅಲ್ವಾ, ಮಕ್ಕಳು ಓದಬೇಕು ನಮ್ಮಂತೆ ಅವರುಗಳಾಗಬಾರದು ಎಂದು ಬಹಳ ಕಷ್ಟಪಡ್ತಾರೆ ತಂದೆ ತಾಯಿ...

ಮನಸು said...

ವಿಜಯಾ,
ಥಾಂಕ್ಯೂ.... ಮುಂದುವರಿಸುವೆ... ಓದಿ ನಿಮ್ಮ ಅನಿಸಿಕೆ ತಿಳಿಸ್ತಾ ಇರಿ...

ಶಿವು,
ಧನ್ಯವಾದಗಳು ಅನಿಸಿಕೆಗಳಿಗೆ, ಪೆನ್ನು ಕದಿಯಬಾರದಿತ್ತು ಎಂದು ಎಲ್ಲರಿಗೂ ಅನ್ನಿಸುತ್ತೆ ಆದರೆ ಆ ಮನೆಯೊಡತಿ ಮೊದಲೇ ಬೈತಾ ಇದ್ದಳು ಓದೋದೇನು ಬೇಡ ನಿನ್ಗೆ ಸಹಾಯಕ್ಕೆ ಬೇಕು ನೀನು ನಿಧಾನವಾಗಿ ಕೆಲಸ ಮಾಡೋವರೆಗೂ ನಾವು ನಿನ್ನ ಕಾಯೋಕ್ಕೆ ಆಗೋಲ್ಲ ಅಂತ... ಇನ್ನು ಪೆನ್ನು ಪೆನ್ಸಿಲ್ ಕೇಳಿದರೆ ಕೊಡ್ತಾಳೆ ಆಕೆ...... ಬಡತನದ ಏನೆಲ್ಲಾ ಮಾಡಿಸುತ್ತೆ ಅಲ್ವಾ.....

ಮನಸು said...

ಪ್ರದೀಪ್,
ನಿಜ ಚೆನ್ನಮ್ಮನಂತವರು ಬಹಳಷ್ಟು ಜನ ನಮ್ಮೆದುರೇ ಇದ್ದಾರೆ ಅಲ್ಲವೇ..? ನೋಡೋಣ ಹೇಗೆ ಮಾಡ್ತಾರೆ ಮುಂದೆ ಎಂದು.. ಧನ್ಯವಾದಗಳು ಹೀಗೆ ಓದುತಾ ಇರಿ ಸರಿತಪ್ಪು ತಿಳಿಸ್ತಾ ಇರಿ...

ಸುಧೇಶ್,
ಸರಳವಾಗಿದ್ದಷ್ಟು ಒಳ್ಳೆದೇ ಅಲ್ಲವೇ..?? ಎಲ್ಲರಿಗೂ ಅರ್ಥವಾಗುತ್ತೆ... ನೋಡೋಣ ನಿಮ್ಮ ಆಸಕ್ತಿಯನ್ನು ಹೀಗೆ ಮುಂದುವರಿಸುತ್ತ ಏನು ಅಂತಾ. ಸರಿ ತಪ್ಪುಗಳು ಎನಿಸಿದರೆ ಖಂಡಿತಾ ತಿಳಿಸಿ ತಿದ್ದಿಕೊಳ್ಳುವೆ...

ಮನಸು said...

ಅನಂತರಾಜ್ ಸರ್,
ನಿಜ ನಿಮ್ಮ ಮಾತು.... ಧನ್ಯವಾದಗಳು ನಿಮ್ಮ ಪ್ರೀತಿಪೂರ್ವಕ ಅನಿಸಿಕೆಗಳಿಗೆ ಖಂಡಿತಾ ಮುಂದುವರೆಸುವೆ. ಕಥೆ ಬರೆಯಲು ನನಗೇನು ಅಷ್ಟು ಬರುವುದಿಲ್ಲ ಸುಮ್ಮನೆ ಪ್ರಯತ್ನಗಳು ಮತ್ತು ಕೆಲವು ಜೀವನದ ಘಟನೆಗಳು ಒಮ್ಮೊಮ್ಮೆ ಕಥೆಯಾಗಿಸಿದರೆ ಚೆಂದವೆಂದು ಬರೆಯುವ ಸಾಹಸದಲ್ಲಿರುವೆ ಎಲ್ಲರೂ ತಿದ್ದಿತೀಡಬೇಕು...

Raghu said...

ಕಥೆ ಚೆನ್ನಾಗಿದೆ..ಮುಂದಿನ ಭಾಗ ಬೇಗ ಬರಲಿ...

ನಿಮ್ಮವ,
ರಾಘು.

ಮನಸು said...

ಎಲ್ಲಿದ್ದಪ್ಪ ರಾಘು ಇಷ್ಟು ದಿನ ಹಹಹ ನಾನೆಲ್ಲೋ ಅಮೇರಿಕ ನೋಡಿ ಕಾಣೆಯಾಗಿ ಬಿಟ್ಟೆ ಎಂದುಕೊಂಡೆ ಹಹಹ... ತುಂಬಾ ದಿನಗಳ ಮೇಲೆ ಬ್ಲಾಗಿಗೆ ಬಂದು ನಿನ್ನ ಅನಿಸಿಕೆ ತಿಳಿಸಿದ್ದೀಯಾ ಧನ್ಯವಾದಗಳು... ಹೀಗೆ ಬರುತ್ತಲಿರು

V.R.BHAT said...

’ಬಡವರ ಮನೆ ಊಟ ಚೆನ್ನ ಸಿರಿವಂತರಮನೆ ಮಾತು ಚೆನ್ನ ’ ಎಂಬುದು ಕನ್ನಡದ ಗಾದೆ. ಬಡಾತನದಲ್ಲಿರುವ ಮಾನವೀಯತೆ ಸಿರಿವಂತಿಕೆ ಬಂದ ತಕ್ಷಣ ’ಅಂತಸ್ತಾಗಿ’ ಪರಿವರ್ತಿತವಾಗುವುದು ಮಾನವನ ದುರಹಂಕಾರ. ಬಹಳ ದಿನಗಳ ನಂತರ ನಿಮ್ಮ ಬರಹ ಓದಿದೆ, ತಾರ್ಕಿಕ ಮುಂದಿನಭಾಗ ಈ ಕಥೆಯದ್ದಾಗಲಿ ಎಂಬುದು ನನ್ನ ಸದಾಶಯವಾಗಿದೆ.

ಜಲನಯನ said...

ಸುಗುಣ...ಕಥೆ ..ಊಂ...ಭೇಶಾಗೇ ಬರೀತೀರಿ ಬಿಡಿ ಅಡ್ಡಿಯಿಲ್ಲ...ಅಂದಹಾಗೆ ಬಹಳ ದಿನ ಆಯ್ತು ನಿಮ್ಮ ಕಡೆ ಬಂದು.."ಬಡವ ನೀ ನಿಟ್ಟಂತಿರು" ಅಂತಿದ್ರೂ ಬಿಡದ ಶನಿಗಳು ಇರ್ತಾರೆ ಅನ್ನೋಕೆ ನಿದರ್ಶನಗಳು ಹಲವು...ಕುತೂಹಲ ಮುಂದೇನು ಅಂತ...ಕಾಯ್ತೀನಿ...

ಶಿವಪ್ರಕಾಶ್ said...

channagide akka.. munduvaresu... :)

ಮನಸು said...

ವಿ.ಆರ್.ಭಟ್ ಸರ್,
ಧನ್ಯವಾದಗಳು ನಿಜ ಆ ಗಾದೆ ನೂರಕ್ಕೆ ನೂರು ಸತ್ಯ... ಮುಂದಿನ ಭಾಗ ಓದಿ ನಿಮ್ಮ ಅನಿಸಿಕೆ ತಿಳಿಸಿ....

ಮನಸು said...

ಜಲನಯನ,
ಸರ್, ನಿಮ್ಮ ಭೇಶ್ ಗಿರಿ ನನ್ಗೆ ಬಾಳ ಖುಷಿ ಕೊಡ್ತು... ಬಡವರ ಮನೆಗೆ ಆಗಾಗ ಬರ್ತಾ ಇರಿ ಹಹಹ. ಈ ರೀತಿ ಎಷ್ಟೋ ಕಥೆಗಳು ನೆಡೆದಿವೆ ಸರ್. ಧನ್ಯವಾದಗಳು ಮುಂದಿನ ಭಾಗ ಆದಷ್ಟು ಬೇಗ ಬರುತ್ತೆ.

ಶಿವು,
ಥಾಂಕ್ಯೂ.. ಮುಂದುವರಿಸ್ತೀನಿ...

ಸೀತಾರಾಮ. ಕೆ. / SITARAM.K said...

modalu maneyodatiyannu kelabekittu kallatana maaduva modalu. ella baagilugalu bandaadaaga kallatana maadiddare adakke anukampaviruttittu.. aadare idakke illa anisutte... chennamma aturadalli dudukidalu ennisutte... kathe chennaagide

balasubramanya said...

vaastava satyada lekhana idu pratiyobbaroo odabeku. suguna nimage hats off.

ಮನಸು said...

ಸೀತಾರಾಮ್ ಸರ್,
ಮೊದಲಿಗೆ ನನ್ನ ಕಥೆಯನ್ನು ಓದಿದಕ್ಕೆ ಧನ್ಯವಾದಗಳು.... ಆ ಮನೆಯೊಡತಿಯನ್ನು ಕೇಳಿದರೆ ಕೊಡುವಂತವಳಲ್ಲ.... ಮಗಳು ಕೆಲಸಕ್ಕೆ ಬರದೇ ಇದ್ದದ್ದಕ್ಕೆ ಓದು ಏಕೆ ಮನೆಕೆಲಸಕ್ಕೆ ಕಳುಹಿಸು ಎಂದು ಹೇಳಿದಾಕೆ ಇನ್ನು ಸಹಾಯ ಹಸ್ತ ನೀಡ್ತಾಳ ಎಂಬ ಆತಂಕ ಇತ್ತು ಜೊತೆಗೆ ಆಸೆ ಭಾದಿಸುತ್ತೆ ಕರ್ಮ ಜಾಡಿಸುತ್ತೆ ಅಂತಾರಲ್ಲ ಹಾಗೆ ಅಲ್ಲಿದ್ದ ತರಾತರಾ ಪೆನ್ನುಗಳನ್ನು ನೋಡಿ ಅವಳಿಗೆ ಸಂತಸವಾಗಿ ತೆಗೆದುಕೊಂಡಿದ್ದಾರೆ. ಇದು ಸಾಮಾನ್ಯ ಜನರ ಮನೋಭಾವ ಅಷ್ಟೆ ಸರ್... ಬಡತನ ಎಲ್ಲವನ್ನೂ ಮಾಡಿಸುತ್ತೆ...

ಮನಸು said...

ಬಾಲು ಸರ್,
ಈ ರೀತಿ ಎಷ್ಟೋ ಮನೆಗಳಲ್ಲಿ ನೆಡೆದಿದೆ ನೆಡೆಯುತ್ತಲೇ ಇದೆ. ಸಿರಿವಂತರಿಗಿಂತ ಬಡವರಲ್ಲಿನ ಒಳನೋಟ ಎಲ್ಲರಿಗೂ ಬೇಕು ಎನ್ನಿಸಿತು... ಅದಕ್ಕೆ ಈ ಕಥೆಯನ್ನು ತುಂಬಾ ಹಿಂದೆ ಬರೆದಿದ್ದೆ. ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹಕ್ಕೆ.